ಇದು ಕೇವಲ ರಿಂಗ್ ಅಲ್ಲ, ನಿಮ್ಮ ಹೃದಯಬಡಿತವನ್ನೇ ಅಳೆಯಬಲ್ಲ ಸ್ಮಾರ್ಟ್ ರಿಂಗ್!
ರಿಂಗ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಕೈ ಬೆರಳಿನಲ್ಲೊಂದು ರಿಂಗ್ (ಉಂಗುರ) ಇದ್ದರೆ ಅದರ ಲುಕ್ ಬೇರೆ. ಸದ್ಯ ಇದೀಗ ಮಾರುಕಟ್ಟೆಯಲ್ಲಿ ಹೊಸ ರಿಂಗ್ ಒಂದು ಸಿಕ್ಕಾಪಟ್ಟೆ ಹವಾ ಕ್ರಿಯೆಟ್ ಮಾಡುವ ಸೂಚನೆ ನೀಡಿದೆ.
ಹೌದು, ಭಾರತದ ಮಾರುಕಟ್ಟೆಯಲ್ಲಿ ಬೋಟ್ ಸ್ಮಾರ್ಟ್ ರಿಂಗ್ ಅನಾವರಣಗೊಂಡಿದೆ. ಇದು ಜನಪ್ರಿಯ ಔರಾರಿಂಗ್‌ನ ಒಂದು ಸ್ಥಾಪಿತವ ವಿಭಾಗವಾಗಿದೆ. ಇನ್ನು ಈ ರಿಂಗ್ ಸಮಾನ್ಯ ರಿಂಗ್ ಅಲ್ಲ ಇದು SpO2 ಮಾನಿಟರಿಂಗ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ ಇನ್ನು ಹಲವು ಆಕರ್ಷಕ ಹೆಲ್ತ್ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಾದ್ರೆ ಬೋಟ್ ಸ್ಮಾರ್ಟ್ ರಿಂಗ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಸ್ಮಾರ್ಟ್ ರಿಂಗ್ ಫೀಚರ್ಸ್ ಹೇಗಿದೆ?
boAt ಸ್ಮಾರ್ಟ್ ರಿಂಗ್ ತನ್ನ ವಿಶೇಷ ಡಿಸೈನ್ ಮಾತ್ರವಲ್ಲದೆ ವಿಭಿನ್ನ ಹೆಲ್ತ್ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಸ್ಮಾರ್ಟ್‌ವಾಚ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಕಂಡುಬರುವ ಫೀಚರ್ಸ್‌ಗಳನ್ನು ಈ ರಿಂಗ್‌ನಲ್ಲಿ ನೀಡಲಾಗಿದೆ. ಈ ಹೊಸ ಸ್ಮಾರ್ಟ್ ರಿಂಗ್ ಬಳಕೆದಾರರಿಗೆ ತಮ್ಮ ಆರೋಗ್ಯದ ಮಾಹಿತಿಯನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡುವ ಫೀಚರ್ಸ್ ಹೊಂದಿದೆ. ಇದು ನಯವಾದ ಮತ್ತು ಸೊಗಸಾದ ವಿನ್ಯಾಸವನ್ನು ಪಡೆದಿದ್ದು, ಯಾವುದೇ ಉಡುಪನ್ನು ಧರಿಸಿದರೂ ಕೂಡ ಹೊಂದಿಕೊಳ್ಳಲಿದೆ.
ಇನ್ನು ಈ ರಿಂಗ್ ಅನ್ನು ಸೆರಾಮಿಕ್ ಮತ್ತು ಲೋಹದಿಂದ ಮಾಡಲಾಗಿದ್ದು ಸಾಕಷ್ಟು ಗಟ್ಟಿಮುಟ್ಟಾಗಿದೆ. ಇದಲ್ಲದೆ ಈ ರಿಂಗ್ 5ATM ರೇಟಿಂಗ್ ಹೊಂದಿದ್ದು, ನೀರು ಮತ್ತು ಬೆವರಿನಿಂದ ರಕ್ಷಣೆಯನ್ನು ನೀಡಲಿದೆ. ಇದರಿಂದ ಈ ರಿಂಗ್ ನಿಮ್ಮ ದೈನಂದಿನ ಉಡುಗೆ ಮತ್ತು ಚಟುವಟಿಕೆಗಳಿಗೆ ಸೂಕ್ತವಾಗಿದೆ. ಇನ್ನು ಬೋಟ್ ಸ್ಮಾರ್ಟ್ ರಿಂಗ್ ಇನ್‌ಬಿಲ್ಟ್ ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಇದರಿಂದ ಸ್ಟೆಪ್ಸ್, ಕ್ರಮಿಸಿದ ದೂರ, ಬರ್ನ್ ಮಾಡಿದ ಕ್ಯಾಲೊರಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ.
boAt ಸ್ಮಾರ್ಟ್ ರಿಂಗ್ ವ್ಯಾಯಾಮದ ಸಮಯದಲ್ಲಿ ಹೃದಯರಕ್ತನಾಳದ ಆರೋಗ್ಯ ಮತ್ತು ಹೃದಯ ಬಡಿತ ವಲಯಗಳನ್ನು ಪತ್ತೆಹಚ್ಚುವ ಕಾರ್ಯ ಮಾಡಲಿದೆ. ಇದಕ್ಕಾಗಿ boAt ಸ್ಮಾರ್ಟ್ ರಿಂಗ್ ನಲ್ಲಿ ರಿಕವರಿ ಟ್ರ್ಯಾಕರ್ ಅನ್ನು ನೀಡಲಾಗಿದೆ. ಇದು ನಿಮ್ಮ ದೇಹದ ಚೇತರಿಕೆಯ ಮಟ್ಟವನ್ನು ಪತ್ತೆಹಚ್ಚುವ ಹಾಗೂ ಹೃದಯ ಬಡಿತದ ವ್ಯತ್ಯಾಸದ ವಿಶ್ಲೇಷಣೆಯನ್ನು ಮಾಡಲಿದೆ. ಇದಲ್ಲದೆ ಸ್ಮಾರ್ಟ್ ರಿಂಗ್ ಸ್ಲೀಪ್ ಟ್ರ್ಯಾಕರ್ ಅನ್ನು ಸಹ ಹೊಂದಿದ್ದು, ನಿಮ್ಮ ಸ್ಮಾರ್ಟ್‌ವಾಚ್ ಮತ್ತು ಸ್ಮಾರ್ಟ್‌ಫೋನ್‌ಗಳಿಗಿಂತಲೂ ಇದು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.
ಇದರ ಮೂಲಕ ನಿಮ್ಮ ನಿದ್ರೆಯ ಅವಧಿ, ಮಾದರಿ, ವಿವಿಧ ನಿದ್ರೆಯ ಹಂತಗಳನ್ನು ಟ್ರ್ಯಾಕ್ ಮಾಡಲಿದೆ. ಇದಲ್ಲದೆ ನಿಮ್ಮ ದೇಹದ ತಾಪಮಾನ ಅಳೆಯುವ ಸೆನ್ಸಾರ್ ಹಾಗೂ SpO2 ಮಾನಿಟರಿಂಗ್ ಸೆನ್ಸಾರ್ ಅನ್ನು ಕೂಡ ಪಡೆದುಕೊಂಡಿದೆ. ಇನ್ನು ಮಹಿಳಾ ಬಳಕೆದರರ ಅನುಕೂಲಕ್ಕಾಗಿ ಹಲವು ಹೆಲ್ತ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಮಹಿಳೆಯರ ಆರೋಗ್ಯ ಮಾಹಿತಿ, ಅಧಿಸೂಚನೆಗಳು ಮತ್ತು ಜ್ಞಾಪನೆಗಳಂತಹ ಅನುಕೂಲಕರ ಫೀಚರ್ಸ್‌ಗಳನ್ನು ಹೊಂದಿದೆ.
ಇನ್ನು ಬೋಟ್ ಸ್ಮಾರ್ಟ್ ರಿಂಗ್ ಸ್ಮಾರ್ಟ್‌ಫೋನ್ ಕಂಪ್ಯಾನಿಯನ್ ಆ್ಯಪ್‌ನೊಂದಿಗೆ ಬರಲಿದೆ. ಇದರಿಂದ ಬಳಕೆದಾರರು ಎಲ್ಲಾ ಅಂಕಿ ಅಂಶಗಳನ್ನು ಆ್ಯಪ್‌ನಲ್ಲಿ ವೀಕ್ಷಣೆ ಮಾಡುವುದಕ್ಕೆ ಸಾದ್ಯವಾಗಲಿದೆ. ಇದಲ್ಲದೆ ಈ ಸ್ಮಾರ್ಟ್ ರಿಂಗ್ ಸ್ಮಾರ್ಟ್ ಟಚ್ ಕಂಟ್ರೋಲ್ ಅನ್ನು ಹೊಂದಿದೆ. ಇದರಿಂದ ಹೊಂದಾಣಿಕೆಯ ಡಿವೈಸ್‌ಗಿಳಿಗೆ ಏಕ-ಕೈ ಚಲನೆಗಳು ಮತ್ತು ಗೆಸ್ಚರ್ ಕಂಟ್ರೋಲ್ ಅನ್ನು ಆಕ್ಟಿವ್ ಮಾಡಲಿದೆ ಎಂದು ಹೇಳಲಾಗಿದೆ.
BoAt ಸ್ಮಾರ್ಟ್ ರಿಂಗ್ ಭಾರತದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಬೋಟ್‌ನ ಅಧಿಕೃತ ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಆದರೆ ಇದರ ಬಿಡುಗಡೆ ದಿನಾಂಕ ಹಾಗೂ ಸ್ಮಾರ್ಟ್ ರಿಂಗ್‌ನ ಬೆಲೆ ಇನ್ನು ಕೂಡ ಬಹಿರಂಗವಾಗಿಲ್ಲ.


Click it and Unblock the Notifications








