ಎಂಟ್ರಿ ಕೊಟ್ಟೆ ಬಿಡ್ತು ಬೋಟ್ ಸ್ಮಾರ್ಟ್ ರಿಂಗ್.. ಇದು ಕೇವಲ ಉಂಗುರವಲ್ಲ!
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಬೋಟ್ ಸ್ಮಾರ್ಟ್ ರಿಂಗ್ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಸ್ವದೇಶಿ ಬ್ರ್ಯಾಂಡ್ ಬೋಟ್ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್ ರಿಂಗ್ ಅನ್ನು ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್ ರಿಂಗ್ ಸ್ಮಾರ್ಟ್ ವಾಚ್ ಮಾದರಿಯಲ್ಲಿಯೇ ಫಿಟ್‌ನೆಸ್ ಟ್ರ್ಯಾಕರ್‌ಗಳನ್ನು ಹೊಂದಿದ್ದು, ಇದರ ವಿನ್ಯಾಸವೇ ಬಲು ಡಿಫ್ರೆಂಟ್ ಆಗಿದೆ.
ಹೌದು, ಬೋಟ್ ಸ್ಮಾರ್ಟ್ ರಿಂಗ್ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್ ರಿಂಗ್ ಕೇವಲ ಉಂಗುರ ಮಾತ್ರವಲ್ಲ ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸ್ಮಾರ್ಟ್‌ವಾಚ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಸ್ಮಾರ್ಟ್‌ರಿಂಗ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಬರೆಯುವ ಸೂಚನೆ ನೀಡಿದೆ. ಹಾಗಾದ್ರೆ ಬೋಟ್ ಸ್ಮಾರ್ಟ್ ರಿಂಗ್ ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಸ್ಮಾರ್ಟ್ ರಿಂಗ್‌ನ ವಿಶೇಷತೆ ಏನು?
ಬೋಟ್ ಸ್ಮಾರ್ಟ್ ರಿಂಗ್ ಪ್ರೀಮಿಯಂ ಲುಕ್‌ಗಾಗಿ ಸೆರಾಮಿಕ್ ಮತ್ತು ಮೆಟಲ್ ಯುನಿಬಾಡಿಯನ್ನು ಹೊಂದಿದೆ. ಇದು ಕೇವಲ ಉಂಗುರ ಮಾತ್ರವಲ್ಲ ನಿಮ್ಮ ದೇಹದ ಆರೋಗ್ಯ ಮಟ್ಟವನ್ನು ಅಳೆಯಬಲ್ಲ ಸ್ಮಾರ್ಟ್ ರಿಂಗ್ ಇದಾಗಿದೆ. ಇದರ ಮೂಲಕ ನಿಮ್ಮ ದೇಹದ ಚರ್ಮದ ಉಷ್ಣತೆ, ಹೃದಯ ಬಡಿತ ಮತ್ತು SpO2 ಲೆವೆಲ್ ಅನ್ನು ಸಹ ಅಳಯಬಹುದಾಗಿದೆ. ಜೊತೆಗೆ ರಿಂಗ್‌ನ ಮೇಲ್ಮೈ ಸ್ಮಾರ್ಟ್ ಟಚ್ ಕಂಟ್ರೋಲ್‌ಗಳನ್ನು ಸಹ ನೀಡಲಾಗಿದೆ.
ಈ ಸ್ಮಾರ್ಟ್ ರಿಂಗ್ ಬಳಕೆದಾರರಿಗೆ ಸ್ವೈಪ್ ನ್ಯಾವಿಗೇಷನ್‌ಗಳೊಂದಿಗೆ ಹೊಂದಾಣಿಕೆಯ ಡಿವೈಸ್‌ಗಳನ್ನು ಕಂಟ್ರೋಲ್ ಮಾಡಲು ಅವಕಾಶ ನೀಡಲಿದೆ. ಇದಲ್ಲದೆ ಬಳಕೆದಾರರು ಮ್ಯೂಸಿಕ್ ಪ್ಲೇ ಬ್ಯಾಕ್ ಕಂಟ್ರೋಲ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ ಮಾಡಲು ಕ್ಯಾಮರಾ ಶಟರ್ ಒತ್ತಿರಿ ಮತ್ತು ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ರಿಂಗ್ ಮೂಲಕವೆ ನ್ಯಾವಿಗೇಟ್ ಮಾಡಬಹುದು. ಇನ್ನು ಬೋಟ್ ರಿಂಗ್ ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ಸಂವಾದಾತ್ಮಕ ಡೇಟಾ, ಟ್ರೆಂಡ್ ಮ್ಯಾಪಿಂಗ್ ಮತ್ತು ಪ್ರಗತಿ ಟ್ರ್ಯಾಕಿಂಗ್ ಅನ್ನು ಸಹ ಮಾಡಬಹುದಾಗಿದೆ.
ಬೋಟ್ ಸ್ಮಾರ್ಟ್ ರಿಂಗ್ ಹೆಲ್ತ್ ಟ್ರ್ಯಾಕಿಂಗ್‌ಗಾಗಿ 6-ಆಕ್ಸಿಸ್ ಮೋಷನ್ ಸೆನ್ಸರ್‌ಗಳನ್ನು ಹೊಂದಿದೆ. ಇದು ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, ಸ್ಲಿಪ್ ಟ್ರ್ಯಾಕರ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್ ರಿಂಗ್ ಬಳಕೆದಾರರ ತಾಪಮಾನವನ್ನು ಸ್ವಯಂಚಾಲಿತವಾಗಿ ಅಳೆಯಲು ದೇಹದ ತಾಪಮಾನ ಮಾನಿಟರ್ ಅನ್ನು ಸಹ ಪಡೆದುಕೊಂಡಿದೆ. ಇದರಲ್ಲಿ ಬಾಡಿ ರಿಕವರಿ ಟ್ರ್ಯಾಕರ್ ಕೂಡ ಅಳವಡಿಸಲಾಗಿದ್ದು, ಬಳಕೆದಾರರ ಚೇತರಿಕೆಯ ಮಟ್ಟವನ್ನು ಟ್ರ್ಯಾಕ್ ಮಾಡುತ್ತದೆ.
ಈ ಬೋಟ್ ಸ್ಮಾರ್ಟ್ ರಿಂಗ್ ಎಮರ್ಜೆನ್ಸಿ SOS ಅನ್ನು ಸಹ ಹೊಂದಿದೆ. ಇದಲ್ಲದೆ ಕಂಪ್ಲೀಟ್ ಚಾರ್ಜಿಂಗ್‌ನಲ್ಲಿ 7 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಸ್ಮಾರ್ಟ್ ರಿಂಗ್ ಬಳಕೆದಾರರ ರನ್ನಿಂಗ್, ವಾಕಿಂಗ್, ಒಳಾಂಗಣ ಮತ್ತು ಹೊರಾಂಗಣ ಟ್ರ್ಯಾಕಿಂಗ್ ಸೇರಿದಂತೆ ಹಲವಾರು ವ್ಯಾಯಾಮಗಳು ಮತ್ತು ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಲಿದೆ.ಇದಲ್ಲದೆ ಚಿತ್ರಗಳನ್ನು ಕ್ಲಿಕ್ ಮಾಡಲು ಮತ್ತು ಅಪ್ಲಿಕೇಶನ್‌ಗಳನ್ನು ನ್ಯಾವಿಗೇಟ್ ಮಾಡಲು ಸಹ ಅನುಮತಿಸುತ್ತದೆ ಎಂದು ಬೋಟ್ ಕಂಪನಿ ತಿಳಿಸಿದೆ. ಹಾಗಯೇ ಸ್ಮಾರ್ಟ್ ರಿಂಗ್ ಸ್ವೈಪ್ / ಗೆಸ್ಚರ್ ನಿಯಂತ್ರಣಗಳನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.
ಬೋಟ್ ಸ್ಮಾರ್ಟ್ ರಿಂಗ್ ಭಾರತದಲ್ಲಿ 8,999 ರೂ.ಬೆಲೆಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ರಿಂಗ್ 17.40mm, 19.15mm ಮತ್ತು 20.85mm ಅಳತೆಯ ಮೂರು ಮಾದರಿಗಳಲ್ಲಿ ಲಭ್ಯವಾಗಲಿದೆ. ಇದನ್ನು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಬೋಟ್ ಕಂಪೆನಿಯ ಅಧಿಕೃತ ವೆಬ್‌ಸೈಟ್ ಮೂಲಕ ಇದೇ ಆಗಸ್ಟ್ 28 ರಿಂದ ಖರೀದಿಸಬಹುದಾಗಿದೆ.


Click it and Unblock the Notifications








