5 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ನೀಡಲಿದೆ ಈ ಸ್ಮಾರ್ಟ್‌ವಾಚ್! ಬೆಲೆ ಎಷ್ಟು?
ಬೋಟ್ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಟೆಕ್ ವಲಯದಲ್ಲಿ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಬೋಟ್ ಕಂಪೆನಿ ಕೂಡ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಯಚಿಸುತ್ತಾ ಬಂದಿದೆ. ಇದೀಗ ಸ್ಮಾರ್ಟ್‌ವಾಚ್ ಮಾರುಕಟ್ಟೆಯಲ್ಲಿ ಹೊಸ ಬೋಟ್ ಸ್ಟಾರ್ಮ್ ಕಾಲ್ 2 ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ಕ್ರೆಸ್ಟ್ ಆಪ್ ಹೆಲ್ತ್ ಇಕೋ-ಸಿಸ್ಟಮ್‌ನ ಭಾಗವಾಗಿದೆ.
ಹೌದು, ಬೋಟ್ ಕಂಪೆನಿ ಭಾರತದಲ್ಲಿ ಹೊಸ ಬೋಟ್ ಸ್ಟಾರ್ಮ್ ಕಾಲ್ 2 ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಅನ್ನು ಬೆಂಬಲಿಸಲಿದೆ. ಇದಕ್ಕಾಗಿ ಪ್ರೀಮಿಯಂ ಬಿಲ್ಟ್-ಇನ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ. ಇದಲ್ಲದೆ ವೇಕ್ ಗೆಸ್ಚರ್ ಫೀಚರ್ಸ್ ಅನ್ನು ಕೂಡ ಪಡೆದುಕೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಸ್ಟಾರ್ಮ್ ಕಾಲ್ 2
ಬೋಟ್ ಸ್ಟಾರ್ಮ್ ಕಾಲ್ 2 ಸ್ಮಾರ್ಟ್‌ವಾಚ್ 1.83 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 240 x 284 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ ಸ್ಪಷ್ಟ ಮತ್ತು ರೋಮಾಂಚಕ ದೃಶ್ಯಗಳನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನ ಮೇನ್ ಹೈಲೈಟ್ ಎಂದರೆ ವೇಕ್ ಗೆಸ್ಚರ್ ಫೀಚರ್ಸ್ ಆಗಿದೆ. ಇದು ಬಳಕೆದಾರರಿಗೆ ತಮ್ಮ ಕೈಯ ಸರಳ ಚಲನೆಯ ಮೂಲಕವೇ ಬಳಕೆದಾರರಿಗೆ ಗಡಿಯಾರವನ್ನು ಆಲರ್ಟ್ ಮಾಡುವುದಕ್ಕೆ ಅನುವು ಮಾಡಿಕೊಡಲಿದೆ.
ಬೋಟ್ ಸ್ಟಾರ್ಮ್ ಕಾಲ್ 2 ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಬೆಂಬಲಿಸಲಿದೆ. ಇದಕ್ಕಾಗಿ ಪ್ರೀಮಿಯಂ ಬಿಲ್ಟ್-ಇನ್ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ. ಇದರಿಂದ ಉತ್ತಮ ಗುಣಮಟ್ಟದ ಬ್ಲೂಟೂತ್ ಕರೆಯನ್ನು ಸಕ್ರಿಯಗೊಳಿಸುತ್ತದೆ. ಇನ್ನು ಈ ಸ್ಮಾರ್ಟ್ ವಾಚ್ ಸಂವಾದಾತ್ಮಕ ಡಯಲ್-ಪ್ಯಾಡ್ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಕೇವಲ ಕರೆಗಳಿಗೆ ಉತ್ತರಿಸಲು ಸೀಮಿತವಾಗಿರುವುದಿಲ್ಲ. ಫಿಟ್ನೆಸ್ ಗುರಿಗಳನ್ನು ಸಾಧಿಸಲು ಡಿಜಿಟಲ್ ರಿವಾರ್ಡ್ ಸಿಸ್ಟಮ್ ಆನ್‌ಬೋರ್ಡ್ ಅನ್ನು ಹೊಂದಿದೆ.
ಇನ್ನು ಈ ಸ್ಮಾರ್ಟ್‌ವಾಚ್ ಸ್ಪೋರ್ಟ್ಸ್ ಪ್ರಿಯರಿಗಾಗಿ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ. ಇದರಿಂದ ಕ್ರಿಕೆಟ್ ಮತ್ತು ಫುಟ್‌ಬಾಲ್ ಲೈವ್ ಸ್ಕೋರ್‌ಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ರಿಯಲ್ ಟೈಂ ಅಪ್ಡೇಟ್‌ಗಳನ್ನು ಸಹ ನೀಡಲಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ನಿಮಗೆ 1000ಕ್ಕೂ ಹೆಚ್ಚು ವಾಚ್‌ಫೇಸ್‌ಗಳನ್ನು ನೀಡಲಾಗಿದೆ. ಬಳಕೆದಾರರು ತಮ್ಮ ಆಸಕ್ತಿಗೆ ಅನುಗುಣವಾಗಿ ತಮ್ಮ ಅದ್ಯತೆಗಳಿಗೆ ಸರಿಹೊಂದುವ ಸ್ಮಾರ್ಟ್‌ವಾಚ್ ಅನ್ನು ಕಸ್ಟಮೈಸ್ ಮಾಡಬಹುದಾಗಿದೆ.
ಇದಲ್ಲದೆ ಬೋಟ್ ಸ್ಟ್ರಾಮ್ ಕಾಲ್ 2 ಸ್ಮಾರ್ಟ್‌ವಾಚ್ ಕ್ರೆಸ್ಟ್ ಆಪ್ ಹೆಲ್ತ್ ಇಕೋ-ಸಿಸ್ಟಮ್‌ನ ಭಾಗವಾಗಿದೆ. ಇದು ಹೆಲ್ತ್ ಮಾನಿಟರಿಂಗ್ ಫೀಚರ್ಸ್‌ಗಳ ಸಮಗ್ರ ಸೆಟ್ ಅನ್ನು ನೀಡಲಿದೆ. ಅದರಂತೆ ಈ ಸ್ಮಾರ್ಟ್‌ವಾಚ್‌ನಲ್ಲಿ ನಿಮಗೆ SpO2 ಮಾನಿಟರಿಂಗ್ ಸೆನ್ಸಾರ್, ಹಾರ್ಟ್‌ಬೀಟ್ ಟ್ರ್ಯಾಕಿಂಗ್, ಉಸಿರಾಟದ ವ್ಯಾಯಾಮಗಳು ಮತ್ತು ಸ್ಲಿಪ್ ಮಾನಿಟರಿಂಗ್ ಅನ್ನು ಸಹ ನೀಡಲಾಗಿದೆ. ಜೊತೆಗೆ ಬಳಕೆದಾರರು ತಮ್ಮ ಆರೋಗ್ಯದ ಕಾಳಜಿಯನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡಲಿದೆ.

ಇದರೊಂದಿಗೆ ಈ ಸ್ಮಾರ್ಟ್ ವಾಚ್ ಆಪಲ್‌ನ ಸಿರಿ ಅಥವಾ ಗೂಗಲ್ ಅಸಿಸ್ಟೆಂಟ್ ನಂತಹ ವಾಯ್ಸ್ ಅಸಿಸ್ಟೆಂಟ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇದರಿಂದ ಬಳಕೆದಾರರು ತಮ್ಮ ವಾಯ್ಸ್ ಕಮಾಂಡ್‌ಗಳ ಮೂಲಕವೇ ಮಾಹಿತಿಯನ್ನು ಪಡೆಯಲು ಅವಕಾಶ ನೀಡಲಿದೆ. ಇದು ಲಾಂಗ್ ಬ್ಯಾಟರಿ ಬ್ಯಾಕ್ ಅಪ್‌ಅನ್ನು ಸಹ ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 5 ದಿನಗಳ ಬಳಕೆಯನ್ನು ನೀಡಲಿದೆ. ಹೆಚ್ಚುವರಿಯಾಗಿ ಈ ಸ್ಮಾರ್ಟ್‌ವಾಚ್ ನೀರು ಮತ್ತು ಬೆವರಿನಿಂದ ರಕ್ಷಣೆ ನೀಡುವುದಕ್ಕಾಗಿ IP67 ರೇಟಿಂಗ್ ಅನ್ನು ಪಡೆದುಕೊಂಡಿದೆ.
ಬೋಟ್ ಸ್ಟಾರ್ಮ್ ಕಾಲ್ 2 ಸ್ಮಾರ್ಟ್‌ವಾಚ್‌ನಲ್ಲಿ ಮ್ಯೂಸಿಕ್ ಕಂಟ್ರೋಲ್, ಕ್ಯಾಮೆರಾ ಕಂಟ್ರೋಲ್, ಸ್ಟಾಪ್‌ವಾಚ್, ಅಲಾರಂ ಮತ್ತು ಟೈಮರ್ ಫಂಕ್ಷನ್‌ಗಳನ್ನು ಸಹ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ 1,299ರೂ. ಬೆಲೆಯನ್ನು ಪಡೆದುಕೊಂಡಿದ್ದು, ಇಂದಿನಿಂದ ಖರೀದಿಗೆ ಲಭ್ಯವಿದೆ.


Click it and Unblock the Notifications








