ಭಾರತದಲ್ಲಿ ಬೌಲ್ಟ್‌ ಕಂಪೆನಿಯಿಂದ ಹೊಸ ಇಯರ್‌ಫೋನ್‌ ಬಿಡುಗಡೆ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಗುಣಮಟ್ಟದ ಇಯರ್‌ಫೋನ್‌ ಹೊಂದುವುದಕ್ಕೆ ಬಯಸುತ್ತಾರೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಆದರೂ ಗ್ರಾಹಕರು ಮಾತ್ರ ತಮ್ಮದೇ ಆದ ಬ್ರಾಂಡ್‌ ಕಂಪೆನಿಗಳ ಇಯರ್‌ಫೋನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಬೌಲ್ಟ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಬೌಲ್ಟ್‌ ಕಂಪೆನಿ ಹೊಸ ಇಯರ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬೌಲ್ಟ್ ಕಂಪೆನಿ

ಹೌದು, ಬೌಲ್ಟ್ ಕಂಪೆನಿ ಭಾರತದಲ್ಲಿ ಬೌಲ್ಟ್‌ ಆಡಿಯೋ ಏರ್‌ಬಾಸ್ Z1 ಟ್ರೂ ವಾಯರ್‌ಲೆಸ್ ಸ್ಟಿರಿಯೊ ಇಯರ್‌ಫೋನ್‌ ಅನ್ನು ಪರಿಚಯಿಸಿದೆ. ಇನ್ನು ಏರ್‌ಬಾಸ್‌ Z1 ಟ್ರೂ ಇಯರ್‌ಫೋನ್‌ ಕಾಂಡದ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಮೊಗ್ಗುಗಳಿಗೆ ಸಿಲಿಕಾನ್ ಇಯರ್ ಟಿಪ್ ಇಲ್ಲ. ಇದಲ್ಲದೆ ಬೌಲ್ಟ್ ಆಡಿಯೊ ಏರ್‌ಬಾಸ್ Z1 ಇಯರ್‌ಫೋನ್‌ ಮೂರು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಜೊತೆಗೆ ಈ ಇಯರ್‌ಫೋನ್‌ ಲೋ ಲೇಟೆನ್ಸಿ ಆಡಿಯೋ ಮತ್ತು IPX5 ವಾಟರ್‌ ರೆಸಿಸ್ಟೆನ್ಸಿಯನ್ನು ಹೊಂದಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಡಿಯೊ

ಬೌಲ್ಟ್ ಆಡಿಯೊ ಏರ್‌ಬಾಸ್ Z1 ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳು "ಹೆಚ್ಚುವರಿ ಶಕ್ತಿಯುತ ಬಾಸ್" ಅನ್ನು ತಲುಪಿಸುವ 10 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿವೆ. ಜೊತೆಗೆ ಕನೆಕ್ಟಿವಿಟಿಗಾಗಿ ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸಲಿದೆ. ಇನ್ನು ಈ ಇಯರ್‌ಫೋನ್‌ 10 ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಇದಲ್ಲದೆ ಈ ಏರ್‌ಬಾಸ್‌ Z1 ಅಲ್ಟ್ರಾ ಲೋ ಲ್ಯಾಟೆನ್ಸಿ ಆಡಿಯೊ ವಿತರಣೆಯನ್ನು 120 ಎಂಎಂಗಿಂತ ಕಡಿಮೆ ಹೊಂದಿದೆ ಎಂದು ಸಂಸ್ಥೆ ಹೇಳಿದೆ.

ಇಯರ್‌ಫೋನ್‌

ಇನ್ನು ಈ ಇಯರ್‌ಫೋನ್‌ ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ. ಇದಲ್ಲದೆ ಬೌಲ್ಟ್‌ ಆಡಿಯೊ ಏರ್‌ಬಾಸ್ Z1 ಇಯರ್‌ಫೋನ್‌ ಸಿಂಗಲ್‌ ಚಾರ್ಜ್‌ನಲ್ಲಿ 8 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡಲಿದೆ. ಜೊತೆಗೆ ಇದನ್ನು 24 ಗಂಟೆಗಳ ಪ್ಲೇಬ್ಯಾಕ್ ಅನ್ನು ತಲುಪಿಸಬಹುದು. ಅಲ್ಲದೆ ಈ ಇಯರ್‌ಫೋನ್‌ಗಳನ್ನು ಇನ್ನೂ ಎರಡು ಬಾರಿ ರೀಚಾರ್ಜ್ ಮಾಡಬಹುದಾಗಿದೆ. ಈ ಇಯರ್‌ಫೋನ್‌ ಹಾಲ್ ಸ್ವಿಚ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಚಾರ್ಜಿಂಗ್‌ ಕೇಸ್‌ ತೆರೆದಾಗ ಸ್ಮಾರ್ಟ್‌ಫೋನ್‌ನೊಂದಿಗೆ ಜೋಡಿಸಲು ಅನುವು ಮಾಡಿಕೊಡುತ್ತದೆ.

ಇಯರ್‌ಫೋನ್‌

ಇದಲ್ಲದೆ ಈ ಇಯರ್‌ಫೋನ್‌ ಅಲ್ಲಿ ಮೊನೊ ಮೋಡ್‌ ಅನ್ನು ಸಹ ನೀಡಲಾಗಿದೆ. ಇವುಗಳನ್ನು ಪ್ರತ್ಯೇಕವಾಗಿ ಸಹ ಬಳಸಬಹುದು. ಬೌಲ್ಟ್ ಆಡಿಯೊ ಏರ್‌ಬಾಸ್ Z1 ನಲ್ಲಿನ ಟಚ್‌ ಕಂಟ್ರೋಲ್‌ ಅನ್ನು ಹೊಂದಿದ್ದು, ಇದು ನಿಮಗೆ ಕರೆಗಳನ್ನು ಮ್ಯಾನೇಜ್‌ ಮಾಡಲು, ಟ್ರ್ಯಾಕ್‌ಗಳನ್ನು ಬದಲಾಯಿಸಲು, ಪರಿಮಾಣ ಮಟ್ಟವನ್ನು ಬದಲಾಯಿಸಲು ಅಥವಾ ಗೂಗಲ್ ಅಥವಾ ಸಿರಿ ಧ್ವನಿ ಸಹಾಯಕವನ್ನು ಸಕ್ರಿಯಗೊಳಿಸಲು ಅನುಮತಿಸುತ್ತದೆ. ಇನ್ನು ಈ ಇಯರ್‌ಫೋನ್‌ IPX5 ನೀರಿನ ಪ್ರತಿರೋಧವನ್ನು ಒಳಗೊಂಡಿದೆ. ಅಲ್ಲದೆ ಏರ್ ಬಾಸ್ Z1 ವಿನ್ಯಾಸವು ನಿಷ್ಕ್ರಿಯ ಶಬ್ದ ರದ್ದತಿಗೆ ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿದೆ.

Best Mobiles in India

English summary
Boult Audio AirBass Z1 TWS Earphones With IPX5 Water Resistance Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X