ಬಯಲಾಯ್ತು ಬೋಟ್ ಸ್ಮಾರ್ಟ್ ರಿಂಗ್ ಫೀಚರ್ಸ್... ಸ್ಮಾರ್ಟ್‌ವಾಚ್‌ಗಳ ಕಥೆಯೇನು?
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ರಿಂಗ್‌ಗಳು ಟೆಕ್ ವಲಯದ ವಿಸ್ಮಯ ಅಂತಾನೇ ಖ್ಯಾತಿ ಪಡೆದುಕೊಳ್ಳುತ್ತಿವೆ. ಇದಕ್ಕೆ ಇಂಬುಕೊಡುವಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ಸ್ಮಾರ್ಟ್ ರಿಂಗ್‌ಗಳನ್ನು ಅನಾವರಣಗೊಳಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಬೋಟ್ ಕಂಪೆನಿ ಕೂಡ ಮುಂದಾಗಿದ್ದು, ಶೀಘ್ರದಲ್ಲೇ ಭಾರತದಲ್ಲಿ ಹೊಸ ಬೋಟ್ ಸ್ಮಾರ್ಟ್ ರಿಂಗ್ ಪರಿಚಯಿಸಲಿದೆ.
ಹೌದು, ಬೋಟ್ ಸ್ಮಾರ್ಟ್ ರಿಂಗ್ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ. ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್ ರಿಂಗ್ ಪರಿಚಯಿಸುವುದಕ್ಕಿಂತ ಮುನ್ನವೇ ಅದರ ಫೀಚರ್ಸ್‌ಗಳನ್ನು ಬಹಿರಂಗಪಡಿಸಿದೆ. ಅದರಂತೆ ಬೋಟ್ ಸ್ಮಾರ್ಟ್ ರಿಂಗ್ ಮೂರು ಗಾತ್ರಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ರಿಂಗ್ ಮೆಟಲ್ ಚಾಸಿಸ್‌ನಲ್ಲಿ ಇರಿಸಲಾಗುವುದು ಎಂದು ಬೋಟ್ ಕಂಪೆನಿ ಹೇಳಿದೆ. ಹಾಗಾದ್ರೆ ಬೋಟ್ ಸ್ಮಾರ್ಟ್ ರಿಂಗ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ, ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಸ್ಮಾರ್ಟ್ ರಿಂಗ್ ಫೀಚರ್ಸ್ ವಿಶೇಷ
ಬೋಟ್ ಸ್ಮಾರ್ಟ್‌ರಿಂಗ್ ಒಂದು ಅತ್ಯಧ್ಬುತವಾದ ಅನುಭವ ನೀಡಲಿದೆ. ಇದು ಕೇವಲ ರಿಂಗ್ ಮಾತ್ರವಲ್ಲ ಹಲವು ಕಾರ್ಯಗಳನ್ನು ಮಾಡಬಲ್ಲ ಸ್ಮಾರ್ಟ್ ಡಿವೈಸ್ ಆಗಿದೆ. ಈ ವೆರಿಯೆಬಲ್ ಸ್ಮಾರ್ಟ್ ರಿಂಗ್ ವಿವಿಧ ರೀತಿಯ ಆರೋಗ್ಯ ಸೂಚಕಗಳನ್ನು ಮೇಲ್ವಿಚಾರಣೆ ಮಾಡಲಿದೆ. ಇದರ ಮೂಲಕ ನಿಮ್ಮ ದೇಹದ ಚರ್ಮದ ಉಷ್ಣತೆ, ಹೃದಯ ಬಡಿತ ಮತ್ತು SpO2 ಲೆವೆಲ್ ಅನ್ನು ಅಳೆಯಲು ಅವಕಾಶ ನೀಡಲಿದೆ. ಜೊತೆಗೆ ಬಳಕೆದಾರರು ತಮ್ಮ ನಿದ್ರೆ ಮತ್ತು ಮಹಿಳೆಯರ ಆರೋಗ್ಯವನ್ನು ಕೂಡ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.
ಇದಲ್ಲದೆ ಬೋಟ್ ಸ್ಮಾರ್ಟ್ ರಿಂಗ್ ಅನ್ನು ಸಂಪರ್ಕಿತ ಸ್ಮಾರ್ಟ್‌ಫೋನ್‌ನಲ್ಲಿನ ಅಪ್ಲಿಕೇಶನ್‌ನೊಂದಿಗೆ ಕನೆಕ್ಟ್ ಮಾಡಬಹುದಾಗಿದೆ. ಅಲ್ಲದೆ ವಿವರವಾದ ಡೇಟಾ ಮತ್ತು ಪ್ರಗತಿ ಮ್ಯಾಪಿಂಗ್ ಅನ್ನು ಪಡೆಯಲು ಸಹ ಅವಕಾಶ ನೀಡಲಿದೆ ಎಂದು ಲ್ಯಾಂಡಿಂಗ್ ಪೇಜ್‌ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸ್ಮಾರ್ಟ್ ರಿಂಗ್ ಬಳಕೆದಾರರ ರನ್ನಿಂಗ್, ವಾಕಿಂಗ್, ಒಳಾಂಗಣ ಮತ್ತು ಹೊರಾಂಗಣ ಟ್ರ್ಯಾಕಿಂಗ್ ಸೇರಿದಂತೆ ಹಲವಾರು ವ್ಯಾಯಾಮಗಳು ಮತ್ತು ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಲಿದೆ.
ಇನ್ನು ಬೋಟ್ ಸ್ಮಾರ್ಟ್ ರಿಂಗ್ ಬಳಕೆದಾರರ ದೇಹದ ಆರೋಗ್ಯ ಮಟ್ಟವನ್ನು ಅಳೆಯಲು ಆರು-ಆಕ್ಸಿಸ್ ಮೋಷನ್ ಸೆನ್ಸರ್‌ಗಳನ್ನು ಹೊಂದಿದೆ. ಇದು ತುರ್ತು ಪರಿಸ್ಥಿತಿಗಳಿಗಾಗಿ SOS ಮೋಡ್ ಅನ್ನು ಸಹ ಹೊಂದಿದೆ. ಅಲ್ಲದೆ ಸ್ಮಾರ್ಟ್ ರಿಂಗ್ 5 ATM ವರೆಗೆ ವಾಟರ್ ಪ್ರೂಫ್ ವ್ಯವಸ್ಥೆ ಹೊಂದಿದೆ ಎಂದು ರೇಟ್ ಮಾಡಲಾಗಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ.
ಬೋಟ್ ಸ್ಮಾರ್ಟ್ ರಿಂಗ್‌ನಲ್ಲಿ ಸ್ಮಾರ್ಟ್ ಟಚ್ ಕಂಟ್ರೋಲ್ ಅನ್ನು ಸಹ ನೀಡಲಾಗಿದೆ. ಇದನ್ನು ಬಳಸಿಕೊಂಡು ಮ್ಯೂಸಿಕ್ ಪ್ಲೇ ಮಾಡುವ ಮತ್ತು ಸ್ಟಾಪ್ ಮಾಡುವ ಹಾಗೂ ಮ್ಯೂಸಿಕ್ ಟ್ರ್ಯಾಕ್‌ಗಳನ್ನು ಬದಲಾಯಿಸುವುದಕ್ಕೆ ಕೂಡ ಅವಕಾಶ ನೀಡಲಾಗಿದೆ. ಇದಲ್ಲದೆ ಚಿತ್ರಗಳನ್ನು ಕ್ಲಿಕ್ ಮಾಡಲು ಮತ್ತು ಅಪ್ಲಿಕೇಶನ್‌ಗಳನ್ನು ನ್ಯಾವಿಗೇಟ್ ಮಾಡಲು ಸಹ ಅನುಮತಿಸುತ್ತದೆ ಎಂದು ಬೋಟ್ ಕಂಪನಿ ತಿಳಿಸಿದೆ. ಹಾಗಯೇ ಸ್ಮಾರ್ಟ್ ರಿಂಗ್ ಸ್ವೈಪ್ / ಗೆಸ್ಚರ್ ನಿಯಂತ್ರಣಗಳನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.
ಬೋಟ್ ಕಂಪೆನಿಯ ಈ ಹೊಸ ಬೋಟ್ ಸ್ಮಾರ್ಟ್ ರಿಂಗ್ ಕಳೆದ ತಿಂಗಳು ಭಾರತಕ್ಕೆ ಎಂಟ್ರಿ ನೀಡಿದ್ದ ಲೂನಾ ರಿಂಗ್‌ನೊಂದಿಗೆ ಪೈಪೋಟಿ ನಡೆಸಲಿದೆ. ಇನ್ನು ಬೋಟ್ ಸ್ಮಾರ್ಟ್ ರಿಂಗ್ ಭಾರತದಲ್ಲಿ ಯಾವ ಬೆಲೆಯಲ್ಲಿ ಬರಲಿದೆ ಅನ್ನೊದನ್ನ ಬೋಟ್ ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಡಿವೈಸ್ ಅನ್ನು 17.4mm, 19.15mm ಮತ್ತು 20.85mm ಆಯ್ಕೆಯ ಮೂರು ರಿಂಗ್ ಗಾತ್ರಗಳಲ್ಲಿ ಮಾರಾಟ ಮಾಡುವುದಾಗಿ ಹೇಳಿದೆ.


Click it and Unblock the Notifications








