Home
ಸುದ್ದಿಜಾಲ

boAt: ಭಾರತದಲ್ಲಿ ಬೋಟ್‌ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್‌ ಲಾಂಚ್‌:..ಮೊದಲ e-SIM ಬೆಂಬಲಿತ ವಾಚ್‌!

ಭಾರತದಲ್ಲಿ ಗುಣಮಟ್ಟದ ಸ್ಮಾರ್ಟ್‌ವಾಚ್‌ಗಳಿಗೆ ಬೋಟ್‌ ಕಂಪೆನಿ ಹೆಸರುವಾಸಿಯಾಗಿದೆ. ಇದೀಗ ಭಾರತದಲ್ಲಿ ಮೊದಲ eSIM-ಸಕ್ರಿಯಗೊಳಿಸಿದ ಸ್ಮಾರ್ಟ್ ವಾಚ್ ಬೋಟ್‌ ಲೂನಾರ್‌ ಪ್ರೊ LTE ಅನ್ನು ಅಧಿಕೃತವಾಗಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ನಯವಾದ ರೌಂಡ್ ಡಯಲ್ ವಿನ್ಯಾಸವನ್ನು ಎರಡು ಬದಿಯ ಬಟನ್‌ಗಳೊಂದಿಗೆ ಸಂಯೋಜಿಸಲಾಗಿದೆ.

ಹೌದು, ಬೋಟ್‌ ಲೂನಾರ್‌ ಪ್ರೊ LTE (BoAt Lunar Pro LTE) ಸ್ಮಾರ್ಟ್‌ವಾಚ್‌ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್‌ ಇ-ಸಿಮ್‌ ಆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದರಿಂದ ಬಳಕೆದಾರರು ಕರೆಗಳನ್ನು ಮಾಡಬಹುದು ಹಾಗೂ ಕರೆಗಳನ್ನು ಸ್ವೀಕರಿಸಬುದಾಗಿದೆ. ಜೊತೆಗೆ ಸಂದೇಶಗಳನ್ನು ಕಳುಹಿಸುವುದಲ್ಲದೆ, ಬ್ಲೂಟೂತ್‌ ಕರೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತದಲ್ಲಿ ಬೋಟ್‌ ಲೂನಾರ್‌ ಪ್ರೊ LTE ಲಾಂಚ್‌:..ಮೊದಲ e-SIM ಬೆಂಬಲಿತ ವಾಚ್‌!

ಬೋಟ್‌ ಲೂನಾರ್‌ ಪ್ರೊ LTE ವಾಚ್‌ ಫೀಚರ್ಸ್‌ ಹೇಗಿದೆ?
ಬೋಟ್‌ ಲೂನಾರ್ ಪ್ರೊ LTE ವಾಚ್‌ ಇತರೆ ಸ್ಮಾರ್ಟ್ ವಾಚ್‌ಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಇದು eSIM ಮೂಲಕ LTE ಕಾಲ್‌ ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ವಾಚ್‌ ಮೂಲಕವೇ ಬಳಕೆದಾರರು ಕರೆಗಳನ್ನು ಮಾಡಬಹುದಾಗಿದೆ. ಇದಕ್ಕಾಗಿ ಬೋಟ್‌ ಕಂಪೆನಿ ಜಿಯೋ ಜೊತೆ ಪಾಲುದಾರಿಕೆ ಹೊಂದಿದೆ. ಅಲ್ಲದೆ ಏರ್‌ಟೆಲ್ ಬಳಕೆದಾರರು ಕೂಡ ಶೀಘ್ರದಲ್ಲೇ ಬೋಟ್‌ ಲೂನಾರ್‌ ಪ್ರೊ LTE ಸ್ಮಾರ್ಟ್‌ವಾಚ್‌ನಲ್ಲಿ eSIM ಫೀಚರ್ಸ್‌ ಅನ್ನು ಬಳಸಬಹುದಾಗಿದೆ.

ಭಾರತದಲ್ಲಿ ಬೋಟ್‌ ಲೂನಾರ್‌ ಪ್ರೊ LTE ಲಾಂಚ್‌:..ಮೊದಲ e-SIM ಬೆಂಬಲಿತ ವಾಚ್‌!

ಇನ್ನು ಈ ಸ್ಮಾರ್ಟ್ ವಾಚ್ 1.39 ಇಂಚಿನ ಆಲ್‌ವೇಸ್‌ ಆನ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಕಸ್ಟಮೈಸ್‌ ಮಾಡಬಹುದಾದ ವಾಚ್‌ಫೇಸ್‌ಗಳನ್ನು ಬೆಂಬಲಿಸಲಿದೆ. ಇದು ಹೃದಯ ಬಡಿತ, SpO2 ಮತ್ತು ಸ್ಲಿಪ್ ಟ್ರಾಕ್‌ ಅನ್ನು ಸಹ ಹೊಂದಿದೆ. ಇದರೊಂದಿಗೆ 100ಕ್ಕೂ ಹೆಚ್ಚು ಕ್ರೀಡಾ ವಿಧಾನಗಳೊಂದಿಗೆ ಬರಲಿದೆ. ಈ ಸ್ಮಾರ್ಟ್‌ವಾಚ್‌ ಅಂತರ್ನಿರ್ಮಿತ ಜಿಪಿಎಸ್‌ನೊಂದಿಗೆ ಬರುತ್ತದೆ. ಇದಲ್ಲದೆ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ರೇಟಿಂಗ್‌ ಸಹ ಪಡೆದಿದೆ.

ಈ ಸ್ಮಾರ್ಟ್‌ವಾಚ್‌ ಸಾಮಾನ್ಯ ಬಳಕೆಯಲ್ಲಿ 7 ದಿನಗಳವರೆಗೆ ಮತ್ತು ಇ-ಸಿಮ್ ಕರೆಯೊಂದಿಗೆ 2 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್‌ ಪ್ರಮುಖವಾಗಿ ತ್ವರಿತ ಡಯಲ್ ಪ್ಯಾಡ್ ಮತ್ತು ವಾಯ್ಸ್‌ ಅಸಿಸ್ಟಂಟ್‌ ಅನ್ನು ಸಹ ಒಳಗೊಂಡಿದೆ. ಇದರೊಂದಿಗೆ ಸಿಟ್ಟಿಂಗ್‌ ರಿಮೈಂಡರ್‌, ಕ್ಯಾಮರಾ ನಿಯಂತ್ರಣ, ಸಂಗೀತ ನಿಯಂತ್ರಣ, ಹವಾಮಾನ ನವೀಕರಣಗಳಂತಹ ಫೀಚರ್ಸ್‌ಗಳನ್ನು ಸಹ ಪಡೆದುಕೊಂಡಿದೆ.

ಭಾರತದಲ್ಲಿ ಬೋಟ್‌ ಲೂನಾರ್‌ ಪ್ರೊ LTE ಲಾಂಚ್‌:..ಮೊದಲ e-SIM ಬೆಂಬಲಿತ ವಾಚ್‌!

BoAt Lunar Pro LTE ಬೆಲೆ ಮತ್ತು ಲಭ್ಯತೆ
BoAt Lunar Pro LTE ಪ್ರಸ್ತುತ ಭಾರತದಲ್ಲಿ ಲಾಂಚ್‌ ಆಫರ್‌ ಮೂಲಕ ಕೇವಲ 9,999ರೂ ಬೆಲೆಗೆ ದೊರೆಯಲಿದೆ. ಇದು ನಯವಾದ ಕಪ್ಪು ಮತ್ತು ಸಂಸ್ಕರಿಸಿದ ಕಂದು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದನ್ನು Flipkart ಮತ್ತು boat-lifestyle.com ಮೂಲಕ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಖರೀದಿಸುವ ಗ್ರಾಹಕರಿಗೆ ಬೋನಸ್ ಆಗಿ ಹೊಸ ಜಿಯೋ ಸಿಮ್‌ನಲ್ಲಿ 399ರೂ ಮೌಲ್ಯದ ಪೂರಕ ಯೋಜನೆಯನ್ನು ಸ್ವೀಕರಿಸುತ್ತಾರೆ.

ಇನ್ನು ಬೋಟ್‌ ಕಂಪೆನಿ ಕಳೆದ ವರ್ಷ ಭಾರತದಲ್ಲಿ ಹೊಸ 'ಬೋಟ್‌ ಅಲ್ಟಿಮಾ ಕಾಲ್' (boAt Ultima Call) ಸ್ಮಾರ್ಟ್‌ವಾಚ್‌ ಲಾಂಚ್‌ ಪರಿಚಯಿಸಿತ್ತು. ಈ ಸ್ಮಾರ್ಟ್‌ವಾಚ್‌ ಕಾಂಟ್ಯಾಕ್ಟ್‌ ಸ್ಟೋರೇಜ್‌ ಹಾಗೂ ಡಯಲ್ ಪ್ಯಾಡ್‌ ಸೌಲಭ್ಯ ಪಡೆದಿದ್ದು, ಇದು ಇತರೆ ಡಿವೈಸ್‌ಗಳಿಗೆ ಪೈಪೋಟಿ ನೀಡುವಂತಹ ಫೀಚರ್ಸ್‌ ಆಗಿವೆ. ಹಾಗೆಯೇ ಸುಮಾರು 700 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದೆ. ಈ ಸ್ಮಾರ್ಟ್‌ ವಾಚ್‌ ಕ್ಯಾಮೆರಾ ಕಂಟ್ರೋಲ್‌, ಲೈವ್ ಕ್ರಿಕೆಟ್ ಸ್ಕೋರ್‌ಗಳು, ಮ್ಯೂಸಿಕ್‌ ಕಂಟ್ರೋಲ್‌, ಹವಾಮಾನ ವರದಿ, ಅಲಾರ್ಮ್, ಕೌಂಟ್‌ಡೌನ್, ಸ್ಟಾಪ್‌ವಾಚ್, DND ಮತ್ತು ಫೈಂಡ್ ಮೈ ಫೋನ್‌ಗೆ ಬೆಂಬಲವನ್ನು ಪಡೆದಿದೆ.

Best Mobiles in India

English summary
boAt Lunar Pro LTE smartwatch with eSIM connectivity launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+