BSNL ಬಂಪರ್ ಆಫರ್ ಮುಂದೂಡಿಕೆ:ಜನವರಿ 2019 ರ ವರೆಗೆ 2.2ಜಿಬಿ ಹೆಚ್ಚುವರಿ ಡಾಟಾ!
ಬಿಎಸ್ಎನ್ಎಲ್ ತನ್ನ ಚಂದಾದಾರರಿಗೆ ಹಲವು ಆಫರ್ ಗಳು ಮತ್ತು ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಲೇ ಇದೆ. ಇತ್ತೀಚೆಗಿನ ಬೆಳವಣಿಗೆಯೊಂದರಲ್ಲಿ ಈ ಟೆಲಿಕಾಂ ಸಂಸ್ಥೆ ತನ್ನ ಬಂಪರ್ ಆಫರ್ ನ ಅವಧಿಯನ್ನು ಮುಂದೂಡಿದೆ.ಪ್ರಾರಂಭದಲ್ಲಿ ಚಂದಾದರರು ಅರ್ಹ ಪ್ರೀಪೇಯ್ಡ್ ಪ್ಲಾನ್ ಅಭ್ಯರ್ಥಿಗಳಿಗೆ 2.2ಜಿಬಿ ಪ್ರತಿದಿನ ಡಾಟಾ ಮತ್ತು ಹೆಚ್ಚುವರಿ ದೈನಂದಿನ ಡಾಟಾ ಲಿಮಿಟ್ ನ್ನು ನೀಡಲಾಗುತ್ತಿತ್ತು.

ಈ ಬಂಪರ್ ಆಫರ್ ನ್ನು ಈ ವರ್ಷದ ಆರಂಭದಲ್ಲಿ ಪರಿಚಯಿಸಲಾಗಿತ್ತು ಮತ್ತು 2.2ಜಿಬಿ ಹೆಚ್ಚುವರಿ ಡಾಟಾವನ್ನು ನವೆಂಬರ್ 14 ರ ವರೆಗಿನ ಅವಧಿಗೆ ನೀಡಲಾಗಿತ್ತು. ಆದರೆ ಬಳಕೆದಾರರು ಈ ಆಫರ್ ನ್ನು ಮೆಚ್ಚಿರುವುದರಿಂದಾಗಿ ಈ ಬಂಪರ್ ಆಫರ್ ನ ಅವಧಿಯನ್ನು ಹೆಚ್ಚಿಸಲಾಗಿದೆ.

ಬಿಎಸ್ಎನ್ಎಲ್ ಬಂಪರ್ ಆಫರ್ ಅವಧಿ ಮುಂದೂಡಿಕೆ :
ಮೇಲೆ ತಿಳಿಸಿರುವಂತೆ, ಈ ವರ್ಷದ ಆರಂಭದಲ್ಲಿ ಬಂಪರ್ ಆಫರ್ ನ್ನು ಪರಿಚಯಿಸಲಾಯಿತು. ಇದೀಗ ಈ ಆಫರ್ ನ ಅವಧಿಯನ್ನು ಎರಡನೇ ಬಾರಿಗೆ ಹೆಚ್ಚಿಸಲಾಗುತ್ತಿದೆ. ಇದುವರೆಗೂ ಈ ಆಫರ್ ರೀತಿಯಲ್ಲಿ ಯಾವುದೇ ಇತರ ಟೆಲಿಕಾಂ ಸಂಸ್ಥೆಗಳು ನೀಡಲಾಗಿಲ್ಲ. ಅವಧಿ ಅಧಿಕಗೊಳಿಸಿದ ನಂತರ ಬಿಎಸ್ಎನ್ಎಲ್ ನ ಬಂಪರ್ ಆಫರ್ ನ ಅವಧಿ ನವೆಂಬರ್ 15,2018 ರ ಬದಲಾಗಿ ಜನವರಿ 31,2019 ಆಗಿದೆ. ಇದೇ ಸೇಮ್ ಆಫರ್ ಗಳು ಇರಲಿದ್ದು ಚಂದಾದಾರರು ಜನವರಿ 2019 ರ ವರೆಗೆ ಹೆಚ್ಚುವರಿ ಡಾಟಾ ಬೆನಿಫಿಟ್ ನ್ನು ಪ್ರತಿ ದಿನ ಪಡೆಯಲಿದ್ದಾರೆ.

ಬಿಎಸ್ಎನ್ಎಲ್ ಬಂಪರ್ ಆಫರ್ ಗೆ ಅರ್ಹತೆ ಪಡೆಯುವ ಪ್ಲಾನ್ ಗಳು:
ಬಂಪರ್ ಆಫರ್ ಕೆಲವು ಆಯ್ದ ಪ್ಲಾನ್ ಗಳಿಗೆ ಮಾತ್ರವೇ ಲಭ್ಯವಿರುತ್ತದೆ. ಈ ಆಫರ್ ಪರಿಚಯಿಸಿದಾಗ ಇದು ರೂ. 186, ರೂ. 429, ರೂ. 485, ರೂ. 666 ಮತ್ತು ರೂ. 999 ಪ್ಲಾನ್ ಗಳಲ್ಲಿ ಮಾತ್ರವೇ ಲಭ್ಯವಿತ್ತು ಮತ್ತು ಇದರಲ್ಲಿ STV ಪ್ಯಾಕ್ ಗಳು ಸೇರಿದ್ದವು ಅವುಗಳೆಂದರೆ ರೂ. 187, ರೂ. 333, ರೂ. 349, ರೂ. 444 ಮತ್ತು ರೂ. 448. ನಂತರದ ದಿನಗಳಲ್ಲಿ ಎರಡು ದೊಡ್ಡ ಮೊತ್ತದ ತಾರಿಫ್ ಪ್ಲಾನ್ ಗಳನ್ನು ಕೂಡ ಇದಕ್ಕೆ ಅರ್ಹಗೊಳಿಸಲಾಗಿದ್ದು ಹೆಚ್ಚಿನ ಡಾಟಾ ಬೆನಿಫಿಟ್ ಗಳನ್ನು ನೀಡಲಾಯಿತು.

STV 1699 ಮತ್ತು STV 2099 ಪ್ರೀಪೇಯ್ಡ್ ಪ್ಲಾನ
STV 1699 ಮತ್ತು STV 2099 ಪ್ರೀಪೇಯ್ಡ್ ಪ್ಲಾನ್ ಗಳು ಕೂಡ ಈ ಡಾಟಾ ಆಫರ್ ಪಡೆಯಲು ಅರ್ಹವಾಗಿದೆ. ಇದರ ಅವಧಿಯ ಬಗ್ಗೆ ಹೇಳುವುದಾದರೆ ಇದು 365 ದಿನಗಳು ಅಂದರೆ ಒಂದು ವರ್ಷದ ಪ್ಲಾನ್ ಆಗಿರುತ್ತದೆ. STV 1699 ನಲ್ಲಿ 2GB ಡಾಟಾ ಪ್ರತಿದಿನ ಮತ್ತು STV 2099 ನಲ್ಲಿ 4GB ಡಾಟಾ ಪ್ರತಿ ದಿನ ಲಭ್ಯವಿರುತ್ತದೆ. ಹೆಚ್ಚುವರಿ 2.2ಜಿಬಿ ಡಾಟಾ ವನ್ನು ಸೇರಿಸಿಕೊಂಡರೆ ಬಳಕೆದಾರರಿಗೆ 4.21ಜಿಬಿ ಜೊತೆಗೆ 6.21ಜಿಬಿ ಡಾಟಾ ಪ್ರತಿದಿನ ಈ ಪ್ಲಾನಿನ ಅಡಿಯಲ್ಲಿ ಲಭ್ಯವಾಗುತ್ತದೆ.
ನೀವು ಕೂಡ ಬಿಎಸ್ಎನ್ಎಲ್ ಚಂದಾದಾರರಾಗಿದ್ದೀರಾ? ಹಾಗಾದ್ರೆ ಮೇಲೆ ತಿಳಿಸಿದ ಯಾವುದೇ ಪ್ಲಾನ್ ನ್ನು ಬೇಕಿದ್ದರೂ ಕೂಡ ರೀಚಾರ್ಜ್ ಮಾಡಿಕೊಳ್ಳಿ ಮತ್ತು 2.2ಜಿಬಿ ಡಾಟಾವನ್ನು ಹೆಚ್ಚುವರಿಯಾಗಿ ಪಡೆಯಲು ನಿಮ್ಮ ಪ್ಲಾನ್ ಗೆ ನಿಗದಿಯಾಗಿರುವ ಡಾಟಾ ಬೆನಿಪಿಟ್ ನ್ನು ಸೇರಿಸಿಕೊಳ್ಳಿ. ಹೆಚ್ಚು ಡಾಟಾ ಪಡೆದು ಎಂಜಾಯ್ ಮಾಡಿ.


Click it and Unblock the Notifications