Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌: ಬೆಲೆ ಎಷ್ಟು

ಬೋಟ್‌ ಕಂಪೆನಿಯು ಜನಪ್ರಿಯ ಸ್ಮಾರ್ಟ್‌ವಾಚ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ boAt ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ವೇವ್ ಸರಣಿಗೆ ಹೊಸ ಸೇರ್ಪಡೆಯಾಗಿದ್ದು, 100 ಕಸ್ಟಮೈಸ್‌ ಮಾಡಬಹುದಾದ ವಾಚ್‌ ಫೇಸ್‌ಗಳನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ಹೌದು, ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ ಭಾರತಕ್ಕೆ ಎಂಟ್ರಿ ನೀಡಿದೆ. ಇನ್ನು ಈ ಹೊಸ ಸ್ಮಾರ್ಟ್ ವಾಚ್ ಒಂದು ಚದರ ಡಯಲ್‌ನೊಂದಿಗೆ ಬಾಳಿಕೆ ಬರುವ ಮೆಟಲ್‌ ಬಾಡಿಯನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68-ಪ್ರಮಾಣೀಕೃತವಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌: ಬೆಲೆ ಎಷ್ಟು

ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ 2.04 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಬಳಕೆದಾರರಿಗೆ 100 ಗ್ರಾಹಕೀಯಗೊಳಿಸಬಹುದಾದ ವಾಚ್ ಮುಖಗಳಿಂದ ಆಯ್ಕೆ ಮಾಡಲು ನಮ್ಯತೆಯನ್ನು ನೀಡುತ್ತದೆ. ಇನ್ನು ಸ್ಮಾರ್ಟ್‌ವಾಚ್‌ ಯುವಜನರ ಆಶಯಕ್ಕೆ ತಕ್ಕಂತ ವಿನ್ಯಾಸವನ್ನು ಹೊಂದಿದೆ. ಇದು ಒಂದು ಚದರ ಡಯಲ್‌ನೊಂದಿಗೆ ಬಾಳಿಕೆ ಬರುವ ಲೋಹದ ದೇಹವನ್ನು ಹೊಂದಿದ್ದು, ಶೈಲಿ ಮತ್ತು ಶಕ್ತಿ ಎರಡನ್ನೂ ಸಂಯೋಜಿಸಲಿದೆ.

ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ ಬಾಳಿಕೆ ಮತ್ತು ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ಪ್ರಮಾಣೀಕೃತವಾಗಿದೆ. ಇದು ಜಡ ಎಚ್ಚರಿಕೆಗಳು, ಕ್ಯಾಮರಾ ನಿಯಂತ್ರಣ, ಅಂತರ್ನಿರ್ಮಿತ ಆಟಗಳು, ಮ್ಯೂಸಿಕ್‌ ಕಂಟ್ರೋಲ್‌ ಹೆಚ್ಚಿನವುಗಳಂತಹ ದೈನಂದಿನ ಜೀವನವನ್ನು ಸುಧಾರಿಸುವ ಫೀಚರ್ಸ್‌ಗಳೊಂದಿಗೆ ಬರಲಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ 7 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಬಳಸಿದರೆ 3 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ಹೊಂದಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್‌ವಾಚ್‌: ಬೆಲೆ ಎಷ್ಟು

ಬೆಲೆ ಮತ್ತು ಲಭ್ಯತೆ
ಬೋಟ್ ವೇವ್ ಸ್ಪೆಕ್ಟ್ರಾ 2,999ರೂ ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ boAt ವೆಬ್‌ಸೈಟ್ ಮತ್ತು Amazon.in ನಲ್ಲಿ ಖರೀದಿಸಬಹುದಾಗಿದೆ. ಇದಕ್ಕೆ ಸಿಲ್ವರ್ ಫ್ಯೂಷನ್ ಮತ್ತು ಸ್ಟೀಲ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಬರಲಿದೆ.

ಇದಲ್ಲದೆ ಬೋಟ್‌ ಕಂಪೆನಿ ಭಾರತದಲ್ಲಿ ಇತ್ತೀಚಿಗೆ ಬೋಟ್‌ ರಾಕರ್ಜ್‌ 255 ANC ನೆಕ್‌ಬ್ಯಾಂಡ್‌ ಇಯರ್‌ಫೋನ್‌ ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ 13 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಬೋಟ್ ಸ್ಪಾಟಿಯಲ್ ಆಡಿಯೋ ಮತ್ತು ಸಿಗ್ನೇಚರ್ ಸೌಂಡ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, Google FastPair ಬೆಂಬಲವನ್ನು ಸಹ ಹೊಂದಿದೆ. ಜೊತೆಗೆ ಈ ಇಯರ್‌ಫೋನ್‌ ಮಲ್ಟಿ ಡಿವೈಸ್‌ ಕನೆಕ್ಟಿವಿಟಿಯನ್ನು ಹೊಂದಿದ್ದು, ಇದರೊಂದಿಗೆ ANC ಬಟನ್ ಅನ್ನು ಕೂಡ ಒಳಗೊಂಡಿದೆ.

ಇನ್ನು ಈ ನೆಕ್‌ಬ್ಯಾಂಡ್‌ ಡ್ಯುಯಲ್ EQ ಮೋಡ್‌ಗಳನ್ನು ಹೊಂದಿದ್ದ, ಅಲ್ಟ್ರಾ ಲೋ-ಲೇಟೆನ್ಸಿ ಮೋಡ್‌ ಹೊಂದಿದೆ. ಈ ಇಯರ್‌ಫೋನ್‌ ಒಟ್ಟು 100 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ. ಜೊತೆಗೆ ಮ್ಯಾಗ್ನೆಟಿಕ್ ಇಯರ್‌ಬಡ್‌ಗಳಾಗಿದ್ದು, IPX5 ಸ್ಪ್ಲಾಶ್ ಮತ್ತು ಸ್ವೆಟ್ ರೆಸಿಸ್ಟೆನ್ಸ್ ಸಹ ಹೊಂದಿದೆ. ಇದು 32+ dB ಸಕ್ರಿಯ ಶಬ್ದ ರದ್ದತಿ (ANC) ಮತ್ತು 100 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಅನ್ನು ನೀಡಲಿದೆ. ಜೊತೆಗೆ ಈ ಇಯರ್‌ಫೋನ್‌ 2 ಅಂತರ್ನಿರ್ಮಿತ EQ ಮೋಡ್‌ಗಳು, ಮಲ್ಟಿ-ಡಿವೈಸ್‌ ಕನೆಕ್ಟಿವಿಟಿ ಹಾಗೂ 60ms ಲೋ-ಲೇಟೆನ್ಸಿ ಮೋಡ್ ಹಾಗೂ Google FastPair ಬೆಂಬಲವನ್ನು ಹೊಂದಿದೆ.

BoAt Rockerz 255 ANC ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್‌ಗಳು ಭಾರತದಲ್ಲಿ 1,799ರೂ ಹೊಂದಿದೆ. ಇದನ್ನು ನೀವು ನೀಲಿ, ಕೆಂಪು ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
boAt Wave Spectra smartwatch with Bluetooth Calling launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+