ಬೋಟ್ ಕಂಪೆನಿಯಿಂದ ಹೊಸ ಬ್ಲೂಟೂತ್ ಸ್ಪೀಕರ್,ಇಯರ್‌ಬಡ್ಸ್ ಬಿಡುಗಡೆ!
ಇತ್ತೀಚಿನ ದಿನಗಳಲ್ಲಿ ಟೆಕ್ ಮಾರುಕಟ್ಟೆಯಲ್ಲಿ ಬ್ಲೂಟೂತ್ ಸ್ಪೀಕರ್, ಇಯರ್‌ಬಡ್ಸ್‌ಗಳು ಭಾರಿ ಬೇಡಿಕೆಯನ್ನ ಪಡೆದುಕೊಳ್ಳುತ್ತಿವೆ. ಹಗುರ ಗಾತ್ರದ ಆಕರ್ಷಕ ಫೀಚರ್ಸ್‌ಗಳನ್ನ ಹೊಂದಿರುವ ಉತ್ತಮ ಗುಣಮಟ್ಟದ ಬ್ಲೂಟೂತ್ ಸ್ಪೀಕರ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಾರುಕಟ್ಟೆ ಸಾಕಷ್ಟು ವೈವಿಧ್ಯಮಯ ಬ್ಲೂಟೂತ್ ಸ್ಪೀಕರ್,ಇಯರ್‌ಬಡ್ಸ್‌ಗಳಿದ್ದರು ಗ್ರಾಹಕರು ಮಾತ್ರ ಉತ್ತಮ ಬ್ರ್ಯಾಂಡ್ ಕಂಪೆನಿಗಳ ಪ್ರಾಡಕ್ಟ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಈಗಾಗ್ಲೆ ಮಾರುಕಟ್ಟೆಯಲ್ಲಿ ಉತ್ತಮ ಜನಪ್ರಿಯತೆ ಗಳಿಸಿರುವ ಬೋಟ್ ಕಂಪೆನಿ ತನ್ನ ಹೊಸ ಬ್ಲೂಟೂತ್ ಸ್ಪೀಕರ್ ಹಾಗೂ ಇಯರ್ ಬಡ್ಸ್‌ಗಳನ್ನ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ.

ಹೌದು, ಟೆಕ್ ಮಾರುಕಟ್ಟೆಯಲ್ಲಿ ಆಕರ್ಷಕ ಬ್ಲೂಟೂತ್ ಸ್ಪೀಕರ್‌ಗಳು, ಇಯರ್‌ಫೋನ್‌ಗಳ ಮೂಲಕ ಸೈ ಎನಿಸಿಕೊಂಡಿರುವ ಬೋಟ್ ಕಂಪನಿ, ಇದೀಗ ತನ್ನ ಹೊಸ ಬೋಟ್ ಸ್ಟೋನ್ 170 ಪೋರ್ಟಬಲ್ ಬ್ಲೂಟೂತ್ ಸ್ಪೀಕರ್, ಏರ್‌ಡಾಪ್ಸ್ 311 V 2, ಮತ್ತು ಸ್ಪಿನ್X ಪೋರ್ಟಬಲ್ ವಾಯರ್‌ಲೆಸ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಈ ಪ್ರಾಡಕ್ಟ್‌ಗಳೆಲ್ಲವೂ ಈಗಿನ ಯುವಜನತೆಯ ಆಶಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಬೋಟ್ ಸ್ಟೋನ್ 170
ಬೋಟ್ ಸ್ಟೋನ್ 170 ಪೋರ್ಟಬಲ್ ಸ್ಪೀಕರ್ ಉತ್ತಮ ವಿನ್ಯಾಸವನ್ನ ಒಳಗೊಂಡಿದ್ದು, 5W ಔಟ್‌ಪುಟ್ ಮತ್ತು IPX 6 ರೇಟಿಂಗ್ ಅನ್ನು ಹೊಂದಿದೆ. ಇನ್ನು ಈ ಸ್ಪೀಕರ್ 1,800mAh ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 6 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನ ನೀಡುತ್ತದೆ. ಇದಲ್ದೆ ಉತ್ತಮ ಸೌಂಡ್ ಸಿಸ್ಟಂ ಅನ್ನು ಹೊಂದಿದ್ದು, ಮನೆ, ಪಾರ್ಟಿ ಸಮಾರಂಭಗಳಲ್ಲಿ ಬಳಸಲು ಉತ್ತಮವಾಗಿದೆ. ಅಲ್ಲದೆ ಬೋಟ್ ಸ್ಟೋನ್ 170 ಸ್ಪೀಕರ್ ಬ್ಲೂಟೂತ್ ವಿ 4.2 ಅನ್ನು ಬೆಂಬಲಿಸುತ್ತದೆ. ಜೊತೆಗೆ ಮೆಮೊರಿ ಕಾರ್ಡ್ ಸ್ಲಾಟ್‌ಗೆ ಬೆಂಬಲವನ್ನು ನೀಡುತ್ತದೆ.

ಏರ್‌ಡೋಪ್ಸ್ 311 V2 ವಾಯರ್‌ಲೆಸ್ ಇಯರ್‌ಬಡ್
ಇನ್ನು ಟ್ರೂಲಿ ವೈರ್‌ಲೆಸ್ ಸ್ಟಿರಿಯೋ ತಂತ್ರಜ್ಞಾನ ಹೊಂದಿರುವ ಬೋಟ್ ಕಂಪೆನಿಯ ಏರ್‌ಡೋಪ್ಸ್ 311 V2 ಇಯರ್‌ಬಡ್ಸ್ 8MM ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಅಲ್ಲದೆ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಬಳಕೆದಾರರ ಕಿವಿಗೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಈ ಇಯರ್‌ಬಡ್ಸ್ ಬ್ಲೂಟೂತ್ v5.0 ಅನ್ನು ಬೆಂಬಲಿಸಲಿದ್ದು, ಇದು IPX5 ರೇಟ್ ಅನ್ನು ಹೊಂದಿದೆ. ಅಲ್ಲದೆ ಇದು ಪ್ರತಿ ಚಾರ್ಜ್‌ಗೆ 3.5 ಗಂಟೆಗಳವರೆಗೆ ಬಾಳಿಕೆ ಬರಲಿದ್ದು, 500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್ ಅನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳು ಕೆಪ್ಯಾಸಿಟಿವ್ ಟಚ್ ಕಂಟ್ರೋಲ್ ಅನ್ನು ಹೊಂದಿವೆ.

ಸ್ಟೋನ್ ಸ್ಪಿನ್ X2.0 ಸ್ಪೀಕರ್,
ಸ್ಟೋನ್ ಸ್ಪಿನ್X2.0 ಸ್ಪೀಕರ್ IPX 6 ರೇಟಿಂಗ್‌ಅನ್ನು ಒಳಗೊಂಡಿದ್ದು, ಇದನ್ನು ABS ಮತ್ತು ಫ್ಯಾಬ್ರಿಕ್ ಗ್ರಿಲ್‌ನಿಂದ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಇದು ಬ್ಲೂಟೂತ್ 4.2 ಆವೃತ್ತಿಯನ್ನು ಬೆಂಬಲಿಸುತ್ತದೆ. ಜೊತೆಗೆ ಈ ಸ್ಪೀಕರ್ 40mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಇದು ಎಚ್‌ಡಿ ಇಮ್ಮರ್‌ಸಿವ್ ಆಡಿಯೊ ಮತ್ತು ರೆಸ್ಪಾನಿಸಿಂಗ್ ಬಾಸ್ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಬೋಟ್‌ನ ಈ ವಾಯರ್‌ಲೆಸ್ ಸ್ಪೀಕರ್ 2,200mAh ಲಿಥಿಯಂ ಬ್ಯಾಟರಿ ಪ್ಯಾಕ್‌ಆಪ್ ಅನ್ನು ಹೊಂದಿದ್ದು, 8 ಗಂಟೆಗಳ ಪ್ಲೇಬ್ಲ್ಯಾಕ್ ಟೈಮ್ ಅನ್ನು ಹೊಂದಿದೆ.

ವಿಶೇಷತೆ
ಸದ್ಯ ಬೋಟ್ ಕಂಪೆನಿ ಬಿಡುಗಡೆ ಮಾಡಿರುವ ಇಯರ್‌ಬಡ್ಸ್ ಹಾಗೂ ಬ್ಲೂಟೂತ್ ಸ್ಪೀಕರ್‌ಗಳು ಸದ್ಯದ ತಲೆಮಾರಿನ ಅಗತ್ಯಕ್ಕೆ ತಕ್ಕಂತೆ ವಿನ್ಯಾಶಗೊಳಿಸಲಾಗಿದ್ದು, ಉತ್ತಮ ಅನುಭವ ನೀಡಲಿದೆ. ಅಲ್ಲದೆ ಈ ಉತ್ಪನ್ನಗಳ ಮೂಲಕ ಟೆಕ್, ಫ್ಯಾಷನ್, ಶೈಲಿ ಮತ್ತು ಕಾರ್ಯಕ್ಷಮತೆಯ ಮೇಲೆ ಕಂಪೆನಿ ಹೆಚ್ಚಿನ ಗಮನಹರಿಸಲಿದ್ದು, ಇದು ರಿಫ್ರೆಶ್, ಮತ್ತು ಹೊಸ ತಲೆಮಾರಿನ ಜನತೆಯೊಂದಿಗೆ ಸಂಪೂರ್ಣವಾಗಿ ಸಿಂಕ್ ಆಗುತ್ತವೆ ಅನ್ನೊದನ್ನ ಕಂಪೆನಿ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ
ಇನ್ನು ಏರ್‌ಡೋಪ್ಸ್ 311 V2 ವೈರ್‌ಲೆಸ್ ಇಯರ್‌ಬಡ್ 2,499 ರೂ ಬೆಲೆಯನ್ನ ಹೊಂದಿದ್ದು, ಬೋಟ್ ಸ್ಟೋನ್ ಸ್ಪಿನ್X 2.0 ಸ್ಪೀಕರ್ ಬೆಲೆ 2,299 ರೂ,ಆಗಿದೆ. ಇದಲ್ಲದೆ ಬೋಟ್ ಸ್ಟೋನ್ 170 ಪೋರ್ಟಬಲ್ ಸ್ಪೀಕರ್ 1,099 ರೂ.ಬೆಲೆಯನ್ನು ಹೊಂದಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಇ-ಕಾಮರ್ಸ್ ದೈತ್ಯ ಅಮೆಜಾನ್ ತಾಣದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications