ದೀಪಾವಳಿ ಹಬ್ಬದ ಪ್ರಯುಕ್ತ BSNL ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆ ಆಫರ್!

|

ಸರ್ಕಾರಿ ಟೆಲಿಕಾಂ ಆಪರೇಟರ್ ಬಿಎಸ್ಎನ್ಎಲ್ ತನ್ನ ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ದೀಪಾವಳಿ ಆಫರ್ ಅನ್ನು ಪ್ರಕಟಿಸಿದೆ. ದೀಪಗಳ ಹಬ್ಬದ ಕಾರಣದಿಂದಾಗಿ ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ನಿರ್ದಿಷ್ಟ ಸಮಯದವರೆಗೆ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಒದಗಿಸುತ್ತಿದ್ದು, ಹಬ್ಬದ ಪ್ರಯುಕ್ತ ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಗ್ರಾಹಕರು 24 ಗಂಟೆಗಳ ಕಾಲ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಬಿಎಸ್ಎನ್ಎಲ್

ಹೌದು, ಬಿಎಸ್ಎನ್ಎಲ್ ಗ್ರಾಹಕರು ದೇಶಾದ್ಯಂತ ಯಾವುದೇ ಮೊಬೈಲ್ ಅಥವಾ ಲ್ಯಾಂಡ್‌ಲೈನ್ ಸಂಖ್ಯೆಗೆ ಅನಿಯಮಿತ ಉಚಿತ ಧ್ವನಿ ಕರೆಗಳನ್ನು ಮಾಡಲು ಆಫರ್ ನೀಡಲಾಗಿದ್ದು, ಅಕ್ಟೋಬರ್ 27 ಮತ್ತು ಅಕ್ಟೋಬರ್ 28 ರ ನಡುವೆ ಬಿಎಸ್ಎನ್ಎಲ್ ಗ್ರಾಹಕರು ದೇಶಾದ್ಯಂತ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ದೇಶದ ಎಲ್ಲಾ ಬಿಎಸ್ಎನ್ಎಲ್ ಗ್ರಾಹಕರು ಕೂಡ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಆನಂದಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

ಲ್ಯಾಂಡ್‌ಲೈನ್

ಇನ್ನು ಇದರ ಜತೆಯಲ್ಲಿಯೇ ಬಿಎಸ್ಎನ್ಎಲ್ ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುವ ದೀಪಾವಳಿ ಪ್ರಸ್ತಾಪವು ಅದರ ಕೆಲವು ಪ್ರಿಪೇಯ್ಡ್ ಯೋಜನೆಗಳ ಪರಿಷ್ಕರಣೆಯ ನಂತರ ಬರುತ್ತದೆ. ಬಿಎಸ್‌ಎನ್‌ಎಲ್‌ನ ಜನಪ್ರಿಯ ಪ್ರೀಪೇಡ್ ಆಫರ್‌ಗಳಾದ 429ರೂ. 485 ರೂ. ಮತ್ತು 666 ರೂ.ಗಳ ಪ್ರಿಪೇಯ್ಡ್ ಯೋಜನೆಗಳು ಇದೀಗ ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಪಡೆದುಕೊಂಡಿವೆ ಎಂದು ಹೇಳುವ ಮೂಲಕ ಸಂಸ್ಥೆ ಸಿಹಿಸುದ್ದಿ ನೀಡಿದೆ.

ಎಂಟಿಎನ್ಎಲ್

ಇತ್ತೀಚೆಗೆ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ವಿಲೀನಗೊಂಡಿವೆ ಬಿಎಸ್ಎನ್ಎಲ್-ಎಂಟಿಎನ್ಎಲ್ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಕಂಪೆನಿಗಳ ಪುನರುಜ್ಜೀವನಕ್ಕಾಗಿ 15,000 ಕೋಟಿ ರೂ.ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇದಲ್ಲದೆ, ದೇಶಾದ್ಯಂತ ನೆಟ್‌ವರ್ಕ್ ವ್ಯಾಪ್ತಿಯನ್ನು ಹೆಚ್ಚಿಸುವ ಪ್ರಯತ್ನವಾಗಿ ನವೆಂಬರ್‌ನಲ್ಲಿ 50,000 4ಜಿ ಸೈಟ್‌ಗಳನ್ನು ಬಿಎಸ್‌ಎನ್‌ಎಲ್‌ ಸಂಸ್ಥೆ ಪಡೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ಟೆಲಿಕಾಂ

ನಷ್ಟದ ಹಾದಿ ಹಿಡಿರಿರುವ ಟೆಲಿಕಾಂ ಕಂಪೆನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್ಎಲ್) ಸಂಸ್ಥೆಗಳನ್ನುಯ ಮುಚ್ಚಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಟೆಲಿಕಾಂ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ನಾಲ್ಕು ಹಂತದ ಯೋಜನೆಯನ್ನು ಕೇಂದ್ರ ಸರ್ಕಾರ ಕಳೆದ ಮಂಗಳವಾರ ಪ್ರಕಟಿಸಿದೆ. ಇದಕ್ಕಾಗಿ ಸಾವರಿನ್ ಬಾಂಡ್‌ಗಳ ಮೂಲಕ 15,000 ಕೋಟಿ ರೂ ಸಂಗ್ರಹಿಸುವ ಗುರಿ ಇದೆ.

Best Mobiles in India

English summary
BSNL, the state-run telecom operator has announced its Diwali offer for its landline and broadband customers. Well, the telco will provide unlimited voice calling benefits. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X