BSNLನಿಂದ ಸಿನೆಮಾ ಪ್ಲಸ್ ಸೇವೆ ಬಿಡುಗಡೆ!..ತಿಂಗಳಿಗೆ ಕೇವಲ 129 ರೂ.!

|

ಇತ್ತೀಚಿನ ದಿನಗಳಲ್ಲಿ ದೇಶದ ಟೆಲಿಕಾಂ ವಲಯದಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಖಾಸಗಿ ಟೆಲಿಕಾಂಗಳು ಆಕರ್ಷಕ ಪ್ಲ್ಯಾನ್ ಪರಿಚಯಿಸಿವೆ. ಇತ್ತೀಚಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಕೂಡ ಅನೇಕ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅಧಿಕ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಅದೇ ಹಾದಿಯಲ್ಲಿ ಬಿಎಸ್‌ಎನ್‌ಎಲ್‌ ಇದೀಗ ಹೊಸದೊಂದು ಪ್ಲ್ಯಾನ್ ಪರಿಚಯಿದ್ದು, ಖಾಸಗಿ ಟೆಲಿಕಾಂಗಳು ದಂಗಾಗುವಂತೆ ಮಾಡಿದೆ.

ಭಾರತ್ ಸಂಚಾರ್ ನಿಗಮ್

ಹೌದು, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಬಿಎಸ್ಎನ್ಎಲ್ ಸಿನೆಮಾ ಪ್ಲಸ್ ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯನ್ನು ಪಡೆಯಲು ಬಯಸುವವರು ತಿಂಗಳಿಗೆ 129 ರೂ. (ಪರಿಚಯಾತ್ಮಕ ಕೊಡುಗೆ ಬೆಲೆ) ಪಾವತಿಸಬೇಕಾಗುತ್ತದೆ. ಇನ್ನು ಬಿಎಸ್ಎನ್ಎಲ್ ಸಿನೆಮಾ ಪ್ಲಸ್‌ ಮೂಲಕ ಚಂದಾದಾರರು ಸೋನಿಲಿವ್, ವೂಟ್ ಸೆಲೆಕ್ಟ್ ಮತ್ತು Zee5 ನಂತಹ ಪ್ರತಿ ಒಟಿಟಿ (ಓವರ್-ದಿ-ಟಾಪ್) ವಿಷಯ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇನ್ನುಳಿದಂತೆ ಈ ಸಿನಿಮಾ ಪ್ಲಸ್‌ ಪ್ಲ್ಯಾನ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿಎಸ್ಎನ್ಎಲ್ ಸಿನೆಮಾ ಪ್ಲಸ್ ಪ್ಲ್ಯಾನ್‌

ಬಿಎಸ್ಎನ್ಎಲ್ ಸಿನೆಮಾ ಪ್ಲಸ್ ಪ್ಲ್ಯಾನ್‌

BSNL ಸಿನೆಮಾ ಪ್ಲಸ್‌ ಪ್ಲ್ಯಾನ್‌ ತಿಂಗಳಿಗೆ 129 ರೂ.ಗಳಿಗೆ ಲಭ್ಯವಾಗಲಿದೆ. ಇದು ಪರಿಚಯಾತ್ಮಕ ಕೊಡುಗೆಯಾಗಿದ್ದು, 3 ತಿಂಗಳಲ್ಲಿ ಮುಕ್ತಾಯಗೊಂಡ ನಂತರ ಚಂದಾದಾರರು ಈ ಮೊತ್ತವನ್ನು ಪಾವತಿಸಬೇಕಾಗಿದ್ದರೂ, ಬಂಡಲ್‌ ಸೇವೆಯನ್ನು 199 ರೂ.ಗೆ ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ಸರ್ಕಾರಿ ಸ್ವಾಮ್ಯದ BSNL ಈ ಯೋಜನೆಯೊಂದಿಗೆ 300 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ನೀಡುತ್ತಿದೆ ಮತ್ತು ಬಳಕೆದಾರರು 8,000 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಪ್ರವೇಶವನ್ನು ಹೊಂದಬಹುದು ಎಂದು ಹೇಳಿಕೊಂಡಿದೆ.

ಸಿನೆಮಾ ಪ್ಲಸ್

ಇನ್ನು ಸಿನೆಮಾ ಪ್ಲಸ್ ಸೇವೆಯನ್ನು ತನ್ನ ಚಂದಾದಾರರಿಗೆ ನೀಡಲು ಬಿಎಸ್ಎನ್ಎಲ್ ಯುಪ್ ಟಿವಿಯೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಓನ್ಲಿಟೆಕ್ ವರದಿ ಹೇಳಿದೆ. ಸೇವೆಯೊಂದಿಗೆ, ನೀವು ಸೋನಿಲಿವ್ ಸ್ಪೆಷಲ್, ಯುಪ್ ಟಿವಿ ಪ್ರೀಮಿಯಂ, ZEE5 ಪ್ರೀಮಿಯಂ ಮತ್ತು ವೂಟ್ ಸೆಲೆಕ್ಟ್ ಗೆ ಪ್ರವೇಶವನ್ನು ಪಡೆಯುತ್ತೀರಿ. ಯುಪ್ ಟಿವಿ ಸ್ಕೋಪ್ ಒಂದು ಚಂದಾದಾರಿಕೆಯಡಿಯಲ್ಲಿ ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಸಹ ಒದಗಿಸುತ್ತದೆ.

ಬಿಎಸ್ಎನ್ಎಲ್ ಸಿನೆಮಾ ಪ್ಲಸ್‌ ಚಂದಾದಾರರಾಗುವುದು ಹೇಗೆ?

ಬಿಎಸ್ಎನ್ಎಲ್ ಸಿನೆಮಾ ಪ್ಲಸ್‌ ಚಂದಾದಾರರಾಗುವುದು ಹೇಗೆ?

ಈ ಸೇವೆಗೆ ಚಂದಾದಾರರಾಗಲು, ನೀವು ಬಿಎಸ್ಎನ್ಎಲ್ ಸಿನೆಮಾ ಪ್ಲಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ನಂತರ ನೀವು ನಿಮ್ಮ ಬಿಎಸ್ಎನ್ಎಲ್ ಮೊಬೈಲ್ ಸಂಖ್ಯೆ, ಟೆಲಿಕಾಂ ಸರ್ಕಲ್, ಇಮೇಲ್ ಐಡಿ ಮತ್ತು ಫುಲ್‌ ನೇಮ್‌ ಬಳಸಿಕೊಂಡು ಸೈನ್ ಅಪ್ ಮಾಡಬೇಕಾಗುತ್ತದೆ. ಬಳಕೆದಾರರು ಸೈನ್ ಅಪ್ ಮಾಡಿದ ನಂತರ, ಆಂಡ್ರಾಯ್ಡ್, ಐಒಎಸ್, ಆಂಡ್ರಾಯ್ಡ್ ಟಿವಿ ಮತ್ತು ಅಮೆಜಾನ್ ಫೈರ್‌ಟಿವಿ ಸಾಧನಗಳಲ್ಲಿ ಲಭ್ಯವಿರುವ ಅಧಿಕೃತ ಅಪ್ಲಿಕೇಶನ್ ಬಳಸಿ ಸೇವೆಯನ್ನು ಪಡೆಯಬಹುದು. ನಿಮ್ಮ ವೆಬ್ ಬ್ರೌಸರ್ ಮೂಲಕವೂ ನೀವು ಸೇವೆಯನ್ನು ಪ್ರವೇಶಿಸಬಹುದು.

ಬಿಎಸ್ಎನ್ಎಲ್‌

ಬಿಎಸ್ಎನ್ಎಲ್‌ನ ಸೇವೆಯು ವೈಯಕ್ತಿಕಗೊಳಿಸಿದ ಶಿಫಾರಸುಗಳು ಮತ್ತು ವಿಷಯ ಒಟ್ಟುಗೂಡಿಸುವಿಕೆಯಂತಹ ಫೀಚರ್ಸ್‌ಗಳನ್ನು ಸಹ ನೀಡುತ್ತದೆ. ಇದು ತನ್ನ ವೇದಿಕೆಯಲ್ಲಿ ಕ್ರೀಡೆ, ಚಲನಚಿತ್ರಗಳು, ಸಂಗೀತ ಮತ್ತು ಮಕ್ಕಳ ವಿಷಯವನ್ನು ನೀಡುತ್ತದೆ. ಇತರ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್-ಐಡಿಯಾ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಂತಹ ಒಟಿಟಿ ಸೇವೆಗಳನ್ನು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಚಂದಾದಾರಿಕೆಯನ್ನು ಆಕರ್ಷಕ ಬೆಲೆಯಲ್ಲಿ ಜೋಡಿಸುತ್ತಿವೆ. ಇದಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬಿಎಸ್‌ಎನ್‌ಎಲ್‌ ತನ್ನ ಹೆಚ್ಚುಯನ್ನು ಇಟ್ಟಿದೆ.

Best Mobiles in India

English summary
BSNL Cinema Plus Service Launched For Rs. 129.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X