Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರೆಡ್ಮಿ ನೋಟ್ 8 ಚಿತ್ರ ಲೀಕ್: ಅಚ್ಚರಿ ನೀಡುವ ಸನಿಹದಲ್ಲಿ ಶಿಯೋಮಿ!
ಭಾರತದ ನಂ.1 ಮೊಬೈಲ್ ಕಂಪೆನಿ ಶಿಯೋಮಿಯ ಮುಂಬರುವ ಸ್ಮಾರ್ಟ್‌ಫೋನ್ 'ರೆಡ್‌ಮಿ ನೋಟ್ 8' ಆಗಿರಲಿದೆ ಎಂಬುದು ಇತ್ತೀಚಿನ ಖಚಿತ ಮೂಲಗಳಿಂದ ಸೋರಿಕೆಯಾಗಿದೆ. ಪ್ರಸಿದ್ಧ ಟಿಪ್‌ಸ್ಟರ್ ಸ್ಲ್ಯಾಶ್‌ಲೀಕ್ಸ್ ಇತ್ತೀಚಿನ ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್ ಚಿತ್ರವನ್ನು ಲೀಕ್ ಮಾಡಿದ್ದು, ಚಿತ್ರದಲ್ಲಿರುವಂತೆ ರೆಡ್‌ಮಿ ನೋಟ್ 8 ಸ್ಮಾರ್ಟ್‌ಪೋನ್ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ತೋರಿಸುತ್ತಿದೆ. ಆದರೆ, ರೆಡ್‌ಮಿ ನೋಟ್ 8 ಮುಂಬಾಗವು ಹೇಗಿದೆ ಎಂಬುದು ಈವರೆಗೂ ರಹಸ್ಯವಾಗಿ ಉಳಿದಿದೆ.

ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಶಿಯೋಮಿಯ ಉಪಾಧ್ಯಕ್ಷ ಮತ್ತು ರೆಡ್‌ಮಿಯ ಜನರಲ್ ಮ್ಯಾನೇಜರ್ 'ಲು ವೀಬಿಂಗ್' ಅವರು ಮುಂಬರುವ ರೆಡ್‌ಮಿ ನೋಟ್ 8 ತಯಾರಿಕೆಯಲ್ಲಿದೆ ಎಂದು ಸುಳಿವು ನೀಡಿದ್ದರು. ಚೀನಾದ ಜಾಲತಾಣ ವೀಬೊದಲ್ಲಿನ ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವ ವೇಳೆಯಲ್ಲಿ, ರೆಡ್‌ಮಿಯ ನೂತನ ಸಾಧನವು ಅಸ್ತಿತ್ವದಲ್ಲಿದೆ ಮತ್ತು ರೆಡ್ಮಿ ನೋಟ್ 7 ಸರಣಿಗಿಂತ ಅದು ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದು ಬಹಿರಂಗಪಡಿಸಿದ್ದಾರೆ ಎಂದು ಅಲ್ಲಿನ ಗಿಜ್‌ಚೀನಾ ವೆಬ್‌ಸೈಟ್ ವರದಿ ಮಾಡಿರುವುದು ವೈರಲ್ ಆಗಿತ್ತು.
ಇದೀಗ ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನಿನ ಚಿತ್ರವೊಂದು ಲೀಕ್ ಆಗಿರುವುದು ಶಿಯೋಮಿಯ ಮುಂಬರುವ ಸ್ಮಾರ್ಟ್‌ಫೋನಿನ ಬಗ್ಗೆ ಖಚಿತಪಡಿಸಿದಂತಿದೆ. ಸೋರಿಕೆಯಾಗಿರುವ ಚಿತ್ರದ ಪ್ರಕಾರ, ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್ ಬಾಗಿದ ಅಂಚುಗಳನ್ನು ಹೊಂದಿರಲಿದೆ. ಮೈಕ್ರೊಫೋನ್ ಹೋಲ್, ಸ್ಪೀಕರ್, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ನೊಂದಿಗೆ ಹೊಳಪುಳ್ಳ ಕಪ್ಪು ಫಿನಿಶ್ ಅನ್ನು ಸಹ ಹೊಂದಿದೆ. ಈ ಮೊದಲೇ 64ಎಂಪಿ ಕ್ಯಾಮೆರಾ ಇರಲಿದೆ ಎಂಬ ಸುದ್ದಿ ಕೂಡ ಹೊರಬಿದ್ದಿದೆ.

ರೆಡ್‌ಮಿ ನೋಟ್ 8 64ಎಂಪಿ ಕ್ಯಾಮೆರಾದಲ್ಲಿ ಸ್ಯಾಮ್‌ಸಂಗ್ ISOCELL ಬ್ರೈಟ್ GW1 ಸೆನ್ಸಾರ್ ಇರಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 64 ಎಂಪಿ ಕ್ಯಾಮೆರಾದೊಂದಿಗೆ ಇದೇ ಆಗಸ್ಟ್ ಎರಡನೇ ವಾರದಲ್ಲಿ ಬರಲಿದೆ ಎಂದು ನಾವು ನಿರೀಕ್ಷಿಸಬಹುದು. ಏಕೆಂದರೆ, 64 ಎಂಪಿ ಸ್ಯಾಮ್‌ಸಂಗ್ ಬ್ರೈಟ್ ಜಿಡಬ್ಲ್ಯೂ 1 ಸಂವೇದಕವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ ಅನ್ನು ರೆಡ್ಮಿ ಈಗಾಗಲೇ ಟೀಸರ್ ಬಿಡುಗಡೆ ಮಾಡಿರುವುದು ಇದಕ್ಕೆ ಸಾಕ್ಷಿ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. ಆದರೆ, ಈವರೆಗೂ ಶಿಯೋಮಿ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ರೆಡ್‌ಮಿ ನೋಟ್ 8 ಪೋನಿನ 64ಎಂಪಿ ಕ್ಯಾಮೆರಾವು ಅಲ್ಟ್ರಾ ಪಿಕ್ಸಲ್ ಮೋಡ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಫೋಟೊಗಳು ಹೈ ರೆಸಲ್ಯೂಶನ್‌ನಲ್ಲಿರುತ್ತವೆ. ಜೊತೆಗೆ ಅತ್ಯುತ್ತಮ ಝೂಮ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಫೋಟೊವನ್ನು ಸಾಕಷ್ಟು ಝೂಮ್ ಮಾಡಿದಾಗಲೂ, ಪಿಕ್ಸಲ್ ಗುಣಮಟ್ಟವು ಕಡಿಮೆಯಾಗುವುದಿಲ್ಲ ಎಂದು ಹೇಳಲಾಗಿದೆ.ಈ ವರ್ಷದಲ್ಲಿ ಈಗಾಗಲೇ ಎರಡು ಹೈ ಎಂಡ್ ಫೀಚರ್ಸ್ ಫೋನ್‌ಗಳನ್ನು ಪರಿಚಯಿಸಿರುವ ಶಿಯೋಮಿ, ಇದೀಗ ಮೂರನೇ ಅಚ್ಚರಿ ನೀಡುವ ಸನಿಹದಲ್ಲಿದೆ ಎನ್ನುತ್ತಿವೆ ಮಾಧ್ಯಮ ವರದಿಗಳು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470