ಕೇಬಲ್ ಮತ್ತು ಡಿಟಿಎಚ್ ನೀತಿ ದುರ್ಬಳಕೆಯಾಗುತ್ತಿದೆ ಎಂದ ಟ್ರಾಯ್‌!

|

ಟಿವಿ ಚಾನೆಲ್‌ಗಳ ಬೆಲೆ ನಿಗದಿಸುವಲ್ಲಿ ಕಳೆದ ವರ್ಷ ಜಾರಿಗೆ ತಂದ ಹೊಸ ನೀತಿಯನ್ನು ಪ್ರಸಾರಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ( ಟ್ರಾಯ್) ಅಭಿಪ್ರಾಯಪಟ್ಟಿದೆ. ಕೇಬಲ್ ಬಿಲ್ ಹೆಚ್ಚಳವಾಗಿರುವುದನ್ನು ತಡೆಯಲು ಟ್ರಾಯ್ ಚಿಂತಿಸಿದೆ ಎಂಬಸುದ್ದಿ ಹೊರಬಿದ್ದ ಕೆಲವೇ ದಿನಗಳ ನಂತರ ಟ್ರಾಯ್‌ ಹೊಸ ಹೇಳಿಕೆಯನ್ನು ನೀಡಿದ್ದು, ಶೀಘ್ರವೇ ಕೇಬಲ್ ಮತ್ತು ಡಿಟಿಎಚ್ ಬಿಲ್‌ ಕಡಿಮೆಯಾಗಬಹುದರ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.

ಕೇಬಲ್ ಮತ್ತು ಡಿಟಿಎಚ್ ನೀತಿ ದುರ್ಬಳಕೆಯಾಗುತ್ತಿದೆ ಎಂದ ಟ್ರಾಯ್‌!

ಹೌದು, ಹೊಸ ನೀತಿಯಲ್ಲಿ ತಮ್ಮ ಇಷ್ಟದ ಚಾನೆಲ್ಗಳನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಟ್ರಾಯ್ ಅವಕಾಶ ನೀಡಿತ್ತು. ಇದರಿಂದಾಗಿ ಟಿವಿ ಚಾನೆಲ್ ಬೆಲೆಗಳಲ್ಲಿ ಪಾರದರ್ಶಕತೆ ಉಂಟಾಗಿತ್ತು. ಇಡೀ ವಲಯದಲ್ಲಿ ವಹಿವಾಟು ಪ್ರಕ್ರಿಯೆ ಸರಾಗವಾಗಿರುವುದು ಮತ್ತು ವಿವಿಧ ಸಂಸ್ಥೆಗಳ ಮಧ್ಯೆ ವಿವಾದಗಳನ್ನು ಕಡಿಮೆ ಮಾಡಿರುವುದು ಸೇರಿದಂತೆ ಹಲವು ಅನುಕೂಲಗಳಾಗಿದ್ದವು. ಆದರೆ ಗ್ರಾಹಕರಿಗೆ ಟಿವಿ ಚಾನೆಲ್ಗಳನ್ನು ವೀಕ್ಷಿಸಲು ಆಯ್ಕೆಗಳ ಕೊರತೆ ಇದ್ದವು ಎಂದು ಟ್ರಾಯ್‌ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಜಿಯೋ ಫೈಬರ್‌ ಎಫೆಕ್ಟ್...ಏರ್‌ಟೆಲ್ 4ಜಿ ಹಾಟ್‌ಸ್ಪಾಟ್ ಮೇಲೆ ಬಂಪರ್ ಆಫರ್!ಜಿಯೋ ಫೈಬರ್‌ ಎಫೆಕ್ಟ್...ಏರ್‌ಟೆಲ್ 4ಜಿ ಹಾಟ್‌ಸ್ಪಾಟ್ ಮೇಲೆ ಬಂಪರ್ ಆಫರ್!

ಬೆಲೆ ಹಾಗೂ ಚಾನೆಲ್ಗಳ ಆಯ್ಕೆಗೆ ಸಂಬಂಧಿಸಿದಂತೆ ಎದುರಾದ ಸಮಸ್ಯೆಗಳು ಗಮನಕ್ಕೆ ಬಂದ ನಂತರದಲ್ಲಿ ಸಂಬಂಧಿತ ಎಲ್ಲ ಸಂಸ್ಥೆಗಳ ಅಭಿಪ್ರಾಯವನ್ನು ಟ್ರಾಯ್‌ ಕೇಳಿದೆ. ಈ ವರ್ಷದ ಏಪ್ರಿಲ್ 1, 2019 ರಿಂದ ಪರಿಚಯಿಸಿರುವ ಹೊಸ ಕೇಬಲ್ ನಿಯಮಗಳನ್ನು ಮತ್ತೊಮ್ಮೆ ಬದಲಾಯಿಸಲು ಅಥವಾ ಪ್ರಸ್ತುತ ರೀತಿಯಲ್ಲೇ ಕೆಲವೊಂದು ಮಾರ್ಪಾಡುಗಳನ್ನು ತರಲು ಟ್ರಾಯ್ ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಮಾಸಿಕ ಟಿವಿ ಬಿಲ್‌ಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ಕೆಲವು ಸಂಭಾವ್ಯ ಸಮಾಲೋಚನೆಯನ್ನು ನಡೆಸುತ್ತಿದೆ.

ಕೇಬಲ್ ಮತ್ತು ಡಿಟಿಎಚ್ ನೀತಿ ದುರ್ಬಳಕೆಯಾಗುತ್ತಿದೆ ಎಂದ ಟ್ರಾಯ್‌!

ಹೊಸ ನಿಯಂತ್ರಣ ಮತ್ತು ಬೆಲೆ ಚೌಕಟ್ಟಿನ ಹೊಸ ಅನುಷ್ಠಾನದ ನಂತರದ ಸಮಯದಲ್ಲಿ ಕೇಬಲ್ ಟಿವಿ ಆಪರೇಟರ್‌ಗಳಿಗೆ ತೊಂದರೆಗಳು ಹೆಚ್ಚಾಗುತ್ತಿರುವುದನ್ನು ಸಹ ಟ್ರಾಯ್ ಮನಗಂಡಿದೆ ಎನ್ನಲಾಗಿದೆ. ನೂತನ ನಿಯಮಗಳ ಪರಿಣಾಮದಿಂದಾಗಿ ಹೆಚ್ಚು ಕೇಬಲ್ ಟಿವಿಟಿವಿ ಆಪರೇಟರ್‌ಗಳ ಗಳಿಕೆ ಶೇ.45% ರಷ್ಟು ಕಡಿಮೆಯಾಗಿದ್ದು, ಚಂದಾದಾರಿಕೆ ಶುಲ್ಕವನ್ನು ಸಂಗ್ರಹಿಸುವ ಅಥವಾ ನಿರ್ವಹಣಾ ಕಾರ್ಯವನ್ನು ನಿರ್ವಹಿಸುವ ತಮ್ಮ ಕಾರ್ಮಿಕರಿಗೆ ಸಂಬಳ ಪಾವತಿಸಲು ಸಹ ನಿರ್ವಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ವಿಶ್ವದ ಟಾಪ್ ನಾಯಕರು ಬಳಸುವ ಮೊಬೈಲ್ ಯಾವುವು ಗೊತ್ತಾ?..ಮೋದಿಯವರ ಮೊಬೈಲ್ ಇದು!!ವಿಶ್ವದ ಟಾಪ್ ನಾಯಕರು ಬಳಸುವ ಮೊಬೈಲ್ ಯಾವುವು ಗೊತ್ತಾ?..ಮೋದಿಯವರ ಮೊಬೈಲ್ ಇದು!!

ನೂತನ ನಿಯಮಗಳು ಜಾರಿಗೆ ಬಂದ ನಂತರ ಹೆಚ್ಚಿನ ಗ್ರಾಹಕರು ತಾವು ಈ ಹಿಂದೆ ಹೆಚ್ಚು ಕಡಿಮೆ ಮಾಸಿಕ ಬಾಡಿಗೆಯನ್ನು ವೀಕ್ಷಿಸುತ್ತಿದ್ದ ಅದೇ ಚಾನಲ್‌ಗಳಿಗೆ ಈಗ ಹೆಚ್ಚಿನ ಹಣವನ್ನು ಪಾವತಿಸುತ್ತಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ವಿದ್ಯಮಾನವನ್ನು ವಿವಿಧ ಸಂಸ್ಥೆಗಳ ಸಮೀಕ್ಷೆಗಳು ಮತ್ತು ಅಧ್ಯಯನಗಳು ಈಗಾಗಲೇ ಗುರುತಿಸಿವೆ. ಹೊಸ ನಿಯಮಗಳಿಂದಾಗಿಯೇ ಒಟಿಟಿ (Over the top ) ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ವೀಡಿಯೊದ ಬಗ್ಗೆ ಚಂದಾದಾರರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಹೇಳಲಾಗಿದೆ.

Best Mobiles in India

English summary
The Telecom Regulatory Authority of India (TRAI) on Friday sought views of all stakeholders after problems connected with pricing and selection of channels came to the fore. to know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X