Boat Wave Sigma 3: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಸ್ಮಾರ್ಟ್‌ವಾಚ್! ಫೀಚರ್ಸ್, ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ
ಹಿಂದೆ ನಾವೆಲ್ಲಾ ಕೇವಲ ಟೈಮ್ ನೋಡಲು ಮಾತ್ರ ವಾಚ್ ಬಳಸುತ್ತಿದ್ದೆವು. ಇದೀಗ ಕಾಲ ಬದಲಾಗಿದೆ. ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿವೆ. ಗ್ರಾಹಕರಿಗೆ ಇಷ್ಟವಾಗುವ ತರಹೇವಾರಿ ಸ್ಮಾರ್ಟ್‌ವಾಚ್ ಪರಿಚಯಿಸಲು ಕೆಲವು ಕಂಪನಿಗಳು ಜಿದ್ದಿಗೆ ಬಿದ್ದಿವೆ. ಈ ಪೈಕಿ ಜನಪ್ರಿಯ ಸ್ಮಾರ್ಟ್‌ವಾಚ್ ಕಂಪನಿಗಳಲ್ಲಿ ಒಂದಾಗಿರುವ ಬೋಟ್ ಕಂಪನಿಯು, ಇದೀಗ ನೂತನ ಸ್ಮಾರ್ಟ್‌ವಾಚ್ ಒಂದನ್ನು ಪರಿಚಯಿಸಿದೆ.
ಇದು ಬೋಟ್ 'ವೇವ್ ಸಿಗ್ಮಾ 3' (Boat Wave Sigma 3 Smartwatch) ಎಂಬ ಹೆಸರನ್ನು ಹೊಂದಿದ್ದು, ಹಲವಾರು ಫೀಚರ್ಸ್ಗಳನ್ನು ಹೊಂದಿದೆ. ಹೆಚ್‌ಡಿ ಡಿಸ್ಲೇ, ಬ್ಲೂಟೂತ್ ಕರೆ, ಬಹು ಆರೋಗ್ಯ ಮತ್ತು ಫಿಟ್ನೆಸ್ ವೈಶಿಷ್ಟ್ಯಗಳೊಂದಿಗೆ ನೂತನ ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಅನ್ನು ಬೋಟ್ ಕಂಪನಿ ಲೋಕಾರ್ಪಣೆ ಮಾಡಿದೆ. ಇದು ಗ್ರಾಹಕರನ್ನು ಸೆಳೆಯುವ ಅದ್ಭುತ ವಿನ್ಯಾಸವನ್ನು ಹೊಂದಿದೆ. ಕೈಗೆಟುಕುವ ದರದಲ್ಲಿ ಈ ಸ್ಮಾರ್ಟ್‌ವಾಚ್ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಬೋಟ್ ಕಂಪನಿಯ ಈ ಸ್ಮಾರ್ಟ್‌ವಾಚ್, ಉತ್ತಮ ಡಿಸ್ಪ್ಲೇ, ಬ್ಯಾಟರಿ ಫೀಚರ್ಸ್ಗಳನ್ನು ಸಹ ಹೊಂದಿದೆ. MapMyIndia ಮೂಲಕ ಆನ್-ಡಿವೈಸ್ ನ್ಯಾವಿಗೇಶನ್ ಸೌಲಭ್ಯ ಪಡೆಯಬಹುದು. ಇಷ್ಟೇ ಇಲ್ಲದೆ, ಹತ್ತು ಹಲವು ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‌ವಾಚ್ ಒಳಗೊಂಡಿದೆ. ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಕುರಿತ ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ವೇವ್ ಸಿಗ್ಮಾ 3 ಪ್ರೀಮಿಯಂ ಅಲ್ಯೂಮಿನಿಯಂ ಅಲಾಯ್ ಕೇಸ್ ವಿನ್ಯಾಸ ಒಳಗೊಂಡಿದೆ. ಇದು ಲೋಹದ ಅಥವಾ ಮೃದುವಾದ ಸಿಲಿಕೋನ್ ಪಟ್ಟಿಗಳೊಂದಿಗೆ ಬರುತ್ತದೆ, ಇದು ದೀರ್ಘ ಕಾಲ ಬಾಳಿಕೆ ಬರುತ್ತದೆ ಮತ್ತು ಕೈಗೆ ಧರಿಸಿದಾಗ ಆರಾಮದಾಯಕವಾಗಿರುತ್ತದೆ.
ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಬೆಲೆ ಎಷ್ಟು?
ಬೋಟ್ ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಹಲವು ಬಣ್ಣಗಳಲ್ಲಿ ಲಭ್ಯವಿದೆ. ಈ ಪೈಕಿ ಕಪ್ಪು, ಮೆಟಲ್ ಬ್ಲಾಕ್, ಮೆಟಲ್ ಗ್ರೇ, ಕೂಲ್ ಗ್ರೇ, ಚೆರ್ರಿ ಬ್ಲಾಸಮ್, ಗುಲಾಬಿ ಸೇರಿವೆ. ಭಾರತದಲ್ಲಿ ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ 1,199 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದು ಕೇವಲ ಆನ್‌ಲೈನಲ್ಲಿ ಮಾತ್ರವಲ್ಲದೇ ಸ್ಟೋರ್‌ಗಳಲ್ಲಿಯೂ ಖರೀದಿಗೆ ಲಭ್ಯವಿದೆ. 1 ವರ್ಷ ವಾರಂಟಿ ಇರುತ್ತದೆ. ಅಲ್ಲದೇ, ಸ್ಮಾರ್ಟ್‌ವಾಚ್ ಬದಲಾವಣೆಗೆ 7 ದಿನಗಳ ಕಲಾವಕಾಶ ಇರಲಿದೆ.
ಆನ್‌ಲೈನ್ ಹಾಗೂ ಸ್ಟೋರ್‌ಗಳಲ್ಲಿಯೂ ಲಭ್ಯ
ಬೋಟ್-ಲೈಫ್‌ಸ್ಟೈಲ್. ಕಾಮ್, ಅಮೆಜಾನ್.ಇನ್, ಫ್ಲಿಪ್‌ಕಾರ್ಟ್.ಕಾಮ್, ಮೈಂತ್ರಾ ಅಧಿಕೃತ ವೆಬ್ಸೈಟ್ನಲ್ಲಿ ಬೋಟ್ ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಅನ್ನು ನೀವು ಖರೀದಿಸಬಹುದು. ಅಲ್ಲದೇ, ದೇಶದ ಆಯ್ದ ಕೆಲವು ಸ್ಮಾರ್ಟ್‌ವಾಚ್ ಸ್ಟೋರ್‌ಗಳಿಗೆ ಭೇಟಿ ನೀಡಿ ಈ ಸ್ಮಾರ್ಟ್‌ವಾಚ್ ಕೊಂಡುಕೊಳ್ಳಬಹುದು.
ಬೋಟ್ ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ 550 ನಿಟ್ಸ್ ಎಚ್‌ಡಿ ರೆಸಲ್ಯೂಶನ್(ಬ್ರೈಟ್‌ನೆಸ್)ನೊಂದಿಗೆ ದೊಡ್ಡ 2.01 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಎಷ್ಟೇ ಬಿಸಲು ಇದ್ದರೂ ನೀವು ಸ್ಪಷ್ಟವಾಗಿ ಟೈಮ್ ನೋಡಬಹುದು. ಹೀಗೆ ಹಲವು ಫೀಚರ್ ಅನ್ನು ಹೊಂದಿದ್ದು, ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದೆ.
ಒಮ್ಮೆ ಚಾರ್ಜ್ ಮಾಡಿದ್ರೆ ಒಂದು ವಾರ ಚಿಂತೆ ಇಲ್ಲ
ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಬ್ಲೂಟೂತ್ ಕರೆಯ ಸೌಲಭ್ಯವನ್ನೂ ಹೊಂದಿದೆ. ನೀವು ಕೈಯಲ್ಲಿ ಧರಿಸಿರುವಾಗಲೇ ನೇರವಾಗಿ ನೋಟಿಫಿಕೇಶನ್‌ಗಳು, ಕರೆಗಳು, ಮತ್ತು ಮೆಸೇಜ್‌ಗಳನ್ನು ಸಂದೇಶಗಳನ್ನು ಸ್ವೀಕರಿಸಬಹುದು. ಇದು ಆನ್‌ಬೋರ್ಡ್ ಡಯಲ್ ಪ್ಯಾಡ್ ಒಳಗೊಂಡಿದೆ. ಮೊಬೈಲ್ ತೆಗೆದು ಕರೆ ಸ್ವೀಕರಿಸುವ ಅಗತ್ಯವಿಲ್ಲ. ವೇವ್ ಸಿಗ್ಮಾ 3 IP67 ರೇಟಿಂಗ್ ಅನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ಒಂದು ವಾರ (7 ದಿನಗಳವರೆಗೆ) ಬ್ಯಾಟರಿ ಬಳಕೆ (ಬ್ಯಾಟರಿ ಬ್ಯಾಕಪ್) ಮಾಡಬಹುದು. ಬ್ಲೂಟೂತ್ ಕರೆಗಾಗಿ ಹೆಚ್ಚಾಗಿ ಬಳಸಿದರೆ 2 ದಿನ ಬ್ಯಾಟರಿ ಬ್ಯಾಕಪ್ ಬರುತ್ತದೆ.
ಇದಲ್ಲದೇ, QR ಟ್ರೇ ಬಳಕೆದಾರರಿಗೆ ಅನುಕೂಲಕರವಾಗಿದೆ. ಕ್ರೆಸ್ಟ್ ಅಪ್ಲಿಕೇಶನ್ ಮೂಲಕ ಸುಲಭವಾಗಿ QR ಕೋಡ್ ಸೌಲಭ್ಯವಿರುತ್ತದೆ. ಪ್ರಯಾಣ ಅಥವಾ ದಿನನಿತ್ಯದ ಚಟುವಟಿಕೆಗಳ ಸಮಯದಲ್ಲಿ ಬಸ್ ಟಿಕೆಟ್‌ಗಳು ಅಥವಾ ಯಾವುದೇ ಹಣ ಪಾವತಿ ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ.
ಒಟ್ಟಾರೆ, ಬೋಟ್ ಕಂಪನಿ ಹತ್ತು ಹಲವು ವಿಶೇಷತೆಗಳೊಂದಿಗೆ ವೇವ್ ಸಿಗ್ಮಾ 3 ಸ್ಮಾರ್ಟ್‌ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. ಈ ಸ್ಮಾರ್ಟ್‌ವಾಚ್ ನಿಮಗೆ ಇಷ್ಟವಾದರೇ ಕೂಡಲೇ ಆನ್‌ಲೈನ್ ಅಥವಾ ಸ್ಟೋರ್‌ಗಳಿಗೆ ಭೇಟಿ ನೀಡಿ ಖರೀದಿಸಬಹುದು.


Click it and Unblock the Notifications








