Home
ಸುದ್ದಿಜಾಲ

ಪಾರ್ಟಿ ಪ್ರಿಯರಿಗಾಗಿ ಹೊಸ ಬ್ಲೂಟೂತ್‌ ಸ್ಪೀಕರ್‌ ಪರಿಚಯಿಸಿದ ಬೋಟ್‌ ಕಂಪೆನಿ: ಬೆಲೆ ಎಷ್ಟು

ಬೋಟ್‌ ಕಂಪೆನಿ ತನ್ನ ವಿಭಿನ್ನ ಮಾದರಿಯ ಬ್ಲೂಟೂತ್‌ ಸ್ಪೀಕರ್‌ಗಳಿಗೆ ಹೆಸರುವಾಸಿಯಾಗಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಹೊಸ ಬೋಟ್‌ ಸ್ಟೋನ್ ಸ್ಪಿಂಕ್ಸ್ ಪ್ರೊ ಸ್ಪೀಕರ್‌ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಪೀಕರ್‌ ಬೋಟ್‌ ಸ್ಟೋನ್ ಸರಣಿಯ ಬ್ಲೂಟೂತ್ ಸ್ಪೀಕರ್‌ಗಳಿಗೆ ಹೊಸ ಸೇರ್ಪಡೆಯಾಗಿದೆ.

ಹೌದು, ಬೋಟ್‌ ಕಂಪೆನಿ ಹೊಸ ಬ್ಲೂಟೂತ್‌ ಸ್ಪೀಕರ್‌ ಅನ್ನು ಬಿಡುಗಡೆ ಮಾಡಿದೆ. ಇದು RGB LED ಗಳನ್ನು ಹೊಂದಿದ್ದು, ಗ್ರೂಪ್‌ ಪಾರ್ಟಿಗಳಿಗೆ ಪರಿಪೂರ್ಣ ವೈಬ್ ಅನ್ನು ನೀಡುತ್ತದೆ. ಇದಲ್ಲದೆ ಈ ಸ್ಪೀಕರ್‌ ಕಾಂಪ್ಯಾಕ್ಟ್ ಮತ್ತು ಹಗುರವಾದ ನಿರ್ಮಾಣವನ್ನು ಹೊಂದಿದೆ. ಇನ್ನುಳಿದಂತೆ ಬೋಟ್‌ ಕಂಪೆನಿಯ ಹೊಸ ಸ್ಪೀಕರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪಾರ್ಟಿ ಪ್ರಿಯರಿಗಾಗಿ ಹೊಸ ಬ್ಲೂಟೂತ್‌ ಸ್ಪೀಕರ್‌ ಪರಿಚಯಿಸಿದ ಬೋಟ್‌: ಬೆಲೆ ಎಷ್ಟು

boAt Stone Spinx Pro ಸ್ಪೀಕರ್‌ ಫೀಚರ್ಸ್‌ ಹೇಗಿದೆ?
boAt Stone Spinx Pro ಸ್ಪೀಕರ್‌ 20W RMS ಔಟ್‌ಪುಟ್ ಅನ್ನು ನೀಡಲಿದೆ. ಇದು boAt ಸಂಸ್ಥೆಯ ಸಿಗ್ನೇಚರ್ ಸೌಂಡ್ ತಂತ್ರಜ್ಞಾನದ ಜೊತೆಗೆ ಸಮತೋಲಿತ ಆಡಿಯೋ ಮತ್ತು ಬಾಸ್ ಅನ್ನು ನೀಡುತ್ತದೆ. ಇದಲ್ಲದೆ, ಬ್ಲೂಟೂತ್‌ ಸ್ಪೀಕರ್‌ ಇನ್‌ಬಿಲ್ಟ್‌ ಮೈಕ್ರೊಫೋನ್ ಹೊಂದಿದ್ದು, ಹ್ಯಾಂಡ್ಸ್-ಫ್ರೀ ಕರೆಗಳನ್ನು ಸಹ ತೆಗೆದುಕೊಳ್ಳಬಹುದಾಗಿದೆ. ಜೊತೆಗೆ ಈ ಸ್ಪೀಕರ್‌ TWS ಕನೆಕ್ಟ್‌, ಮಲ್ಟಿ ಕನೆಕ್ಟಿವಿಟಿ ಪೋರ್ಟ್‌ಗಳು ಮತ್ತು IPX4 ಸ್ಪ್ಲಾಶ್ ಪ್ರತಿರೋಧವನ್ನು ಒಳಗೊಂಡಿದೆ.

ಬೋಟ್ ಸ್ಟೋನ್ ಸ್ಪಿಂಕ್ಸ್ ಪ್ರೊ ಸ್ಪೀಕರ್‌ ಡೈನಾಮಿಕ್ RGB ಲೈಟ್ಸ್ ಅನ್ನು ಹೊಂದಿದೆ. ಇದು ಪಾರ್ಟಿ ಸಮಯದಲ್ಲಿ ಇನ್ನಷ್ಟು ಮನರಂಜನೆಯನ್ನು ಹೆಚ್ಚಿಸಲಿದೆ. ಇನ್ನು ಈ ಸ್ಪೀಕರ್‌ 8 ಗಂಟೆಗಳವರೆಗೆ ಪ್ಲೇಟೈಂ ನೀಡಲಿದೆ. ಇದಲ್ಲದೆ ಇದರಲ್ಲಿರುವ TWS ಪಂಕ್ಷನ್‌ ನಿಸ್ತಂತುವಾಗಿ ಎರಡು ಸ್ಪಿಂಕ್ಸ್ ಪ್ರೊ ಸ್ಪೀಕರ್‌ಗಳನ್ನು ಜೋಡಿಸಲು ನಿಮಗೆ ಅನುಮತಿಸುತ್ತದೆ.

ಬೆಲೆ ಮತ್ತು ಲಭ್ಯತೆ
BoAt Stone Spinx Pro ಭಾರತದಲ್ಲಿ 2,999ರೂ ಬೆಲೆಯನ್ನು ಹೊಂದಿದೆ. ಇದನ್ನು ನೀವು ಮಿಡ್‌ನೈಟ್‌ ಬ್ಲ್ಯಾಕ್‌ ಮತ್ತು ಟ್ರೊಪಿಕಲ್‌ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌.ಇನ್‌ ಮೂಲಕ ಖರೀದಿಸಬಹುದಾಗಿದೆ.

ಇನ್ನು ಇತ್ತೀಚಿಗೆ ಬೋಟ್ ಕಂಪೆನಿ ಹೊಸದಾಗಿ ಬೋಟ್‌ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ವಾಚ್‌ ತನ್ನ ಸ್ಟೈಲಿಶ್‌ ಲುಕ್‌ನಿಂದ ಟೆಕ್‌ ವಲಯದಲ್ಲಿ ಭಾರಿ ಸಂಚಲನ ಕ್ರಿಯೆಟ್‌ ಮಾಡಿತ್ತು. ಈ ಸ್ಮಾರ್ಟ್‌ವಾಚ್‌ 2.04 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಬಳಕೆದಾರರಿಗೆ 100 ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಯುವಜನರ ಆಶಯಕ್ಕೆ ತಕ್ಕಂತ ವಿನ್ಯಾಸವನ್ನು ಹೊಂದಿದ್ದು, ಯುವಕರ ನೆಚ್ಚಿನ ಆಯ್ಕೆಗಳಲ್ಲಿ ಒಂದೆನಿಸಿಕೊಂಡಿದೆ.

ಇದು ಒಂದು ಚದರ ಡಯಲ್‌ನೊಂದಿಗೆ ಬಾಳಿಕೆ ಬರುವ ಲೋಹದ ದೇಹವನ್ನು ಹೊಂದಿದ್ದು, ಶೈಲಿ ಮತ್ತು ಶಕ್ತಿ ಎರಡನ್ನೂ ಸಂಯೋಜಿಸಲಿದೆ. ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ ಬಾಳಿಕೆ ಮತ್ತು ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಈ ಬೋಟ್‌ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68 ರೇಟಿಂಗ್‌ ಅನ್ನು ಒಳಗೊಂಡಿದೆ. ಜೊತೆಗೆ ಇದು ಜಡ ಎಚ್ಚರಿಕೆಗಳು, ಕ್ಯಾಮರಾ ನಿಯಂತ್ರಣ, ಅಂತರ್ನಿರ್ಮಿತ ಆಟಗಳು, ಮ್ಯೂಸಿಕ್‌ ಕಂಟ್ರೋಲ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಈ ಸ್ಮಾರ್ಟ್ ವಾಚ್ 7 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಬಳಸಿದರೆ 3 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ ಭಾರತದಲ್ಲಿ 2,999ರೂ ಬೆಲೆಯನ್ನು ಹೊಂದಿದೆ.

Best Mobiles in India

English summary
boAt Stone Spinx Pro Bluetooth speaker launched in india: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+