Home
ಸುದ್ದಿಜಾಲ

ಜಿಯೋಗೆ ಚಾಲೆಂಜ್ ಹಾಕಿದೆ BSNL: ಚಿಪ್ ಅಂಡ್ ಬೆಸ್ಟ್ ಪ್ಲಾನ್ ಲಾಂಚ್..!

By Srinidhi
Get 1GB free Jio 4G data with Cadbury Dairy Milk - KANNADA

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ BSNL, ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಳಕೆದಾರರಿಗೆ ಆಫರ್‌ಗಳನ್ನು ಘೋಷಣೆ ಮಾಡುತ್ತಿದೆ. ಸದ್ಯ ಖಾಸಗಿ ಟೆಲಿಕಾಂ ಕಂಪನಿಗಳನ್ನು ನಡುಗಿಸುವ ಮಾದರಿಯಲ್ಲಿ BSNL, ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ. ಇದು ನೇರವಾಗಿ ಜಿಯೋ ಲಾಂಚ್ ಮಾಡಿರುವ ಪ್ಲಾನ್‌ಗೆ ಸೆಡ್ಡು ಹೊಡೆಯಲಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿದ್ದಾರೆ.

ಜಿಯೋಗೆ ಚಾಲೆಂಜ್ ಹಾಕಿದೆ BSNL: ಚಿಪ್ ಅಂಡ್ ಬೆಸ್ಟ್ ಪ್ಲಾನ್ ಲಾಂಚ್..!

ಈಗಾಗಲೇ ಹಲವು ಪ್ಲಾನ್‌ಗಳನ್ನು ಲಾಂಚ್ ಮಾಡಿರುವ BSNL, ಈ ಬಾರಿ ರೂ.75 ಪ್ಲಾನ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಲಾಭವನ್ನು ಮಾಡಿಕೊಡಲಿದೆ. ಡೇಟಾ, SMS ಸೇರಿದಂತೆ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಈ ಪ್ಲಾನ್‌ನಲ್ಲಿ ನೀಡಿದೆ. ಈ ಹಿನ್ನಲೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗಿಂತಲೂ ಉತ್ತಮವಾದ ಪ್ಲಾನ್ ಇದು ಎನ್ನಬಹುದಾಗಿದೆ.

ರೂ.75 ಪ್ಲಾನ್:

ರೂ.75 ಪ್ಲಾನ್:

ಈ ಪ್ಲಾನ್‌ ನಲ್ಲಿ BSNL ಬಳಕೆದಾರರಿಗೆ 10 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದಲ್ಲದೇ 500 SMSಗಳನ್ನು ಉಚಿತವಾಗಿ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರೊಂದಿಗೆ 15 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್‌ನಲ್ಲಿ ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದಲ್ಲದೇ ಉಚಿತವಾಗಿ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ಇದರಲ್ಲಿದೆ.

ವ್ಯಾಲಿಡಿಟಿ ಹೆಚ್ಚಿಸಬಹುದು:

ವ್ಯಾಲಿಡಿಟಿ ಹೆಚ್ಚಿಸಬಹುದು:

ಈ ಪ್ಲಾನ್‌ಗಳಲ್ಲಿ ಬಳಕೆದಾರರು ತಮ್ಮ ಪ್ಲಾನಿನ ವ್ಯಾಲಿಡಿಟಿಯನ್ನು ಹೆಚ್ಚು ಮಾಡಿಕೊಳ್ಳುವ ಅವಕಾಶವನ್ನು BSNL ಮಾಡಿಕೊಟ್ಟಿದೆ. ಬಳಕೆದಾರರು ಹೆಚ್ಚುವರಿ ರಿಚಾರ್ಜ್ ಮಾಡಿಸಿಕೊಂಡು 90 ರಿಂದ 180 ದಿನಗಳ ವರೆಗೆ ವ್ಯಾಲಿಡಿಟಿಯನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಈ ಪ್ಲಾನ್ ಹೆಸರನ್ನು BSNL ಜೀವಿತಾ ಪ್ರಿಪೇಯ್ಡ್ ಪ್ಲಾನ್ ಎಂದು ಇಟ್ಟಿದೆ.

ಹೆಚ್ಚಿಸಿಕೊಳ್ಳುವುದು ಹೇಗೆ:

ಹೆಚ್ಚಿಸಿಕೊಳ್ಳುವುದು ಹೇಗೆ:

ಈ ಪ್ಲಾನ್‌ನಲ್ಲಿ ಬಳಕೆದಾರರು ವ್ಯಾಲಿಟಿಡಿಯನ್ನು ಹೆಚ್ಚು ಮಾಡಿಕೊಳ್ಳಲು ರೂ.98 ರಿಚಾರ್ಜ್ ಮಾಡಿಕೊಂಡರೆ 90 ದಿನಗಳ ವ್ಯಾಲಿಡಿಟಿ ಪಡೆಯಬಹುದಾಗಿದೆ. ಇದೇ ಮಾದರಿಯಲ್ಲಿ ರೂ.199ಕ್ಕೆ ರಿಚಾರ್ಜ್ ಮಾಡಿಕೊಂಡ ಸಂದರ್ಭದಲ್ಲಿ 180 ದಿನಗಳ ವ್ಯಾಲಿಡಿಟಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಐಡಿಯಾದಲ್ಲಿಯೂ ಇದೆ:

ಐಡಿಯಾದಲ್ಲಿಯೂ ಇದೆ:

ಇದೇ ಮಾದರಿಯಲ್ಲಿ ಐಡಿಯಾ ಸಹ ತನ್ನ ಬಳಕೆದಾರರಿಗೆ ಇದೇ ಮಾದರಿಯ ಆಫರ್ ನೀಡಿದೆ. ರೂ.75ಕ್ಕೆ ರಿಚಾರ್ಜ್ ಮಾಡಿಸಿದಲ್ಲಿ 18000 ನಿಮಿಷಗಳ ಔಟ್ ಗೋಂಯಿಂಗ್ ಕರೆಗಳು ಮತ್ತು 1 GB ಡೇಟಾ ಮತ್ತು 100 SMSಗಳನ್ನು 28 ದಿನಗಳ ಅವಧಿಗೆ ನೀಡಲಿದೆ.

Best Mobiles in India

English summary
BSNL challenges Reliance Jio with new Rs 75 prepaid plan. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+