Home
ಸುದ್ದಿಜಾಲ

ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಬೋಟ್‌! ಬೆಲೆ ಎಷ್ಟು?

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳ ಸೌಂಡ್‌ ಜೋರಾಗಿಯೆ ಇದೆ. ಹೊಸ ಮಾದರಿಯ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹೊಸ ಸುನಾಮಿಯನ್ನೇ ಸೃಷ್ಟಿಸಿವೆ. ಮಲ್ಟಿ ಟಾಸ್ಕ್‌ ನಿರ್ವಹಿಸಬಲ್ಲ ಸ್ಮಾರ್ಟ್‌ವಾಚ್‌ಗಳು ಭಾರಿ ಬೇಡಿಕೆ ಪಡೆದುಕೊಂಡಿವೆ. ಇದರಲ್ಲಿ ಬೋಟ್‌ ಕಂಪೆನಿ ಸ್ಮಾರ್ಟ್‌ವಾಚ್‌ಗಳು ಸ್ಮಾರ್ಟ್‌ವಾಚ್‌ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿವೆ.

ಹೌದು, ಬೋಟ್‌ ಕಂಪೆನಿ ತನ್ನ ವಿಭಿನ್ನ ಮಾದರಿಯ ವಾಚ್‌ಗಳಿಂದ ಗುರುತಿಸಿಕೊಂಡಿದೆ. ಇದೀಗ ತನ್ನ ಹೊಸ ಬೋಟ್‌ ಸ್ಟಾರ್ಮ್‌ ಕನೆಕ್ಟ್‌ ಪ್ಲಸ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ 300mAh ಬ್ಯಾಟರಿಯನ್ನು ಹೊಂದಿದ್ದು, 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಬೋಟ್‌! ಬೆಲೆ ಎಷ್ಟು?

ಬೋಟ್ ಸ್ಟಾರ್ಮ್ ಕನೆಕ್ಟ್ ಪ್ಲಸ್ ಸ್ಮಾರ್ಟ್ ವಾಚ್ ಫೀಚರ್ಸ್‌ ಹೇಗಿದೆ?

ಬೋಟ್ ಸ್ಟಾರ್ಮ್ ಕನೆಕ್ಟ್ ಪ್ಲಸ್ ಸ್ಮಾರ್ಟ್ ವಾಚ್ 1.91 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದಿದೆ. ಇದಲ್ಲದೆ ಡಿಸ್‌ಪ್ಲೇ 90% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ 2.5D ಕರ್ವ್ಡ್‌ ಗ್ಲಾಸ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಕಂಪನಿಯ ENx ಅಲ್ಗಾರಿದಮ್‌ ಮೂಲಕ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಹೊಂದಿದೆ.

ಇನ್ನು ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಸಮಯದಲ್ಲಿ ನಾಯ್ಸ್‌ ಕ್ಯಾನ್ಸಲಿಂಗ್‌ ಅನ್ನು ಕೂಡ ತಡೆಗೆದುಹಾಕಲಿದೆ. ಅಲ್ಲದೆ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ವಾಚ್‌ಫೇಸ್‌ಗಳನ್ನು ಹೊಂದಿದ್ದು, ಹೆಲ್ತ್‌ ಫೀಚರ್ಸ್‌ಗಳ ಮೂಲಕ ಕೂಡ ಸೈ ಎನಿಸಿಕೊಂಡಿದೆ. ಅದರಂತೆ ಸ್ಮಾರ್ಟ್ ವಾಚ್ SpO2 ಮಾನಿಟರಿಂಗ್ ಮತ್ತು ಹೃದಯ ಬಡಿತ ಸೆನ್ಸಾರ್‌ಗಳನ್ನು ಕೂಡ ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ.

ಬೋಟ್ ಸ್ಟಾರ್ಮ್ ಕನೆಕ್ಟ್ ಪ್ಲಸ್ ವಾಚ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಸಹ ಹೊಂದಿದೆ. ಇದು 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಅಲಾರಾಂ, ಕೌಂಟ್‌ಡೌನ್ ಟೈಮರ್, ಸ್ಟಾಪ್‌ವಾಚ್, ಎಸ್‌ಎಂಎಸ್, ಸಾಮಾಜಿಕ ಮಾಧ್ಯಮ ಮತ್ತು ಅಪ್ಲಿಕೇಶನ್‌ಗಳಿಗಾಗಿ ಪುಶ್ ಅಧಿಸೂಚನೆಯನ್ನು ಸಹ ಹೊಂದಿದೆ.

ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಬೋಟ್‌! ಬೆಲೆ ಎಷ್ಟು?

ಭಾರತದಲ್ಲಿ ಬೋಟ್ ಸ್ಟಾರ್ಮ್ ಕನೆಕ್ಟ್ ಪ್ಲಸ್ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬೋಟ್ ಸ್ಟಾರ್ಮ್ ಕನೆಕ್ಟ್ ಪ್ಲಸ್ ಸ್ಮಾರ್ಟ್ ವಾಚ್ 1,999ರೂ.ಬೆಲೆಯನ್ನು ಹೊಂದಿದೆ. ಆದರೆ ಇದು ಪರಿಚಯಾತ್ಮಕ ಬೆಲೆ ಆಗಿದ್ದು, ಮುಂದಿನ ದಿನಗಳಲ್ಲಿ ಇದರ ಬೆಲೆ ಬದಲಾಗುವ ಸಾಧ್ಯತೆಯಿದೆ. ಇನ್ನು ಸ್ಮಾರ್ಟ್‌ವಾಚ್‌ ಆಕ್ಟಿವ್‌ ಬ್ಲ್ಯಾಕ್‌, ಆಕ್ಟಿವ್‌ ಬ್ಲೂ, ಕೂಲ್ ಗ್ರೇ ಮತ್ತು ಮರೂನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ವಾಚ್‌ ಅಧಿಕೃತ ಬೋಟ್ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ.

ಇನ್ನು ಬೋಟ್‌ ಕಂಪೆನಿ ಕಳೆದ ವರ್ಷ ಭಾರತದಲ್ಲಿ ಬೋಟ್‌ ಸ್ಟಾರ್ಮ್‌ ಪ್ರೊ ಕಾಲ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿತ್ತು. ಇದು 100 ಕ್ಲೌಡ್-ಆಧಾರಿತ ವಾಚ್‌ ಫೇಸ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಫ್ಲೂಯಿಡ್ UI ಮತ್ತು ASAP ಚಾರ್ಜ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ದಿನವಿಡೀ ನಿಮ್ಮ ಆಕ್ಟಿವಿಟಿಗಳನ್ನು ಟ್ರ್ಯಾಕ್‌ ಮಾಡುವ 700 ಕ್ಕೂ ಹೆಚ್ಚು ಆಕ್ಟಿವ್‌ ಮೋಡ್‌ಗಳನ್ನು ಹೊಂದಿದೆ. ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ವಾಚ್‌ 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 1.78 ಇಂಚಿನ 2.5D ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ.

Best Mobiles in India

English summary
Boat Storm Connect Plus Smartwatch Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+