Home
ಸುದ್ದಿಜಾಲ

BSNL 5G: 4Gಗೆ ಬಾಯ್.. 5Gಗೆ ಹಾಯ್..! 83,993 ಟವರ್‌ ಪೂರ್ಣ.. ಮೊದಲು ಎಲ್ಲಿ, ಯಾವಾಗ?

ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಸಿಹಿಸುದ್ದಿ ನೀಡಲಿದೆ. 4Gಗೆ ಟಾಟಾ ಬಾಯ್ ಬಾಯ್ ಹೇಳಿ 5Gಗೆ ವೆಲ್‌ಕಮ್ ಮಾಡುವ ಸಮಯ ಹತ್ತಿರವಾಗುತ್ತಿದೆ. ಹೌದು, ಕಂಪನಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲು 5G ಸೇವೆಗಳನ್ನು (BSNL 5G) ಆರಂಭಿಸುವ ಸಾಧ್ಯತೆಯಿದೆ. ಬಳಿಕ ದೇಶದ ಉಳಿದ ಭಾಗಗಳಿಗೆ ವಿಸ್ತರಿಸಬಹುದು ಎಂದು ವರದಿಯಾಗಿದೆ. ಇತ್ತೀಚೆಗೆ, ಸಂವಹನ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಅವರು ಬಿಎಸ್‌ಎನ್‌ಎಲ್ (BSNL) ಮತ್ತು ಎಂಟಿಎನ್‌ಎಲ್ (MTNL) 5G ಸೌಲಭ್ಯ ಹೊಂದಿವೆ ಎಂದು ಹೇಳಿದ್ದರು. ಬನ್ನಿ, 4Gಯಿಂದ 5Gಗೆ ಅಪ್‌ಗ್ರೇಡ್ ಯಾವಾಗ? ಎನ್ನುವುದನ್ನು ತಿಳಿಯೋಣ.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಬಿಎಸ್‌ಎನ್‌ಎಲ್ ಆರ್ಥಿಕ ಚೇತರಿಕೆಯ ಹಾದಿಯಲ್ಲಿದೆ. ಟೆಲಿಕಾಂ ಕಂಪನಿಯು 2025ರ ಮಧ್ಯಭಾಗದಿಂದ 5G ಬಿಡುಗಡೆಯತ್ತ ಹೆಜ್ಜೆ ಹಾಕಲಿದೆ ಎಂದು ಹೇಳಿದ್ದರು. ಅದರಂತೆ, ದೂರಸಂಪರ್ಕ ಇಲಾಖೆಯು ಬಿಎಸ್‌ಎನ್‌ಎಲ್‌ಗೆ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) 61,000 ಕೋಟಿ ರೂ. ಮೌಲ್ಯದ 5G ಸ್ಪೆಕ್ಟ್ರಮ್ ಅನ್ನು ಹಂಚಿಕೆ ಮಾಡಿದೆ. ಈ ಆರ್ಥಿಕ ನೆರವು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯ ಅದೃಷ್ಟವನ್ನು ತಿರುಗಿಸಲು ಸಹಾಯ ಮಾಡುತ್ತದೆ. ಈ ಆರ್ಥಿಕ ಪ್ರೋತ್ಸಾಹವು ಬಿಎಸ್‌ಎನ್‌ಎಲ್ (BSNL) ಹೊಸ ಪೀಳಿಗೆಯ ದೂರಸಂಪರ್ಕ ಸೇವೆಗಳನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಲು ಸಹಾಯ ಮಾಡುತ್ತದೆ.

BSNL 5G: 4Gಗೆ ಬಾಯ್.. 5Gಗೆ ಹಾಯ್..! 83,993 ಟವರ್‌ ಪೂರ್ಣ.. ಮೊದಲು ಎಲ್ಲಿ?

ಇನ್ನು ಟಾಟಾ ಕಂಪನಿ ಬಿಎಸ್‌ಎನ್‌ಎಲ್ ಸಲಕರಣೆ ಒಪ್ಪಂದ ಮಾಡಿಕೊಂಡಿದೆ. ಟಾಟಾ ಗ್ರೂಪ್ ಕಂಪನಿಯಾದ ತೇಜಸ್ ನೆಟ್‌ವರ್ಕ್ಸ್ ಈ ಜವಾಬ್ದಾರಿ ತೆಗೆದುಕೊಂಡಿದೆ. ಇದು ಬಿಎಸ್‌ಎನ್‌ಎಲ್‌ಗಾಗಿ 4G/5G RAN ಉಪಕರಣಗಳು ಮತ್ತು IP/MPLS ರೂಟರ್‌ಗಳನ್ನು ಪೂರೈಸುವಲ್ಲಿ ಹೆಸರುವಾಸಿಯಾಗಿದೆ. ತೇಜಸ್ ನೆಟ್‌ವರ್ಕ್ಸ್ 2025 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 27,000 ತಾಣಗಳಿಗೆ ಉಪಕರಣಗಳನ್ನು ತಲುಪಿಸಿದೆ.

5G ನೆಟ್‌ವರ್ಕ್ ಸೇವೆ ಎಲ್ಲೆಲ್ಲಿ ಪ್ರಾರಂಭ?

ಇತ್ತೀಚಿನ 61,000 ಕೋಟಿ ರೂ. ಮೌಲ್ಯದ 5G ಸ್ಪೆಕ್ಟ್ರಮ್ ಹಂಚಿಕೆಯೊಂದಿಗೆ, ಸಾರ್ವಜನಿಕ ವಲಯದ ಉದ್ಯಮವಾದ ಬಿಎಸ್‌ಎನ್‌ಎಲ್ ಈಗ 5G ಗಾಗಿ 700 MHz ಮತ್ತು 3300 MHz (ಮಿಡ್-ಬ್ಯಾಂಡ್) ನಂತಹ ಪ್ರೀಮಿಯಂ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಹೊಂದಿದೆ. ವರದಿಯ ಪ್ರಕಾರ, ಬಿಎಸ್‌ಎನ್‌ಎಲ್ ತನ್ನ 5G ನೆಟ್‌ವರ್ಕ್ ಸೇವೆಗಳನ್ನು ಆಯ್ದ ನಗರಗಳಲ್ಲಿ ಪ್ರಾರಂಭಿಸಲು ಯೋಜಿಸುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5G ಸೇವೆ ಶುರು?

ಬಿಎಸ್ಎನ್ಎಲ್ ಮೊದಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5G ಸೇವೆಗಳನ್ನು ಪ್ರಾರಂಭಿಸಬಹುದು ಎಂದು ವರದಿಯಾಗಿದೆ. ಬಳಿಕ ದೇಶದ ಉಳಿದ ಭಾಗಗಳಿಗೆ ವಿಸ್ತರಿಸಬಹುದು. ಇತ್ತೀಚೆಗೆ, ಸಂವಹನ ಖಾತೆ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಅವರು ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ 5G ಸೌಲಭ್ಯವನ್ನು ಹೊಂದಿವೆಯೇ ಎಂಬುದರ ಬಗ್ಗೆ ಮಾಹಿತಿ ನೀಡಿದ್ದರು. ಸರ್ಕಾರವು 5G ಸೇವೆಗಳನ್ನು ಒದಗಿಸಲು, ಬಿಎಸ್‌ಎನ್‌ಎಲ್ ಕಂಪನಿಗಾಗಿ 700 MHz, 3300 MHz ಮತ್ತು 26 GHz ನಲ್ಲಿ ಸ್ಪೆಕ್ಟ್ರಮ್ ಅನ್ನು ಕಾಯ್ದಿರಿಸಿದೆ ಎಂದು ಮಾಹಿತಿ ನೀಡಿದ್ದರು.

BSNL 5G: 4Gಗೆ ಬಾಯ್.. 5Gಗೆ ಹಾಯ್..! 83,993 ಟವರ್‌ ಪೂರ್ಣ.. ಮೊದಲು ಎಲ್ಲಿ?

ದೆಹಲಿ ಮತ್ತು ಮುಂಬೈ ಸೇರಿದಂತೆ ಭಾರತದಾದ್ಯಂತ ವಿಸ್ತರಣೆಗಾಗಿ ಬಿಎಸ್ಎನ್ಎಲ್ ಒಂದು ಲಕ್ಷ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4G ಸೈಟ್‌ಗಳಿಗೆ ಖರೀದಿ ಆದೇಶವನ್ನು ನೀಡಿದೆ. 4G ಸಾಧನಗಳ ಪೂರೈಕೆ ಸೆಪ್ಟೆಂಬರ್ 2023 ರಿಂದ ಆರಂಭ ಆಗಿದೆ. ಮಾರ್ಚ್ 8ರ ವೇಳೆಗೆ ಒಟ್ಟು 83,993 4G ಸೈಟ್‌ಗಳನ್ನು ಸ್ಥಾಪಿಸಲಾಗಿದೆ. 74,521 ಸೈಟ್‌ಗಳು ನಿರ್ಮಾಣ ಹಂತದಲ್ಲಿವೆ ಎಂದು ತಿಳಿದುಬಂದಿದೆ. ಈ ಸಾಧನಗಳನ್ನು 5Gಗೆ ಅಪ್‌ಗ್ರೇಡ್ ಮಾಡಬಹುದು ಎಂದು ವರದಿಯಾಗಿದೆ.

6,000 ಕೋಟಿ ಹೆಚ್ಚುವರಿ ಅನುದಾನ

ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟವು 4G ವಿಸ್ತರಣೆಗಾಗಿ ಈ ವರ್ಷದಲ್ಲಿ ಬಿಎಸ್‌ಎನ್‌ಎಲ್‌ಗೆ 6,000 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಘೋಷಿಸಿದೆ. ಈ ಹಣವನ್ನು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್‌ನ ಯೋಜಿತ ಬಂಡವಾಳ ವೆಚ್ಚ ಕೊರತೆಯನ್ನು ಪೂರೈಸಲು ಬಳಸಲಾಗುತ್ತದೆ. 2019 ರಿಂದ ಮೂರು ಪುನರುಜ್ಜೀವನ ಪ್ಯಾಕೇಜ್‌ಗಳ ಭಾಗವಾಗಿ ಸರ್ಕಾರವು ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನಲ್ಲಿ 3.22 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ

Best Mobiles in India

English summary
BSNL 5G: Bharat Sanchar Nigam Limited plans 5G launch in Delhi by mid 2025: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+