Home
ಸುದ್ದಿಜಾಲ

ಬೋಟ್‌ನಿಂದ ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಅನಾವರಣ.. ಇದರ ವಿನ್ಯಾಸ ಹೇಗಿದೆ ಅಂತೀರಾ?

ಬೋಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್‌ ಇದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಇದೀಗ ಹೊಸ ಬೋಟ್ ಲೂನಾರ್ ವಿಸ್ಟಾ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಅನ್ನು ಬೆಂಬಲಿಸಲಿದೆ.

ಹೌದು, ಬೋಟ್ ಲೂನಾರ್ ವಿಸ್ಟಾ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್‌ ವೃತ್ತಾಕಾರದ ವಿನ್ಯಾಸವನ್ನು ಹೊಂದಿದ್ದು, SpO2 ಟ್ರ್ಯಾಕಿಂಗ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ನೂರಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್‌ನಿಂದ ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಅನಾವರಣ.. ವಿನ್ಯಾಸ ಹೇಗಿದೆ ಅಂತೀರಾ?

ಬೋಟ್‌ ಲೂನಾರ್‌ ವಿಸ್ಟಾ ಸ್ಮಾರ್ಟ್‌ವಾಚ್‌ ಫೀಚರ್ಸ್‌
ಬೋಟ್‌ ಲೂನಾರ್‌ ವಿಸ್ಟಾ 1.52 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದರಿಂದ ಸೂರ್ಯನ ಬೆಳಕಿನಲ್ಲಿಯೂ ಸಹ ವಿಷಯಗಳನ್ನು ಸ್ಪಷ್ಟವಾಗಿ ನೋಡಲು ಉತ್ತಮವಾಗಿದೆ. ಇದಲ್ಲದೆ ನಿಮ್ಮ ಅಗತ್ಯಕ್ಕೆ ತಕ್ಕಂತ ಶೈಲಿಯನ್ನು ಹೊಂದಿಸಲು 100ಕ್ಕೂ ಹೆಚ್ಚು ವಿಭಿನ್ನ ಲುಕ್‌ಗಳೊಂದಿಗೆ ಸ್ಮಾರ್ಟ್‌ವಾಚ್‌ ಅನ್ನು ಕಸ್ಟಮೈಸ್‌ ಮಾಡಬಹುದಾಗಿದೆ. ತಿರುಗುವ ಬಟನ್‌ನೊಂದಿಗೆ ನ್ಯಾವಿಗೇಷನ್ ಮಾಡುವುದು ಕೂಡ ಸರಳವಾಗಿದೆ.

ಬೋಟ್‌ ಲೂನಾರ್‌ ವಿಸ್ಟಾ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಹೊಂದಿದೆ. ಇದರಿಂದ ನಿಮ್ಮ ಫೋನ್ ಕರೆಗಳನ್ನು ಸ್ಮಾರ್ಟ್‌ವಾಚ್‌ ಮೂಲಕವೇ ಕಂಟ್ರೋಲ್‌ ಮಾಡಬಹುದಾಗಿದೆ. ಇದಕ್ಕಾಗಿ ಮೈಕ್ರೊಫೋನ್ ಮತ್ತು ಡಯಲ್ ಪ್ಯಾಡ್ ಅನ್ನು ಸಹ ನೀಡಲಾಗಿದೆ. ಇದರಿಂದ ಸ್ಮಾರ್ಟ್‌ವಾಚ್‌ನಲ್ಲಿ ತ್ವರಿತ ಕರೆಗಾಗಿ ನೀವು ಅದರಲ್ಲಿ 10 ಸಂಪರ್ಕಗಳನ್ನು ಸ್ಟೋರೇಜ್‌ ಮಾಡಬಹುದಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ನಿಮಗೆ 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

ಬೋಟ್‌ ಲೂನಾರ್‌ ವಿಸ್ಟಾ ಸ್ಮಾರ್ಟ್‌ವಾಚ್‌ ಹೆಲ್ತ್‌ ಟ್ರ್ಯಾಕಿಂಗ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ ನಿಮ್ಮ ಹೃದಯ ಬಡಿತವನ್ನು ಟ್ರ್ಯಾಕ್‌ ಮಾಡಲಿದ್ದು, ನಿಮ್ಮ ರಕ್ತದ ಆಮ್ಲಜನಕದ ಮಟ್ಟವನ್ನು (SpO2) ಪರಿಶೀಲಿಸುತ್ತದೆ. ಜೊತೆಗೆ ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ. ಇದು ಬಳಕೆದಾರರಿಗೆ ಉಸಿರಾಟದ ವ್ಯಾಯಾಮಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ವೆದರ್‌ ಅಪ್ಡೇಟ್‌, ಅಲಾರಂಗಳನ್ನು ಸೆಟ್‌ ಮಾಡುವುದು ಸೇರಿದಂತೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೋಟ್‌ ಲೂನಾರ್‌ ವಿಸ್ಟಾ ಸ್ಮಾರ್ಟ್‌ವಾಚ್‌ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದರಿಂದ ನೀವು ರೀಚಾರ್ಜ್ ಮಾಡದೆಯೇ ಇಡೀ ವಾರದವರೆಗೆ ಇದನ್ನು ಬಳಸಬಹುದು. ಆದರೆ ನೀವು ಬ್ಲೂಟೂತ್‌ ಕಾಲಿಂಗ್‌ ಅನ್ನು ಬಳಸುತ್ತಿದ್ದರೆ ನಿಮಗೆ ಎರಡು ದಿನಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ
ಬೊಟ್‌ ಲೂನಾರ್‌ ವಿಸ್ಟಾ ಸ್ಮಾರ್ಟ್‌ವಾಚ್‌ 1,999ರೂ. ಬೆಲೆ ಹೊಂದಿದೆ. ಇದು ಬೂದು, ನೀಲಿ, ಹಸಿರು ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದನ್ನು ಅಮೆಜಾನ್‌ ಸೆಪ್ಟೆಂಬರ್ 12 ರಿಂದ ಮಧ್ಯಾಹ್ನ 12 ಗಂಟೆಯ ನಂತರ ಖರೀದಿಸಬಹುದಾಗಿದೆ.

ಇದಲ್ಲದೆ ಬೋಟ್ ಕಂಪೆನಿ ಇತ್ತೀಚಿಗೆ ಬೋಟ್‌ ವೇವ್ ಎಲಿವೇಟ್ ಸ್ಮಾರ್ಟ್‌ವಾಚ್ 1.96 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ಕ್ವೇರ್‌ ಡಯಲ್‌ನೊಂದಿಗೆ ಬರಲಿದ್ದು, ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಕರೆಗಳನ್ನು ವಾಚ್‌ ಮೂಲಕವೇ ಕಂಟ್ರೋಲ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದಲ್ಲದೆ 20 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸಿದೆ. ಈ ಸ್ಮಾರ್ಟ್‌ವಾಚ್‌ ಹೆಲ್ತ್‌ ಟ್ರ್ಯಾಕಿಂಗ್‌ ಫೀಚರ್ಸ್‌ಗಳಿಗೆ ಕೂಡ ಹೆಚ್ಚಿನ ಒತ್ತನ್ನು ನೀಡಿದೆ. ಅದರಂತೆ ಈ ವಾಚ್‌ನಲ್ಲಿ SpO2 ಮಾನಿಟರಿಂಗ್, ಹೃದಯ ಬಡಿತ ಸೆನ್ಸಾರ್‌ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಡೈಲಿ ಆಕ್ಟಿವಿಟಿ ಟ್ರ್ಯಾಕರ್‌ ಮತ್ತು ಸಿಟ್ಟಿಂಗ್‌ ರಿಮೈಂಡರ್‌ ಜೊತೆಗೆ 50ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

Best Mobiles in India

English summary
BoAt Lunar Vista smartwatch launched in India: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+