ಬಿಎಸ್‌ಎನ್‌ಎಲ್ ನೌಕರರಿಗೆ ಸರ್ಕಾರದಿಂದ ಗುಡ್‌ನ್ಯೂಸ್!

|

ಕಳೆದ ಎರಡು ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ನೌಕರರಿಗೆ ಸಂಬಳವನ್ನು ಪಾವತಿಸಲು ವಿಫಲವಾಗಿದ್ದ ಸರ್ಕಾರಿ ನಿಯಮಿತ ಟೆಲಿಕಾಂ ಕಂಪೆನಿ ಬಿಎಸ್​ಎನ್​​ಎಲ್ ಇದೀಗ ಸಂಬಳ ಪಾವತಿಸಿದೆ. ಬಿಎಸ್​ಎನ್​ಎಲ್​ ಸಿಬ್ಬಂದಿಯ ಫೆಬ್ರವರಿ ತಿಂಗಳ ವೇತನ ಇಂದು (ಮಾರ್ಚ್‌ 15) ವಿತರಿಸಲಿದೆ ಮತ್ತು ಬಂಡವಾಳ ನೆರವು ಒದಗಿಸಲು ಟೆಲಿಕಾಂ ಇಲಾಖೆ ಪ್ರಕ್ರಿಯೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

ಬಿಎಸ್​ಎನ್​ಎಲ್ ಸಂಸ್ಥೆ ಆರಂಭವಾದ ಇಷ್ಟೂ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿಗೆ ವೇತನ ಪಾವತಿಸಲು ವಿಫಲವಾಗಿತ್ತು. ಅದಾದ ನಂತರ ದೂರಸಂರ್ಪಕ ಸಚಿವ ಮನೋಜ್ ಸಿನ್ಹಾ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆದ್ದು, ಸಂಸ್ಥೆಯ ಹಣಕಾಸು ಬಿಕ್ಕಟ್ಟಿಗೆ ಸಂಬಂಧಿಸಿ ಟೆಲಿಕಾಂ ಸಚಿವರು ಖುದ್ದಾಗಿ ಪರಿಶೀಲಿಸಿ ಪರಿಹರಿಸಿದ್ದಾರೆ ಎನ್ನಲಾಗಿದೆ. ಇನ್ನು ಅಗತ್ಯವಿರುವ 3,500 ಕೋಟಿ ಬಂಡವಾಳ ನೆರವು ಒದಗಿಸಲು ಟೆಲಿಕಾಂ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.

ಬಿಎಸ್‌ಎನ್‌ಎಲ್ ನೌಕರರಿಗೆ ಸರ್ಕಾರದಿಂದ ಗುಡ್‌ನ್ಯೂಸ್!

ಬಿಎಸ್​ಎನ್​ಎಲ್​ನ 1.76 ಲಕ್ಷ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ವೇತನ ಪಾವತಿ ಆಗಿಲ್ಲ. ಸಂಸ್ಥೆಯ ಶೇ 50ರಷ್ಟು ಆದಾಯವು ಸಿಬ್ಬಂದಿ ವೇತನ ಪಾವತಿಗೆ ವಿನಿಯೋಗವಾಗುತ್ತಿದ್ದು, ಆದಾಯದ ಪ್ರಮಾಣ ಹೆಚ್ಚಾದಾಗ ವೇತನ ಪಾವತಿ ಸರಳವಾಗುತ್ತದೆ. ಆದರೆ, ಈಗ ಸರ್ಕಾರದ ಯಾವುದೇ ರೀತಿಯ ಹಣಕಾಸಿನ ಬೆಂಬಲ ನೀಡದ ಕಾರಣ ಸಂಸ್ಥೆಯ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಬಿಎಸ್​ಎನ್​ಎಲ್​ ಅಧಿಕಾರಿಯೊಬ್ಬರು ಹೇಳಿದ್ದನ್ನು ಪತ್ರಿಕೆಗಳು ವರದಿ ಮಾಡಿದ್ದವು.

ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಸಂಸ್ಥೆಯನ್ನು ಪುನರ್​​ಜ್ಜೀವನಗೊಳಿಸಿ ಉದ್ಯೋಗಿಗಳ ವೇತನ ಪಾವತಿಸಲು ಅನಕೂಲ ಮಾಡಿಕೊಡುವಂತೆ ಬಿಎಸ್​ಎನ್​ಎಲ್ ಉದ್ಯೋಗಿಗಳ ಒಕ್ಕೂಟವು ಕೋರಿತ್ತು. ಹಾಗೆಯೇ, ಟೆಲಿಕಾಂ ದರಸಮರಕ್ಕೆ ಸಿಲುಕಿ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಸಂಸ್ಥೆಯನ್ನು ಪುನರ್​​ಜ್ಜೀವನಗೊಳಿಸಲು 3,500 ಕೋಟಿ ಬಂಡವಾಳ ನೆರವು ಒದಗಿಸಲು ಟೆಲಿಕಾಂ ಇಲಾಖೆ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಬಿಎಸ್‌ಎನ್‌ಎಲ್ ನೌಕರರಿಗೆ ಸರ್ಕಾರದಿಂದ ಗುಡ್‌ನ್ಯೂಸ್!

ಟೆಲಿಕಾಂನಲ್ಲಿ ನಡೆಯುತ್ತಿರುವ ಭಾರೀ ದರಸಮರದಿಂದ ಬಿಎಸ್​ಎನ್​ಎಲ್​ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಬಿಎಸ್​ಎನ್​ಎಲ್​ ಸಂಸ್ಥೆ ಸುಮಾರು 8 ಸಾವಿರ ಕೋಟಿಯಷ್ಟು ನಷ್ಟವನ್ನು ಎದುರಿಸುತ್ತಿದೆ. ಇನ್ನು 2017ರ ಆರ್ಥಿಕ ವರ್ಷದಲ್ಲಿ 4,786 ಕೋಟಿಯಷ್ಟು ನಷ್ಟವಾಗಿದ್ದರೆ, 2018ರಲ್ಲಿ 8 ಸಾವಿರ ಕೋಟಿ ಹಾಗೂ 2019ರಲ್ಲಿಯೂ 8,000 ಕೋಟಿಯಷ್ಟು ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
Public sector telecom firm BSNL will clear salaries of all employees for February month by Friday, its Chairman and Managing Director Anupam Shrivastava said on Thursday. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X