ಬೋಟ್ ಲೂನಾರ್ ಟೈಜೆನ್ ವಾಚ್ ಲಾಂಚ್! ಯುವಜನರ ದಿಲ್ ಗೆಲ್ಲಲಿದೆಯಾ?
ಸ್ಮಾರ್ಟ್‌ವಾಚ್ ಪ್ರಿಯರಿಗೆ ಬೋಟ್ ಕಂಪೆನಿ ಈಗಾಗಲೇ ಹಲವು ಆಯ್ಕೆಗಳನ್ನು ನೀಡಿದೆ. ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ವಾಚ್ ಬೋಟ್ ಲೂನಾರ್ ಟೈಜೆನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಒಳಗೊಂಡಿದ್ದು, ಮೊಬೈಲ್ ಕರೆಗಳನ್ನು ವಾಚ್‌ನಲ್ಲಿಯೇ ಕಂಟ್ರೋಲ್ ಮಾಡಲು ಅವಕಾಶ ನೀಡಲಿದೆ.
ಹೌದು, ಬೋಟ್ ಲೂನಾರ್ ಟೈಜೆನ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್ ಸ್ಟೈಲಿಶ್ ರೌಂಡ್ ಡಯಲ್ ವಿನ್ಯಾಸವನ್ನು ಹೊಂದಿದ್ದು, ಓಷನ್ ರಿಡ್ಜ್ ಮತ್ತು ಮೆಟಾಲಿಕ್ ಸ್ಟ್ರಾಪ್‌ಗಳ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೋಟ್ ಲೂನಾರ್ ಟೈಜೆನ್ ಫೀಚರ್ಸ್ ಹೇಗಿದೆ?
ಬೋಟ್ ಲೂನಾರ್ ಟೈಜೆನ್ ಸ್ಮಾರ್ಟ್‌ವಾಚ್ 1.45 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ 600 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಬೆಂಬಲವನ್ನು ಹೊಂದಿದ್ದು, ಮೊಬೈಲ್ ಕರೆಗಳನ್ನು ಕಂಟ್ರೋಲ್ ಮಾಡಲಿದೆ. ಇದಕ್ಕಾಗಿ ತ್ವರಿತ ಡಯಲ್ ಪ್ಯಾಡ್, ವಾಚ್‌ನಲ್ಲಿ 10 ಸಂಪರ್ಕಗಳನ್ನು ಸೇವ್ ಮಾಡುವುದಕ್ಕೆ ಅವಕಾಶವನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ವಾಚ್ 100+ ಸ್ಪೋರ್ಟ್ಸ್ ಮೋಡ್ ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಕಸ್ಟಮೈಸ್ ಮಾಡಬಹುದಾದ ವಾಚ್‌ಫೇಸ್‌ಗಳಿಗೆ ಬೆಂಬಲಿಸಲಿದೆ.

ಈ ಸ್ಮಾರ್ಟ್ ವಾಚ್ ಕೂಡ ವಿವಿಧ ಮಾದರಿಯ ಹೆಲ್ತ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ, SpO2, ಮುಟ್ಟಿನ ಚಕ್ರ ಮತ್ತು ನಿದ್ರೆಯನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್ ಸಿಟ್ಟಿಂಗ್ ರಿಮೈಂಡರ್, ಕ್ಯಾಮರಾ ಕಂಟ್ರೋಲ್, ಲೈವ್ ಕ್ರಿಕೆಟ್ ಸ್ಕೋರ್‌ಗಳು, ಮ್ಯೂಸಿಕ್ ಕಂಟ್ರೋಲ್, ವೆದರ್, ಅಲಾರಂ, ಕೌಂಟ್‌ಡೌನ್, ಸ್ಟಾಪ್‌ವಾಚ್, DND, ಫೈಂಡ್ ಮೈ ಫೋನ್ ನಂತಹ ಹೆಚ್ಚುವರಿ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ IP67 ನೀರು ಮತ್ತು ಧೂಳಿನ ನಿರೋಧಕ ಬೆಂಬಲವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ
ಬೋಟ್ ಲೂನಾರ್ ಟೈಜೆನ್ ಸ್ಮಾರ್ಟ್ ವಾಚ್ ಓಷನ್ ರಿಡ್ಜ್ ಪಟ್ಟಿಗೆ 2,899ರೂ ಬೆಲೆಯನ್ನು ಹೊಂದಿದೆ. ಇದರ ಲೋಹೀಯ ಪಟ್ಟಿಗೆ 2,999ರೂ. ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ವಾಚ್ ಆಕ್ಟಿವ್ ಬ್ಲ್ಯಾಕ್, ಸ್ಟೀಲ್ ಬ್ಲಾಕ್, ಮೆಟಲ್ ಗೋಲ್ಡ್ ಮತ್ತು ಡೀಪ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದನ್ನು Amazon.in ನಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.
ಇದಲ್ಲದೆ ಬೋಟ್ ಕಂಪೆನಿ ಇತ್ತೀಚಿಗೆ ಬೋಟ್ ಇಮ್ಮಾರ್ಟಲ್ ಕಟಾನಾ ಬ್ಲೇಡ್ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್ 13 ಎಂಎಂ ಆಡಿಯೋ ಡ್ರೈವರ್ ಹೊಂದಿದೆ. ಇದು ಬೋಟ್ ಸಿಗ್ನೇಚರ್ ಸೌಂಡ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಇನ್ನು ಈ ಇಯರ್‌ಬಡ್ಸ್ RGB ಬೆಳಕಿನ ಬೆಂಬಲ, 50ms ನ ಲೋ ಲೇಟೆನ್ಸಿಯನ್ನು ಹೊಂದಿದ್ದು, ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಬಡ್ಸ್ ಮೆಟಲ್ ಬಾಡಿಯನ್ನು ಹೊಂದಿದ್ದು, ಇನ್‌ಬಿಲ್ಟ್ ಸ್ಪೀಕರ್‌ಗಳು, ತ್ವರಿತ ವೇಕ್ N ಜೋಡಿ ಬೆಂಬಲ ಮತ್ತು ಬ್ಲೂಟೂತ್ v5.3 ಗೆ ಬೆಂಬಲವನ್ನು ಸಹ ಹೊಂದಿದೆ.
ಇನ್ನು ಈ ಇಯರ್‌ಬಡ್ಸ್ 50 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಟೈಂ ಅನ್ನು ಹೊಂದಿದೆ. ಇದು USB ಟೈಪ್-ಸಿ ಕನೆಕ್ಟರ್ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 180 ನಿಮಿಷಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಇನ್ನು ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್ 500mAh ಬ್ಯಾಟರಿಯನ್ನು ಹೊಂದಿದೆ, ಆದರೆ ಪ್ರತಿ ಇಯರ್‌ಬಡ್ 35mAh ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








