ಜಿಯೋ, ಏರ್‌ಟೆಲ್‌ಗೆ ಶಾಕ್!..ದೇಶದಲ್ಲಿ ಮೊದಲು 5G ತರಲು BSNL ಸಜ್ಜು!!
ಇಲ್ಲಿಯವರೆಗೂ ಸಾಂಪ್ರದಾಯಿಕತೆಗೆ ಅಂಟಿಕೊಂಡಿದ್ದ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಇದೀಗ ಬದಲಾಗಲು ಹೊರಟಿದೆ. ಖಾಸಾಗಿ ಕಂಪೆನಿಗಳ ಆರ್ಭಟದಲ್ಲಿ 4G ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಒಂದು ದಶಕದ ಕಾಲ ಹಿಂದುಳಿದಿದ್ದ ಬಿಎಸ್‌ಎನ್‌ಎಲ್, ಸಂಸ್ಥೆ ಇದೀಗ ಚೀನಾ ಮೂಲದ ಝಡ್‍ಟಿಇ (ZTE) ಜತೆಗೆ ಕೈಜೋಡಿಸಿ ಐದನೇ ತಲೆಮಾರಿನ (5G) ನೆಟ್‌ವರ್ಕ್ ತರಲು ಸಿದ್ಧತೆ ನಡೆಸಿದೆ.
ಹೌದು, ಜಿಯೋ, ಏರ್‌ಟೆಲ್ ಶೀಘ್ರದಲ್ಲೇ 5ಜಿ ಸೇವೆಗಳನ್ನು ಜಾಗತಿಕವಾಗಿ ಜಾರಿಗೆ ತರುವುದಾಗಿ ಘೋಷಿಸಿಕೊಂಡ ನಂತರ ಬಿಎಸ್ಎನ್ಎಲ್ ಗುಡುಗಿದೆ. ಖಾಸಾಗಿ ಟೆಲಿಕಾಂ ಕಂಪೆನಿಗಳಿಗಿಂತ ಮೊದಲೇ 5ಜಿ ನೆಟ್ವರ್ಕ್ಗಳನ್ನು ದೇಶದೆಲ್ಲೆಡೆ ಲಾಂಚ್ ಮಾಡುವುದಾಗಿ ಬಿಎಸ್ಎನ್ಎಲ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕರಾದ ಅನಿಲ್ ಜೈನ್ ಅವರು ಹೇಳಿದ ಕೆಲವೇ ದಿನಗಳಲ್ಲಿ ಬಿಎಸ್‌ಎನ್‌ಎಲ್ ಮತ್ತೊಂದು ಸಿಹಿಸುದ್ದಿ ನೀಡಿದೆ.

ಈಗಾಗಲೆ ಬಿಎಸ್‍ಎನ್‍ಎಲ್ ಮತ್ತು ಝಡ್‌ಟಿಇ ಕಂಪೆನಿಗಳು 5G ವೆರ್‌ಲೆಸ್ ತಂತ್ರಜ್ಞಾನ ಸಂಶೋಧನೆ ಮತ್ತು ಜ್ಞಾನ ಹಂಚಿಕೆ ವಿಚಾರವಾಗಿ ಒಪ್ಪಂದ ಪತ್ರಕ್ಕೆ ಸಹಿಹಾಕಿವೆ. 5G ತರುವ ಕಾರ್ಯದಲ್ಲಿ ನಮ್ಮ ಜಾಗ್ರತೆಯಲ್ಲಿ ನಾವಿದ್ದೇವೆ ಎಂಬರ್ಥದಲ್ಲಿ BSNL ಮುಖ್ಯಸ್ಥ ಅನುಪಮ್ ಶ್ರೀವಾಸ್ತವ್ ಅವರು ಹೇಳಿದ್ದಾರೆ. ಹಾಗಾದರೆ, ಬಿಎಸ್‌ಎನ್‌ಎಲ್ ಇಟ್ಟಿರುವ 5G ನಡೆಯೇನು?, ದೇಶದಲ್ಲಿ ಮೊದಲು 5G ತಂತ್ರಜ್ಞಾನ ತರಲಿದೆಯಾ ಬಿಎಸ್‌ಎನ್‌ಎಲ್? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

4ಜಿ ಬಸ್ ಮಿಸ್ ಆಗಿದೆ
ನಾವು 4ಜಿ ಬಸ್ ಅನ್ನು ಮಿಸ್ ಮಾಡಿಕೊಂಡಿದ್ದೇವೆ. ಆದರೆ, ನಾವು 5ಜಿ ಬಸ್ ಅನ್ನು ಮಿಸ್ ಮಾಡಿಕೊಳ್ಳಲು ತಯಾರಿಲ್ಲ. 'ಬಿಎಸ್ಎನ್ಎಲ್ಗಿಂತ ಮುಂಚಿತವಾಗಿ ಭಾರತದಲ್ಲಿ ಯಾರೂ 5ಜಿ ಸೇವೆಗಳನ್ನು ಲಾಂಚ್ ಮಾಡುವುದಿಲ್ಲ ಎಂದು ನಾನು ಹೇಳಬಲ್ಲೆ' ಎನ್ನುವ ಮೂಲಕ, ಜಿಯೋ, ಏರ್‌ಟೆಲ್ ಸೇರಿದಂತೆ ಎಲ್ಲಾ ಖಾಸಾಗಿ ಟೆಲಿಕಾಂ ಕಂಪೆನಿಗಳಿಗೂ ಬಿಎಸ್ಎನ್ಎಲ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕರಾದ ಅನಿಲ್ ಜೈನ್ ಅವರು ಎಚ್ಚರಿಕೆ ರವಾನಿಸಿದ್ದಾರೆ.

5G ನೆಟ್‌ವರ್ಕ್ ತರಲು ಸಿದ್ಧತೆ
ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ ಬಿಎಸ್‍ಎನ್‍ಎಲ್ ಮತ್ತು ಚೀನಾ ಮೂಲದ ಝಡ್‍ಟಿಇ (ZTE) ಜತೆಗೆ ಕೈಜೋಡಿಸಿ ಐದನೇ ತಲೆಮಾರಿನ (5G) ನೆಟ್‌ವರ್ಕ್ ತರಲು ಸಿದ್ಧತೆ ನಡೆಸಿದೆ. ಜೊತೆಗೆ ಸ್ವದೇಶಿ ತಂತ್ರಜ್ಞಾನಕ್ಕೆ ಸಾಕಷ್ಟು ಒತ್ತು ನೀಡುತ್ತಿದ್ದೇವೆ ಮತ್ತು ತೊಂದರೆ ಇಲ್ಲ ಎನ್ನುವುದಾದರೆ ಅಳವಡಿಸಿಕೊಳ್ಳುತ್ತೇವೆ ಎಂದು ಬಿಎಸ್ಎನ್ಎಲ್ ಸಂಸ್ಥೆ ಅನುಪಮ್ ಶ್ರೀವಾಸ್ತವ್ ಅವರು ತಿಳಿಸಿದ್ದಾರೆ.

ನಮ್ಮ ಜಾಗ್ರತೆಯಲ್ಲಿ ನಾವಿದ್ದೇವೆ
ZTE ಕಂಪೆನಿ ಬಗ್ಗೆ ಜಗತ್ತಿನ ನಾನಾ ದೇಶಗಳಲ್ಲಿ ಭಿನ್ನ ಅಭಿಪ್ರಾಯಗಳಿವೆ. ಆದರೂ 5G ನೆಟ್‍ವರ್ಕ್ ಸೇವೆ ನೀಡಬೇಕಾದರೆ ಎಚ್ಚರಿಕೆಯ ಕರೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ ಬಿಎಸ್‍ಎನ್‍ಎಲ್ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ್. ಚೀನಾದ ಟೆಲಿಕಾಂ ಪರಿಕರಗಳನ್ನು ಅಬೇಕಾದರೆ ಎಚ್ಚರಿಕೆ ಅಗತ್ಯ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ನಮ್ಮ ಜಾಗ್ರತೆಯಲ್ಲಿ ನಾವಿದ್ದೇವೆ ಎಂಬರ್ಥದಲ್ಲಿ ಹೇಳಿದ್ದಾರೆ.

ಭದ್ರತಾ ತಪಾಸಣೆಯನ್ನು ಮಾಡುತ್ತಿರುತ್ತದೆ
ಬಿಎಸ್‍ಎನ್‌ಎಲ್ ಜತೆಗೆ ಕೈಜೋಡಿಸಿ ಝಟಿಇ ಕಂಪೆನಿ 2012ರಲ್ಲಿ 2G ತಂತ್ರಜ್ಞಾನ ಸೇವೆಗಳನ್ನು ಒದಗಿಸಿತ್ತು. ಈ ಜಿಎಸ್‍ಎಂ ವ್ಯವಹಾರದಲ್ಲಿ ಉಪಕರಣಗಳ ಪೂರೈಕೆ, ಅಳವಡಿಕೆ, ತಂತ್ರಜ್ಞಾನ ಮತ್ತು ವಾರ್ಷಿಕ ನಿರ್ವಹಣೆಯ ಜವಾಬ್ದಾರಿಯನ್ನು ಕಂಪೆನಿ ಹೊತ್ತಿತ್ತು. ಒಟ್ಟು 1 ಕೋಟಿ ಚಂದಾದಾರರಿಗೆ ಸೇವೆ ನೀಡಲಾಗಿದೆ. ಬಿಎಸ್‍ಎನ್‍ಎಲ್ ನಿರಂತವಾಗಿ ಭದ್ರತಾ ತಪಾಸಣೆಯನ್ನು ಮಾಡುತ್ತಿರುತ್ತದೆ. ಭದ್ರತೆಗೆ ಸಂಬಂಧಿಸಿದಂತೆ ಇದುವರೆಗೆ ನಮಗೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ ಶ್ರೀವಾಸ್ತವ್.

2019ರಲ್ಲಿಯೇ ಭಾರತಕ್ಕೆ 5G
ಜಾಗತಿಕವಾಗಿ 2020ರ ವೇಳೆಗೆ 5ಜಿ ಸೇವೆಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಆದರೆ, 2019ರ ಒಳಗೆಯೇ ಭಾರತದಲ್ಲಿ 5G ಲಾಂಚ್ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಆಪರೇಟರ್ಗಳಾದ ನೋಕಿಯಾ ಮತ್ತು ಎನ್ಟಿಟಿ ಅಡ್ವಾನ್ಸ್ ಟೆಕ್ನಾಲಜಿ ಜತೆಗೆ ಬಿಎಸ್‌ಎನ್‌ಎಲ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಈಗಾಗಲೇ ಅನಿಲ್ ಜೈನ್ ತಿಳಿಸಿದ್ದಾರೆ. ಇದರ ಜೊತೆಗೆ ಝಟಿಇ ಕಂಪೆನಿ ಜೊತೆಗೂ ಬಿಎಸ್‌ಎನ್‌ಎಲ್ ಒಪ್ಪಂದ ಮಾಡಿಕೊಂಡಿರುವುದು ದೇಶದಲ್ಲಿ ಮೊದಲು 5G ತರುವ ಸೂಚನೆ ನೀಡಿದೆ.

ಸಂವಹನ ವೇಗ 100ಪಟ್ಟು ಹೆಚ್ಚು
5ಜಿ ನೆಟ್‌ವರ್ಕ್ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ ಸಂವಹನ ವೇಗ 4ಜಿಗಿಂತ 100ಪಟ್ಟು ಹೆಚ್ಚಾಗಲಿದೆ. 4ಜಿ ನೆಟ್‌ವರ್ಕ್‌ನ ಸೌಲಭ್ಯಗಳ ಜತೆಗೆ, OFDM, MC-CDMA, LAS-CDMA, UWB, LMDS ನೆಟ್‌ವರ್ಕ್ ಮತ್ತು IPV6ನಂತಹ ಹಲವು ಸೌಲಭ್ಯಗಳು ಬಳಕೆದಾರರಿಗೆ ಸಿಗಲಿವೆ.ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್ ಉಪಕರಣಗಳು ಆಗ್ಯುಮೆಂಟ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ.

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ
ಕಡಿಮೆ ಖರ್ಚಿನಲ್ಲಿ ಹೆಚ್ಚು ವೇಗ ಸಮರ್ಥವಾಗಿ ಅಂತರ್ಜಾಲ ಬಳಕೆ ಮಾಡುವ ಸೌಲಭ್ಯವನ್ನು ಈ ನೆಟ್‌ವರ್ಕ್ ಕಲ್ಪಿಸಲಿದೆ. ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ ಪಡೆಯುವ ತಂತ್ರಿಕತೆಯನ್ನು 5G ನೆಟ್‌ವರ್ಕ್ ಹೊಂದಿದೆ. ಅಂದರೆ, ನೀವು ಕಣ್ಣುಮುಚ್ಚಿ ಕಣ್ಣು ಬಿಡುವುದರ ಒಳಲಾಗಿ ಅಂತರ್ಜಾಲ 10 ಬಾರಿ ಲೋಡಿಂಗ್ ಆಗಿರಲಿದೆ. ಹಾಗಾಗಿಯೇ, 5G ನೆಟ್‌ವರ್ಕ್ ವೇಗಕ್ಕೆ ವಿಶ್ವವೇ ಆಶ್ಚರ್ಯದಿಂದ ಕಾಯುತ್ತಿದೆ.

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು
ಭವಿಷ್ಯದ 5G ನೆಟ್‌ವರ್ಕ್ ಬಳಕೆಗೆ ಬಂದರೆ ಎರಡೂವರೆ ಗಂಟೆ ಅವಧಿಯ ಚಲನಚಿತ್ರ ಡೌನ್‌ಲೋಡ್ ಆಗಲು ಕೇವಲ 5 ಸೆಕೆಂಡುಗಳಲ್ಲಿ ಸಾಕಾಗುತ್ತವೆ. ಪ್ರಸ್ತುತ 5ಜಿ ನೆಟ್‌ವರ್ಕ್ ಸಾಮರ್ಥ್ಯ 100ಎಂಬಿಪಿಎಸ್‌ನಿಂದ 1ಜಿಬಿವರೆಗೆ ಇದ್ದರೆ ಇದರ ಹತ್ತು ಪಟ್ಟು ವೇಗವನ್ನು 5G ನೆಟ್‌ವರ್ಕ್ ಪಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಜಿಯೋ, ಏರ್‌ಟೆಲ್ ಗಿಂತ ಮೊದಲು ಬಿಎಸ್‌ಎನ್‌ಎಲ್ ತರಲಿದೆಯಾ ಎಂಬುದನ್ನು ಕಾದುನೋಡಬೇಕು.


Click it and Unblock the Notifications








