Home
ಸುದ್ದಿಜಾಲ

ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! 120 ಗಂಟೆಗಳ ಮ್ಯೂಸಿಕ್‌ ಪ್ಲೇ ಬ್ಯಾಕ್‌ ಟೈಂ!

ಬೋಟ್‌ ಕಂಪೆನಿಯ ಇಯರ್‌ಬಡ್ಸ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ತನ್ನ ವಿಭಿನ್ನ ಶೈಲಿಯ ಇಯರ್‌ಬಡ್ಸ್‌ಗಳಿಂದ ಯುವಜನರ ಮನಗೆದ್ದಿದೆ. ಇದೀಗ ಅದೇ ಹಾದಿಯಲ್ಲಿ ಹೊಸದಾಗಿ ಬೋಟ್ ನಿರ್ವಾಣ Ion ANC ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಅತ್ಯುತ್ತಮ ಆಡಿಯೊ ಗುಣಮಟ್ಟವನ್ನು ವಿನ್ಯಾಸಗೊಳಿಸಲಾಗಿದೆ.

ಹೌದು, ಬೋಟ್ ನಿರ್ವಾಣ Ion ANC ಇಯರ್‌ಬಡ್ಸ್‌ ಬಾರತದಲ್ಲಿ ಬಿಡುಗಡೆ ಆಗಿದೆ. ಇದು 120 ಗಂಟೆಗಳ ಒಟ್ಟು ಮ್ಯೂಸಿಕ್‌ ಪ್ಲೇಬ್ಯಾಕ್, 32dB ವರೆಗೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಒಳಗೊಂಡಿದೆ. ಜೊತೆಗೆ 10mm ಡ್ರೈವರ್‌ಗಳು, ಡ್ಯುಯಲ್ EQ ಮೋಡ್‌ಗಳು, HIFI DSP 5ರ ಕ್ರಿಸ್ಟಲ್ ಬಯೋನಿಕ್ ಸೌಂಡ್ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದ್ರೆ ಬೋಟ್‌ ನಿರ್ವಾಣ Ion ANC ಇಯರ್‌ಬಡ್ಸ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! 120 ಗಂಟೆ ಪ್ಲೇ ಬ್ಯಾಕ್‌ ಟೈಂ!

ಬೋಟ್ ನಿರ್ವಾಣ ಅಯಾನ್ ANC ಫೀಚರ್ಸ್‌ ಹೇಗಿದೆ?
ಬೋಟ್‌ ನಿರ್ವಾಣ Ion ANC ಇಯರ್‌ಬಡ್ಸ್‌ IPX4 ರೇಟಿಂಗ್‌ ಅನ್ನು ಒಳಗೊಂಡಿದೆ. ಇದರಿಂದ ಬೆವರು ಮತ್ತು ನೀರಿನ ಪ್ರತಿರೋಧದೊಂದಿಗೆ ಬರುತ್ತವೆ. ಇದು ವರ್ಕೌಟ್‌ಗಳು ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಈ ಇಯರ್‌ಬಡ್ಸ್‌ ಪೆಬ್ಬಲ್-ಆಕಾರದ ಚಾರ್ಜಿಂಗ್ ಕೇಸ್ ಅನ್ನು ಒಳಗೊಂಡಿದೆ. ಇದಲ್ಲದೆ ಪ್ರತಿ ಇಯರ್‌ಬಡ್‌ನಲ್ಲಿ ಒಂದು ಟ್ಯಾಪ್ ಟಚ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಬಳಕೆದಾರರು ಕಿವಿಯಿಂದ ಹೊರತೆಗೆದಾಗ ಸಂಗೀತವನ್ನು ಪ್ಲೇ ಮಾಡಲು ಮತ್ತು ವಿರಾಮಗೊಳಿಸಲು ಕಿವಿಯೊಳಗಿನ ಪತ್ತೆಯೊಂದಿಗೆ ಬರುತ್ತವೆ.

ಬೋಟ್‌ ನಿರ್ವಾಣ Ion ANC ಇಯರ್‌ಬಡ್ಸ್‌ ಪ್ರತಿ ಇಯರ್‌ಬಡ್‌ನಲ್ಲಿ 10mm ಆಡಿಯೋ ಪವರ್‌ಫುಲ್‌, ಬಾಸ್ಸಿ ಆಡಿಯೊ ಔಟ್‌ಪುಟ್‌ಗಾಗಿ ತೋರಿಸಲಿದೆ. ಈ ಇಯರ್‌ಬಡ್ಸ್‌ ಹೈಫೈ ಡಿಎಸ್‌ಪಿ ಬೆಂಬಲಿಸುವ ಕ್ರಿಸ್ಟಲ್ ಬಯೋನಿಕ್ ಸೌಂಡ್ ಟೆಕ್ನಾಲಜಿಯನ್ನು ಹೊಂದಿದೆ. ಇದು ENx ತಂತ್ರಜ್ಞಾನದೊಂದಿಗೆ ಕ್ವಾಡ್-ಮೈಕ್ ಸೆಟಪ್ ಸಂಗೀತವನ್ನು ಕೇಳುವಾಗ ಅಥವಾ ಕರೆಯಲ್ಲಿ ಸ್ಪಷ್ಟವಾದ ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಬೆಂಬಲಿತವಾಗಿದೆ.

ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! 120 ಗಂಟೆ ಪ್ಲೇ ಬ್ಯಾಕ್‌ ಟೈಂ!

ಬೋಟ್‌ ನಿರ್ವಾಣ Ion ANC ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 24 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಚಾರ್ಜಿಂಗ್ ಕೇಸ್ ನಲ್ಲಿ 120 ಗಂಟೆಗಳವರೆಗೆ ವಿಸ್ತರಿಸಬಹುದಾಗಿದೆ. ಪ್ರತಿ ಇಯರ್‌ಬಡ್ 70mAh ಬ್ಯಾಟರಿಯನ್ನು ಹೊಂದಿದೆ, ಚಾರ್ಜಿಂಗ್ ಕೇಸ್ 600mAh ಬ್ಯಾಟರಿಯನ್ನು ಹೊಂದಿದೆ. ಬೋಟ್ ಸಿಗ್ನೇಚರ್ ಸೌಂಡ್ ಮತ್ತು ಕ್ರಿಸ್ಟಲ್ ಬಯೋನಿಕ್ ಸೌಂಡ್ ಎಂಬ ಡ್ಯುಯಲ್ ಇಕ್ಯೂ ಮೋಡ್‌ಗಳೂ ಒಳಗೊಂಡಿದೆ.

ಬೋಟ್‌ ನಿರ್ವಾಣ Ion ANC ಇಯರ್‌ಬಡ್ಸ್‌ ಕ್ಲೀನ್ ಕರೆ ಅನುಭವಕ್ಕಾಗಿ ಇಯರ್‌ಬಡ್‌ಗಳು ANC ಅನ್ನು 32dB ವರೆಗೆ ಬೆಂಬಲಿಸುತ್ತವೆ. ಇತರ ವೈಶಿಷ್ಟ್ಯಗಳೆಂದರೆ 60ms ಲೇಟೆನ್ಸಿ ಹೊಂದಿರುವ BEAST ಮೋಡ್, Mimi ನಿಂದ ನಡೆಸಲ್ಪಡುವ ಬೋಟ್ ಅಡಾಪ್ಟಿವ್ EQ, ಮಲ್ಟಿಪಾಯಿಂಟ್ ಕನೆಕ್ಟಿವಿಟಿ, USB ಟೈಪ್-C, ಮತ್ತು ಬ್ಲೂಟೂತ್ 5.2. ಅನ್ನು ಬೆಂಬಲಿಸಲಿದೆ.

ಬೋಟ್‌ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! 120 ಗಂಟೆ ಪ್ಲೇ ಬ್ಯಾಕ್‌ ಟೈಂ!

ಬೋಟ್‌ ನಿರ್ವಾಣ Ion ANC ಇಯರ್‌ಬಡ್ಸ್‌ ಬೆಲೆ ಮತ್ತು ಲಭ್ಯತೆ
ಬೋಟ್‌ ನಿರ್ವಾಣ Ion ANC ಇಯರ್‌ಬಡ್ಸ್‌ ಭಾರತದಲ್ಲಿ 2,499ರೂ ಬೆಲೆಯನ್ನು ಹೊಂದಿದೆ. ಇದಲ್ಲದೆ ಹೆಚ್ಚುವರಿ 99ರೂ ಕ್ಕೆ ಗ್ರಾಹಕರು ಕಸ್ಟಮೈಸ್ ಮಾಡಿದ ಕೆತ್ತನೆಯನ್ನು ಸಹ ನೀಡುತ್ತಿದೆ. ಚಾರ್ಜಿಂಗ್ ಕೇಸ್‌ನಲ್ಲಿ 12 ಅಕ್ಷರಗಳನ್ನು ಕೆತ್ತಲಾಗಿದೆ. ಈ ಸೌಲಭ್ಯವು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ.

ಇದಲ್ಲದೆ ಬೋಟ್‌ ಕಂಪೆನಿ ಇದೇ ವರ್ಷ ಭಾರತದಲ್ಲಿ ಬೋಟ್‌ ಲೂನಾರ್‌ ಟೈಜೆನ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್‌ ಸ್ಟೈಲಿಶ್ ರೌಂಡ್ ಡಯಲ್ ವಿನ್ಯಾಸವನ್ನು ಹೊಂದಿದ್ದು, ಓಷನ್ ರಿಡ್ಜ್ ಮತ್ತು ಮೆಟಾಲಿಕ್ ಸ್ಟ್ರಾಪ್‌ಗಳ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಿದೆ.

Best Mobiles in India

English summary
boAt Nirvana Ion ANC TWS Drivers Launched in India: Price and Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+