Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 13 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 15 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೈಕ್ ಓಡಿಸುವಾಗಲೇ 'ವಿವೊ' ಮೊಬೈಲ್ ಸ್ಪೋಟ!..ಕೋಲಾರದ ಯುವಕ ಗಂಭೀರ!!
ಹೊಸದಾಗಿ ಖರೀದಿಸಿದ್ದ ಪೋನ್ ವಾಹನ ಚಲಿಸುವಾಗಲೇ ಸ್ಫೋಟಗೊಂಡು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರದ ಬಳಿಯ ಶ್ರೀನಿವಾಸಪುರದ ಗಂಗಾಧರ್ ಎಂಬುವವರು ಇತ್ತೀಚಿಗಷ್ಟೇ ಖರೀದಿಸಿದ್ದ ಸ್ಮಾರ್ಟ್‌ಫೋನ್ ಅವರ ಜೇಬಿನಲ್ಲೇ ಸ್ಪೋಟಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಬೈಕ್ ಶೋರೂಂನಲ್ಲಿ ಮೆಕ್ಯಾನಿಕ್ ಮತ್ತು ಸೆಕ್ಯುರಿಟಿ ಗಾರ್ಡಾಗಿ ಕೆಲಸ ಮಾಡಿಕೊಂಡಿರುವ ಗಂಗಾಧರ್ ಅವರು ಇತ್ತೀಚಿಗಷ್ಟೇ 15 ಸಾವಿರ ಕೊಟ್ಟು ಹೊಸದಾಗಿ ವಿವೊ ಕಂಪೆನಿಯ ಸ್ಮಾರ್ಟ್‌ಫೋನ್ ಖರೀದಿಸಿದ್ದರು ಎಂದು ಹೇಳಲಾಗಿದ್ದು, ಅವರು ವಾಹನ ಚಲಾಯಿಸುತ್ತಾ ಊರಿಗೆ ಹೋಗುವ ವೇಳೆ ಅಚಾನಕ್ ಆಗಿ ಮೊಬೈಲ್ ಸ್ಪೋಟಗೊಂಡಿದೆ ಎಂದು ತಿಳಿದುಬಂದಿದೆ.
ಮತದಾನಕ್ಕೆಂದು ಊರಿಗೆ ಹೋಗುತ್ತಿರುವಾಗ ಈ ರೀತಿಯ ಘಟನೆ ಸಂಭವಿಸಿತು. ಇದ್ದಕ್ಕಿದ್ದಂತೆ ಜೇಬಿನಲ್ಲೇ ನನ್ನ ಹೊಸ ವಿವೊ ಸ್ಮಾರ್ಟ್‌ಫೋನ್ ಸ್ಪೋಟಗೊಂಡಿತು. ಆ ಸಮಯದಲ್ಲಿ ನಾನು ಸಾಕಷ್ಟು ಯಾತನೆ ಅನುಭವಿಸುವಂತೆ ಆಯಿತು. ಸ್ಪೋಟದ ತೀವ್ರತೆಗೆ ಪ್ರಾಣ ಉಳಿದದ್ದು ನನ್ನ ಪುಣ್ಯ ಎಂದು ಇದೀಗ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗಾಧರ್ ಅವರು ಹೇಳಿದ್ದಾರೆ.
ಇನ್ನು ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡ ಗಂಗಾದರ್‌ಗೆ ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲೆ ಚಿಕಿತ್ಸೆ ಮುಂದುವರೆಸಿದ್ದು, ಕಾಲಿನ ಮೂಳೆಗೆ ಗಂಭೀರ ಗಾಯವಾದ ಕಾರಣ ಕನಿಷ್ಟ ಐದು ತಿಂಗಳ ವಿಶ್ರಾಂತಿ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ಡಾಕ್ಟರ್ ಹೇಳಿಕೆಯನ್ನು ಅಲ್ಲಿನ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಸ್ಫೋಟ ಸಂಬಂಧ ವಿವೊ ಕಂಪನಿ ಡೈರೆಕ್ಟರ್, ಮೊಬೈಲ್ ಡಿಸ್ಟ್ರಿಬ್ಯೂಟರ್ ಮತ್ತು ಮೊಬೈಲ್ ಮಾರಿದ ಹೊಸಕೋಟೆಯ ಸಂಗೀತಾ ಮೊಬೈಲ್ ಅಂಗಡಿಯ ಡೈರೆಕ್ಟರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಈ ತನಿಖೆಯಲ್ಲಿ ಮೊಬೈಲ್ ಕಂಪೆನಿಗಳ ನಿರ್ಲಕ್ಷವೇನಾದರೂ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೊಬೈಲ್ ಸ್ಪೋಟಕ್ಕೆ ಏನೆಲ್ಲಾ ಕಾರಣಗಳು ಇರಬಹುದು ಎಂಬ ಕಲ್ಪನೆ ಕೂಡ ನಿಮಗಿಲ್ಲ!
ಇತ್ತೀಚಿಗೆ ಮೊಬೈಲ್ ಸ್ಪೋಟವಾಗುತ್ತಿರುವ ವರದಿಗಳು ಹೆಚ್ಚಾದಂತೆ ಮೊಬೈಲ್ ಸ್ಫೋಟಕ್ಕೆ ಕಾರಣಗಳು ಯಾವುವು ಎಂದು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಇದರಲ್ಲಿ ಫ್ರಾನ್ಸ್ ವಿಜ್ಞಾನಿಗಳ ಗುಂಪೊಂದು ಸಂಶೋಧನೆ ನಡೆಸಿ ಮೊಬೈಲ್ ಸ್ಪೋಟಕ್ಕೆ ನಿಖರ ಕಾರಣಗಳು ಯಾವುವು ಎಂದು ಗುರುತಿಸಿದೆ. ನಿಮಗೆ ಗೊತ್ತಾ?, ಮೊಬೈಲ್ ಸ್ಪೋಟಕ್ಕೆ ಏನೆಲ್ಲಾ ಕಾರಣಗಳು ಇರಬಹುದು ಎಂಬ ಕಲ್ಪನೆ ಕೂಡ ನಿಮಗೆ ಇರಲಿಕ್ಕಿಲ್ಲ.!
ಹೌದು, ವಿಜ್ಞಾನಿಗಳು ಹೇಳುವಂತೆ ಮೊಬೈಲ್ ಸ್ಪೋಟವಾಗಲು ಪ್ರಮುಖ ಮೂರು ಕಾರಣಗಳಿವೆಯಂತೆ. ಅವರ ಸಂಶೋಧನೆ ಪ್ರಕಾರ, ಚಾರ್ಜರ್ ಸಮಸ್ಯೆಯೇ ಮೊಬೈಲ್ ಸ್ಪೋಟಕ್ಕೆ ಮೊದಲ ಕಾರಣವಾದರೆ, ಎರಡನೆಯದು ನೀವು ಬಳಸುವ ಮೊಬೈಲ್ ಬ್ಯಾಕ್ ಕವರ್ (ಪೌಚ್) ಅಂತೆ. ಹಾಗೆಯೇ, ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮತ್ತು ಅದರ ನಿರ್ವಹಣೆ ಮಾಡಬೇಕು ಎಂಬುದನ್ನು ತಿಳಿಯದಿರುವುದು ಸಹ ಮೊಬೈಲ್ ಸ್ಪೋಟಕ್ಕೆ ಕಾರಣವಂತೆ.
ಮೊಬೈಲ್ ಸುರಕ್ಷಿತವಾಗಿರಲಿ ಎಂದು ಬಳಸುವ ಬ್ಯಾಕ್ ಪೌಚ್ ನಿಮ್ಮ ಮೊಬೈಲ್ ಸಿಡಿಯಲು ಮುಖ್ಯ ಕಾರಣಗಳಲ್ಲಿ ಒಂದು ಎಂದಿರುವ ವಿಜ್ಞಾನಿಗಳು ಅದಕ್ಕೆ ಕಾರಣವನ್ನು ಸಹ ನೀಡಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್ ಸ್ಪೋಟಕ್ಕೆ ನಿಖರ ಕಾರಣಗಳು ಯಾವುವು?, ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಹೇಗೆ ನಿರ್ವಹಣೆ ಮಾಡಬೇಕು?, ಬ್ಯಾಕ್ ಪೌಚ್‌ನಿಂದ ನಿಮ್ಮ ಮೊಬೈಲ್ ಸಿಡಿಯಲು ಕಾರಣವೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬ್ಯಾಕ್ ಪೌಚ್‌ನಿಂದ ಮೊಬೈಲ್ ಸ್ಪೋಟ!
ಮೊಬೈಲ್ ಸುರಕ್ಷಿತವಾಗಿರಲಿ ಎಂದು ಬಳಸುವ ಬ್ಯಾಕ್ ಪೌಚ್ ನಿಮ್ಮ ಮೊಬೈಲ್ ಸಿಡಿಯಲು ಮುಖ್ಯ ಕಾರಣಗಳಲ್ಲಿ ಒಂದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮೊಬೈಲ್ ಅನ್ನು ಹೆಚ್ಚು ಬಳಸಿದಾಗ ಆ ಮೊಬೈಲ್ ಹೆಚ್ಚು ಬಿಸಿಯಾಗುತ್ತದೆ. ಮೊಬೈಲ್ ಬಿಸಿಯಾದಾಗ ಬ್ಯಾಕ್ ಪೌಚ್‌ಗಳು ಉಷ್ಣತೆಯನ್ನು ಹೊರಹಾಕಲು ಬಿಡುವುದಿಲ್ಲ. ಇದರ ಒತ್ತಡ ತಡೆಯಲಾರದೆ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತವೆ ಎಂದು ತಿಳಿಸಿದೆ.

ಚಾರ್ಜಿಂಗ್ ವೇಳೆ ಮೊಬೈಲ್ ಬಳಕೆ
ಚಾರ್ಜಿಂಗ್ ವೇಳೆ ಸ್ಮಾರ್ಟ್‌ಫೋನ್ ಬಳಕೆ ಕೂಡ ಮೊಬೈಲ್ ಫೋನ್‌ನ ಸ್ಫೋಟಕ್ಕೆ ಮತ್ತೊಂದು ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್‌ಫೋನಿನ ಮದರ್ ಬೋರ್ಡ್‌ಗೆ ಚಾರ್ಜಿಂಗ್ ಒತ್ತಡ ಹೆಚ್ಚು ಬೀಳುವುದು ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಹೇಳಿದ್ದಾರೆ. ಮೊಬೈಲ್ ಬ್ಯಾಟರಿ ಬಾಳಿಕೆಯನ್ನು ಅದರ ಸಾಫ್ಟ್‌ವೇರ್ ತಂತ್ರಜ್ಞಾನ ನಿಯಂತ್ರಿಸಿದರೂ ಸಹ ಅದರ ಒತ್ತಡವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಳಪೆ ಪವರ್ ಬ್ಯಾಂಕ್
ಕಳಪೆ ಗುಣಮಟ್ಟದ ಪವರ್‌ಬ್ಯಾಂಕ್ ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಾಗಿ, ಪವರ್ ಬ್ಯಾಂಕ್ ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಸ್ಮಾರ್ಟ್‌ಫೋನಿನ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಮತ್ತು ಯುಎಸ್‌ಬಿ ಕೇಬಲ್ ಬಗ್ಗೆ ಜಾಗೃತವಾಗಿರಿ.

ಪದೇ ಪದೇ ಮೊಬೈಲ್ ಚಾರ್ಜ್
ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ ಇದರಿಂದ ಕೂಡ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ (80%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿದ ನಂತರ ಬಳಕೆ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ಮಾರ್ಟ್‌ಫೋನಿನ ಬ್ಯಾಟರಿ ಸ್ಪೋಟವಾಗಬಹುದು ಎಂದಿದ್ದಾರೆ.

ಕಳಪೆ ಚಾರ್ಜರ್ ಬಗ್ಗೆ ಎಚ್ಚರ!
ಮೊಬೈಲ್ ಜೊತೆಗೆ ಬಂದಿದ್ದ ಚಾರ್ಜರ್ ಅನ್ನೇ ಯಾವಾಗಲೂ ಬಳಸಿ. ಚಾರ್ಜರ್ ಹಾಳಾದರೆ ಹಣ ಉಳಿಸುವ ಸಲುವಾಗಿ ಕಳಪೆ ಚಾರ್ಜರ್‌ಗಳನ್ನು ಖರೀದಿಸಿ ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್'ಗಳಿಂದ ನಿಮ್ಮ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್
ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಫಾಸ್ಟ್ ಚಾರ್ಜರ್ ಬೇಡ!
ಫಾಸ್ಟ್ ಚಾರ್ಜರ್‌ಗಳನ್ನು ಆ ತಂತ್ರಜ್ಞಾನ ಅಳವಡಿಕೆಯಾಗಿಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಬೇಡಿ. ಫಾಸ್ಟ್ ಚಾರ್ಜರ್‌ನಲ್ಲಿ ಹೈ ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. ಫಾಸ್ಟ್ ಚಾರ್ಜರ್ ತಂತ್ರಜ್ಞಾನವಿರುವ ಸ್ಮಾರ್ಟ್‌ಫೋನ್ ಆದರೂ ಯಾವಾಗಲೂ ತ್ವರಿತ ಚಾರ್ಜರ್‌ಗಳನ್ನು ಬಳಸುವುದು ಒಳ್ಳೆಯದಲ್ಲ. ಹಾಗಾಗಿ, ಇದು ನಿಮ್ಮ ನೆನಪಿನಲ್ಲಿರಲಿ.

ಅದರದ್ದೇ ಆದ ಚಾರ್ಜರ್
ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರ್'ನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್'ಗಳು ಇತರ ಚಾರ್ಜರ್'ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್‌ಗೆ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ. ಬಹುತೇಕ ಬೇರೆ ಯಾವ ಚಾರ್ಜರ್ ಕೂಡ ಸರಿಯಾಗಿ ಹೋಲಿಕೆಯಾಗುವುದಿಲ್ಲ. ಇನ್ನು ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳನ್ನು ಬಳಸದಿರುವುದು ಸಹ ನಿಮ್ಮ ಬ್ಯಾಟರಿ ನಿರ್ವಹಣೆಗೆ ಉತ್ತಮ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470