Home
ಸುದ್ದಿಜಾಲ

ನ್ಯೂ ಸ್ಟೈಲಿಶ್‌ ಲುಕ್‌ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಬೋಟ್‌ ಸಂಸ್ಥೆ: ಬೆಲೆ ಎಷ್ಟಿದೆ?

ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರ ಕಂಪೆನಿಗಳಲ್ಲಿ ಬೋಟ್‌ ಸಂಸ್ಥೆ ಕೂಡ ಸ್ಥಾನ ಪಡೆದುಕೊಂಡಿದೆ. ವಿಭಿನ್ನ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ ಸ್ಮಾರ್ಟ್‌ವಾಚ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಬೋಟ್‌ ಕಂಪೆನಿ ಒಂದಾಗಿದೆ. ಅದರ ಮುಂದುವರೆದ ಭಾಗವಾಗಿ ಬೋಟ್‌ ಅಲ್ಟಿಮಾ ಸೆಲೆಕ್ಟ್ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, BoAt Ultima Select ಸ್ಮಾರ್ಟ್‌ವಾಚ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಇದು ಐಷಾರಾಮಿ ನೋಟವನ್ನು ನೀಡುವ ಕ್ರಿಯಾತ್ಮಕ ಕಿರೀಟದೊಂದಿಗೆ ಸ್ಲಿಮ್ ಮೆಟಲ್ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು ಸಿಲಿಕೋನ್, ಮೆಟಲ್ ಮತ್ತು ಮ್ಯಾಗ್ನೆಟಿಕ್ ಸ್ಟ್ರಾಪ್ಗಳನ್ನು ಒಳಗೊಂಡಿರುವ ಮೂರು ವಿಭಿನ್ನ ಪಟ್ಟಿಯ ಆಯ್ಕೆಗಳಿಂದ ಆಯ್ಕೆ ಮಾಡಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನ್ಯೂ ಸ್ಟೈಲಿಶ್‌ ಲುಕ್‌ ವಾಚ್‌ ಪರಿಚಯಿಸಿದ ಬೋಟ್‌ ಸಂಸ್ಥೆ: ಬೆಲೆ ಎಷ್ಟಿದೆ?

BoAt Ultima Select ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
BoAt Ultima Select ಸ್ಮಾರ್ಟ್‌ವಾಚ್‌ 2.01 ಇಂಚಿ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 410 x 502 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ನಲ್ಲಿ ಬರಲಿದೆ. ಈ ಸ್ಮಾರ್ಟ್‌ವಾಚ್‌ 100 ಪ್ಲಸ್‌ ಕಸ್ಟಮೈಸ್‌ ಮಾಡಬಹುದಾದ ವಾಚ್‌ಪೇಸ್‌ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ IP68 ರೇಟಿಂಗ್‌ ಹೊಂದಿದ್ದು, ನೀರು ಮತ್ತು ಧೂಳಿನಿಂದ ರಕ್ಷಣೆಯನ್ನು ನೀಡಲಿದೆ.

BoAt Ultima Select ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಬೆಂಬಲವನ್ನು ಸಹ ಹೊಂದಿದೆ. ಇದರಿಂದ ಸ್ಮಾರ್ಟ್‌ವಾಚ್‌ ಮೂಲಕವೇ ಫೋನ್‌ ಕರೆಗಳನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದಕ್ಕಾಗಿ ಇನ್‌ಬಿಲ್ಟ್‌ ಮೈಕ್ ಮತ್ತು ಡಯಲ್ ಪ್ಯಾಡ್ ಅನ್ನು ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ನಲ್ಲಿ 10 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡಬಹುದಾಗಿದೆ.

ನ್ಯೂ ಸ್ಟೈಲಿಶ್‌ ಲುಕ್‌ ವಾಚ್‌ ಪರಿಚಯಿಸಿದ ಬೋಟ್‌ ಸಂಸ್ಥೆ: ಬೆಲೆ ಎಷ್ಟಿದೆ?

ಇನ್ನು ಈ ಸ್ಮಾರ್ಟ್‌ವಾಚ್‌ ಹೃದಯ ಬಡಿತ, SpO2, ಒತ್ತಡ ಮತ್ತು ನಿದ್ರೆಯನ್ನು ಟ್ರ್ಯಾಕ್ ಮಾಡುವಂತಹ ವಿವಿಧ ಹೆಲ್ತ್‌ ಟ್ರ್ಯಾಕ್‌ಗಳನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ 5 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಈ ವಾಚ್‌ ಐಷಾರಾಮಿ ಲೋಹದ ದೇಹ ಮತ್ತು ಕ್ರಿಯಾತ್ಮಕ ಕಿರೀಟವನ್ನು ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸುವಂತಿದೆ. ಜೊತೆಗೆ ಧ್ವನಿ ಸಹಾಯಕ ಬೆಂಬಲವನ್ನು ಸಹ ಪಡೆದಿದೆ.

ಇದಲ್ಲದೆ ಸ್ಮಾರ್ಟ್‌ವಾಚ್‌ ಪಾವತಿ QR, ಕುಳಿತುಕೊಳ್ಳುವ ಎಚ್ಚರಿಕೆಗಳು, ಕ್ಯಾಮೆರಾ ನಿಯಂತ್ರಣ, ಅಂತರ್ನಿರ್ಮಿತ ಆಟಗಳು, ಸಂಗೀತ ನಿಯಂತ್ರಣ, ಹವಾಮಾನ, ಅಲಾರಂ, ಕೌಂಟ್‌ಡೌನ್, ಸ್ಟಾಪ್‌ವಾಚ್, DND, ಫೈಂಡ್‌ ಮೈ ಫೋನ್‌ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ನ್ಯೂ ಸ್ಟೈಲಿಶ್‌ ಲುಕ್‌ ವಾಚ್‌ ಪರಿಚಯಿಸಿದ ಬೋಟ್‌ ಸಂಸ್ಥೆ: ಬೆಲೆ ಎಷ್ಟಿದೆ?

ಬೆಲೆ ಮತ್ತು ಲಭ್ಯತೆ
ಬೋಟ್ ಅಲ್ಟಿಮಾ ಸೆಲೆಕ್ಟ್ ಸ್ಮಾರ್ಟ್‌ವಾಚ್‌ 2,999ರೂ ಬೆಲೆಯನ್ನು ಹೊಂದಿದೆ. ಇದನ್ನು ಅಮೆಜಾನ್‌.ಇನ್‌ ಮತ್ತು ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫೆಬ್ರವರಿ 9 ರಿಂದ ಖರೀದಿಸಬಹುದಾಗಿದೆ. ಈ ವಾಚ್‌ ಅನ್ನು ಸ್ಟೀಲ್ ಬ್ಲ್ಯಾಕ್, ಡೀಪ್ ಬ್ಲೂ, ಕೂಲ್ ಗ್ರೇ ಮತ್ತು ಆಕ್ಟಿವ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಇನ್ನು ಇದೇ ಸಂದರ್ಭದಲ್ಲಿ BoAt Rockerz 255 ANC ಇಯರ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಇದು 32+ dB ಸಕ್ರಿಯ ಶಬ್ದ ರದ್ದತಿ (ANC) ಮತ್ತು 100 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಅನ್ನು ನೀಡಲಿದೆ. ಜೊತೆಗೆ ಈ ಇಯರ್‌ಫೋನ್‌ 2 ಅಂತರ್ನಿರ್ಮಿತ EQ ಮೋಡ್‌ಗಳು, ಮಲ್ಟಿ-ಡಿವೈಸ್‌ ಕನೆಕ್ಟಿವಿಟಿ ಹಾಗೂ 60ms ಲೋ-ಲೇಟೆನ್ಸಿ ಮೋಡ್ ಹಾಗೂ Google FastPair ಬೆಂಬಲವನ್ನು ಹೊಂದಿದೆ.

ಇದು ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, Google FastPair ಬೆಂಬಲವನ್ನು ಸಹ ಹೊಂದಿದೆ. ಜೊತೆಗೆ ಈ ಇಯರ್‌ಫೋನ್‌ ಮಲ್ಟಿ ಡಿವೈಸ್‌ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಇದರೊಂದಿಗೆ ANC ಬಟನ್ ಅನ್ನು ಕೂಡ ಒಳಗೊಂಡಿದೆ.

Best Mobiles in India

English summary
boAt Ultima Select with Bluetooth calling, metal body launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+