ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್ ಲಾಂಚ್‌!

|

ಆಡಿಯೋ ಆಕ್ಸಿಸರೀಸ್‌ ವಲಯದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಬೋಟ್‌ ಕಂಪೆನಿ ತನ್ನ ಮೊದಲ ಸ್ಮಾರ್ಟ್‌ವಾಚ್‌, ಬೋಟ್ ಸ್ಟಾರ್ಮ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನ ಇನ್ನಷ್ಟು ವಿಸ್ತರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 24/7 ಹೃದಯ ಬಡಿತ ಮತ್ತು ರಕ್ತ-ಆಮ್ಲಜನಕದ ಮೇಲ್ವಿಚಾರಣಾ ಫೀಚರ್ಸ್‌ಗಳನ್ನ ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಇದೇ ಅಕ್ಟೋಬರ್ 29ರಂದು ಫ್ಲಿಪ್‌ಕಾರ್ಟ್ ಮತ್ತು ಬೋಟ್‌ನ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ಬೋಟ್‌

ಹೌದು, ಬೋಟ್‌ ಕಂಪೆನಿ ತನ್ನ ಬೋಟ್‌ ಸ್ಟಾರ್ಮ್‌ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು ಒಂಬತ್ತು ಕ್ರೀಡಾ ವಿಧಾನಗಳನ್ನು ಹೊಂದಿದೆ, 100 ಕ್ಕೂ ಹೆಚ್ಚು ಡೌನ್‌ಲೋಡ್ ಮಾಡಬಹುದಾದ ವಾಚ್ ಫೇಸ್‌ಗಳನ್ನು ಹೊಂದಿದೆ. ಇನ್ನು ಈ ವಾಚ್‌ ಮೆಟಲ್‌ ಬಾಡಿ ವಿನ್ಯಾಸವನ್ನು ಹೊಂದಿದೆ. ನಿಖರವಾದ ಆರೋಗ್ಯ ಮತ್ತು ಫಿಟ್‌ನೆಸ್ ಮೇಲ್ವಿಚಾರಣೆಯ ಅಗತ್ಯವಿರುವವರಿಗೆ ಈ ಸ್ಮಾರ್ಟ್ ವಾಚ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.,

ಬೋಟ್‌‌ ಸ್ಮಾರ್ಟ್ ವಾಚ್

ಬೋಟ್‌‌ ಸ್ಮಾರ್ಟ್ ವಾಚ್ ಬೈ ಬೋಟ್ 1.3 ಇಂಚಿನ ಟಚ್ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ ನೀವು ಡಯಲ್ ಅನ್ನು ಸಹ ಗ್ರಾಹಕೀಯಗೊಳಿಸಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಒಟಿಎ ಅಪ್‌ಡೇಟ್ ಲಭ್ಯವಿದ್ದು, ಇದರ ಮೂಲಕ ಡೌನ್‌ಲೋಡ್ ಮಾಡಬಹುದಾದ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬಳಸಲು ಲಭ್ಯವಿರುತ್ತವೆ. ಇನ್ನು ಬೋಟ್‌ ಸ್ಟಾರ್ಮ್‌ ವಾಚ್‌ 24/7 ಹೃದಯ ಬಡಿತ ಮಾನಿಟರ್ ಮತ್ತು ಇಂಟರ್‌ಬಿಲ್ಟ್‌ SPO2 ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿದೆ. ಬೋಟ್ ಸ್ಟಾರ್ಮ್ 5 ATM ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಇದು 50 ಮೀಟರ್ ನೀರೊಳಗಿನವರೆಗೆ ಸುರಕ್ಷಿತವಾಗಿರಲಿದೆ.

ಮೋಡ್

ಇದು ಮಾರ್ಗದರ್ಶಿ ಧ್ಯಾನಸ್ಥ ಉಸಿರಾಟದ ಮೋಡ್ ಅನ್ನು ಸಹ ಹೊಂದಿದ್ದು, ನಿಮ್ಮ ಹೃದಯ ಬಡಿತವನ್ನು ಕಡಿಮೆ ಮಾಡಲು ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಇನ್ನು ಈ ಸ್ಮಾರ್ಟ್ ವಾಚ್‌ ಒಂಬತ್ತು ಸಕ್ರಿಯ ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಇದರಲ್ಲಿ ಓಟ, ವಾಕಿಂಗ್, ಸೈಕ್ಲಿಂಗ್, ಹೈಕಿಂಗ್, ಕ್ಲೈಂಬಿಂಗ್, ಫಿಟ್ನೆಸ್, ಟ್ರೆಡ್ ಮಿಲ್, ಯೋಗ ಮತ್ತು ಡೈನಾಮಿಕ್ ಸೈಕ್ಲಿಂಗ್ ಸೇರಿವೆ. ಅಲ್ಲದೆ ಈ ಒಂಬತ್ತು ಆಯ್ಕೆಗಳಲ್ಲಿ ಎಂಟು ಆಯ್ಕೆಗಳನ್ನು ಒಂದೇ ಸಮಯದಲ್ಲಿ ಆಯ್ಕೆ ಮಾಡಬಹುದು.

ಬೋಟ್ ಸ್ಟಾರ್ಮ್ ವಾಚ್

ಬೋಟ್ ಸ್ಟಾರ್ಮ್ ವಾಚ್‌ನಲ್ಲಿ ಸಿಲಿಕೋನ್ ಸ್ಟ್ರಾಪ್ ಆಯ್ಕೆಗಳನ್ನು ಹೊಂದಿದೆ. ಇದು ಚರ್ಮ ಮತ್ತು ಬೆವರು ಸ್ನೇಹಿಯಾಗಿದ್ದು, ಆರಾಮದಾಯಕವಾದ ಫಿಟ್ ನೀಡುತ್ತದೆ. ಇದು ನಿಮ್ಮ ಮ್ಯೂಸಿಕ್‌, ವಾಲ್ಯೂಮ್, ಟ್ರ್ಯಾಕ್‌ಗಳು ಮತ್ತು ಕರೆಗಳನ್ನು ನಿಯಂತ್ರಿಸಲು ಗಡಿಯಾರವನ್ನು ಬಳಸಲು ಅನುಮತಿಸುವ ಕ್ಯುರೇಟೆಡ್ ನಿಯಂತ್ರಣಗಳನ್ನು ಸಹ ಹೊಂದಿದೆ. ಜೊತೆಗೆ ಆನ್-ಬೋರ್ಡ್ ಫೈಂಡ್ ಮೈ ಫೋನ್ ಫೀಚರ್ಸ್‌ ಮತ್ತು ಸ್ಮಾರ್ಟ್ ನೊಟೀಫೀಕೇಷನ್‌ಗಳನ್ನು ಸ್ಮಾರ್ಟ್ ವಾಚ್‌ನಲ್ಲಿ ನೇರವಾಗಿ ಸ್ವೀಕರಿಸಬಹುದು. ವಾಚ್ ಅನ್ನು ನಿಯಂತ್ರಿಸಲು ಮತ್ತು ಕಸ್ಟಮೈಸ್ ಮಾಡಲು ನೀವು ಬೋಟ್ ಪ್ರೊಗಿಯರ್ ಅಪ್ಲಿಕೇಶನ್ ಅನ್ನು ಸಹ ಡೌನ್‌ಲೋಡ್ ಮಾಡಬಹುದು.

ಬೋಟ್

ಬೋಟ್ ಸ್ಟಾರ್ಮ್ ಫ್ಲಿಪ್‌ಕಾರ್ಟ್ ಮತ್ತು ಬೋಟ್‌ನ ವೆಬ್‌ಸೈಟ್ ಮೂಲಕ 1,999 ರೂ.ಗಳ ಪರಿಚಯಾತ್ಮಕ ದರದಲ್ಲಿ ಲಭ್ಯವಿರುತ್ತದೆ. ಇದು ಅಕ್ಟೋಬರ್ 29 ರಂದು ಮಾರಾಟವಾಗಲಿದೆ. ಇದು ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಮತ್ತು ಬೋಟ್‌ನ ವೆಬ್‌ಸೈಟ್ ಎರಡರ ಪ್ರಕಾರ, ಬೋಟ್ ಸ್ಟಾರ್ಮ್‌ನ ಮೂಲ ಬೆಲೆ 5,990.ರೂ,ಆಗಿದೆ.

Best Mobiles in India

Read more about:
English summary
The Boat Storm will be available at an introductory price of Rs 1,999 from 12pm (noon) onwards on October 29.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X