Home
ಸುದ್ದಿಜಾಲ

ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಬೌಲ್ಟ್‌ ಡ್ರಿಫ್ಟ್‌ ಪ್ರೊ ಸ್ಮಾರ್ಟ್‌ವಾಚ್‌! ಅಬ್ಬಬ್ಬಾ ಸ್ಟನ್ನಿಂಗ್‌ ಫೀಚರ್ಸ್‌!

ಸ್ಮಾರ್ಟ್‌ವಾಚ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಬೌಲ್ಟ್‌ ಕಂಪೆನಿ ಕೂಡ ಒಂದಾಗಿದೆ. ತನ್ನ ನವೀನ ಮಾದರಿಯ ಸ್ಮಾರ್ಟ್‌ವಾಚ್‌ಗಳಿಗೆ ಬೌಲ್ಟ್‌ ಕಂಪೆನಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಬೌಲ್ಟ್‌ ಕಂಪೆನಿ ಭಾರತದಲ್ಲಿ ಹೊಸ ಬೌಲ್ಟ್‌ ಡ್ರಿಫ್ಟ್‌ ಪ್ರೊ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಇದು ಕೈ ಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ.

ಹೌದು, ಬೌಲ್ಟ್ ಆಡಿಯೋ ಭಾರತದಲ್ಲಿ ಹೊಸ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು ಡ್ರಿಫ್ಟ್ ಸರಣಿಯ ಸ್ಮಾರ್ಟ್‌ವಾಚ್‌ ಆಗಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್ಸ್‌ ಹೊಂದಿದ್ದು, ಕಸ್ಟಮೈಸ್ಡ್‌ ವಾಚ್‌ಫೇಸ್‌ಗಳನ್ನು ಕೂಡ ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಬೌಲ್ಟ್‌ ಡ್ರಿಫ್ಟ್‌ ಪ್ರೊ ಸ್ಮಾರ್ಟ್‌ವಾಚ್‌!

ಬೌಲ್ಟ್ ಆಡಿಯೊ ಬ್ರ್ಯಾಂಡ್‌ನ ಹೊಸ ಡ್ರಿಫ್ಟ್ ಪ್ರೊ ಸ್ಮಾರ್ಟ್‌ವಾಚ್‌ ಸ್ಕ್ವೇರ್‌ ಡಯಲ್ ವಿನ್ಯಾಸವನ್ನು ಹೊಂದಿದೆ. ಇದು ಆಪಲ್ ವಾಚ್‌ನ ವಿನ್ಯಾಸದಲ್ಲಿರುವ ಡಿಜಿಟಲ್ ಕ್ರೋನ್‌ ಅನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, 368 x 448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ವಾಚ್‌ ಡಿಸ್‌ಪ್ಲೇ 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, IP67 ರೇಟೆಡ್ ವಾಟರ್‌ ರೆಸಿಸ್ಟೆನ್ಸಿಯನ್ನು ಒಳಗೊಂಡಿದೆ.

ಈ ಸ್ಮಾರ್ಟ್‌ವಾಚ್‌ ಆಲ್‌ವೇಸ್‌ ಆನ್ ಡಿಸ್ಪ್ಲೇ ಫಂಕ್ಷನ್ ಅನ್ನು ಹೊಂದಿದೆ. ಇದರಲ್ಲಿ ಕಸ್ಟಮೈಸ್ಡ್‌ ಮಾಡಬಹುದಾದ ವಾಚ್‌ಫೇಸ್‌ಗಳನ್ನು ನೀಡಲಾಗಿದೆ. ಇದಲ್ಲದೆ ಬಳಕೆದಾರರಿಗೆ ಹೆಲ್ತ್‌ ಟ್ರ್ಯಾಕ್‌ ಮಾಡುವ ಅನೇಕ ಫೀಚರ್ಸ್‌ಗಳನ್ನು ಇದರಲ್ಲಿ ನೀಡಲಾಗಿದೆ. ಅದರಂತೆ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್, ಋತುಚಕ್ರದ ಟ್ರ್ಯಾಕರ್ ಮತ್ತು ನಿದ್ರೆ ಮಾನಿಟರ್ ಅನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ 120ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಇದರಲ್ಲಿ ಕ್ರಿಕೆಟ್, ಯೋಗ, ಓಟ, ಸೈಕ್ಲಿಂಗ್ ನಂತಹ ಸ್ಪೋರ್ಟ್ಸ್‌ಗಳು ಸೇರಿವೆ.

ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಬೌಲ್ಟ್‌ ಡ್ರಿಫ್ಟ್‌ ಪ್ರೊ ಸ್ಮಾರ್ಟ್‌ವಾಚ್‌!

ಇನ್ನು ಬೌಲ್ಟ್ ಡ್ರಿಫ್ಟ್ ಪ್ರೊ ಇನ್‌ಬಿಲ್ಟ್‌ ಮೈಕ್ರೊಫೋನ್ ಅನ್ನು ಹೊಂದಿದೆ. ಇದರಲ್ಲಿ ಸ್ಪೀಕರ್ ಜೊತೆಗೆ ಡಯಲ್ ಪ್ಯಾಡ್, ಕನೆಕ್ಟಿವಿಟಿ ಸಿಂಕ್ ಅನ್ನು ನೀಡಲಾಗಿದೆ. ಜೊತೆಗೆ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಅನ್ನು ಸಹ ಹೊಂದಿದ್ದು, ಮೊಬೈಲ್‌ ಕರೆಗಳನ್ನು ವಾಚ್‌ ಮೂಲಕ ನಿರ್ವಹಿಸಲು ಅವಕಾಶ ನೀಡಲಿದೆ. ಜೊತೆಗೆ ಸ್ಮಾರ್ಟ್ ವಾಚ್ ಇನ್‌ಬಿಲ್ಟ್‌ ಮಿನಿ-ಗೇಮ್‌ಗಳು, ಇ-ಕಾರ್ಡ್‌ಗಳು, ಕ್ಯಾಲ್ಕುಲೇಟರ್, ಫ್ಲ್ಯಾಷ್‌ಲೈಟ್, ಸ್ಮಾರ್ಟ್ ನೋಟಿಫಿಕೇಶನ್‌ ಮತ್ತು DND ಮೋಡ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜ್‌ನಲ್ಲಿ 10 ದಿನಗಳ ಬಾಳಿಕೆಯನ್ನು ನೀಡಲಿದೆ.

ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಬೌಲ್ಟ್‌ ಡ್ರಿಫ್ಟ್‌ ಪ್ರೊ ಸ್ಮಾರ್ಟ್‌ವಾಚ್‌!

ಬೌಲ್ಟ್ ಆಡಿಯೊ ಡ್ರಿಫ್ಟ್ ಪ್ರೊ ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,999ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ ಮತ್ತು ಕ್ರೀಮ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ನೀವು ಫ್ಲಿಪ್‌ಕಾರ್ಟ್ ಮತ್ತು ಬ್ರ್ಯಾಂಡ್‌ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿಸಬಹುದಾಗಿದೆ.

ಇನ್ನು ಹೆಚ್ಚುವರಿಯಾಗಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯ ಸುದ್ದಿಯನ್ನು ಗಮನಿಸುವುದಾದರೆ ಬೋಟ್‌ ಕಂಪೆನಿ ಕೂಡ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಇದನ್ನು ಬೋಟ್‌ ಸ್ಟಾರ್ಮ್‌ ಕನೆಕ್ಟ್‌ ಪ್ಲಸ್‌ ಸ್ಮಾರ್ಟ್‌ವಾಚ್‌ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ವಾಚ್‌ 1.91 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದಿದೆ. ಇದಲ್ಲದೆ ಡಿಸ್‌ಪ್ಲೇ 90% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ 2.5D ಕರ್ವ್ಡ್‌ ಗ್ಲಾಸ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಕಂಪನಿಯ ENx ಅಲ್ಗಾರಿದಮ್‌ ಮೂಲಕ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಹೊಂದಿದೆ. ಇದು 300mAh ಬ್ಯಾಟರಿಯನ್ನು ಹೊಂದಿದ್ದು, 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Boult Audio Drift Pro Smartwatch Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+