Home
ಸುದ್ದಿಜಾಲ

ಭಾರತದಲ್ಲಿ ಬೋಟ್ ವೇವ್ ಎಲಿವೇಟ್ ಸ್ಮಾರ್ಟ್‌ವಾಚ್ ಬಿಡುಗಡೆ.. ಇದರ ಬೆಲೆ ಎಷ್ಟು ಗೊತ್ತಾ?

ಟೆಕ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡಿದೆ. ಅದರಲ್ಲೂ ಬೋಟ್‌ ವೇವ್‌ ಸರಣಿಯ ಸ್ಮಾರ್ಟ್‌ವಾಚ್‌ಗಳಿಗೆ ಸಖತ್‌ ಕ್ರೇಜ್‌ ಇದೆ. ಇದೀಗ ಬೋಟ್‌ ವೇವ್‌ ಎಲಿವೇಟ್‌ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ.

ಹೌದು, ಬೋಟ್‌ ವೇವ್‌ ಎಲಿವೇಟ್‌ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ 1.96 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಡಿಸ್‌ಪ್ಲೇ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಇದು ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಬೋಟ್ ವೇವ್ ಎಲಿವೇಟ್ ಸ್ಮಾರ್ಟ್‌ವಾಚ್ ಬಿಡುಗಡೆ.. ಬೆಲೆ ಎಷ್ಟು ಗೊತ್ತಾ?

ಬೋಟ್ ವೇವ್ ಎಲಿವೇಟ್ ಫೀಚರ್ಸ್‌ ಹೇಗಿದೆ?
ಬೋಟ್ ವೇವ್ ಎಲಿವೇಟ್ ಸ್ಮಾರ್ಟ್‌ವಾಚ್ 1.96 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x292 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನಿಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಸ್ಕ್ವೇರ್‌ ಡಯಲ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್‌ವಾಚ್‌ ಕೂಡ ಬ್ಲೂಟೂತ್‌ ಕಾಲಿಂಗ್‌ ಅನ್ನು ಬೆಂಬಲಿಸಲಿದ್ದು, ಸ್ಮಾರ್ಟ್‌ಫೋನ್‌ ಕರೆಗಳನ್ನು ವಾಚ್‌ ಮೂಲಕವೇ ಕಂಟ್ರೋಲ್‌ ಮಾಡುವುದಕ್ಕೆ ಅವಕಾಶ ನೀಡಿದೆ.

ಬೋಟ್ ವೇವ್ ಎಲಿವೇಟ್ ಸ್ಮಾರ್ಟ್‌ವಾಚ್‌ ಡಯಲ್‌ಪ್ಯಾಡ್ ಜೊತೆಗೆ ಮೈಕ್ ಮತ್ತು ಸ್ಪೀಕರ್ ಅನ್ನು ಕೂಡ ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿಯೇ 20 ಕಂಟ್ಯಾಕ್ಟ್‌ಗಳನ್ನು ಸೇವ್‌ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸಿದೆ. ಇನ್ನು ಸ್ಮಾರ್ಟ್‌ವಾಚ್‌ ಹೆಲ್ತ್‌ ಟ್ರ್ಯಾಕಿಂಗ್‌ ಫೀಚರ್ಸ್‌ಗಳಿಗೆ ಕೂಡ ಹೆಚ್ಚಿನ ಒತ್ತನ್ನು ನೀಡಿದೆ. ಅದರಂತೆ ಈ ವಾಚ್‌ನಲ್ಲಿ SpO2 ಮಾನಿಟರಿಂಗ್, ಹೃದಯ ಬಡಿತ ಸೆನ್ಸಾರ್‌ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ನೀಡಲಾಗಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಡೈಲಿ ಆಕ್ಟಿವಿಟಿ ಟ್ರ್ಯಾಕರ್‌ ಮತ್ತು ಸಿಟ್ಟಿಂಗ್‌ ರಿಮೈಂಡರ್‌ ಜೊತೆಗೆ 50ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

ಬೋಟ್ ವೇವ್ ಎಲಿವೇಟ್ ಸ್ಮಾರ್ಟ್‌ವಾಚ್ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು ಸಾಮಾನ್ಯ ಬಳಕೆಯಲ್ಲಿ ಐದು ದಿನಗಳವರೆಗೆ ಬಾಳಿಕೆ ಬರಲಿದೆ. ಆದರೆ ಬ್ಲೂಟೂತ್‌ ಕಾಲ್‌ ಆಕ್ಟಿವ್‌ ಆಗಿದ್ದರೆ ಎರಡು ದಿನಗಳ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 15 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ SMS, ಸೊಶೀಯಲ್‌ ಮೀಡಿಯಾ ಮತ್ತು ಅಪ್ಲಿಕೇಶನ್‌ಗಳಿಗಾಗಿ ವಾಚ್ ನೋಟಿಫಿಕೇಶನ್‌ಗಳನ್ನು ಸಹ ಬೆಂಬಲಿಸಲಿದೆ.

ಭಾರತದಲ್ಲಿ ಬೋಟ್ ವೇವ್ ಎಲಿವೇಟ್ ಸ್ಮಾರ್ಟ್ ವಾಚ್ 2,299ರೂ.ಬೆಲೆಯನ್ನು ಹೊಂದಿದೆ. ಇದು ಪರಿಚಯಾತ್ಮಕ ಬೆಲೆ ಎಂದು ಕಂಪನಿ ಹೇಳಿದೆ. ಆದರೆ ಇದು ಯಾವ ಅವಧಿಯವರೆಗೆ ಇರಲಿದೆ ಅಂತಾ ಕಂಪೆನಿ ಇನ್ನೂ ಬಹಿರಂಗಪಡಿಸಿಲ್ಲ. ಇದು ಬೂದು, ಕಪ್ಪು, ಹಸಿರು ಮತ್ತು ಕಿತ್ತಳೆ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಅನ್ನು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 12 ಗಂಟೆಗೆ Amazon ಮೂಲಕ ಖರೀದಿಸಬಹುದು.

ಇನ್ನು ಇತ್ತೀಚಿಗೆ ಬೋಟ್‌ ಸ್ಮಾರ್ಟ್‌ ರಿಂಗ್‌ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ ರಿಂಗ್‌ ಕೇವಲ ಉಂಗುರ ಮಾತ್ರವಲ್ಲ ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸ್ಮಾರ್ಟ್‌ವಾಚ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಸ್ಮಾರ್ಟ್‌ರಿಂಗ್‌ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಬರೆಯುವ ಸೂಚನೆ ನೀಡಿದೆ.

Best Mobiles in India

English summary
Boat Wave Elevate Smartwatch Launched in India: Price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+