ಚಾರ್ಜ್ ಹಾಕಿದ ಹೆಡ್ ಫೋನ್ ಬಳಸಿ ಮೃತಪಟ್ಟ ಬಾಲಕ

|

ಮೊಬೈಲ್ ಚಾರ್ಜ್ ಗೆ ಹಾಕಿ ಬಳಸಬೇಡಿ ಇದರಿಂದ ಅಪಾಯ ಹೆಚ್ಚು ಎಂಬುದು ಎಲ್ಲರಿಗೂ ತಿಳಿದಿದೆ.ಆದರೆ ಇದೀಗ ಹೆಡ್ ಫೋನ್ ಬಳಸಿದರೂ ಅಪಾಯ ಎಂದು ಹೇಳುವ ಸಮಯ ಬಂದಿದೆ. ಹೌದು ಮತ್ತೊಂದು ಗೆಜೆಟ್ ಸಂಬಂಧಿತ ಅಪಘಾತ ಸಂಭವಿಸಿದೆ.

ಚಾರ್ಜ್ ಹಾಕಿದ ಹೆಡ್ ಫೋನ್ ಬಳಸಿದ:

ಚಾರ್ಜ್ ಹಾಕಿದ ಹೆಡ್ ಫೋನ್ ಬಳಸಿದ:

ಚಾರ್ಜ್ ಗೆ ಹಾಕಿದ್ದ ಹೆಡ್ ಫೋನ್ ನ್ನು ಬಳಕೆ ಮಾಡಿ 16 ವರ್ಷದ ಹುಡುಗನೊಬ್ಬ ಮೃತಪಟ್ಟಿದ್ದಾನೆ. ಈ ಘಟನೆ ನಡೆದಿರೋದು ಮಲೇಷಿಯಾದಲ್ಲಿ. ನ್ಯೂ ಸ್ಟ್ರೈಟ್ ಟೈಮ್ಸ್ ವರದಿಯು ಹೇಳುವಂತೆ ರೇಂಬುವಿನ ಕಂಪುಂಗ್ ಗೇಯಿಂಗ್ ಬಾರು ಪೆಡಾಸ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೋಲೀಸರು ಅಧಿಕೃತವಾಗಿ ಈ ಘಟನೆಗೆ ಪ್ರಮುಖ ಕಾರಣ ಎಲೆಕ್ಟ್ರೋಕ್ಯೂಷನ್ ಅಂದರೆ ವಿದ್ಯುತ್ ಸಂಬಂಧಿತ ಅಪಘಾತ ಎಂದು ಪ್ರಕಟಿಸಿದ್ದಾರೆ.

ಈ ಹುಡುಗ ವಯರ್ ಲೆಸ್ ಬ್ಲೂಟೂತ್ ಹೆಡ್ ಫೋನ್ ನ್ನು ಬಳಕೆ ಮಾಡುತ್ತಿದ್ದು ಇದನ್ನು ಚಾರ್ಜ್ ಗೆ ಹಾಕಿಕೊಂಡೇ ಬಳಸಿದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೊದಲು ನೋಡಿದ ತಾಯಿ:

ಮೊದಲು ನೋಡಿದ ತಾಯಿ:

ತನ್ನ ಮಗ ಮೃತಪಟ್ಟಿರುವ ಬಗ್ಗೆ ಮೊದಲು ತಾಯಿ ರಾತ್ರಿ 12.45ರ ಸಮಯದಲ್ಲಿ ಗಮನಿಸುತ್ತಾಳೆ. ತಾಯಿ ತನ್ನ ಕೆಲಸಕ್ಕಾಗಿ ಬೆಳಿಗ್ಗೆ ಮನೆಯಿಂದ ಹೊರಡುವ ಸಂದರ್ಬದಲ್ಲಿ ಹುಡುಗ ಮನೆಯ ನೆಲದಲ್ಲಿ ಬಿದ್ದಿರುವುದನ್ನು ಗಮನಿಸುತ್ತಾಳೆ. ಆದರೆ ಆಕೆ ಮಗ ಮಲಗಿದ್ದಾನೆ ಎಂದು ಭಾವಿಸುತ್ತಾಳೆ. ನಂತರ ಆಕೆ ಮಧ್ಯಾಹ್ನ ಕೆಲಸ ಮುಗಿಸಿ ವಾಪಾಸ್ ಮನೆಗೆ ಬಂದ ಸಂದರ್ಬದಲ್ಲೂ ಕೂಡ ಆತ ಹಾಗೆಯೇ ಮಲಿಗಿರುತ್ತಾನೆ ಮತ್ತು ಯಾವುದೇ ಬದಲಾವಣೆಯೂ ಆಗಿರುವುದಿಲ್ಲ.

ದೇಹದಲ್ಲಿ ಗಾಯವಿಲ್ಲ, ಕಿವಿಯಲ್ಲಿ ರಕ್ತ ಸೋರಿಕೆ:

ದೇಹದಲ್ಲಿ ಗಾಯವಿಲ್ಲ, ಕಿವಿಯಲ್ಲಿ ರಕ್ತ ಸೋರಿಕೆ:

ಹುಡುಗನ ದೇಹದಲ್ಲಿ ಯಾವುದೇ ರೀತಿಯ ಗಾಯದ ಗುರುತುಗಳೂ ಕೂಡ ಇಲ್ಲ. ಗಲಾಟೆ ನಡೆದಿರುವ ಬಗ್ಗೆ ಸೂಚನೆಗಳಿಲ್ಲ. ಆದರೆ ಹುಡುಗನ ಎಡ ಕಿವಿಯಲ್ಲಿ ಸ್ವಲ್ಪ ರಕ್ತಸೋರಿಕೆಯಾಗಿರುವುದು ಕಂಡುಬಂದಿದೆಯಂತೆ.

ಮಲೇಷಿಯಾ ಸಚಿವರ ದುರ್ಮರಣ:

ಮಲೇಷಿಯಾ ಸಚಿವರ ದುರ್ಮರಣ:

ಈ ವರ್ಷದ ಆರಂಭದಲ್ಲಿ ಅಂದರೆ ಜೂನ್ ನಲ್ಲಿ ಮಲೇಶಿಯಾ ಮೂಲದ ಕರ್ಡಲ್ ಫಂಡ್ ಸಿಇಏ ಸಝ್ರಿನ್ ಹಾಸನ್ ಎಂಬುವವರು ತಮ್ಮ ಫೋನ್ ಚಾರ್ಜ್ ಆಗುತ್ತಿರುವಾಗ ಬಳಸಿದ ಕಾರಣಕ್ಕಾಗಿ ಮೃತಪಟ್ಟಿದ್ದರು. ಇವರು ಮಲೇಶಿಯಾದ ಹಣಕಾಸು ಸಚಿವ ಸ್ಥಾನವನ್ನೂ ಕೂಡ ಹೊಂದಿದ್ದರು. ಇವರು ಬ್ಲಾಕ್ ಬೆರ್ರಿ ಮತ್ತು ಹುವಾಯಿ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿತ್ತು. ಈ ಎರಡೂ ಫೋನ್ ಗಳು ಅವರ ಕೋಣೆಯಲ್ಲಿ ಚಾರ್ಜ್ ಗೆ ಹಾಕಲಾಗಿತ್ತು. ಈ ಸ್ಪೋಟವು ಅವರ ಹಾಸಿಗೆಯಲ್ಲಿ ಬೆಂಕಿಯನ್ನುಂಟು ಮಾಡಿತ್ತು. ಎರಡೂ ಫೋನ್ ಗಳು ಬೆಂಕಿಯಿಂದ ಸಂಪೂರ್ಣ ಹಾಳಾಗಿದ್ದ ಕಾರಣ ಯಾವ ಫೋನ್ ನಿಂದ ಈ ಸಮಸ್ಯೆ ಆಯಿತು ಎಂದು ಗುರುತಿಸುವುದು ಕಷ್ಟವಾಯಿತು.

ಓರಿಸ್ಸಾದ ದುರ್ಘಟನೆ:

ಓರಿಸ್ಸಾದ ದುರ್ಘಟನೆ:

ಭಾರತದ ಓರಿಸ್ಸಾದಲ್ಲಿ ನೋಕಿಯಾ 5233 ಫೋನ್ ನ್ನು ಚಾರ್ಜ್ ಗೆ ಹಾಕಿದಾಗ ಬಳಸಿ ಒಬ್ಬಳು ಹುಡುಗಿ ಮೃತಪಟ್ಟಿದ್ದಳು. ಇದು ಈ ವರ್ಷದ ಮಾರ್ಚ್ ನಲ್ಲಿ ನಡೆದಿತ್ತು.ಆಕೆಯ ಕಾಲು, ಎದೆ, ಕೈಗಳಿಗೆ ಬಹಳಷ್ಟು ಗಾಯಗಳಾಗಿತ್ತು ಮತ್ತು ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.

Best Mobiles in India

Read more about:
English summary
Boys dies after getting electrocuted by wearing headphones while charging

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X