Home
ಸುದ್ದಿಜಾಲ

35 ಸಾವಿರ BSNL ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ!

ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಪೈಪೋಟಿ ನಿಡಲಾಗದೆ ಸೊರಗಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ ಭಾರತ್​ ಸಂಚಾರ್ ನಿಗಮ್(BSNL)ನ 35 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸುಮಾರು 35 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ಕೈಬಿಡಲು ಬಿಎಸ್‌ಎನ್‌ಎಲ್‌ಗೆ ಸಲಹೆ ನೀಡಲಾಗಿದ್ದು, ಸಾಕಷ್ಟು ಉದ್ಯೋಗಿಗಳ ಕಡಿತದಿಂದ ಸಂಸ್ಥೆಯನ್ನು ಉಳಿಸುವುದು ಅನಿವಾರ್ಯ ಎಂದು ಹೇಳಲಾಗಿದೆ.

ಹೌದು, ಖಾಸಗಿ ಟೆಲಿಕಾಂ ಕಂಪೆನಿಗಳ ತೀವ್ರ ಪೈಪೋಟಿಯಿಂದ ಬಿಎಸ್​ಎನ್​ಎಲ್​ ನಷ್ಟದಲ್ಲಿದ್ದು, ಈ ಹಿನ್ನಲೆಯಲ್ಲಿ ಖರ್ಚು ವೆಚ್ಚವನ್ನು ಕಡಿತಗೊಳಿಸಲು ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ ಎನ್ನಲಾಗಿದೆ. ಸದ್ಯ ದೇಶದಲ್ಲಿ ಸುಮಾರು ಒಟ್ಟು 1,74,000 ಬಿಎಸ್​ಎನ್​ಎಲ್​ ಉದ್ಯೋಗಿಗಳಿದ್ದು, ಅವರ ವೇತನ ಮತ್ತು ಕಂಪೆನಿಯ ಖರ್ಚು ವೆಚ್ಚವನ್ನು ಭರಿಸುವುದು ಹೊರೆಯಾಗುತ್ತಿರುವುದರಿಂದ ಇಂತಹ ತೀರ್ಮಾನಕ್ಕೆ ಬರಲಾಗುತ್ತಿದೆ.

35 ಸಾವಿರ BSNL ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ!

ದೇಶದಲ್ಲಿ ಟೆಲಿಕಾಂ ಸೇವೆ ನೀಡಲು ಬಿಎಸ್​ಎನ್​ಎಲ್​ ವಾರ್ಷಿಕವಾಗಿ 15 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಆದರೆ, ಕಳೆದ ವರ್ಷದ ತ್ರೈಮಾಸಿಕ ಲೆಕ್ಕದಲ್ಲಿ ಸಂಸ್ಥೆಯು 1925.33 ಕೋಟಿ ನಷ್ಟ ಅನುಭವಿಸಿದೆ. ಹಾಗೆಯೇ ಸಂಸ್ಥೆಯ ಆದಾಯ ಶೇ.15 ರಷ್ಟು ಕುಂಠಿತವಾಗಿರುವ ಕಾರಣ ಉದ್ಯೋಗಿಗಳನ್ನು ಕೈ ಬಿಡುವ ನಿರ್ಧಾರಕ್ಕೆ ಬರಲಾಗುತ್ತಿದೆ ಎಂದು ಹೇಳಲಾಗಿದೆ. ಇದರಿಂದ ಸ್ವಲ್ಪ ವೆಚ್ಚ ಕಡಿತವಾಗಬಹುದು ಎಂದು ಸಂಸ್ಥೆ ಅಂದಾಜಿಸಲಾಗಿದೆ.

ಬಿಎಸ್‌ಎನ್‌ಎಲ್‌ಗೆ ಹೋಲಿಸಿದರೆ ಖಾಸಾಗಿ ಕಂಪೆನಿಗಳು ಅತ್ಯಂತ ಕಡಿಮೆ ನೌಕರರನ್ನು ಹೊಂದಿವೆ. ಖಾಸಾಗಿ ಟೆಲಿಕಾಂ ಕಂಪೆನಿಯೊಂದನ್ನು ಕೇವಲ 20 ರಿಂದ 30 ಸಾವಿರ ನೌಕರರು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಅವುಗಳಿಗೆ ಹೋಲಿಸಿದರೆ ಬಿಎಸ್​ಎನ್​ಎಲ್ 1,74,000 ಉದ್ಯೋಗಿಗಳನ್ನು ಹೊಂದಿರುವುದು ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಐಐಎಂ ಅಹ್ಮದಾಬಾದ್ ತಜ್ಞರು ನೀಡಿದ ವರದಿಯಲ್ಲಿ ಸುಮಾರು 35 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ಕೈಬಿಡಲು ಸಲಹೆ ನೀಡಲಾಗಿದೆ.

35 ಸಾವಿರ BSNL ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ!

ಈಗಾಗಲೇ ಬಿಎಸ್​ಎನ್​ಎಲ್ ಉದ್ಯೋಗಿಗಳ ಪ್ರವಾಸ ಭತ್ಯೆ, ವೈದ್ಯಕೀಯ ಭತ್ಯೆ ಕಡಿತಗೊಳಿಸಲಾಗಿದ್ದು, ಅದರೊಂದಿಗೆ ಎಲ್​ಟಿಸಿ, ವಿದ್ಯುತ್ ಹಾಗೂ ಆಡಳಿತಾತ್ಮಕ ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಲಾಗಿದ್ದು, ಸರ್ಕಾರಿ ಸೌಮ್ಯದ ದೂರ ಸಂಪರ್ಕ ಇಲಾಖೆ ಅಸ್ತಿತ್ವದಲ್ಲಿರಬೇಕಿದ್ದರೆ, ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಬಿಎಸ್​ಎನ್​ಎಲ್​ ನಿರ್ದೇಶಕ ಅನುಪಮ್ ಶ್ರೀವಾಸ್ತವ್​ ಅವರು ತಿಳಿಸಿದ್ದಾರೆ.

Best Mobiles in India

English summary
BSNL Asked To Remove 35,000 Employees; Freezes Employees Benefits To Save Rs 5000 Crore.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+