Home
ಸುದ್ದಿಜಾಲ

ಮ್ಯೂಸಿಕ್‌ ಪ್ರಿಯರಿಗೆ ಗುಡ್‌ನ್ಯೂಸ್‌ ಕೊಟ್ಟ ಬೋಟ್‌! 1,499ರೂ.ಬೆಲೆಯಲ್ಲಿ ಅತ್ಯಾಕರ್ಷಕ ಇಯರ್‌ಫೋನ್‌!

ಇಯರ್‌ಫೋನ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಮ್ಯೂಸಿಕ್‌ ಪ್ರಿಯರ ನೆಚ್ಚಿನ ಆಯ್ಕೆಯಾಗಿ ಬೋಟ್‌ ಇಯರ್‌ಫೋನ್‌ಗಳು ಗುರುತಿಸಿಕೊಂಡಿದೆ. ಇದೀಗ ಬೋಟ್‌ ಕಂಪೆನಿ ಹೊಸದಾಗಿ ಬೋಟ್‌ ರಾಕರ್ಜ್‌ 255 ಟಚ್ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ.

ಹೌದು, ಭಾರತದಲ್ಲಿ ಬೋಟ್‌ ರಾಕರ್ಜ್‌ 255 ಟಚ್ ವಾಯರ್‌ಲೆಸ್‌ ಇಯರ್‌ಫೋನ್‌ ಬಿಡುಗಡೆಯಾಗಿದೆ. ನೆಕ್‌ಬ್ಯಾಂಡ್‌ ಶೈಲಿಯ ಈ ಇಯರ್‌ಫೋನ್‌ ಕೈ ಗೆಟಕುವ ಬೆಲೆಯನ್ನು ಹೊಂದಿದೆ. ಇನ್ನು ಇಯರ್‌ಫೋನ್‌ ಟಚ್‌ ಸ್ವೈಪ್‌ ಕಂಟ್ರೋಲ್‌ ಅನ್ನು ಹೊಂದಿದ್ದು, ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ. ಹಾಗಾದ್ರೆ ಬೋಟ್‌ ರಾಕರ್ಜ್‌ 255 ಟಚ್ ವಾಯರ್‌ಲೆಸ್‌ ಕಿಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮ್ಯೂಸಿಕ್‌ ಪ್ರಿಯರಿಗೆ ಗುಡ್‌ನ್ಯೂಸ್‌ ಕೊಟ್ಟ ಬೋಟ್‌! ಅತ್ಯಾಕರ್ಷಕ ಇಯರ್‌ಫೋನ್‌!

ಬೋಟ್ ರಾಕರ್ಜ್ 255 ಟಚ್ ವಿಶೇಷತೆ ಹೇಗಿದೆ: ಬೋಟ್ ರಾಕರ್ಜ್ 255 ಟಚ್ ವಾಯರ್‌ಲೆಸ್ ಇಯರ್‌ಫೋನ್‌ ಬ್ಲೂಟೂತ್ ನೆಕ್‌ಬ್ಯಾಂಡ್ ಆಗಿದೆ. ಇದು ಸ್ಮಾರ್ಟ್ ಟಚ್ ಕಂಟ್ರೋಲ್‌ಗಳನ್ನು ಹೊಂದಿದೆ. ಇದರಿಂದ ಬಳಕೆದಾರರು ಕೇವಲ ಟಚ್‌ ಮೂಲಕವೇ ಮ್ಯೂಸಿಕ್‌ ಟ್ರ್ಯಾಕ್‌ ಅನ್ನು ಬದಲಾಯಿಸುವ, ವಾಲ್ಯೂಮ್‌ ಅನ್ನು ಸೆಟ್‌ ಮಾಡುವ, ಮೋಡ್‌ಗಳನ್ನು ಬದಲಾಯಿಸುವ ಅವಕಾಶ ಸಿಗಲಿದೆ. ಜೊತೆಗೆ ಫೋನ್‌ ಕಾಲ್‌ಗಳನ್ನು ಸ್ವಿಕರಿಸುವ ಮತ್ತು ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಆಕ್ಟಿವ್‌ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ.

ಬೋಟ್‌ ಕಂಪೆನಿ ಈ ನೆಕ್‌ಬ್ಯಾಂಡ್ ಡಿರಾಕ್ ವರ್ಚುವೊ ಚಾಲಿತ ಪ್ರಾದೇಶಿಕ ಆಡಿಯೊವನ್ನು ಹೊಂದಿದೆ. ಇದು ಕಂಪೆನಿಯ ENx ಅಲ್ಗಾರಿದಮ್ ಅನ್ನು ಹೊಂದಿದ್ದು, ಬ್ಲೂಟೂತ್‌ ಕಾಲ್‌ಗಳ ಸಮಯದಲ್ಲಿ ಸುತ್ತಲಿನ ನಾಯ್ಸ್‌ ಅನ್ನು ಕ್ಯಾನ್ಸಲೇಶನ್‌ ಮಾಡಲಿದೆ ಎಂದು ಬೋಟ್‌ ಕಂಪೆನಿ ಹೇಳಿದೆ. ಇನ್ನು ಇಯರ್‌ಫೋನ್‌ ಬ್ಲೂಟೂತ್ 5.3 ಸಂಪರ್ಕವನ್ನು ಬೆಂಬಲಿಸುತ್ತದೆ. ಇದಲ್ಲದೆ ನೆಕ್‌ಬ್ಯಾಂಡ್ 10 ಎಂಎಂ ಡೈನಾಮಿಕ್ ಗ್ರ್ಯಾಫೀನ್ ಡ್ರೈವರ್‌ಗಳನ್ನು ಒಳಗೊಂಡಿದ್ದು, ಅತ್ಯುತ್ತಮ ಅನುಭವವನ್ನು ನೀಡಲಿದೆ.

ಮ್ಯೂಸಿಕ್‌ ಪ್ರಿಯರಿಗೆ ಗುಡ್‌ನ್ಯೂಸ್‌ ಕೊಟ್ಟ ಬೋಟ್‌! ಅತ್ಯಾಕರ್ಷಕ ಇಯರ್‌ಫೋನ್‌!

ಇದು 200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 30 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಇನ್ನು ಈ ಡಿವೈಸ್‌ USB-C ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಕೇವಲ 10 ನಿಮಿಷಗಳ ವೇಗದ ಚಾರ್ಜಿಂಗ್‌ನಲ್ಲಿ 10 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಗೇಮಿಂಗ್‌ಗಾಗಿ ಮೀಸಲಾದ 'ಬೀಸ್ಟ್ ಮೋಡ್' ಅನ್ನು ಸಹ ಹೊಂದಿದೆ. ಇದು 40ms ಕಡಿಮೆ ಲೇಟೆನ್ಸಿಯನ್ನು ನೀಡುತ್ತದೆ. ಇದಲ್ಲದೆ ನೆಕ್‌ಬ್ಯಾಂಡ್‌ನಲ್ಲಿ ಮ್ಯಾಗ್ನೆಟಿಕ್ ಪವರ್ ಆನ್/ಆಫ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ.

ಮ್ಯೂಸಿಕ್‌ ಪ್ರಿಯರಿಗೆ ಗುಡ್‌ನ್ಯೂಸ್‌ ಕೊಟ್ಟ ಬೋಟ್‌! ಅತ್ಯಾಕರ್ಷಕ ಇಯರ್‌ಫೋನ್‌!

ಭಾರತದಲ್ಲಿ ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಬೆಲೆ ಮತ್ತು ಲಭ್ಯತೆ: ಭಾರತದಲ್ಲಿ ಬೋಟ್ ರಾಕರ್ಜ್ 255 ಟಚ್ ನೆಕ್‌ಬ್ಯಾಂಡ್ ಅನ್ನು 1,499ರೂ. ಪರಿಚಯಾತ್ಮಕ ಬೆಲೆಯಲ್ಲಿ ನೀಡಲಾಗ್ತಿದೆ. ಇದರ ಮೂಲ ಬೆಲೆ ಎಷ್ಟಿರಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಇನ್ನು ಈ ನೆಕ್‌ಬ್ಯಾಂಡ್‌ ಪಿಚ್ ಬ್ಲಾಕ್, ಡೀಪ್ ಬ್ಲೂ ಮತ್ತು ಟೀಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌, Myntra ಮೂಲಕ ಖರೀದಿಗೆ ದೊರೆಯಲಿದೆ.

ಬೇರೆ ಸುದ್ದಿಗಳ ಕಡೆಗೆ ಗಮನಹರಿಸುವುದಾದರೆ ಇಷ್ಟು ದಿನ ಭಾರತದಲ್ಲಿ ಬೆಂಗಳೂರು ಸೇರಿದಂತೆ ಕೆಲವೇ ಕೆಲವು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಗೂಗಲ್ ಸ್ಟ್ರೀಟ್ ವ್ಯೂ ಎಲ್ಲೆಡೆ ಲಭ್ಯವಾಗಲಿದೆ. ಇದರಿಂದ ಬಳಕೆದಾರರು ಭಾರತದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಸ್ಟ್ರೀಟ್‌ ಅನ್ನು 360 ಡಿಗ್ರಿ ವೀಕ್ಷಣೆ ಮಾಡಬಹುದು. ನಿಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿನ ಹೆಚ್ಚಿನ ಸ್ಥಳಗಳು 360-ಡಿಗ್ರಿ ವೀಕ್ಷಣೆಯ ಆಯ್ಕೆಗಳನ್ನು ಹೊಂದಿದ್ದರೆ, ಕೆಲವು ಸ್ಥಳಗಳು ಸ್ಥಿರ ಚಿತ್ರಗಳ ಮೂಲಕ ವೀಕ್ಷಣೆ ಮಾಡುವ ಅವಕಾಶ ಹೊಂದಿವೆ.

Best Mobiles in India

English summary
Boat Rockerz 255 Touch Neckband Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+