ಭಾರತದಲ್ಲಿ ಬೋಟ್‌ ರಾಕರ್ಜ್‌ 225 ಪ್ರೊ + ಇಯರ್‌ಫೋನ್‌ ಬಿಡುಗಡೆ!

|

ಜನಪ್ರಿಯ ಇಯರ್‌ಫೋನ್‌ ತಯಾರಕ ಬೋಟ್‌ ಕಂಪೆನಿ ತನ್ನ ವೈವಿಧ್ಯಮಯ ಇಯರ್‌ಫೋನ್‌ಗಳ ಮೂಲಕ ಪ್ರಸಿದ್ಧಿ ಪಡೆದುಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಬೋಟ್ ರಾಕರ್ಜ್ 225 ಪ್ರೊ + ವಾಯರ್‌ಲೆಸ್ ಇಯರ್‌ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಹೊಸ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಬೋಟ್‌ನಿಂದ ಇನ್ನೂ ಅತ್ಯಾಧುನಿಕ ನೆಕ್‌ಬ್ಯಾಂಡ್ ಶೈಲಿಯ ವೈರ್‌ಲೆಸ್ ಇಯರ್‌ಫೋನ್‌ಗಳೆಂದು ಹೆಸರಿಸಲಾಗಿದೆ.

ಬೋಟ್‌

ಹೌದು, ಬೋಟ್‌ ಕಂಪೆನಿ ಹೊಸ ಬೋಟ್‌ ರಾಕರ್ಜ್‌ 225 ಪ್ರೊ + ವಾಯರ್‌ಲೆಸ್‌ ಇಯರ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇದು ಐಪಿಎಕ್ಸ್ 7 ವಾಟರ್‌ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ. ಜೊತೆಗೆ ಕ್ವಾಲ್ಕಾಮ್ ಆಪ್ಟಿಎಕ್ಸ್ ಬ್ಲೂಟೂತ್ ಕೊಡೆಕ್‌ಗೆ ಬೆಂಬಲ ಸೇರಿದಂತೆ ವಿವಿಧ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ನೆಕ್‌ಬ್ಯಾಂಡ್ ಶೈಲಿಯ ವಾಯರ್‌ಲೆಸ್ ಇಯರ್‌ಫೋನ್‌ಗಳು ಪರಿಚಯಾತ್ಮಕ ಬೆಲೆಗೆ ಕಂಪನಿಯ ಸ್ವಂತ ಆನ್‌ಲೈನ್ ಸ್ಟೋರ್‌ನಲ್ಲಿ 1,499,ರೂ ಬೆಲೆ ಹೊಂದಿದೆ. ಇದು ಆಕ್ಟಿವ್ ಬ್ಲ್ಯಾಕ್, ನೇವಿ ಬ್ಲೂ ಮತ್ತು ಟೀಲ್ ಗ್ರೀನ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬೋಟ್ ರಾಕರ್ಜ್ 255 ಪ್ರೊ +

ಬೋಟ್ ರಾಕರ್ಜ್ 255 ಪ್ರೊ + ಒಂದು ನೆಕ್‌ಬ್ಯಾಂಡ್ ಶೈಲಿಯ ವಾಯರ್‌ಲೆಸ್ ಇನ್-ಇಯರ್ ಹೆಡ್‌ಸೆಟ್ ಆಗಿದೆ. ಇನ್ನು ಸಂಪರ್ಕಕ್ಕಾಗಿ ಬ್ಲೂಟೂತ್ 5 ನೊಂದಿಗೆ ಕ್ವಾಲ್ಕಾಮ್ ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಹೆಡ್‌ಸೆಟ್‌ನಲ್ಲಿ ಎರಡು ಪ್ರಮುಖ ಕ್ವಾಲ್ಕಾಮ್ ತಂತ್ರಜ್ಞಾನಗಳನ್ನು ಶಕ್ತಗೊಳಿಸುತ್ತದೆ. ಹೆಚ್ಚಿನ ರೆಸಲ್ಯೂಶನ್ ಆಡಿಯೊ ಪ್ರಸರಣಕ್ಕಾಗಿ ಆಪ್ಟಿಎಕ್ಸ್ ಬ್ಲೂಟೂತ್ ಕೋಡೆಕ್‌ಗೆ ಬೆಂಬಲ, ಮತ್ತು ಕರೆಗಳಲ್ಲಿ ಉತ್ತಮ ಧ್ವನಿ ಪ್ರದರ್ಶನಕ್ಕಾಗಿ ಕ್ವಾಲ್ಕಾಮ್ ಸಿವಿಸಿ ಎಕೋ ಸೌಂಡ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ.

ಇಯರ್‌ಫೋನ್‌ಗಳು

ಇನ್ನು ಇಯರ್‌ಫೋನ್‌ಗಳು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದ್ದು. ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 10 ನಿಮಿಷಗಳ ಪ್ಲೇಬ್ಯಾಕ್ ಅನ್ನು 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಭರವಸೆ ನೀಡುತ್ತದೆ ಮತ್ತು ಪ್ರತಿ ಚಾರ್ಜ್‌ಗೆ 40 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ. ಇನ್ನು ಧ್ವನಿಗಾಗಿ, ಬೋಟ್ ರಾಕರ್ಜ್ 255 ಪ್ರೊ + ಇಯರ್‌ಫೋನ್‌ಗಳು 10mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ, ಮತ್ತು ಕ್ವಾಲ್ಕಾಮ್ ಆಪ್ಟ್‌ಎಕ್ಸ್‌ಗೆ ಹೆಚ್ಚುವರಿಯಾಗಿ ಎಸ್‌ಬಿಸಿ ಮತ್ತು ಎಎಸಿ ಬ್ಲೂಟೂತ್ ಕೋಡೆಕ್‌ಗಳನ್ನು ಸಹ ಬೆಂಬಲಿಸಲಾಗುತ್ತದೆ. ಜೊತೆಗೆ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಸೇರಿದಂತೆ ಧ್ವನಿ ಸಹಾಯಕರು, ಡ್ಯುಯಲ್ ಜೋಡಣೆ, ಮತ್ತು ಇಯರ್‌ಬಡ್‌ಗಳ ಮ್ಯಾಗ್ನೆಟಿಕ್ ಲಿಂಕ್ ಮಾಡುವಿಕೆ ಸಹ ಹೆಡ್‌ಸೆಟ್‌ನಲ್ಲಿವೆ.

ಬೋಟ್ ರಾಕರ್ಜ್ 255 ಪ್ರೊ + ವಾಯರ್‌ಲೆಸ್‌ ಇಯರ್‌ಫೋನ್

ಬೋಟ್ ರಾಕರ್ಜ್ 255 ಪ್ರೊ + ವಾಯರ್‌ಲೆಸ್‌ ಇಯರ್‌ಫೋನ್‌ ಬೋಟ್ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಿದಾಗ ಪ್ರಾರಂಭದ ಸಮಯದಲ್ಲಿ ಪರಿಚಯಾತ್ಮಕ ಬೆಲೆಯಂತೆ 1,499 ರೂ.ಗೆ ಲಭ್ಯವಾಗಲಿದೆ. ಇತರ ಬೋಟ್ ಉತ್ಪನ್ನಗಳಂತೆ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ರಾಕರ್ಜ್ 255 ಪ್ರೊ + ಲಭ್ಯವಿದೆ.

Most Read Articles
Best Mobiles in India

English summary
Boat Rockerz 255 Pro+ wireless earphone launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X