Home
ಸುದ್ದಿಜಾಲ

ಬೋಲ್ಟ್‌ ಕಂಪೆನಿಯಿಂದ ಲೈವ್‌ಬಡ್ಸ್ ಮತ್ತು ಪ್ರೊಬಾಸ್ ಫ್ಲೋX ನೆಕ್‌ಬ್ಯಾಂಡ್ ಬಿಡುಗಡೆ!

ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್‌ ಪ್ರಾಡಕ್ಟ್‌ಗಳಿಗೆ ಬಾರಿ ಬೇಡಿಕೆ ಅದರಲ್ಲೂ ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಫೋನ್‌ಗಳ ಬಳಕೆ ಹೆಚ್ಚಾಗುತ್ತಲೇ ಇದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಮ್ಯೂಸಿಕ್‌ ಪ್ಲೇ ಮಾಡಿಕೊಂಡು ಇಯರ್‌ಫೋನ್‌ ಮೂಲಕ ಮ್ಯೂಸಿಕ್‌ ಅನುಭವವನ್ನ ಎಲ್ಲಾ ಬಳಕೆದಾರರು ಎಂಜಾಯ್‌ ಮಾಡುತ್ತಿದ್ದಾರೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಮಾರುಕಟ್ಟೆಯಲ್ಲಿ ಹಲವಾರು ಕಂಪೆನಿಗಳು ಭಿನ್ನ ಮಾದರಿಯ ಇಯರ್‌ಫೋನ್‌, ಇಯರ್‌ಬಡ್ಸ್‌ ಗಳನ್ನ ಪರಿಚಯಿಸಿವೆ. ಇದರಲ್ಲಿ ಬೋಲ್ಟ್‌ ಕಂಪೆನಿ ಕೂಡ ಒಂದಾಗಿದ್ದು ಉತ್ತಮ ಇಯರ್‌ಬಡ್ಸ್ ಗಳ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿವೆ. ಸದ್ಯ ಇದೀಗ ಮತ್ತೊಂದು ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ.

ಬೌಲ್ಟ್

ಹೌದು, ಬೌಲ್ಟ್ ಕಂಪೆನಿ ಭಾರತದಲ್ಲಿ ಎರಡು ಹೊಸ ಆಡಿಯೊ ಇಯರ್‌ಫೋನ್‌ಗಳನ್ನು ಪರಿಚಯಿಸಿದೆ. ಆಡಿಯೊ ಬ್ರಾಂಡ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ಗಳನ್ನ ಬಿಡುಗಡೆ ಮಾಡಿದೆ. ಅಲ್ಲದೆ ಲೈವ್‌ಬಡ್ಸ್ ಮತ್ತು ವಾಯರ್‌ಲೆಸ್ ಇನ್-ಇಯರ್ ವಿಭಾಗದಲ್ಲಿ ಪ್ರೊಬಾಸ್ ಫ್ಲೋಎಕ್ಸ್ ಅನ್ನು ಪರಿಚಯಿಸಿದೆ. ಇನ್ನು ಈ ಇಯರ್‌ಬಡ್ಸ್‌ಗಳ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಯರ್‌ಬಡ್ಸ್‌

ಇನ್ನು ಈ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಲ್ಲಿ ಲೈವ್‌ಬಡ್ಸ್‌ ಸ್ಮಾರ್ಟ್‌ಡಿವೈಸ್‌ಗಳೊಂದಿಗೆ ಇನ್ಸಟಂಟ್‌ ಆಗಿ ಜೋಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಚಾರ್ಜಿಂಗ್ ಪ್ರಕರಣದ ಮುಚ್ಚಳವನ್ನು ತೆರೆದ ತಕ್ಷಣ ಮೊಗ್ಗುಗಳು ಪರಸ್ಪರ ಜೋಡಿಸುತ್ತವೆ ಎಂದು ಕಂಪನಿ ಹೇಳಿದೆ. ಅಲ್ಲದೆ ಇದು ನಿಷ್ಕ್ರೀಯ ನಾಯ್ಸ್‌ ಕ್ಯಾನ್ಸೆಲಿಂಗ್‌ ಮತ್ತು IPX7 ರೇಟಿಂಗ್‌ ಅನ್ನು ಬೆಂಬಲಿಸಲಿದೆ. ಪ್ರೊಬಾಸ್ ಫ್ಲೋಎಕ್ಸ್, ಹಗುರವಾದ ನೆಕ್‌ಬ್ಯಾಂಡ್ ಶೈಲಿಯ ಬ್ಲೂಟೂತ್ ವಾಯರ್‌ಲೆಸ್‌ ಹೆಡ್ಸೆಟ್ ಆಗಿದೆ. ಇನ್ನು ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜಿಂಗ್‌ನಲ್ಲಿ ಸುಮಾರು 16 ಗಂಟೆಗಳ ರೇಟಿಂಗ್ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ನೆಕ್‌ಬ್ಯಾಂಡ್

ಇದಲ್ಲದೆ ಈ ನೆಕ್‌ಬ್ಯಾಂಡ್ ಬ್ಲೂಟೂತ್ ಹೆಡ್‌ಸೆಟ್ ಮ್ಯಾಗ್ನೆಟಿಕ್ ಡ್ರೈವರ್‌ಗಳನ್ನು ಹೊಂದಿರುತ್ತದೆ ಮತ್ತು ನಿಷ್ಕ್ರಿಯ ಶಬ್ದ ರದ್ದತಿಯನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ವಾಯ್ಸ್‌ ಕಾಲಿಂಗ್‌, ಮತ್ತು ಸ್ವೀಕರಿಸಲು ಇಂಟರ್‌ಬಿಲ್ಟ್‌ ಮೈಕ್ರೊಫೋನ್ ಅನ್ನು ಹೊಂದಿದೆ. ಇನ್ನು ಬೋಲ್ಟ್ ಆಡಿಯೋ ಅವರು ಬೆವರು ನಿರೋಧಕ ಮತ್ತು ಬಹು ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಹೇಳಿದೆ. ಇನ್ನು ಈ ಇಯರ್‌ಬಡ್ಸ್‌ ಉತ್ತಮವಾದ ವಿನ್ಯಾಸವನ್ನ ಹೊಂದಿದ್ದು, ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ.

ಇಯರ್‌ಬಡ್ಸ್‌

ಅಲ್ಲದೆ ಈ ಇಯರ್‌ಬಡ್ಸ್‌ಗಳಲ್ಲಿ ಉತ್ತಮವಾದ ಮೈಕ್ರೋ ಫೋನ್‌ ವ್ಯವಸ್ತೆಯನ್ನ ಇನ್‌ಬಿಲ್ಟ್‌ ಮಾಡಲಾಗಿದ್ದು, ಒಳಬರುವ ಹಾಗೂ ಕರೆಮಾಡುವ ಅವಧಿಯಲ್ಲಿ ಉತ್ತಮ ಅನುಭವವನ್ನ ನಿಡಲಿದೆ. ಅಲ್ಲದೆ ಇದು ವಾಟರ್‌ಪ್ರೂಪ್‌ ಆಗಿದ್ದು, ಮಳೆಯಲ್ಲಿಯೂ ಸಹ ಮ್ಯೂಸಿಕ್‌ ಅನುಭವವನ್ನ ನೀಡಲಿದೆ. ಇನ್ನು ಈ ಇಯರ್‌ಬಡ್ಸ್‌ಗಳಲ್ಲಿ ಲೈವ್‌ಬಡ್ಸ್ ಬೆಲೆ 2,999 ರೂ. ಮತ್ತು ಅಮೆಜಾನ್ ಇಂಡಿಯಾ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಪ್ರೊಬಾಸ್ ಫ್ಲೋಎಕ್ಸ್ ಬೆಲೆ 1,299 ರೂ.ಆಗಿದ್ದು ಫ್ಲಿಪ್ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Boult Audio has introduced two new audio products in India. The audio brand is launching LiveBuds in the true wireless earbuds category.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+