ಸ್ಮಾರ್ಟ್‌ವಾಚ್ ಪ್ರಿಯರಿಗೆ ಬೋಟ್ ಸಂಸ್ಥೆಯಿಂದ ಗುಡ್‌ನ್ಯೂಸ್! ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ವಾಚ್!
ಭಾರತದ ಸ್ಮಾರ್ಟ್‌ವಾಚ್ ವಲಯದಲ್ಲಿ ಬಜೆಟ್ ಸ್ಮಾರ್ಟ್‌ವಾಚ್‌ಗಳಿಗೆ ಬೋಟ್ ಕಂಪೆನಿ ಹೆಸರುವಾಸಿಯಾಗಿದೆ. ತನ್ನ ವಿವಿಧ ಶ್ರೇಣಿಯ ಸ್ಮಾರ್ಟ್‌ವಾಚ್‌ಗಳನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ಬೋಟ್ ಎಕ್ಸ್‌ಟೆಂಡ್ ಪ್ಲಸ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್ ವೇಕ್ ಗೆಸ್ಚರ್ ಅನ್ನು ಬೆಂಬಲಿಸಲಿದೆ.
ಹೌದು, ಬೋಟ್ ಎಕ್ಸ್‌ಟೆಂಡ್ ಪ್ಲಸ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿದೆ. ಇದು ಇನ್‌ಬಿಲ್ಟ್ ಸ್ಪೀಕರ್, ಡಯಲ್ ಪ್ಯಾಡ್ ಮತ್ತು ಕಂಟ್ಯಾಕ್ಟ್ ಲಿಸ್ಟ್ ಸೇವ್ ಮಾಡುವ ಅವಕಾಶವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಟ್ ಎಕ್ಸ್‌ಟೆಂಡ್ ಪ್ಲಸ್ ಸ್ಮಾರ್ಟ್‌ವಾಚ್ ಫೀಚರ್ಸ್ ವಿವರ: ಬೋಟ್ ಎಕ್ಸ್‌ಟೆಂಡ್ ಪ್ಲಸ್ ಸ್ಮಾರ್ಟ್‌ವಾಚ್ ಸ್ಕ್ವೇರ್ ಡಯಲ್ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ 1.78 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 368 x 448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ 2.5D ಕರ್ವ್ಡ್ ಗ್ಲಾಸ್ ಅನ್ನು ಹೊಂದಿದ್ದು, 700 ನಿಟ್ಸ್ ಬ್ರೈಟ್‌ನೆಸ್ ಅನ್ನು ಪಡೆದುಕೊಂಡಿದೆ. ಜೊತೆಗೆ ವೇಕ್ ಗೆಸ್ಚರ್ ಅನ್ನು ಸಹ ಬೆಂಬಲಿಸಲಿದೆ.
ಇನ್ನು ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಹೊಂದಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಕರೆಗಳನ್ನು ಸ್ಮಾರ್ಟ್‌ವಾಚ್ ಮೂಲಕವೇ ಸ್ವೀಕರಿಸಬಹುದಾಗಿದೆ. ಇದಕ್ಕಾಗಿ ಇನ್‌ಬಿಲ್ಟ್ ಮೈಕ್ರೋಫೋನ್, ಡಯಲ್ ಪ್ಯಾಡ್ ಮತ್ತು 20ಕ್ಕೂ ಹೆಚ್ಚು ಕಂಟ್ಯಾಕ್ಟ್‌ಗಳನ್ನು ಸೇವ್ ಮಾಡುವುದಕ್ಕೆ ಅವಕಾಶವನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಫಿಸಿಕಲ್ ಆಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ.
ಇದರಲ್ಲಿ ನೀವು ಸ್ಲೀಪ್ ಮಾನಿಟರಿಂಗ್, ಹಾರ್ಟ್‌ಬೀಟ್ ಮಾನಿಟರಿಂಗ್, SpO2 ಮಾನಿಟರಿಂಗ್, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಮತ್ತು ಮಾರ್ಗದರ್ಶಿ ಉಸಿರಾಟದಂತಹ ಫೀಚರ್ಸ್‌ಗಳನ್ನು ಕಾಣಬಹುದು. ಜೊತೆಗೆ ಸ್ಮಾರ್ಟ್‌ವಾಚ್ IP68 ರೇಟಿಂಗ್ ಹೊಂದಿದ್ದು, ದೂಳು ಮತ್ತು ನೀರಿನಿಂದ ರಕ್ಷಣೆ ಸಿಗಲಿದೆ. ಇನ್ನು ಹೆಚ್ಚುವರಿಯಾಗಿ ಸ್ಮಾರ್ಟ್‌ವಾಚ್‌ನಲ್ಲಿ ರಿಮೈಂಡರ್‌ಗಳು, ಡೈಲಿ ಆಕ್ಟಿವಿಟಿ ಟ್ರ್ಯಾಕರ್, ಡ್ರಿಂಕ್ ವಾಟರ್ ರಿಮೈಂಡರ್, ಮೆಡಿಸಿನ್ ರಿಮೈಂಡರ್, ಫೈಂಡ್ ಮೈ ಫೋನ್, ಮ್ಯೂಸಿಕ್ ಕಂಟ್ರೋಲ್, ಕ್ಯಾಮೆರಾ ಕಂಟ್ರೋಲ್ ಮತ್ತು ಸ್ಮಾರ್ಟ್‌ಫೋನ್‌ನಿಂದ ನೋಟಿಫಿಕೇಶನ್ ಆಲರ್ಟ್‌ಗಳನ್ನು ಸಹ ನೀಡಲಾಗಿದೆ.
ಈ ಸ್ಮಾರ್ಟ್‌ವಾಚ್ ಬ್ಯಾಟರಿಯ ಬ್ಯಾಕ್‌ಅಪ್ ಹೇಗಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ವಾಚ್‌ನ ಬ್ಯಾಟರಿ 7 ದಿನಗಳ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಅಲ್ಲದೆ ಬ್ಲೂಟೂತ್ ಕರೆಯ ನಿರಂತರ ಬಳಕೆಯಲ್ಲಿ 2 ದಿನಗಳ ಬಾಳಿಕೆಯನ್ನು ನಿರೀಕ್ಷಿಸಬಹುದು ಎಂದು ಬೋಟ್ ಕಂಪೆನಿ ಹೇಳಿಕೊಂಡಿದೆ.
ಬೆಲೆ ಮತ್ತು ಲಭ್ಯತೆ
ಬೋಟ್ ಎಕ್ಸ್‌ಟೆಂಡ್ ಪ್ಲಸ್ ಸ್ಮಾರ್ಟ್‌ವಾಚ್ ಭಾರತದಲ್ಲಿ 2,299ರೂ. ಬೆಲೆಯನ್ನು ಹೊಂದಿದೆ. ಈ ಬೆಲೆಯು ಪರಿಚಯಾತ್ಮಕ ಬೆಲೆಯಾಗಿದ್ದು, ಎಷ್ಟು ಸಮಯದವರೆಗೆ ಈ ಬೆಲೆಯಲ್ಲಿ ಲಭ್ಯವಾಗಲಿದೆ ಅನ್ನೊದು ತಿಳಿದುಬಂದಿಲ್ಲ. ಇನ್ನು ಸ್ಮಾರ್ಟ್‌ವಾಚ್ ಸಿಲಿಕೋನ್, ಮೆಟಾಲಿಕ್ ಮತ್ತು ಲೆದರ್ ಸ್ಟ್ರಾಪ್‌ಗಳನ್ನು ಒಳಗೊಂಡ ಮೂರು ರೂಪಾಂತರಗಳಲ್ಲಿ ಇದೇ ಜೂನ್ 26 ರಿಂದ ಮಾರಾಟವಾಗಲಿದೆ. ಇನ್ನು ಸ್ಮಾರ್ಟ್‌ವಾಚ್ ನೀಲಿ, ಕಪ್ಪು ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಇತ್ತೀಚಿಗೆ ಬೋಟ್ ಕಂಪೆನಿ ಭಾರತದಲ್ಲಿ ಹೊಸ 'ಬೋಟ್ ಅಲ್ಟಿಮಾ ಕಾಲ್' (boAt Ultima Call) ಸ್ಮಾರ್ಟ್‌ವಾಚ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ವಾಚ್ ಕಾಂಟ್ಯಾಕ್ಟ್ ಸ್ಟೋರೇಜ್ ಹಾಗೂ ಡಯಲ್ ಪ್ಯಾಡ್ ಸೌಲಭ್ಯ ಪಡೆದಿದ್ದು, ಇದು ಇತರೆ ಡಿವೈಸ್‌ಗಳಿಗೆ ಪೈಪೋಟಿ ನೀಡುವಂತಹ ಫೀಚರ್ಸ್ ಆಗಿವೆ. ಹಾಗೆಯೇ ಸುಮಾರು 700 ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳ ಆಯ್ಕೆ ಒಳಗೊಂಡಿದೆ.


Click it and Unblock the Notifications








