ಭಾರತದಲ್ಲಿ ನಾಲ್ಕು ಹೊಸ ಇಯರ್‌ಬಡ್ಸ್ ಬಿಡುಗಡೆ ಮಾಡಿದ ಬೌಲ್ಟ್ ಕಂಪೆನಿ!

|

ಗುಣಮಟ್ಟದ ಆಡಿಯೋ ಪರಿಕರಗಳಿಂದ ಗುರುತಿಸಿಕೊಂಡಿರುವ ಬೌಲ್ಟ್ ಕಂಪೆನಿ ತನ್ನ ಹೊಸ ಆಡಿಯೊ ಫ್ರೀಪಾಡ್ಸ್, ಪ್ರೊಪಾಡ್ಸ್, ಮ್ಯೂಸ್‌ಬಡ್ಸ್ ಮತ್ತು ಪವರ್‌ಬಡ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಕಂಪೆನಿಯು ಭಾರತದ ಮಾರುಕಟ್ಟೆಯಲ್ಲಿ ನಾಲ್ಕು ಹೊಸ ಟ್ರೂ ವಾಯರ್‌ಲೆಸ್ ಇಯರ್‌ಬಡ್‌ಗಳನ್ನ ಪರಿಚಯಿಸಿದೆ. ಈ TWS ಇಯರ್‌ಬಡ್‌ಗಳು ವಿಭಿನ್ನ ಬೆಲೆ ಶ್ರೇಣಿಗಳನ್ನು ಹೊಂದಿದ್ದು, ವಿಭಿನ್ನ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಈ ನಾಲ್ಕು ಹೆಡ್‌ಫೋನ್‌ಗಳಲ್ಲಿ ಬೌಲ್ಟ್ ಫ್ರೀಪಾಡ್‌ಗಳು ಅತ್ಯುತ್ತಮ TWS ಇಯರ್‌ಬಡ್‌ಗಳಾಗಿವೆ. ಪ್ರೊಪಾಡ್ಸ್, ಬೌಲ್ಟ್ ಆಡಿಯೊ ಮ್ಯೂಸ್‌ಬಡ್ಸ್ ಮತ್ತು ಪವರ್‌ಬಡ್ಸ್ ಫಿಟ್‌ನೆಸ್ ಉತ್ಸಾಹಿಗಳನ್ನು ಗುರಿಯಾಗಿರಿಸಿಕೊಂಡಿದೆ.

ಬೌಲ್ಟ್ ಕಂಪೆನಿ

ಹೌದು, ಬೌಲ್ಟ್ ಕಂಪೆನಿ ಆಡಿಯೊ ಫ್ರೀಪಾಡ್ಸ್, ಪ್ರೊಪಾಡ್ಸ್, ಮ್ಯೂಸ್‌ಬಡ್ಸ್ ಮತ್ತು ಪವರ್‌ಬಡ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಆಡಿಯೋ ಫ್ರೀಪಾಡ್ಸ್‌ ಫ್ಲಿಪ್‌ಕಾರ್ಟ್‌ಗೆ ಪ್ರತ್ಯೇಕವಾಗಿದ್ದು, ಇವುಗಳ ಬೆಲೆ 1,799.ರೂ. ಆಗಿದೆ. ಇನ್ನು ಈ TWS ಇಯರ್‌ಬಡ್‌ಗಳು ಕಾಂಡ ಶೈಲಿಯ ವಿನ್ಯಾಸವನ್ನು ಹೊಂದಿವೆ. ಇದು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣಗಳ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಈ TWS ಇಯರ್‌ಬಡ್‌ಗಳು 15 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, 2 ಗಂಟೆಗಳ ಚಾರ್ಜಿಂಗ್‌ ಟೈಂ ಹೊಂದಿವೆ. ಅಲ್ಲದೆ ವಾಟರ್‌ ಪ್ರೂಪ್‌ IPX 7-ರೇಟೆಡ್ ಅನ್ನು ಹೊಂದಿದೆ. ಹಾಗಾದ್ರೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೌಲ್ಟ್ ಕಂಪೆನಿ

ಬೌಲ್ಟ್ ಕಂಪೆನಿ ತನ್ನ ಆಡಿಯೋ ಮ್ಯೂಸ್‌ಬಡ್ಸ್ ಅನ್ನು ಫಿಟ್‌ನೆಸ್ ಉತ್ಸಾಹಿಗಳನ್ನು ಗುರಿಯಾಗಿರಿಸಿಕೊಂಡು ಬಿಡುಗಡೆ ಮಾಡಿದೆ. ಇದು ಇಯರ್‌ಕ್ಲಿಪ್ ವಿನ್ಯಾಸವನ್ನು ಹೊಂದಿದೆ. ಈ ಇಯರ್‌ಕ್ಲಿಪ್ ವಿನ್ಯಾಸವು ಮ್ಯೂಸ್‌ಬಡ್ಸ್ ಕೆಲಸ ಮಾಡುವಾಗ ವಾಯ್ಸ್‌ ಸ್ಥಳದಲ್ಲಿ ಉಳಿಯಲು ಸಹಾಯ ಮಾಡುತ್ತದೆ. ಈ TWS ಇಯರ್‌ಬಡ್‌ಗಳು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಎರಡರಲ್ಲೂ ಲಭ್ಯವಿದೆ. ಇವುಗಳ ಬೆಲೆ ರೂ. 1,999. ಇದಲ್ಲದೆ ಈ ಮ್ಯೂಸ್‌ಬಡ್ಸ್ 18-ಗಂಟೆಗಳ ನಿರಂತರ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದೆ.

ಬೌಲ್ಟ್

ಇನ್ನು ಬೌಲ್ಟ್ ಆಡಿಯೊ ಪವರ್‌ಬಡ್ಸ್‌ ನಾಲ್ಕು TWS ಇಯರ್‌ಬಡ್‌ಗಳ ಅತ್ಯಂತ ದುಬಾರಿ ಕೊಡುಗೆಯಾಗಿದ್ದು, ಇದರ ಬೆಲೆ 2,799 ರೂ. ಈ ಪವರ್‌ಬಡ್‌ಗಳು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಲಭ್ಯವಿದೆ. ಆಡಿಯೊ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಟಚ್ ಸೆನ್ಸಾರ್ ಅನ್ನು ಹೊಂದಿವೆ. ಪವರ್‌ಬಡ್ಸ್ ಇಯರ್‌ಬಡ್‌ಗಳ ಕೇಸ್‌ ಅನ್ನು ಇತರ ಸಾಧನಗಳನ್ನು ರಿವರ್ಸ್-ಚಾರ್ಜ್ ಮಾಡಲು ಸಹ ಬಳಸಬಹುದು ಮತ್ತು ಇಯರ್‌ಬಡ್‌ಗಳು ಸ್ವತಃ ಐಪಿಎಕ್ಸ್ 7 ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದೆ..

ಬೌಲ್ಟ್ ಆಡಿಯೊ

ಇದಲ್ಲದೆ ಬೌಲ್ಟ್ ಆಡಿಯೊ ಪ್ರೊಪಾಡ್‌ಗಳು ಅಮೆಜಾನ್‌ಗೆ ಪ್ರತ್ಯೇಕವಾಗಿದ್ದು, ಇವುಗಳ ಬೆಲೆ ರೂ. 2,499. ಈ ಇಯರ್‌ಬಡ್‌ಗಳು ಕಾಂಡ ಶೈಲಿಯ ವಿನ್ಯಾಸವನ್ನು ಹೊಂದಿವೆ. ಇನ್ನು ಈ ಇಯರ್‌ಬಡ್ಸ್‌ IPX 5 ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದೆ. ಇವುಗಳು ವೇಕ್ ಅಪ್ ಮತ್ತು ಪೇರ್ ಫೀಚರ್ಸ್‌, ಟಚ್‌ ಕಂಟ್ರೋಲ್‌ ಅನ್ನು ಹೊಂದಿದೆ. ಅಲ್ಲದೆ ವಿಳಂಬ-ಮುಕ್ತ ಆಡಿಯೊಗೆ ಕಡಿಮೆ-ಸುಪ್ತತೆಯೊಂದಿಗೆ ವಿಶೇಷವಾಗಿ ಗೇಮಿಂಗ್‌ನಲ್ಲಿ ಬರುತ್ತವೆ. ಇದಲ್ಲದೆ ಪ್ರೊಪಾಡ್‌ಗಳು 5.5 ಗಂಟೆಗಳ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದ್ದು, ಈ ಕೇಸ್‌ ಇಯರ್‌ಬಡ್‌ಗಳನ್ನು 4 ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
Boult Audio FreePods, ProPods, MuseBuds and PowerBuds are the four new True Wireless earbuds launched by the company in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X