Home
ಸುದ್ದಿಜಾಲ

ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಟ್ಟ ಬೌಲ್ಟ್ ಸ್ಟರ್ಲಿಂಗ್‌ ಸ್ಮಾರ್ಟ್‌ವಾಚ್‌! ಆಕರ್ಷಕ ಡಿಸೈನ್‌!

ಭಾರತದ ಮಾರುಕಟ್ಟೆಯಲ್ಲಿ ಬೌಲ್ಟ್ ಸ್ಟರ್ಲಿಂಗ್ ಸ್ಮಾರ್ಟ್ ವಾಚ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ವಾಚ್‌ ಒಂದು ಸುತ್ತಿನ ಡಯಲ್ ಅನ್ನು ಒಳಗೊಂಡಿದೆ. ಇದು 1.52 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ, ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಕೂಡ ಒಳಗೊಂಡಿದೆ.

ಹೌದು, ಬೌಲ್ಟ್ ಸ್ಟರ್ಲಿಂಗ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ವಾಚ್‌ 100+ ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಹೊಂದಿದೆ. ಇದಲ್ಲದೆ ಬಳಕೆದಾರರಿಗೆ ಅಗತ್ಯವಾದ ಎನಿಸುವ ಹೆಲ್ತ್‌ ಫೀಚರ್ಸ್‌ಗಳನ್ನು ಸಹ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಟ್ಟ ಬೌಲ್ಟ್ ಸ್ಟರ್ಲಿಂಗ್‌ ಸ್ಮಾರ್ಟ್‌ವಾಚ್‌!

ಬೌಲ್ಟ್ ಸ್ಟರ್ಲಿಂಗ್ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಹೇಗಿದೆ?
ಬೌಲ್ಟ್‌ ಸ್ಟರ್ಲಿಂಗ್‌ ಸ್ಮಾರ್ಟ್‌ವಾಚ್‌ 1.52 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 360×360 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ 700 ನೀಟ್ಸ್‌ವರೆಗೆ ಬ್ರೈಟ್‌ನೆಸ್‌ ಅನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಹೃದಯ ಬಡಿತ ಮಾನಿಟರಿಂಗ್, SpO2 ಸೆನ್ಸಾರ್‌ ಮತ್ತು ರಕ್ತದೊತ್ತಡದ ಮಾನಿಟರಿಂಗ್ ಟ್ರ್ಯಾಕ್‌ ಅನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಸ್ಲೀಪ್ ಟ್ರ್ಯಾಕಿಂಗ್, ನೀರು ಕುಡಿಯುವ ಜ್ಞಾಪನೆ, ಕುಳಿತುಕೊಳ್ಳುವ ರಿಮೈಂಡರ್‌ಗಳನ್ನು ನೀಡಲಿದೆ. ಇದು 150+ ಕ್ಲೌಡ್-ಆಧಾರಿತ ವಾಚ್‌ಫೇಸ್‌ಗಳನ್ನು ಹೊಂದಿದ್ದು, 100+ ಸ್ಪೋರ್ಟ್ಸ್ ಮೋಡ್ಗಳನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ನಲ್ಲಿ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ನೀಡಲಾಗಿದೆ. ಇದು ಬ್ಲೂಟೂತ್ v5.3 ಬೆಂಬಲವನ್ನು ಹೊಂದಿದ್ದು, ಫೋನ್‌ ಕರೆಗಳನ್ನು ಸ್ಮಾರ್ಟ್‌ವಾಚ್‌ ಮೂಲಕವೇ ಕಂಟ್ರೋಲ್‌ ಮಾಡಬಹುದಾಗಿದೆ.

ಭಾರತದಲ್ಲಿ ಬೌಲ್ಟ್ ಸ್ಟರ್ಲಿಂಗ್ ಸ್ಮಾರ್ಟ್‌ವಾಚ್‌ 1,599 ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಮಿಡ್‌ನೈಟ್ ಮೆರೈನ್, ಕಾರ್ಬನ್ ಕಾಪರ್ ಮತ್ತು ಸ್ಕಾರ್ಲೆಟ್ ಎಬೊನಿಯಂತಹ ಹಲವಾರು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಇದು ಫ್ಲಿಪ್‌ಕಾರ್ಟ್ ಮತ್ತು ಬೌಲ್ಟ್ ಇಂಡಿಯಾ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಾಗಲಿದೆ.

ಇದಲ್ಲದೆ ಬೌಲ್ಟ್‌ ಕಂಪೆನಿ ಇತ್ತೀಚಿಗೆ ಬೌಲ್ಟ್ ಕ್ರಾಫ್ಟ್ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ 1.83 ಇಂಚಿನ ಆಲ್‌ವೇಸ್‌ ಆನ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಈ ವಾಚ್‌ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಸ್ಮಾರ್ಟ್‌ಫೋನ್‌ ಓಪನ್‌ ಮಾಡದೆಯೇ ಕರೆಯಲ್ಲಿ ತೊಡಗಿಕೊಳ್ಳಬಹುದು. ಇದರೊಂದಿಗೆ ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆಯೂ ಸಹ ಇರುವುದರಿಂದ ನೀವು ಈ ವಾಚ್‌ ಅನ್ನು ಸುಲಭವಾಗಿ ಕಂಟ್ರೋಲ್‌ ಮಾಡಬಹುದಾಗಿದೆ.

ಬೌಲ್ಟ್ ಕ್ರಾಫ್ಟ್ 100+ ಸ್ಪೋರ್ಟ್ಸ್‌ ಮೋಡ್‌, ಸ್ಮಾರ್ಟ್ ನೋಟಿಫಿಕೇಶನ್‌ ಬೆಂಬಲ ಪಡೆದಿದ್ದು, ಈ ವಾಚ್‌ ಅನ್ನು ನೀವು ಯಾವುದೇ ಬಿಸಿಲು, ಬಿರುಗಾಳಿ ಅಥವಾ ಎಂತಹುದೇ ಪರಿಸ್ಥಿತಿಯಲ್ಲಿಯೂ ಬಳಕೆ ಮಾಡಬಹುದು. ಯಾಕೆಂದರೆ ಇದು IP68 ರೇಟಿಂಗ್‌ ಪಡೆದಿದೆ. ಹಾಗೆಯೇ ಬ್ಲೂಟೂತ್ ಆವೃತ್ತಿ 5.3 ಅನ್ನು ನೀಡಲಾಗಿದ್ದು, ಇದು ಸುಲಭ ಕನೆಕ್ಟಿವಿಟಿಗೆ ಅನುಕೂಲ ಮಾಡಿಕೊಡುತ್ತದೆ. ಇದಿಷ್ಟೇ ಅಲ್ಲದೆ ಕೆಲವು ಆಕರ್ಷಕ ಫೀಚರ್ಸ್‌ ಸಹ ಈ ವಾಚ್‌ನಲ್ಲಿದೆ.

ಇದಲ್ಲದೆ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಕುಳಿತುಕೊಳ್ಳುವ ಜ್ಞಾಪನೆಗಳು, ಕುಡಿಯುವ ನೀರಿನ ಜ್ಞಾಪನೆಗಳು, ಹವಾಮಾನ ವಿವರಗಳು, ಫೋನ್ ಫೈಂಡ್‌ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಹೊಂದಿದೆ.‌ ಈ ಸ್ಮಾರ್ಟ್‌ವಾಚ್‌ ನಿಮಗೆ ಹಲವು ರೀತಿಯ ಕಾರ್ಯಗಳನ್ನು ಮಾಡುವುದರಿಂದ ಇಷ್ಟವಾಗಲಿದೆ.

Best Mobiles in India

English summary
Boult Sterling With Bluetooth Calling Support Launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+