ಭಾರತಕ್ಕೆ ಎಂಟ್ರಿ ಕೊಟ್ಟ Boult Z40 ಅಲ್ಟ್ರಾ ಇಯರ್‌ಬಡ್ಸ್: ಬೆಲೆ ಎಷ್ಟು!
Boult ಕಂಪೆನಿ ಭಾರತದಲ್ಲಿ ಹೊಸ ಬೋಲ್ಟ್ Z40 ಅಲ್ಟ್ರಾ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ಇದು ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್ ಆಗಿದ್ದು, ಅತ್ಯಾಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ನೀಡಿರುವ ಈ ಇಯರ್‌ಬಡ್ಸ್ 32dB ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದೆ.
ಹೌದು, Boult Z40 ಅಲ್ಟ್ರಾ ಇಯರ್‌ಬಡ್ಸ್ ಭಾರತಕ್ಕೆ ಎಂಟ್ರಿ ನೀಡಿದೆ. ಇದು ಮೆಟಾಲಿಕ್ ರಿಮ್‌ಗಳನ್ನು ಹೊಂದಿರುವ ಪ್ರೀಮಿಯಂ ವಿನ್ಯಾಸವನ್ನು ಪಡೆದಿದೆ. ಇನ್ನು ಇಯರ್‌ಬಡ್ಸ್ IPX-5 ರೇಟಿಂಗ್ ಹೊಂದಿದ್ದು, ವಾಟರ್ ಆಂಡ್ ಡಸ್ಟ್‌ನಿಂದ ಪ್ರೊಟೆಕ್ಷನ್ ನೀಡಲಿದೆ. ಜೊತೆಗೆ ನೀವು ಮ್ಯೂಸಿಕ್ ಅನ್ನು ಆಲಿಸುವಾಗ ಸುತ್ತಮುತ್ತಲಿನ ಶಬ್ದವನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಸಹ ಹೊಂಡಿದೆ. ಹಾಗಾದ್ರೆ ಈ ಇಯರ್‌ಬಡ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೋಲ್ಟ್ Z40 ಅಲ್ಟ್ರಾ ಇಯರ್‌ಬಡ್ಸ್ 10 ಎಂಎಂ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದು ಬ್ರ್ಯಾಂಡ್‌ನ ಬೂಮ್‌ಎಕ್ಸ್ ತಂತ್ರಜ್ಞಾನದಿಂದಾಗಿ ಉತ್ತಮ ಬಾಸ್ ಸಿಸ್ಟಂ ಅನ್ನು ನೀಡಲಿದೆ. ಜೊತೆಗೆ, ಬ್ರ್ಯಾಂಡ್ 3 ಈಕ್ವಲೈಜರ್ ಮೋಡ್‌ಗಳನ್ನು ಹೊಂದಿದ್ದು, ಹೈಫೈ, ಬಾಸ್ ಮತ್ತು ರಾಕ್ ಅನ್ನು ನಿಮ್ಮ ಆಲಿಸುವ ಅನುಭವವನ್ನು ಸುಧಾರಿಸಲಿದೆ. ಇನ್ನು ಈ ಇಯರ್‌ಬಡ್ಸ್ ಕ್ವಾಡ್-ಮಿಕ್ ಇಎನ್‌ಸಿ ಟೆಕ್ನಾಲಜಿಯನ್ನು ಸಹ ಒಳಗೊಂಡಿದೆ. ಇದು ನೀವು ಕರೆಗಳನ್ನು ಮಾಡುವಾಗ ನಿಮ್ಮ ಧ್ವನಿಯು ಸ್ಪಷ್ಟವಾಗಿರಲಿದೆ.
ಇನ್ನು ಈ ಇಯರ್‌ಬಡ್ಸ್ ಸೋನಿಕ್ ಕೋರ್ ಡೈನಾಮಿಕ್ ಚಿಪ್ ಅನ್ನು ಸಹ ಒಳಗೊಂಡಿದ್ದು, ನಿಖರವಾದ ನಾಯ್ಸ್ ಕ್ಯಾನ್ಸಲೇಶನ್, ಸ್ಪಷ್ಟ ಮತ್ತು ಶಬ್ದ-ಮುಕ್ತ ಆಡಿಯೊ ಪಿಕಪ್ ಮತ್ತು ಉತ್ತಮ ಸಂಗೀತ ಅನುಭವದೊಂದಿಗೆ ಸಹಾಯ ಮಾಡುತ್ತದೆ. ಈ ಇಯರ್‌ಬಡ್ಸ್‌ಗಳು ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಅನ್ನು ಬಳಸಲಿದೆ. ಇದು ಬ್ಲಿಂಕ್ ಮತ್ತು ಪೇರ್ ಟೆಕ್, ಗೇಮಿಂಗ್‌ಗಾಗಿ 45 ಎಂಎಸ್ ಕಡಿಮೆ ಲೇಟೆನ್ಸಿ ಮೋಡ್ ಮತ್ತು ಡ್ಯುಯಲ್ ಡಿವೈಸ್ ಕನೆಕ್ಟಿವಿಟಿಯಂತಹ ಫೀಚರ್ಸ್‌ಗಳನ್ನು ನೀಡಲಿದೆ.

ಬೋಲ್ಟ್ Z40 ಅಲ್ಟ್ರಾ ಇಯರ್‌ಬಡ್ಸ್ ಮ್ಯೂಸಿಕ್ ಪ್ಲೇಬ್ಯಾಕ್, ಕರೆಗಳು, ವಾಲ್ಯೂಮ್ ಕಂಟ್ರೋಲ್, ವರ್ಚುವಲ್ ಅಸಿಸ್ಟೆಂಟ್‌ಗಳು ಮತ್ತು ಟಾಗಲ್ ಪಾರದರ್ಶಕ ಮೋಡ್ ಮತ್ತು EQ ಮೋಡ್‌ಗಳಿಗೆ ಸಹಾಯ ಮಾಡುವ ಟಚ್ ಕಂಟ್ರೋಲ್‌ಗಳನ್ನು ಹೊಂದಿದೆ. ಇದಲ್ಲದೆ ಈ ಇಯರ್‌ಬಡ್ಸ್ ANC ಇಲ್ಲದೆಯೇ ಬೃಹತ್ 100 ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ಕ್ಲೆಮ್ ಮಾಡಲಿದೆ.
ಬೆಲೆ ಮತ್ತು ಲಭ್ಯತೆ
Boult Z40 ಅಲ್ಟ್ರಾ ಇಯರ್‌ಬಡ್ಸ್ ಭಾರತೀಯ ಮಾರುಕಟ್ಟೆಯಲ್ಲಿ 1,999ರೂ ಬೆಲೆಯನ್ನು ಹೊಂದಿದೆ. ಇದು ಬೀಜ್, ಕಪ್ಪು ಮತ್ತು ಲೋಹೀಯ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಇದಲ್ಲದೆ Boult ಕಂಪೆನಿ ಕಳೆದ ವರ್ಷ ಭಾರತದಲ್ಲಿ ಬೌಲ್ಟ್ ಕ್ರಾಫ್ಟ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ವಾಚ್ 1.83 ಇಂಚಿನ ಆಲ್‌ವೇಸ್ ಆನ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240 x 284 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಅಷ್ಟೇ ಅಲ್ಲದೆ ಇದು ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ಸ್ಮಾರ್ಟ್‌ಫೋನ್ ಓಪನ್ ಮಾಡದೆಯೇ ಕರೆಯಲ್ಲಿ ತೊಡಗಿಕೊಳ್ಳಬಹುದು.
ಇದರೊಂದಿಗೆ ವಾಯ್ಸ್ ಅಸಿಸ್ಟೆಂಟ್ ಆಯ್ಕೆಯೂ ಸಹ ಇರುವುದರಿಂದ ನೀವು ಈ ವಾಚ್ ಅನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ಸ್ಮಾರ್ಟ್ ವಾಚ್ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು ರಕ್ತದೊತ್ತಡ ಟ್ರ್ಯಾಕಿಂಗ್ ಸೇರಿದಂತೆ ಅನೇಕ ಆರೋಗ್ಯ ಸಂಬಂಧಿ ವಿಷಯಗಳನ್ನು ಈ ವಾಚ್ ಮೇಲ್ವಿಚಾರಣೆ ಮಾಡಲಿದೆ.
ಈ ಬೌಲ್ಟ್ ಕ್ರಾಫ್ಟ್ 100+ ಸ್ಪೋರ್ಟ್ಸ್ ಮೋಡ್, ಸ್ಮಾರ್ಟ್ ನೋಟಿಫಿಕೇಶನ್ ಬೆಂಬಲ ಪಡೆದಿದ್ದು, ಈ ವಾಚ್ ಅನ್ನು ನೀವು ಯಾವುದೇ ಬಿಸಿಲು, ಬಿರುಗಾಳಿ ಅಥವಾ ಎಂತಹುದೇ ಪರಿಸ್ಥಿತಿಯಲ್ಲಿಯೂ ಬಳಕೆ ಮಾಡಬಹುದು. ಯಾಕೆಂದರೆ ಇದು IP68 ರೇಟಿಂಗ್ ಪಡೆದಿದೆ. ಹಾಗೆಯೇ ಬ್ಲೂಟೂತ್ ಆವೃತ್ತಿ 5.3 ಅನ್ನು ನೀಡಲಾಗಿದ್ದು, ಇದು ಸುಲಭ ಕನೆಕ್ಟಿವಿಟಿಗೆ ಅನುಕೂಲ ಮಾಡಿಕೊಡುತ್ತದೆ.


Click it and Unblock the Notifications








