Just In
Don't Miss
- Sports
ಭಾರತvs ವೆಸ್ಟ್ಇಂಡೀಸ್ ಎರಡನೇ ಟಿ20 :ತವರಿನಲ್ಲಾದರೂ ಸಂಜು ಗೆ ಸಿಗುತ್ತಾ ಅವಕಾಶ:
- News
ಬೆಂಗಳೂರಲ್ಲಿ ಈಜಿಪ್ಟ್ ಈರುಳ್ಳಿ; ದರ ಎಷ್ಟು?
- Movies
ಮತ್ತೆ 'ಪುಟ್ಮಲ್ಲಿ'ಯಾದ ನಟಿ ಉಮಾಶ್ರೀ
- Finance
ಬೆಂಗಳೂರಿನಲ್ಲಿ ಕೇಜಿ ಈರುಳ್ಳಿಗೆ 200 ರುಪಾಯಿ; ಸೇಬು, ದಾಳಿಂಬೆಗಿಂತ ದುಬಾರಿ
- Automobiles
ಸಿಎನ್ಜಿ ಬಸ್ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ
- Lifestyle
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಅಮೇಜಾನ್ ನಲ್ಲಿ ಬಸ್ ಮತ್ತು ರೈಲ್ವೇ ಟಿಕೆಟ್ ಬುಕ್ ಮಾಡುವುದಕ್ಕೆ ಸದ್ಯದಲ್ಲೇ ಅವಕಾಶ
ಅಮೇಜಾನ್ ಇಂಡಿಯಾ ಮೂಲಕ ನೀವು ಸದ್ಯದಲ್ಲೇ ಬಸ್ ಟಿಕೆಟ್ ಗಳನ್ನು, ಹೊಟೆಲ್ ರೂಮ್ ಗಳನ್ನು ಮತ್ತು ಟ್ರೈನ್ ಟಿಕೆಟ್ ಗಳನ್ನು ಬುಕ್ ಮಾಡುವುದಕ್ಕೆ ಅವಕಾಶ ಸಿಗುತ್ತದೆ.ತನ್ನ ಪೇಮೆಂಟ್ ಫ್ಲ್ಯಾಟ್ ಫಾರ್ಮ್ ಆಗಿರುವ ಅಮೇಜಾನ್ ಪೇ ಮೂಲಕ ಇದನ್ನು ಮಾಡಬಹುದಾಗಿದೆ. ಸದ್ಯ ಇ-ಕಾಮರ್ಸ್ ವೆಬ್ ಸೈಟ್ ತನ್ನ ಸೂಪರ್ ಆಪ್ ನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತಿದೆ.

ಅಪ್ಲಿಕೇಷನ್ ಮತ್ತು ಅದರ ವೆಬ್ ಸೈಟ್ ನ ಒಳಗೆ ಪಡೆಯಬಹುದಾದ ಹೊಸ ಸೇವೆಗಳನ್ನು ಸೇರಿಸುವ ಪ್ರಕ್ರಿಯೆಯಲ್ಲಿ ಇ-ಟೈಲರ್ ಇರುವ ಬಗ್ಗೆ ತಿಳಿದಿರುವ ಇಬ್ಬರು ಈ ವಿಚಾರವನ್ನು ತಿಳಿಸಿದ್ದಾರೆ.

ಮಾತುಕತೆಗಳು ಆರಂಭ:
ಈಗಾಗಲೇ ವಿಮಾನದ ಟಿಕೆಟ್(ಕ್ಲಿಯರ್ ಟ್ರಿಪ್) ಮತ್ತು ಮೂವಿ ಟಿಕೆಟ್ ಬುಕ್ಕಿಂಗ್(ಬುಕ್ ಮೈ ಶೋ)ನ್ನು ಪ್ರಾರಂಭಿಸಿದ್ದರೂ ಕೂಡ ಇದೀಗ ರೆಡ್ ಬಸ್ ಮೂಲಕ ಕಂಪೆನಿಯು ಬಸ್ ಟಿಕೆಟ್ ಬುಕ್ಕಿಂಗ್ ನ್ನು ಪ್ರಾರಂಭಿಸುವುದಕ್ಕೆ ಚಿಂತಿಸಿದೆ. ಸದ್ಯ ಕೆಲವು ಬಳಕೆದಾರರ ಬಳಿ ಇದರ ಟೆಸ್ಟಿಂಗ್ ಕೆಲಸವೂ ನಡೆದಿದೆ. ಇತರೆ ಫ್ಲ್ಯಾಟ್ ಫಾರ್ಮ್ ಗಳ ಜೊತೆಗೆ ಹೊಟೆಲ್ ಮತ್ತು ಟ್ರೈನ್ ಟಿಕೆಟ್ ಬುಕ್ಕಿಂಗ್ ನ್ನು ಅಮೇಜಾನ್ ನಲ್ಲಿ ಪ್ರಾರಂಭಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿರುವ ಬಗ್ಗೆ ಇದೀಗ ತಿಳಿದುಬಂದಿದೆ.

ಸವಾಲು:
ಒಮ್ಮೆ ಇದು ಬಿಡುಗಡೆಯಾದ ನಂತರ, ಇದು ಫೋನ್ ಪೇಯ ವಾಲ್ ಮಾರ್ಟ್ ಗೆ ಸವಾಲು ಹಾಕುವ ಸಾಧ್ಯತೆ ಇದೆ. ಈಗಾಗಲೇ ಫೋನ್ ಪೇ 50 ಆಪ್ಸ್ ಗಳನ್ನು ಪ್ರಯಾಣ ಆಹಾರ ವಿತರಣೆ ಸೇರಿದಂತೆ ಇತ್ಯಾದಿಯನ್ನು ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ಸೇರಿಸಿದೆ. ಹೆಚ್ಚುವರಿಯಾಗಿ ಗೂಗಲ್ ಪೇ ಇತ್ತೀಚೆಗೆ ತನ್ನ ಸ್ಪಾಟ್ ಫ್ಲ್ಯಾಟ್ ಫಾರ್ಮ್ ಮೂಲಕ ಈ ಸೇವೆಗಳನ್ನು ಆಪ್ ನ ಒಳಗೇ ಲಭ್ಯವಾಗುವಂತೆ ಮಾಡಿದೆ. ಪೇಟಿಎಂ ಕೂಡ ಸ್ಪರ್ಧೆಯೊಡ್ಡುತ್ತದೆ ಆದರೆ ಇದರಲ್ಲಿ ಇತರೆ ಅಪ್ಲಿಕೇಷನ್ ಗಳನ್ನು ತನ್ನೊಳಗೆ ತರುವ ಬದಲು ತನ್ನದೇ ಆದ ಹೊಸ ಶೈಲಿಯನ್ನು ಇದು ಹೊಂದಿದೆ.

ಎಲ್ಲಾ ಜಾಗದ ಜನರನ್ನು ಸೆಳೆಯುವ ಉದ್ದೇಶ:
ಅಮೇಜಾನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡದೇ ಇದ್ದರೂ ಕೂಡ ಮೆಟ್ರೋ ಮತ್ತು ಮೆಟ್ರೋ ಸಿಟಿಯಲ್ಲಿ ಇಲ್ಲದ ಎಲ್ಲಾ ಜನರನ್ನೂ ಸೆಳೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ.

ಪ್ರೈಮ್ ಸದಸ್ಯರಿಗೆ ಹೆಚ್ಚಿನ ಸೇವೆ:
ಫ್ಲಿಪ್ ಕಾರ್ಟ್ ಕೂಡ ವಿಮಾನ ಮತ್ತು ಹೋಟೆಲ್ ಬುಕ್ಕಿಂಗ್ ಸೇವೆಯನ್ನು ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ಆರಂಭಿಸಿದೆ. ಅಮೇಜಾನ್ ಮೂಲಗಳ ಪ್ರಕಾರ ತನ್ನ ಪ್ರೈಮ್ ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಭಾರತದಲ್ಲಿ ನೀಡುವ ಉದ್ದೇಶದಿಂದ ಅಮೇಜಾನ್ ಪೇ ಸೂಪರ್ ಆಪ್ ನಲ್ಲಿ ಅವಕಾಶವನ್ನು ನೀಡಲಿದೆ. ನಾನ್- ಪ್ರೈಮ್ ಸದಸ್ಯರಿಗಿಂತ ಪ್ರೈಮ್ ಸದಸ್ಯರು ಅಮೇಜಾನಿನಲ್ಲಿ ಹೆಚ್ಚು ವಹಿವಾಟು ನಡೆಸುತ್ತಾರೆ.

ಪ್ರೋತ್ಸಾಹ ಧನ ನೀಡುವ ಉದ್ದೇಶ:
ಅಮೇಜಾನ್ ಶಾಪಿಂಗ್ ಅಲ್ಲದ ವಹಿವಾಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವ ಉದ್ದೇಶವನ್ನು ಹೊಂದಿದೆ. ನಗರ ಮಾರುಕಟ್ಟೆಗಳಿಗೆ ಹೋಲಿಸಿದರೆ ಶ್ರೇಣಿ ಮತ್ತು ಇತರೆ ಪ್ರದೇಶದ ಅಮೇಜಾನ್ ಸದಸ್ಯರು ಹೆಚ್ಚು ಶಾಪಿಂಗ್ ಮಾಡುವುದಿಲ್ಲ. ಫ್ಲ್ಯಾಟ್ ಫಾರ್ಮ್ ನೀಡುವ ಈ ಹೊಸ ಸೇವೆಗಳು ಅವರನ್ನು ಹೆಚ್ಚು ಅಮೇಜಾನ್ ಬಳಕೆ ಮಾಡುವಂತೆ ಮಾಡುತ್ತದೆ ಮತ್ತು ವಹಿವಾಟಿಗೆ ಉತ್ತೇಜನವನ್ನು ನೀಡುತ್ತದೆ ಎಂದು ಅಮೇಜಾನಿನ ಮುಂದಿನ ಯೋಜನೆಗಳ ಬಗ್ಗೆ ತಿಳಿದಿರುವ ಇನ್ನೊಬ್ಬ ವ್ಯಕ್ತಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಚೀನಾ ಮಾದರಿ:
ಇದು ಚೀನಾ ವ್ಯವಸ್ಥೆಯನ್ನು ಹೋಲುತ್ತದೆ. ಅಲ್ಲಿನ ಟೆನ್ಸೆಂಟ್ ಒಡೆತನದ ಮೆಸೇಜಿಂಗ್ ಅಪ್ಲಿಕೇಷನ್ ವೀಚಾಟ್ ಮತ್ತು ಅಲಿಬಾಬಾ ಪಾವತಿ ಸಂಸ್ಥೆಯ ಅಂಗಸಂಸ್ಥೆ ಅಲಿಪೇಗಳಲ್ಲಿ ಇದೇ ರೀತಿಯ ಸಂಪೂರ್ಣ ಶ್ರೇಣಿಯ ಸೇವೆಗಳು ಲಭ್ಯವಿದೆ. ವೀಚಾಟ್ ತರಹದ ಪ್ಲೇಬುಕ್ ನ ಯಶಸ್ಸನ್ನು ಇಲ್ಲಿ ಮತ್ತೆ ಪುನರಾವರ್ತಿಸಬೇಕಾಗಿಲ್ಲ. ಆದರೆ ಅಮೇಜಾನ್ ಖಂಡಿತವಾಗಿಯೂ ಹೊಸತನದಿಂದ ಸ್ಪರ್ಧೆಯೊಡ್ಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ರೆಡ್ ಬಸ್ ಗಾಗಿ ಅಮೇಜಾನಾ ಕಾರ್ಯ:
ರೆಡ್ ಬಸ್ ಗಾಗಿ ಅಮೇಜಾನ್ ಕಾರ್ಯ ನಿರ್ವಹಿಸುತ್ತಿದೆ ಎಂದು ಅಮೇಜಾನ್ ವಕ್ತಾರರು ಕೂಡ ಖಾತ್ರಿಗೊಳಿಸಿದ್ದಾರೆ. ಭವಿಷ್ಯದಲ್ಲಿ ನಾವು ಮಾಡಲಿರುವ ಅಥವಾ ಮಾಡದೇ ಇರುವ ಯೋಜನೆಗಳ ಬಗ್ಗೆ ಹೇಳಲು ಬಯಸುವುದಿಲ್ಲ. ಆದರೆ ಹೊಟೆಲ್ ಮತ್ತು ಟ್ರೈನ್ ಬುಕ್ಕಿಂಗ್ ಸೇವೆಯನ್ನು ಅಮೇಜಾನಿನಲ್ಲಿ ತರುವುದಕ್ಕಾಗಿ ಕೆಲಸ ಮಾಡಲಾಗುತ್ತಿದೆ ಎಂದು ಅಮೇಜನ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಅಗಸ್ಟ್ ವರದಿ:
ಅಗಸ್ಟ್ ನಲ್ಲಿ ಟಾಯ್ ಪ್ರೈಮ್ ನೌ ನಲ್ಲಿ ಆಹಾರ ವಿತರಣೆಯ ಪ್ರವೇಶಿಸುವ ಯೋಜನೆಯ ಬಗ್ಗೆ ವರದಿ ಮಾಡಲಾಗಿತ್ತು.ಎರಡೇ ಘಂಟೆಗಳಲ್ಲಿ ಕಿರಾಣಿ ಮತ್ತು ಇತರೆ ಉತ್ಪನ್ನಗಳನ್ನು ಗ್ರಾಹಕರ ಮನೆಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತದೆ ಎಂಬ ಬಗ್ಗೆಯೂ ವರದಿಯಾಗಿತ್ತು.
ಹೂಡಿಕೆ:
ಅಮೇಜಾನ್ ಪೇ ಗಾಗಿ ಅಮೇಜಾನ್ ಸ್ಥಿರವಾದ ಹೂಡಿಕೆಯನ್ನು ಮಾಡುತ್ತಿದೆ. ಕಳೆದೆರಡು ವರ್ಷಗಳಲ್ಲಿ 2,600 ಕೋಟಿ ಆಗಿದೆ. ಇದರ ಪ್ರಮುಖ ಭಾಗವೇ ಕ್ಯಾಷ್ ಬ್ಯಾಕ್ ಗಳು, ಮಾರ್ಕೆಟಿಂಗ್ ಅಮೇಜಾನ್ ಪೇ ಮತ್ತು ಆನ್ ಲೈನ್, ಆಫ್ ಲೈನ್ ಸ್ಟೋರ್ ಗಳಲ್ಲಿ ಅಮೇಜಾನಿನ ಸ್ವೀಕಾರವನ್ನು ವಿಸ್ತರಿಸುವುದು ಈ ಹೂಡಿಕೆಯಲ್ಲಿನ ಪ್ರಮುಖ ಅಂಶಗಳಾಗಿವೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090