ಬೋಟ್ ಸಂಸ್ಥೆಯಿಂದ ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್ ಲಾಂಚ್: 100 ಗಂಟೆಗಳ ಪ್ಲೇ ಬ್ಯಾಕ್ ಟೈಂ!
ಬೋಟ್ ಕಂಪೆನಿ ತನ್ನ ವಿಭಿನ್ನ ಶೈಲಿಯ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇದೀಗ ಅದೇ ಹಾದಿಯಲ್ಲಿ ಹೊಸ ಬೋಟ್ ರಾಕರ್ಜ್ 255 ANC ಬ್ಲೂಟೂತ್ ನೆಕ್‌ಬ್ಯಾಂಡ್ ಇಯರ್‌ಫೋನ್ ಪರಿಚಯಿಸಿದೆ. ಇದು ANC 13 mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, boAt ಸಿಗ್ನೇಚರ್ ಸೌಂಡ್ ಟೆಕ್ನಾಲಜಿಯಿಂದ ರನ್ ಆಗಲಿದೆ.
ಹೌದು, BoAt Rockerz 255 ANC ಇಯರ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಇದು 32+ dB ಸಕ್ರಿಯ ಶಬ್ದ ರದ್ದತಿ (ANC) ಮತ್ತು 100 ಗಂಟೆಗಳ ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಜೊತೆಗೆ ಈ ಇಯರ್‌ಫೋನ್ 2 ಅಂತರ್ನಿರ್ಮಿತ EQ ಮೋಡ್‌ಗಳು, ಮಲ್ಟಿ-ಡಿವೈಸ್ ಕನೆಕ್ಟಿವಿಟಿ ಹಾಗೂ 60ms ಲೋ-ಲೇಟೆನ್ಸಿ ಮೋಡ್ ಹಾಗೂ Google FastPair ಬೆಂಬಲವನ್ನು ಹೊಂದಿದೆ. ಹಾಗಾದ್ರೆ ಬೋಟ್ ಸಂಸ್ಥೆ ಪರಚಯಿಸಿರುವ ಹೊಸ ಇಯರ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ರಾಕರ್ಜ್ 255 ANC ಫೀಚರ್ಸ್ ಹೇಗಿದೆ?
ಬೋಟ್ ರಾಕರ್ಜ್ 255 ANC ನೆಕ್‌ಬ್ಯಾಂಡ್ ಇಯರ್‌ಫೋನ್ 13 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಬೋಟ್ ಸ್ಪಾಟಿಯಲ್ ಆಡಿಯೋ ಮತ್ತು ಸಿಗ್ನೇಚರ್ ಸೌಂಡ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, Google FastPair ಬೆಂಬಲವನ್ನು ಸಹ ಹೊಂದಿದೆ. ಜೊತೆಗೆ ಈ ಇಯರ್‌ಫೋನ್ ಮಲ್ಟಿ ಡಿವೈಸ್ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಇದರೊಂದಿಗೆ ANC ಬಟನ್ ಅನ್ನು ಕೂಡ ಒಳಗೊಂಡಿದೆ.

ಇನ್ನು ಈ ನೆಕ್‌ಬ್ಯಾಂಡ್ ಡ್ಯುಯಲ್ EQ ಮೋಡ್‌ಗಳನ್ನು ಹೊಂದಿದ್ದ, ಅಲ್ಟ್ರಾ ಲೋ-ಲೇಟೆನ್ಸಿ ಮೋಡ್ ಹೊಂದಿದೆ. ಈ ಇಯರ್‌ಫೋನ್ ಒಟ್ಟು 100 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ. ಜೊತೆಗೆ ಮ್ಯಾಗ್ನೆಟಿಕ್ ಇಯರ್‌ಬಡ್‌ಗಳಾಗಿದ್ದು, IPX5 ಸ್ಪ್ಲಾಶ್ ಮತ್ತು ಸ್ವೆಟ್ ರೆಸಿಸ್ಟೆನ್ಸ್ ಸಹ ಹೊಂದಿದೆ.
ಬೆಲೆ ಮತ್ತು ಲಭ್ಯತೆ
BoAt Rockerz 255 ANC ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್‌ಗಳು ಭಾರತದಲ್ಲಿ 1,799ರೂ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ನೀವು ನೀಲಿ, ಕೆಂಪು ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಬೋಟ್ ವೆಬ್‌ಸೈಟ್ ಮತ್ತು Amazon.in ನಲ್ಲಿ ಫೆಬ್ರವರಿ 7 ರಿಂದ ಖರೀದಿಸಬಹುದು. ಇನ್ನು ಬಿಡುಗಡೆಯ ಕೊಡುಗೆಯಾಗಿ, ನೆಕ್‌ಬ್ಯಾಂಡ್ ಖರೀದಿಸುವ ಮೊದಲ 255 ಗ್ರಾಹಕರು 255ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತಾರೆ.
ಇದಲ್ಲದೆ ಬೋಟ್ ಕಂಪೆನಿ ಭಾರತದಲ್ಲಿ ಇತ್ತೀಚಿಗೆ boAt Immortal 201 ಮತ್ತು Airdopes 91 ಇಯರ್‌ಬಡ್ಸ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೋಟ್ ಇಮ್ಮಾರ್ಟಲ್ 201 ಬಡ್ಸ್ RGB ಲೈಟಿಂಗ್, 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು boAt ಸಿಗ್ನೇಚರ್ ಸೌಂಡ್ ಟೆಕ್ನಾಲಜಿಯೊಂದಿಗೆ ಬರಲಿದೆ. ಇದರೊಂದಿಗೆ Airdopes 91 ಬಡ್ಸ್ ಕೈಗೆಟಕುವ ಬೆಲೆಯೊಂದಿಗೆ ಎಂಟ್ರಿ ನೀಡಿದೆ.
ಇದರಲ್ಲಿ boAt Airdopes 91 ಇಯರ್‌ಬಡ್ಸ್ ಕಾಂಡದ ವಿನ್ಯಾಸವನ್ನು ಹೊಂದಿದೆ. ಇದು ಕಾಂಪ್ಯಾಕ್ಟ್ ಚಾರ್ಜಿಂಗ್ ಕೇಸ್ ಅನ್ನು ಹೊಂದಿದ್ದು, ಬೋಟ್ ಸಿಗ್ನೇಚರ್ ಸೌಂಡ್ ಸಹ ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್ 10 ಮಿಮೀ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ENx ತಂತ್ರಜ್ಞಾನದೊಂದಿಗೆ ಡ್ಯುಯಲ್ ಮೈಕ್, 50ms ಕಡಿಮೆ ಸುಪ್ತತೆಯೊಂದಿಗೆ ಬೀಸ್ಟ್ ಮೋಡ್ ಸಹ ಪಡೆದಿದೆ. ಈ ಬಡ್ಸ್ IPX4 ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧವನ್ನು ಸಹ ಒಳಗೊಂಡಿದೆ. ಇನ್ನು ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್ 35mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೆ, ಇದರ ಚಾರ್ಜಿಂಗ್ ಕೇಸ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ.
ಇನ್ನು boAt Immortal 201 ಇಯರ್ ಬಡ್ಸ್ ಗೇಮಿಂಗ್ ಇಯರ್‌ಬಡ್ ಆಗಿದ್ದು, ಬಡ್ಸ್‌ನಲ್ಲಿ RGB ಲೈಟಿಂಗ್ ಮತ್ತು ಚಾರ್ಜಿಂಗ್ ಕೇಸ್ ನೀಡಲಾಗಿದೆ. ಇದರಲ್ಲಿ Insta Wake N ಫೀಚರ್ಸ್ ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳೊಂದಿಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸಲಿದೆ. ಈ ಇಯರ್‌ಬಡ್ಸ್ 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಬೋಟ್ ಸಿಗ್ನೇಚರ್ ಸೌಂಡ್ ಆಡಿಯೋವನ್ನು ಬೆಂಬಲಿಸಲಿದೆ. ಇದಲ್ಲದೆ ENx ತಂತ್ರಜ್ಞಾನದೊಂದಿಗೆ ಕ್ವಾಡ್ ಮೈಕ್ ಅನ್ನು ಸಹ ಹೊಂದಿದೆ.


Click it and Unblock the Notifications








