ಮಾರುಕಟ್ಟೆಯೇ ಬೆಚ್ಚಿದ 'ಬಂಪರ್ ಆಫರ್' ಘೋಷಿಸಿದ BSNL..! ಡೇಟಾ ಹಬ್ಬ..!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯುವ ನಿಟ್ಟಿನಲ್ಲಿ ಮುಂದಿರುವ ಸರ್ಕಾರಿ ಸ್ವಾಮ್ಯದ BSNL, ಹಬ್ಬದ ಸಂದರ್ಭವನ್ನು ಇನ್ನಷ್ಟು ಸಂಭ್ರಮಿಸುವಂತೆ ಮಾಡಲು ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ಅನ್ನು ನೀಡಲು ಮುಂದಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಬೆಚ್ಚಿ ಬಿಳುವಂತೆ ನಿತ್ಯ 2.2GB ಡೇಟಾವನ್ನು ಉಚಿತವಾಗಿ ಬಳಕೆಗೆ ನೀಡುವ ಆಫರ್ ಗಳನ್ನು ಲಾಂಚ್ ಮಾಡಿದೆ. ಇದು ಬಳಕೆದಾರರಿಗೆ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ ಎನ್ನಲಾಗಿದೆ.

ಮಾರುಕಟ್ಟೆಯೇ ಬೆಚ್ಚಿದ 'ಬಂಪರ್ ಆಫರ್' ಘೋಷಿಸಿದ BSNL..! ಡೇಟಾ ಹಬ್ಬ..!

ಸೆಪ್ಟೆಂಬರ್ 16 ರಿಂದ ಮಾರುಕಟ್ಟೆಯಲ್ಲಿ BSNL ಹಬ್ಬದ ಬಂಪರ್ ಆಫರ್ ಅನ್ನು ಬಳಕೆಗೆ ಮುಕ್ತವಾಗಿಸಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಆಫರ್ ಗಳೊಂದಿಗೆ ಈ ಹೊಸ ಆಫರ್ ಮ್ಯಾಚ್ ಆಗಲಿದೆ, ಬಳಕೆದಾರರಿಗೆ ದೊಡ್ಡ ಮಟ್ಟದ ಆಫರ್ ನೀಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಕುಟುಂಬವನ್ನು ವೃದ್ಧಿಸಿಕೊಳ್ಳಲು ಮುಂದಾಗಿದೆ.

ನಿತ್ಯ 3.2GB:

ನಿತ್ಯ 3.2GB:

ಈಗಾಗಲೇ ನಿತ್ಯ 1 GB ಡೇಟಾ ನೀಡುವ ಪ್ಲಾನ್‌ಗಳನ್ನು BSNL ಬಳಕೆದಾರರು ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ಬಳಕೆದಾರರಿಗೆ ನಿತ್ಯ 3.2 GB ಡೇಟಾ ದೊರೆಯಲಿದೆ ಎನ್ನಲಾಗಿದೆ. ಹಬ್ಬದ ಅಂಗವಾಗಿ 2.2 GB ಡೇಟಾವನ್ನು ಸೇರುವುದರಿಂದಾಗಿ ಹೆಚ್ಚಿನ ಲಾಭವಾಗಲಿದೆ.

ಯಾವ ಪ್ಲಾನ್‌ಗಳು:

ಯಾವ ಪ್ಲಾನ್‌ಗಳು:

ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ರೂ. 186, ರೂ.429, ರೂ.485, ರೂ.666 ಮತ್ತು ರೂ.999 ಪ್ಲಾನ್‌ಗಳನ್ನು BSNL ಬಳಕೆದಾರರು ರೀಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ನಿತ್ಯ 2.2GB ಡೇಟಾವನ್ನು ಹೆಚ್ಚಿನದಾಗಿ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ನಿಮಗೆ ಹೆಚ್ಚಿನ ಲಾಭವಾಗಲಿದೆ.

ರೂ.444ಕ್ಕೆ ರಿಚಾರ್ಜ್ ಮಾಡಿಸಿದರೆ:

ರೂ.444ಕ್ಕೆ ರಿಚಾರ್ಜ್ ಮಾಡಿಸಿದರೆ:

ಇದಲ್ಲದೇ ರೂ.444ಕ್ಕೆ ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ BSNL ಬಳಕೆದಾರರು ನಿತ್ಯ 6,5GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ BSNL ನೀಡಿರುವ ಈ ಹೊಸ ಪ್ಲಾನ್ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಲಿದೆ ಎನ್ನಲಾಗಿದೆ.

60 ದಿನ:

60 ದಿನ:

ಈ ಹೊಸ ಮಾದರಿಯಲ್ಲಿ ಹಬ್ಬದ ಬಂಪರ್ ಆಪರ್ ಅನ್ನು ನೀವು ಮುಂದಿನ 60 ದಿನಗಳಲ್ಲಿ ಯಾವಗ ಬೇಕಾದರು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ನಿಮಗೆ ಹೆಚ್ಚಿನ ಪ್ರಮಾಣದ ಲಾಭವಾಗಲಿದೆ. ಬೇಕಿದ್ದಲ್ಲಿ ಸರಿಯಾಗಿ ಯೋಜನೆ ಹಾಕಿದರೆ ಎರಡು ಬಾರಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಬೇರೆ ಎಲ್ಲಿಯೂ ಇಲ್ಲ:

ಬೇರೆ ಎಲ್ಲಿಯೂ ಇಲ್ಲ:

BSNL ಬಳಕೆದಾರರಿಗೆ ನೀಡಿರುವ ಹಬ್ಬದ ಆಫರ್ ಅನ್ನು ಟೆಲಿಕಾಂ ಮಾರುಕಟ್ಟೆಯಲ್ಲಿ ಯಾವುದೇ ಬೇರೆ ಕಂಪನಿಗಳು ನೀಡಿಲ್ಲ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಸದ್ಯ ಅತ್ಯಂತ ಹೆಚ್ಚಿನ ಡೇಟಾವನ್ನು ನೀಡುತ್ತಿರುವು BSNL ಎಂದರೆ ತಪ್ಪಾಗುವುದಿಲ್ಲ.

Best Mobiles in India

English summary
BSNL Bumper Offer Launched, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X