ಜಿಯೋದಲ್ಲಿಯೂ ಇಲ್ಲ: ಸಿಮ್ ಕಾರ್ಡ್ ಇಲ್ಲದೇ ಕರೆ ಮಾಡುವ ಅವಕಾಶ ಕೊಟ್ಟ BSNL.....!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವಷ್ಟು ಬದಲಾವಣೆ ಮತ್ತು ಅಭಿವೃದ್ದಿ ಇನ್ಯಾವುದೇ ವಲಯದಲ್ಲಿ ಕಾಣಲು ಸಾದ್ಯವಾಗಿಲ್ಲ. ಇದೇ ಮಾದರಿಯಲ್ಲಿ ಟೆಲಿಕಾಂ ವಲಯದಲ್ಲಿ ಹೊಸದೊಂದು ಸೇವೆಯೂ ಆರಂಭವಾಗಿದ್ದು, ಸರ್ಕಾರಿ ಸ್ವಾಮ್ಯದ BSNL ಮೊದಲ ಬಾರಿಗೆ ಹೊಸದೊಂದು ಸೇವೆಗೆ ಚಾಲನೆ ನೀಡಿದ್ದು, ಬಳಕೆದಾರರಿಗೆ ಖಾಸಗಿ ಟೆಲಿಕಾಂ ಕಂಪನಿಗಳ ನೀಡಲಾಗದಂತಹ ಸೇವೆಯನ್ನುತಮ್ಮ ಬಳಕೆದಾರರಿಗೆ ನೀಡುತ್ತಿದೆ.

ಜಿಯೋದಲ್ಲಿಯೂ ಇಲ್ಲ: ಸಿಮ್ ಕಾರ್ಡ್ ಇಲ್ಲದೇ ಕರೆ ಮಾಡುವ ಅವಕಾಶ ಕೊಟ್ಟ BSNL.....!

BSNL ದೇಶದಲ್ಲಿ ಮೊದಲ ಬಾರಿಗೆ ಇಂಟರ್‌ನೆಟ್‌ ಟೆಲಿಫೋನಿ ಸೇವೆಯನ್ನು ಆರಂಭಿಸಿದ್ದು, ಇದಕ್ಕಾಗಿ ಬಳಕೆದಾರರಿಗೆ 'ವಿಂಗ್ಸ್‌' ಎನ್ನುವ ಆಪ್ ವೊಂದನ್ನು ಲಾಂಚ್ ಮಾಡಿದ್ದು, ಇದರ ಬಳಕೆಯ ಸಹಾಯದ BSNL ಬಳಕೆದಾರರು ದೇಶದ ಯಾವುದೇ ನಂಬರ್‌ಗೆ ಕರೆ ಮಾಡಬಹುದಾಗಿದೆ. ಇದು ಹೊಸ ಮಾದರಿಯ ಸೇವೆಯಾಗಿದ್ದು, ಹೊಸ ರೀತಯ ಅನುಭವನ್ನು ನೀಡಲಿದೆ.

ಮೊದಲಿಗೆ BSNL:

ಮೊದಲಿಗೆ BSNL:

ಹೊಸ ಸೇವೆಗೆ BSNL ಮೊದಲ ಬಾರಿ ದೇಶದಲ್ಲಿ ಚಾಲನೆ ನೀಡಿದೆ. ದೇಶದ ಬೇರೆ ಯಾವುದೇ ದೇಶದ ಟೆಲಿಕಾಂ ವಲಯದಲ್ಲಿ ಕಾಣದ ಸ್ಪರ್ಧೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ BSNL ತನ್ನ ಸ್ಪರ್ಧೆಯನ್ನು ಉಳಿಸಿಕೊಳ್ಳಲುವ ಸಲುವಾಗಿ ಈ ಹೊಸ ಮಾದರಿಯ ಟೆಲಿಫೋನಿಯ ಸೇವೆಯನ್ನು ಆರಂಭಿಸಿದೆ. ಇದು ಖಾಸಗಿ ಟೆಲಿಕಾಂ ಕಂಪನಿಗಳಿಗೆ ನುಂಗಲಾದ ತುಪ್ಪವಾಗಿದೆ.

ಸಿಮ್ ಬೇಕಾಗಿಲ್ಲ:

ಸಿಮ್ ಬೇಕಾಗಿಲ್ಲ:

BSNL ಲಾಂಚ್ ಮಾಡಿರುವ ಟೆಲಿಫೋನಿ ಸೇವೆಯನ್ನು ಪಡೆದುಕೊಳ್ಳುವ ಸಲುವಾಗಿ ಸಿಮ್ ಬೇಕಾಗಿಲ್ಲ ಎನ್ನಲಾಗಿದ್ದು, ಇದರ ಬದಲಾಗಿ ಆಪ್ ಮೂಲವೇ ಸೇವೆಯನ್ನು ಪಡೆದು, ಸಾಮಾನ್ಯ ಫೋನ್ ನಂಬರ್ ಗೆ ಸಹ ಕರೆ ಮಾಡುವ ಅವಕಾಶವನ್ನು ಪಡೆಯಬಹುದಾಗಿದೆ. ಇದು ಒಂದು ಮಾದರಿಯಲ್ಲಿ ಹಲವು ಮಂದಿಗೆ ವರದಾನವಾಗಲಿದೆ.

ಆಪ್ ಕರೆಗಳು:

ಆಪ್ ಕರೆಗಳು:

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಆಪ್ ಗಳು ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ವಾಟ್ಸಾಪ್‌, ಫೇಸ್‌ಬುಕ್‌ ಮೆಸೆಂಜರ್‌ನಂಥ ಆ್ಯಪ್‌ಗಳ ಮೂಲಕವೂ ಕರೆ ಮಾಡಬಹುದು. ಇದೇ ಮಾದರಿಯಲ್ಲಿ ನೀವು BSNL ಟೆಲಿಫೋನಿ ಸೇವೆಯನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಮೊಬೈಲ್ ನಂಬರ್ ಗೆ ಕರೆ:

ಮೊಬೈಲ್ ನಂಬರ್ ಗೆ ಕರೆ:

ಈ ಮೇಲಿನ ಆಪ್ ಗಳಲ್ಲಿ ಕೇಲವ ಆಪ್ ಹೊಂದಿದವರಿಗೆ ಮಾತ್ರವೇ ಕರೆ ಮಾಡಲು ಸಾಧ್ಯವಾಗಿತ್ತು. ಆದರೆ ಟೆಲಿಫೋನಿ ಸೇವೆಯಲ್ಲಿ ಆಪ್ ಮೂಲಕ ಮೊಬೈಲ್ ನಂಬರ್ ಗಳಿಗೂ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲು ಎನ್ನಲಾಗಿದೆ. BSNL ಗ್ರಾಹಕರು ನೂತನ ಇಂಟರ್‌ನೆಟ್‌ ಟೆಲಿಫೋನಿ ಸೇವೆ ಮೂಲಕ ವಿಂಗ್ಸ್‌ ಆ್ಯಪ್‌ ಬಳಸಿ, ದೇಶದ ಯಾವುದೇ ಟೆಲಿಫೋನ್‌ಗೆ ಬೇಕಾದರೂ ಕರೆ ಮಾಡಬಹುದು.

ಜುಲೈ 25 ರಿಂದ ಆರಂಭ:

ಜುಲೈ 25 ರಿಂದ ಆರಂಭ:

BSNL ಗ್ರಾಹಕರು ನೂತನ ಇಂಟರ್‌ನೆಟ್‌ ಟೆಲಿಫೋನಿ ಸೇವೆ ಮೂಲಕ ವಿಂಗ್ಸ್‌ ಆ್ಯಪ್‌ ಬಳಸಿ ಕರೆಮಾಡುವ ಸೇವೆಯೂ ಜು.25ರಿಂದ ಶುರುವಾಗಲಿದೆ. ಇದಲ್ಲದೇ ಈ ಹೊಸ ಸೇವೆಗೆ ನೋಂದಣಿಯು ಈ ವಾರ ಆರಂಭಗೊಳ್ಳುತ್ತದೆ. ಸಾಮಾನ್ಯ ಕರೆಗಳಿಗೆ ಅನ್ವಯವಾಗುವ ದರಗಳೆ BSNL ಇಂಟರ್‌ನೆಟ್‌ ಟೆಲಿಫೋನಿ ಸೇವೆಗೂ ಅನ್ವಯವಾಗಲಿದೆ.

Best Mobiles in India

English summary
bsnl announces internettele phony service. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X