Home
ಸುದ್ದಿಜಾಲ

ಇನ್ಮುಂದೆ ಅಮೆಜಾನ್‌ನಲ್ಲಿಯೂ ಸಿನಿಮಾ ಟಿಕೆಟ್‌ ಬುಕ್‌ ಮಾಡಿ..!

By Gizbot Bureau

ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ಟಿಕೆಟ್‌ ಬುಕಿಂಗ್‌ ಸೈಟ್‌ ಬುಕ್‌ಮೈಶೋ ಜೊತೆ ಪಾಲುದಾರಿಕೆ ಹೊಂದಿದ್ದು, ಆನ್‌ಲೈನ್ ಶಾಪಿಂಗ್ ಸೈಟ್‌ನಿಂದ ನೇರವಾಗಿ ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಹೌದು, ಅಮೆಜಾನ್‌ನಲ್ಲಿನ ಶಾಪಿಂಗ್ ಬೈ ಕ್ಯಾಟಗರಿ ವಿಭಾಗದಡಿಯಲ್ಲಿ ಹೊಸ 'ಮೂವಿ ಟಿಕೆಟ್’ ವಿಭಾಗವನ್ನು ಸೇರಿಸಲಾಗಿದ್ದು, ಪ್ರೈಮ್ ಹಾಗೂ ಪ್ರೈಮ್‌ ಅಲ್ಲದ ಸದಸ್ಯರಿಗೆ ಲಭ್ಯವಿದೆ.

ವಿಮರ್ಷೆ, ರೇಟಿಂಗ್‌

ವಿಮರ್ಷೆ, ರೇಟಿಂಗ್‌

ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸುವುದಷ್ಟೇ ಅಲ್ಲದೇ, ಬಳಕೆದಾರರು ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ವೀಕ್ಷಿಸಬಹುದಾಗಿದೆ. ಪ್ರಮುಖವಾಗಿ ಚಲನಚಿತ್ರ ಟಿಕೆಟ್ ಬುಕಿಂಗ್ ಆಯ್ಕೆಯು ಪ್ರಸ್ತುತ ಮೊಬೈಲ್ ಅಪ್ಲಿಕೇಶನ್ ಅಥವಾ ಮೊಬೈಲ್‌ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದ್ದು, ಡೆಸ್ಕ್‌ಟಾಪ್ ವೆಬ್‌ಸೈಟ್‌ ಆವೃತ್ತಿಯಲ್ಲಿ ರೋಲ್‌ಔಟ್‌ ಆಗಿಲ್ಲ.

ಮತ್ತೊಂದು ಹೆಜ್ಜೆ

ಮತ್ತೊಂದು ಹೆಜ್ಜೆ

ಅಮೆಜಾನ್.ಇನ್‌ನಲ್ಲಿ ಹೊಸ ವರ್ಗವಾಗಿ ಬುಕ್‌ಮೈಶೋ ಜೊತೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ಗ್ರಾಹಕರ ಜೀವನವನ್ನು ಸಾಧ್ಯವಾಗುವ ಎಲ್ಲ ರೀತಿಯಲ್ಲಿ ಸರಳೀಕರಿಸುವುದು ನಮ್ಮ ಉದ್ದೇಶ. ಶಾಪಿಂಗ್ ಮಾಡುವಾಗ, ಬಿಲ್‌ಗಳನ್ನು ಪಾವತಿಸುವಾಗ ಅಥವಾ ಇತರ ಸೇವೆಗಳನ್ನು ಗ್ರಾಹಕರು ಹುಡುಕುತ್ತಿರುವಾಗ ಈ ಪಾಲುದಾರಿಕೆಯು ನಮ್ಮ ಪ್ರಯಾಣದ ಮತ್ತೊಂದು ಹೆಜ್ಜೆಯಾಗಿದೆ ಎಂದು ಅಮೆಜಾನ್ ಪೇನ ನಿರ್ದೇಶಕ ಮಹೇಂದ್ರ ನೆರೂರ್ಕರ್ ಹೇಳಿದ್ದಾರೆ.

ಶಾಪ್‌ ಬೈ ಕ್ಯಾಟಗರಿ

ಶಾಪ್‌ ಬೈ ಕ್ಯಾಟಗರಿ

ಬಳಕೆದಾರರು ಹೊಸ ‘ಮೂವಿ ಟಿಕೆಟ್‌ಗಳು' ಆಯ್ಕೆಗಳನ್ನು ‘ಶಾಪ್‌ ಬೈ ಕ್ಯಾಟಗರಿ' ವಿಭಾಗದ ಅಡಿಯಲ್ಲಿ ಅಥವಾ ವಿಮಾನ ವಿಭಾಗದ ಪಕ್ಕದಲ್ಲಿರುವ ಅಮೆಜಾನ್ ಪೇ ಟ್ಯಾಬ್‌ನಲ್ಲಿ ಕಾಣಬಹುದು. ಈ ಆಯ್ಕೆಯನ್ನು ಆಯ್ದುಕೊಂಡ ನಂತರ, ನೀವು ಮೊದಲ ಬಾರಿಗೆ ಬುಕ್‌ಮೈಶೋ ಬಳಸುವಾಗ ಒಂದಿಷ್ಟು ಪ್ರಶ್ನೆಗಳನ್ನು ಪಡೆಯುತ್ತೀರಿ. ಬಳಕೆದಾರರು ತಮ್ಮ ಪ್ರದೇಶ, ನಿಖರ ವಲಯ ಮತ್ತು ಆದ್ಯತೆಯ ಚಲನಚಿತ್ರಗಳನ್ನು ಆಯ್ಕೆ ಮಾಡಬೇಕು. ನಂತರ ನೀವು ಚಿತ್ರಮಂದಿರ, ಪ್ರದರ್ಶನದ ಸಮಯ ಮತ್ತು ಪ್ರತಿ ಸೀಟಿನ ವೆಚ್ಚ ಆಯ್ಕೆ ಮಾಡಬಹುದು.

ಆನ್‌ಲೈನ್‌ ಪಾವತಿ

ಆನ್‌ಲೈನ್‌ ಪಾವತಿ

ಅಮೆಜಾನ್ ಪೇ ಬ್ಯಾಲೆನ್ಸ್, ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್, ಅಮೆಜಾನ್ ಪೇ ಯುಪಿಐ ಮತ್ತು ಇತರ ಡಿಜಿಟಲ್ ಪಾವತಿ ಸೇರಿ ಯಾವುದೇ ಪಾವತಿ ಆಯ್ಕೆಗಳನ್ನು ಬಳಸಿಕೊಂಡು ನೀವು ಆನ್‌ಲೈನ್‌ನಲ್ಲಿ ಹಣ ಪಾವತಿಸಬಹುದು. ಐಸಿಐಸಿಐ ಅಮೆಜಾನ್ ಪೇ ಕ್ರೆಡಿಟ್ ಕಾರ್ಡ್ ಗ್ರಾಹಕರು ಮಾಸಿಕ ಸ್ಟೇಟ್‌ಮೆಂಟ್‌ ಬಹುಮಾನವಾಗಿ ಶೇ.2ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಲಾಂಚಿಂಗ್‌ ಆಫರ್‌ ಭಾಗವಾಗಿ, ಅಮೆಜಾನ್ ಚಲನಚಿತ್ರ ಟಿಕೆಟ್ ಬುಕಿಂಗ್‌ನಲ್ಲಿ 200 ರೂ.ಗಳವರೆಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ.

Best Mobiles in India

English summary
Book BookMyShow Tickets On Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+