BSNL: ಆಫರ್ ಇಲ್ಲದೆ ಕೊರಗಬೇಡಿ: ಕೇವಲ 108 ರೂ.ಗೆ 60 ದಿನಗಳವರೆಗೆ ಇಂಟರ್ನೆಟ್ ಉಚಿತ
ಬಿಎಸ್‌ಎನ್‌ಎಲ್ ಭಾರತದ ಹಳೆಯ ಟೆಲಿಕಾಂ ಕಂಪನಿ. ಒಂದು ಕಾಲದಲ್ಲಿ ರಾಜನಂತೆ ಮೆರೆದ ಕಂಪನಿ BSNL. ಪ್ರಸ್ತುತ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಕಂಪನಿಗಳೊಂದಿಗೆ ಹೋರಾಡುತ್ತಿದೆ. ಮಾರುಕಟ್ಟೆಯಲ್ಲಿರುವ ಹಲವು ಟೆಲಿಕಾಂ ಕಂಪನಿಗಳ ಜೊತೆ BSNL ಸ್ಪರ್ಧೆ ಮಾಡುವಲ್ಲಿ ಹಿಂದೆ ಬಿದ್ದಿತ್ತು. ಆದರೆ, ಈಗ ಕಾಲ ಬದಲಾಗಿದೆ. BSNL ಸಹ ತನ್ನ ಗ್ರಾಹಕರನ್ನು ಬೇರೆ ಟೆಲಿಕಾಂ ಕಂಪನಿಯತ್ತ ಕಣ್ಣೆತ್ತಿಯೂ ನೋಡದಂತೆ ಮಾಡಿದೆ. ಇದೀಗ, BSNL ಅಗ್ಗದ ಡೇಟಾ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ.
ನೀವು ಯಾವ ರೀಚಾರ್ಜ್ ಪ್ಲ್ಯಾನ್ ಅನ್ನು ಬಳಸುತ್ತಿದ್ದೀರಿ? ಹೆಚ್ಚಿನ ಕಾಲ್ ಫೆಸಿಲಿಟಿಗಳನ್ನು ಹೊಂದಿದ್ದೀರಾ? ಅಥವಾ ಯಾವ ಪ್ಲ್ಯಾನ್‌ನಲ್ಲಿ ಹೆಚ್ಚಿನ ಡೇಟಾದ ಪ್ರಯೋಜನವನ್ನು ಪಡೆಯಬಹುದು? ನಿಮ್ಮ ಸಿಮ್ ಅನ್ನು ಸದಾ ಸಕ್ರಿಯವಾಗಿರಿಸುವ ಪ್ಲ್ಯಾನ್ ಅನ್ನು ನೀವು ಬಳಸುತ್ತೀದ್ದೀರಾ? ನಿಮ್ಮ ಮೊದಲ ಆಯ್ಕೆಯು ಹೆಚ್ಚು ದಿನಗಳ ಮಾನ್ಯತೆಯೊಂದಿಗೆ ಬರುವ ರೀಚಾರ್ಜ್ ಪ್ಲ್ಯಾನ್ ಆಗಿದ್ದರೆ, ನೀವು ಈ ಅಗ್ಗದ ಡೇಟಾ ರೀಚಾರ್ಜ್ ಯೋಜನೆಯನ್ನು ಅಳವಡಿಸಿಕೊಳ್ಳಬಹುದು.

ಹೌದು, ಬಿಎಸ್‌ಎನ್‌ಎಲ್ ಬಿಟ್ಟಿರುವ ಈ ಆಫರ್ ಕಂಡು ಇತರ ಟೆಲಿಕಾಂ ಕಂಪನಿಗಳ ನಿದ್ದೆ ಗೆಟ್ಟಿದೆ. ಕಡಿಮೆ ಬೆಲೆಯಲ್ಲಿ ಅಧಿಕ ಲಾಭವನ್ನು ಗ್ರಾಹಕರಿಗೆ ನೀಡಲು BSNL ಮುಂದಾಗಿದೆ. ಈ ಡೇಟಾ ರಿಚಾರ್ಜ್ ಪ್ಲ್ಯಾನ್ ಅನ್ನು ಕೇವಲ 108 ರೂ.ಗೆ ಪರಿಚಯಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿರುವ ಹಲವು ಕಂಪನಿಗಳಿಗೆ ಟಕ್ಕರ್ ಕೊಟ್ಟಿರುವ ಬಿಎಸ್‌ಎನ್‌ಎಲ್ ಕಂಪನಿ ಗ್ರಾಹಕರ ಗಮನ ಸೆಳೆದಿದೆ. ಈ 108 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಮತ್ತೆ ಬಳಕೆದಾರರಿಗೆ ಖುಷಿ ನೀಡಿದೆ.
60GB ಡೇಟಾ ಸಂಪೂರ್ಣ ಫ್ರೀ
ನೀವು BSNL ಗ್ರಾಹಕರಾಗಿದ್ದರೆ ಈ ರಿಚಾರ್ಜ್ ನಿಮಗೆ ಪರ್ಫೆಕ್ಟ್. ನೀವು ಹೆಚ್ಚು ಮಾನ್ಯತೆಯ ಅಗ್ಗದ ರೀಚಾರ್ಜ್ ಯೋಜನೆಯನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ, BSNLನ ಈ ಪ್ಲ್ಯಾನ್ ಕಡೆ ಮುಖ ಮಾಡುವುದು ಒಳ್ಳೆಯದು. ಸರ್ಕಾರಿ ಸೌಮ್ಯದ ಈ ಕಂಪನಿ ತನ್ನ ಗ್ರಾಹಕರಿಗೆ 108 ರೂಪಾಯಿಯ ಪ್ಲ್ಯಾನ್ ಒಂದನ್ನು ಲಾಂಚ್ ಮಾಡಿದೆ. ಇದರೊಂದಿಗೆ ನೀವು ಪ್ರತಿದಿನ 1 GB ಡೇಟಾದ ಪ್ರಯೋಜನವನ್ನು ಪಡೆಯಬಹುದು. ಈ ಪ್ಲ್ಯಾನ್‌ನೊಂದಿಗೆ ನೀವು ಒಟ್ಟು 60GB ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದು.
108 ರೂ. ರೀಚಾರ್ಜ್‌ನಲ್ಲಿ ಏನೆಲ್ಲಾ ಸಿಗಲಿದೆ?
BSNL 108 ರೂ. ರೀಚಾರ್ಜ್ ಮಾಡಿಸಿಕೊಂಡಲ್ಲಿ 60 ದಿನಗಳ ವರೆಗೆ 1 ಜಿಬಿ ಡೇಟಾವನ್ನು ಬಳಸಬಹುದು. ಅಲ್ಲದೆ 500 ಎಸ್‌ಎಂಎಸ್ ಕಳಿಸುವ ಪ್ರಯೋಜನವೂ ಇದೆ. ಒಂದು ವೇಳೆ ಡೇಟಾ ಖಾಲಿಯಾದಾಗ, ನೀವು ಪ್ರತಿ MBಗೆ 5 ಪೈಸೆ ಪಾವತಿಸಬೇಕು. ನೀವು ಇದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ನೀವೇನಾದರೂ 108 ರೂಪಾಯಿಗಳ ರಿಚಾರ್ಜ್ ಮಾಡಿಸಿಕೊಂಡಲ್ಲಿ ನಿಮಗೆ ಇದರಲ್ಲಿ ಕಾಲ್ ಫೆಸಿಲಿಟಿ ಇರುವುದಿಲ್ಲ. ಈ ಪ್ಲ್ಯಾನ್ ಅಸ್ತಿತ್ವದಲ್ಲಿರುವ ರೀಚಾರ್ಜ್ ಯೋಜನೆಯೊಂದಿಗೆ ಅಳವಡಿಸಿಕೊಳ್ಳಲು ಬೆಸ್ಟ್ ಆಯ್ಕೆಯಾಗಿರುತ್ತದೆ.
ಕಾಲ್ ಫೆಸಿಲಿಟಿಗೆ 139 ರೂ. ರೀಚಾರ್ಜ್
ನೀವು ಕಾಲ್ ಫೆಸಿಲಿಟಿ ಪ್ರಯೋಜನವನ್ನು ಪಡೆಯಲು ಬಯಸಿದ್ದರೆ, BSNLನ 139 ರೂ.ನ ರೀಚಾರ್ಜ್ ಪ್ಲ್ಯಾನ್‌ನ ಲಾಭ ಪಡೆಯಬಹುದು. ಈ ರೀಚಾರ್ಜ್ 28 ದಿನಗಳ ವರೆಗೆ ಮಾನ್ಯತೆ ಪಡೆದಿರುತ್ತದೆ. ಇದರೊಂದಿಗೆ ನಿಮಗೆ ಅನ್‌ಲಿಮಿಡೆಟ್ ಕಾಲ್‌ಗಳ ಲಾಭ ಸಿಗುತ್ತದೆ. ಇಷ್ಟೇ ಅಲ್ಲದೆ ಬಳಕೆದಾರರು ಪ್ರತಿ ದಿನಕ್ಕೆ 1.5GB ಡೇಟಾವನ್ನು ಸಹ ಆನಂದಿಸಬಹುದು. ಡೇಟಾ ಮಿತಿ ಮುಗಿದ ನಂತರ, ನೀವು 40 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು.
ಒಟ್ಟಾರೆ, Reliance Jio, Airtel, ಮತ್ತು Viನಂತಹ ವಿವಿಧ ಟೆಲಿಕಾಂ ಕಂಪನಿಗಳು ವಿವಿಧ ರೀಚಾರ್ಜ್ ಪ್ಲ್ಯಾನ್‌ಗಳನ್ನು ನೀಡುತ್ತವೆ. ಈ ಸಾಲಿಗೆ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ BSNL ಅಗ್ಗದ ರೀಚಾರ್ಜ್ ಪ್ಲ್ಯಾನ್‌ಗಳಿಗೆ ಫೇಮಸ್ ಆಗಿದೆ. ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ವೇಗದ ಇಂಟರ್ನೆಟ್ ಸೇವೆಗಳನ್ನು ನೀಡುವಲ್ಲಿ ಕೊಂಚ ಹಿಂದೆ ಬಿದ್ದರೂ, ಹಣ ಉಳಿಸುವ ದೃಷ್ಟಿಯಿಂದ ಬೇರೆ ಎಲ್ಲ ಕಂಪನಿಗಳ ರಿಚಾರ್ಜ್ ಪ್ಲ್ಯಾನ್‌ಗಿಂತ ಬೆಸ್ಟ್ ಆಯ್ಕೆಯಾಗಿದೆ.


Click it and Unblock the Notifications








