Home
ಸುದ್ದಿಜಾಲ

boAt : ಬೋಟ್ ಕಂಪೆನಿಯ ಈ ಸ್ಮಾರ್ಟ್‌ವಾಚ್‌ಗೆ 86% ಡಿಸ್ಕೌಂಟ್‌ ಲಭ್ಯ!

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಬೋಟ್ ವೇವ್ ಎಡ್ಜ್ ಸ್ಮಾರ್ಟ್ ವಾಚ್ (boAt Wave Edge Smart Watch) ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಪ್ರೀಮಿಯಂ ಫೀಚರ್ಸ್‌ಗಳಿಂದ ಗಮನಸೆಳೆದಿರುವ ಈ ಸ್ಮಾರ್ಟ್‌ವಾಚ್‌ ಬರೋಬ್ಬರಿ 86% ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೂಲಕ ಸ್ಮಾರ್ಟ್‌ವಾಚ್‌ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಅವಕಾಶ ನೀಡಲಾಗಿದೆ.

ಹೌದು, ಬೋಟ್ ವೇವ್ ಎಡ್ಜ್ ಸ್ಮಾರ್ಟ್ ವಾಚ್ ಅಮೆಜಾನ್‌ನಲ್ಲಿ ಭಾರಿ ರಿಯಾಯಿತಿ ಪಡೆದಿದೆ. ಇದರಿಂದ ಸ್ಮಾರ್ಟ್‌ವಾಚ್‌ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದ್ದು, ಮುಗಿಬಿದ್ದು ಖರೀದಿಸುವುದಕ್ಕೆ ಮುಂದಾಗಿದ್ದಾರೆ. ಇನ್ನು ಸ್ಮಾರ್ಟ್‌ವಾಚ್‌ ತನ್ನ ಫೀಚರ್ಸ್‌ಗಳಿಂದಲೂ ಕೂಡ ಸಾಕಷ್ಟು ಸದ್ದು ಮಾಡಿದ್ದು, ಇಂತಹ ವಾಚ್‌ಗೆ ಇಷ್ಟೊಂದು ಡಿಸ್ಕೌಂಟ್‌ ನೀಡಿದ್ದು ಮಾತ್ರ ಗ್ರಾಹಕರ ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ ಸ್ಮಾರ್ಟ್‌ವಾಚ್‌ ಮೇಲಿನ ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

boAt : ಬೋಟ್ ಕಂಪೆನಿಯ ಈ ಸ್ಮಾರ್ಟ್‌ವಾಚ್‌ಗೆ 86% ಡಿಸ್ಕೌಂಟ್‌ ಲಭ್ಯ!

ಡಿಸ್ಕೌಂಟ್‌ ನಂತರದ ಬೆಲೆ ಎಷ್ಟು?
ಬೋಟ್ ವೇವ್ ಎಡ್ಜ್ ಸ್ಮಾರ್ಟ್ ವಾಚ್ ಅಮೆಜಾನ್‌ ಸೇಲ್‌ನಲ್ಲಿ 86% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರಿ ಬದಲಾವಣೆ ಆಗಿದ್ದು, ಕೇವಲ 1,249ರೂ (M.R.P. 8,990ರೂ) ಬೆಲೆಗೆ ಖರೀದಿಗೆ ಲಭ್ಯವಾಗುತ್ತಿದೆ. ಇನ್ನು ಸ್ಮಾರ್ಟ್‌ವಾಚ್‌ ಅಕ್ಟಿವ್‌ ಬ್ಲಾಕ್‌ ಕಲರ್‌ ಆಯ್ಕೆಯಲ್ಲಿ ದೊರೆಯಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಮೇಲೆ ವಿವಿದ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಕೂಡ ರಿಯಾಯಿತಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ವಾಚ್‌ ತನ್ನ ವಿಶೇಷ ಫೀಚರ್ಸ್‌ಗಳಿಂದಾಗಿಯೇ ಬಿಡುಗಡೆ ಆದ ದಿನದಿಂದಲೂ ಭಾರಿ ಡಿಮ್ಯಾಂಡ್‌ನಲ್ಲಿರುವುದು ಗಮನಿಸಬೇಕಾದ ವಿಚಾರ. ಇದರ ಫೀಚರ್ಸ್‌ಗಳ ವಿವರಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

ಬೋಟ್ ವೇವ್ ಎಡ್ಜ್ ಸ್ಮಾರ್ಟ್ ವಾಚ್ ಫೀಚರ್ಸ್‌ ಹೇಗಿದೆ?
ಬೋಟ್ ವೇವ್ ಎಡ್ಜ್ ಸ್ಮಾರ್ಟ್ ವಾಚ್ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 90% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದು IP68 ರೇಟಿಂಗ್‌ ಬೆಂಬಲಿಸಲಿದ್ದು, 100+ ಕ್ರೀಡಾ ವಿಧಾನಗಳೊಂದಿಗೆ ಬರಲಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಬೆಂಬಲಿಸಲಿದ್ದು, ಟ್ಯಾಪ್ ಮಾಡುವ ಮೂಲಕ ಕಾಲ್‌ ಮಾಡುವ ಅನುಕೂಲವನ್ನು ಸಹ ನೀಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ 10 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವುದಕ್ಕೆ ಅವಕಾಶ ನೀಡಿದೆ.

boAt : ಬೋಟ್ ಕಂಪೆನಿಯ ಈ ಸ್ಮಾರ್ಟ್‌ವಾಚ್‌ಗೆ 86% ಡಿಸ್ಕೌಂಟ್‌ ಲಭ್ಯ!

ಬ್ಲೂಟೂತ್‌ ಕಾಲಿಂಗ್‌ನ ಉತ್ತಮ ಗುಣಮಟ್ಟಕ್ಕಾಗಿ ಸ್ಪೀಕರ್ ಮತ್ತು ಮೈಕ್ ಅನ್ನು ಸಹ ನೀಡಲಾಗಿದೆ. ಇದರಿಂದ ಬ್ಲೂಟೂತ್‌ ಕಾಲ್‌ ನಿಮಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ಕ್ರಿಯಾತ್ಮಕ ಕ್ರೌನ್ ಸಹ ನೀಡಲಾಗಿದ್ದು, ಸುಲಭವಾಗಿ ನ್ಯಾವಿಗೇಟ್ ಮಾಡಹುದು. ಜೊತೆಗೆ ವಿಜೆಟ್ ಕಂಟ್ರೋಲ್‌ ಅನ್ನು ಸಹ ನೀಡಲಾಗಿದ್ದು, ಮೇನ್‌ ಸ್ಕ್ರೀನ್‌ನಲ್ಲಿ ಲೆಫ್ಟ್‌ ಸ್ವೈಪ್‌ನೊಂದಿಗೆ ಬರಲಿದೆ. ವಿಜೆಟ್ ಕಂಟ್ರೋಲ್‌ ಮೂಲಕ ನಿಮ್ಮ ಎಲ್ಲಾ ವಿಜೆಟ್‌ಗಳನ್ನು ಒಂದೇ ಸ್ಥಳದಲ್ಲಿ ನಿಯಂತ್ರಿಸಬಹುದಾಗಿದೆ.

boAt : ಬೋಟ್ ಕಂಪೆನಿಯ ಈ ಸ್ಮಾರ್ಟ್‌ವಾಚ್‌ಗೆ 86% ಡಿಸ್ಕೌಂಟ್‌ ಲಭ್ಯ!

ಇನ್ನು ಸ್ಮಾರ್ಟ್‌ವಾಚ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಹ ನೀಡಲಾಗಿದ್ದು, ಜ್ಞಾಪನೆಗಳನ್ನು ಹೊಂದಿಸುವ ಹಾಗೂ ಅಲಾರಂಗಳನ್ನು ಸೆಟ್‌ ಮಾಡಲಿದೆ. ಅಂದರೆ ಈ ಸ್ಮಾರ್ಟ್‌ವಾಚ್‌ ನಿಮ್ಮ ಎಲ್ಲಾ ಆಜ್ಞೆಗಳನ್ನು ಕೇಳಲು ಸಾಕಷ್ಟು ಸ್ಮಾರ್ಟ್ ಆಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ 3 ಗೇಮ್‌ಗಳನ್ನು ಸಹ ಹೊಂದಿದ್ದು, ಹೆಚ್ಚಿನ ಸ್ಕೋರ್‌ಗಳನ್ನು ಮಾಡುವ ಅವಕಾಶ ನೀಡಿದೆ. ಈ ಸ್ಮಾರ್ಟ್‌ವಾಚ್‌ HR, SpO2, ಫಿಟ್‌ನೆಸ್ ಟ್ರ್ಯಾಕರ್, Msgs, ಪೆಡೋಮೀಟರ್, ಕ್ಯಾಲೆಂಡರ್, ಅಲಾರ್ಮ್ ಅನ್ನು ಸಹ ಒಳಗೊಂಡಿದೆ. ಇದು ಒಟ್ಟು 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದ್ದು, BT ಕಾಲಿಂಗ್‌ನೊಂದಿಗೆ 2 ದಿನಗಳವರೆಗೆ ಇರುತ್ತದೆ.

Best Mobiles in India

English summary
boAt Wave Edge Smart Watch Calling made convenient with just a tap on Wave Edge. Save up to 10 contacts, make calls with the dial pad and its superior quality speaker & mic make your experience smooth and clear.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+