ಬೋಟ್ ರಾಕರ್ಜ್ 335 ವಾಯರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್ ಬಿಡುಗಡೆ!
ಜನಪ್ರಿಯ ಇಯರ್‌ಫೋನ್ ತಯಾರಕ ಬೋಟ್ ಕಂಪೆನಿ ತನ್ನ ಬೋಟ್ ರಾಕರ್ಜ್ 335 ವಾಯರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಬೋಟ್ ಕಂಪೆನಿ ಈಗಾಗಲೇ ಹಲವು ಹೊಸ ಮಾದರಿಯ ಇಯರ್‌ಫೋನ್‌ಗಳನ್ನ ಪರಿಚಯಿಸಿ ಇಯರ್‌ಫೋನ್ ಪ್ರಿಯರ ನೆಚ್ಚಿನ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಸದ್ಯ ಈ ಹೊಸ ಬ್ಲೂಟೂತ್ ಇಯರ್‌ಫೋನ್‌ಗಳು ಕಂಪನಿಯ ವಾಯರ್‌ಲೆಸ್ ಆಡಿಯೊ ಪ್ರಾಡಕ್ಟ್ ಶ್ರೇಣಿಯಲ್ಲಿ ಅತ್ಯಾಧುನಿಕವಾಗಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದೆ.

ಹೌದು, ಬೋಟ್ ಕಂಪೆನಿ ತನ್ನ ಹೊಸ ಬೋಟ್ ರಾಕರ್ಜ್ 335 ವಾಯರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಸುಧಾರಿತ ಬ್ಲೂಟೂತ್ ಕೊಡೆಕ್ ಬೆಂಬಲವನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಅವಧಿಯನ್ನು ಒಳಗೊಂಡಿದೆ. ಇದಲ್ಲದೆ ಈ ಬೋಟ್ ರಾಕರ್ಜ್ 335 ಒನ್‌ಪ್ಲಸ್ ಬುಲೆಟ್‌ಗಳ ವಾಯರ್‌ಲೆಸ್ Z ಗಿಂತ ಉತ್ತಮ ವಿನ್ಯಾಸ ಹಾಗೂ ಬೆಲೆಯನ್ನ ಹೊಂದಿದೆ. ಇನ್ನುಳಿದಂತೆ ಈ ಇಯರ್‌ಫೋನ್ ಕೆಂಪು, ಹಳದಿ ಮತ್ತು ನೀಲಿ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಈ ಇಯರ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ಬೋಟ್ ರಾಕರ್ಜ್ 335 ಇಯರ್‌ಫೋನ್ ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದ್ದು, ಯುವಜನತೆಯ ಆಶಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರತಿ ಚಾರ್ಜ್‌ಗೆ 30 ಗಂಟೆಗಳವರೆಗೆ ಕೇಳುವ ಅಥವಾ ಕರೆ ಮಾಡುವ ಬ್ಯಾಟರಿ ಅವಧಿಯನ್ನು ಹೊಂದಿದೆ. ಅಲ್ಲದೆ ಇದು ವಾಯರ್‌ಲೆಸ್ ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್‌ಗಳು ಹೊಂದಿರುವ ಬೆಲೆಗಿಂತ ಇದು ಹೆಚ್ಚಿನ ದರ ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ ಈ ಇಯರ್‌ಫೋನ್ ವೇಗದ ಚಾರ್ಜಿಂಗ್ ಅನ್ನು ಹೊಂದಿದ್ದು, 10 ನಿಮಿಷಗಳ ಚಾರ್ಜ್‌ನಲ್ಲಿ 10 ಗಂಟೆಗಳ ಆಲಿಸುವಿಕೆಯನ್ನು ನೀಡಲಿದೆ. ಜೊತೆಗೆ ಇದರ ಒಟ್ಟು ಚಾರ್ಜಿಂಗ್ ಸಮಯ 40 ನಿಮಿಷಗಳು ಎಂದು ಹೇಳಲಾಗಿದೆ.

ಇದಲ್ಲದೆ, ರಾಕರ್ಜ್ 335 ಇಯರ್‌ಫೋನ್‌ಗಳು ಕ್ವಾಲ್ಕಾಮ್ ಆಪ್ಟಿಎಕ್ಸ್ ಬ್ಲೂಟೂತ್ ಕೊಡೆಕ್‌ಗೆ ಬೆಂಬಲವನ್ನು ನೀಡುತ್ತವೆ, ಜೊತೆಗೆ ಧ್ವನಿ ಕರೆಗಳಲ್ಲಿ ಕ್ವಾಲ್ಕಾಮ್ ಸಿವಿಸಿ ನೇಚರ್ ನಾಯ್ಸ್ ಕ್ಯಾನ್ಸಲೇಶನ್ ಸಿಸ್ಟಂ ಅನ್ನು ಸಹ ಹೊಂದಿದೆ. ಇನ್ನು ಈ ಇಯರ್‌ಫೋನ್‌ಗಳು 10mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್ 5.0 ಅನ್ನು ಬೆಂಬಲಿಸಲಿದೆ. ಇನ್ನು ಹೆಚ್ಚುವರಿಯಾಗಿ, ಈ ಇಯರ್‌ಫೋನ್‌ಗಳು ವಾಟರ್ ಪ್ರೂಪ್ ವ್ಯವಸ್ಥೆಯನ್ನು ಹೊಂದಿದ್ದು, IPX5 ರೇಟ್ ಅನ್ನು ಹೊಂದಿದೆ.

ಇನ್ನು ಬಳಕೆದಾರರ ,ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವನ್ನ ಈ ಇಯರ್‌ಫೋನ್ ಹೊಂದಿದೆ. ಉತ್ತಮ ಮೈಕ್ರೋಫೋನ್ ವ್ಯವಸ್ಥೆ ಇರುವುದರಿಂದ ಮ್ಯೂಸಿಕ್ ಆಲಿಸುತ್ತಾ ಕಾಲಕಳೆಯಲು ಉತ್ತಮ ಆಯ್ಕೆಯಾಗಿದೆ. ಇನ್ನು ಈ ಬೋಟ್ ರಾಕರ್ಜ್ 335 ವಾಯರ್‌ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್ ರೂ. 1,999, ಬೆಲೆಯನ್ನ ಹೊಂದಿದೆ. ಅಲ್ಲದೆ ಈ ಇಯರ್‌ಫೋನ್ ತನ್ನ ಬೆಲೆಯ ಮೂಲಕ ಒನ್‌ಪ್ಲಸ್ ಬುಲೆಟ್ಸ್ ವಾಯರ್‌ಲೆಸ್ Z ಮತ್ತು ಒಪ್ಪೊ ಎನ್‌ಕೊ M31 ವಿರುದ್ದ ಸ್ಪರ್ಧೆ ಮಾಡಲಿದೆ.


Click it and Unblock the Notifications