ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಬೆಲೆಯಲ್ಲಿ ಭಾರೀ ಕುಸಿತ!..ಬಿಗ್ ಬ್ಯಾಟರಿ!
ಬೋಟ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಆಡಿಯೋ ಉತ್ಪನ್ನಗಳ ಜೊತೆಗೆ ಇತರೆ ಸ್ಮಾರ್ಟ್ ಡಿವೈಸ್‌ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಬೋಟ್ ಕಂಪನಿಯ ಆಡಿಯೋ ಡಿವೈಸ್‌ಗಳು ಸಹ ಹೆಚ್ಚಿನ ಗಮನ ಸೆಳೆದಿವೆ. ಆ ಪೈಕಿ ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಡಿವೈಸ್ ಸಹ ಸದ್ದು ಮಾಡಿದ್ದು, ಇದೀಗ ಈ ನೆಕ್‌ಬ್ಯಾಂಡ್ ಸಖತ್ ಡಿಸ್ಕೌಂಟ್ ಪಡೆದಿವೆ.
ಹೌದು, ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಡಿವೈಸ್ ಅಧಿಕೃತ ಬೋಟ್ ವೆಬ್‌ಸೈಟ್ ತಾಣದಲ್ಲಿ ಶೇ. 50% ರಷ್ಟು ರಿಯಾಯಿತಿ ಪಡೆದಿದೆ. ಬ್ಲೂ, ಬ್ಲ್ಯಾಕ್ ಹಾಗೂ ಗ್ರೀನ್ ಕಲರ್ ಆಯ್ಕೆಯಲ್ಲಿ ಲಭ್ಯ ಇರುವ ಈ ನೆಕ್‌ಬ್ಯಾಂಡ್ ಡಿವೈಸ್ 2,990ರೂ. ಬೆಲೆಯನ್ನು ಹೊಂದಿದ್ದು, ಸದ್ಯ ಆಫರ್‌ನಲ್ಲಿ 1,499ರೂ. ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ. ಇತರೆ ಆಯ್ದ ಬ್ಯಾಂಕ್ ಆಫರ್‌ಗಳು ಕೂಡಾ ಲಭ್ಯ ಆಗಲಿವೆ.

ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಡಿವೈಸ್ ಸಿಂಗಲ್ ಚಾರ್ಜ್‌ನಲ್ಲಿ 30 ಗಂಟೆಗಳ ಪ್ಲೇಬ್ಯಾಕ್ ಟೈಂ ಒದಗಿಸುವ ಸಾಮರ್ಥ್ಯ ಪಡೆದಿದೆ. ಹಾಗೆಯೇ ಈ ನೆಕ್‌ಬ್ಯಾಂಡ್ 10 ಎಂಎಂ ಡೈನಾಮಿಕ್ ಗ್ರ್ಯಾಫೀನ್ ಡ್ರೈವರ್‌ಗಳನ್ನು ಒಳಗೊಂಡಿದೆ. ಹಾಗಾದರೆ ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಸಾಧನದ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಬೋಟ್ ರಾಕರ್ಜ್ 255 ಟಚ್ ಫೀಚರ್ಸ್ ಮಾಹಿತಿ ಇಲ್ಲಿದೆ :
ಬೋಟ್ ರಾಕರ್ಜ್ 255 ಟಚ್ ವಾಯರ್‌ಲೆಸ್ ಇಯರ್‌ಫೋನ್ ಬ್ಲೂಟೂತ್ ನೆಕ್‌ಬ್ಯಾಂಡ್ ಆಗಿದೆ. ಈ ನೆಕ್‌ಬ್ಯಾಂಡ್ ಕೆಲವು ಸ್ಮಾರ್ಟ್ ಟಚ್ ಕಂಟ್ರೋಲ್ ಆಯ್ಕೆಗಳನ್ನು ಪಡೆದಿದ್ದು, ಇದರಿಂದ ಬಳಕೆದಾರರು ಕೇವಲ ಟಚ್ ಮೂಲಕವೇ ಮ್ಯೂಸಿಕ್ ಟ್ರ್ಯಾಕ್ ಅನ್ನು ಬದಲಾಯಿಸುವ ಆಯ್ಕೆ ಇದೆ.
ಇದರೊಂದಿಗೆ ಬಳಕೆದಾರರು ವಾಲ್ಯೂಮ್ ಅನ್ನು ಸೆಟ್ ಮಾಡುವ, ಆಡಿಯೋ ಮೋಡ್‌ಗಳನ್ನು ಬದಲಾಯಿಸುವ ಆಯ್ಕೆಗೂ ಅವಕಾಶ ಲಭ್ಯ. ಇದರ ಜೊತೆಗೆ ಫೋನ್ ಕಾಲ್‌ಗಳನ್ನು ರೀಸಿವ್ ಮಾಡುವ ಮತ್ತು ವಾಯ್ಸ್ ಅಸಿಸ್ಟೆಂಟ್ ಅನ್ನು ಆಕ್ಟಿವ್ ಮಾಡುವುದಕ್ಕೂ ಸಹ ಅನುಕೂಲ ಇದೆ.
ಬೋಟ್ ಸಂಸ್ಥೆಯ ಈ ನೆಕ್‌ಬ್ಯಾಂಡ್ ಡಿರಾಕ್ ವರ್ಚುವೊ ಚಾಲಿತ ಪ್ರಾದೇಶಿಕ ಆಡಿಯೊವನ್ನು ಒಳಗೊಂಡಿದ್ದು, ಇದು ಕಂಪೆನಿಯ ENx ಅಲ್ಗಾರಿದಮ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಬ್ಲೂಟೂತ್ ಕಾಲ್‌ಗಳ ವೇಳೆಯಲ್ಲಿ ಸುತ್ತಲಿನ ನಾಯ್ಸ್ ಅನ್ನು ಕ್ಯಾನ್ಸಲೇಶನ್ ಮಾಡುವ ಸೌಲಭ್ಯ ಸಹ ಇದೆ.
ಹಾಗೆಯೇ ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಸಾಧನವು ಬ್ಲೂಟೂತ್ 5.3 ಕನೆಕ್ಟಿವಿಟಿ ಸೌಲಭ್ಯವನ್ನು ಸಹ ಬೆಂಬಲಿಸುತ್ತದೆ. ಇದರ ಜೊತೆಗೆ ಈ ನೆಕ್‌ಬ್ಯಾಂಡ್ 10 ಎಂಎಂ ಡೈನಾಮಿಕ್ ಗ್ರ್ಯಾಫೀನ್ ಡ್ರೈವರ್‌ಗಳನ್ನು ಪಡೆದಿದ್ದು, ಅತ್ಯುತ್ತಮ ಆಡಿಯೋ ಅನುಭವವನ್ನು ಬಳಕೆದಾರರಿಗೆ ಒದಗಿಸಲಿದೆ.
ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ 200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 30 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡುತ್ತದೆ. ಹಾಗೆಯೇ ಈ ನೆಕ್‌ಬ್ಯಾಂಡ್ ಡಿವೈಸ್ USB-C ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿದ್ದು, ಕೇವಲ 10 ನಿಮಿಷಗಳ ವೇಗದ ಚಾರ್ಜಿಂಗ್‌ನಲ್ಲಿ 10 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಒದಗಿಸಲಿದೆ.
ಇದರೊಂದಿಗೆ ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಡಿವಯಸ್ ಗೇಮಿಂಗ್‌ಗಾಗಿ ಮೀಸಲಾದ 'ಬೀಸ್ಟ್ ಮೋಡ್' ಅನ್ನು ಸಹ ಪಡೆದಿದ್ದು, ಇದು 40ms ಕಡಿಮೆ ಲೇಟೆನ್ಸಿಯನ್ನು ಒದಗಿಸುತ್ತದೆ. ಇದರೊಂದಿಗೆ ಈ ನೆಕ್‌ಬ್ಯಾಂಡ್‌ನಲ್ಲಿ ಮ್ಯಾಗ್ನೆಟಿಕ್ ಪವರ್ ಆನ್ ಹಾಗೂ ಆಫ್ ಫೀಚರ್ಸ್ ಅನ್ನು ಸಹ ಒದಗಿಸಲಾಗಿದೆ.


Click it and Unblock the Notifications








