ಜಿಯೋಗೆ ಬಿಸಿ ಮುಟ್ಟಿಸಿದ ಬಿಎಸ್‌ಎನ್‌ಎಲ್ ಹೇಗೆ ಅಂತೀರಾ?
ದೇಶದಲ್ಲಿ ರಿಲಾಯನ್ಸ್ ಜಿಯೋ 4ಜಿ ಸೇವೆಗಳು ಹೊಸ ಹವಾವನ್ನೇ ಉಂಟುಮಾಡುತ್ತಿದೆ. ಮುಕೇಶ್ ಅಂಬಾನಿ ಪ್ರಸ್ತುತಪಡಿಸಿರುವ ಜಿಯೋ ವೆಲ್‌ಕಮ್ ಆಫರ್ ದೇಶದಲ್ಲಿ ಹೊಸ ಸದ್ದನ್ನೇ ಸೃಷ್ಟಿಸಿದ್ದು ಜಿಯೋ ಸಿಮ್ ಪಡೆದುಕೊಳ್ಳಲು ಬಳಕೆದಾರರು ನೂಕುನುಗ್ಗಲನ್ನೇ ಸೃಷ್ಟಿಸಿದ್ದಾರೆ. ಇದರಿಂದಲೇ ಜಿಯೋಗಿರುವ ಪ್ರಾಮುಖ್ಯತೆನ್ನು ನಾವು ಅರಿತಕೊಳ್ಳಬಹುದಾಗಿದೆ.
ಓದಿರಿ: ಜಿಯೋ ವರ್ಸಸ್ ಏರ್‌ಟೆಲ್ 4ಜಿ, ನಿಮ್ಮ ಮತ ಯಾರಿಗೆ?
ಇದಕ್ಕೆ ಸರಿಯಾಗಿ ಇತರ ಟೆಲಿಕಾಮ್ ಕಂಪೆನಿಗಳೂ ಕೂಡ ಕೈಕಟ್ಟಿ ಕೂರದೇ ಪೈಪೋಟಿಯನ್ನು ನೀಡುತ್ತಿವೆ. ಇಂದಿನ ಲೇಖನದಲ್ಲಿ ಬಿಎಸ್‌ಎನ್‌ಎಲ್ ಹೇಗೆ ಜಿಯೋಗೆ ಬಿಸಿ ಮುಟ್ಟಿಸಿದೆ ಎಂಬುದನ್ನು ನಾವು ಅರಿತುಕೊಳ್ಳಲಿದ್ದೇವೆ.
ಓದಿರಿ: ಅರಿಯಲೇಬೇಕಾಗಿರುವ 'ಮೈ ಏರ್‌ಟೆಲ್ ಅಪ್ಲಿಕೇಶನ್'ನ ಐದು ಮಹತ್ವಗಳು

ಹೊಸ ಮೊಬೈಲ್ ಟವರ್‌ಗಳ ಇನ್‌ಸ್ಟಾಲೇಶನ್
ದೇಶದ ಕೆಲವು ಮಹಾ ನಗರಗಳಲ್ಲಿ ಬಿಎಸ್ಎನ್‌ಎಲ್ ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಆಂಧ್ರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶ್ಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮೊದಲಾದ ನಗರಗಳನ್ನು ಈ ಯೋಜನೆಯು ಒಳಗೊಂಡಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಎಸ್‌ಎಮ್ ವಿಸ್ತರಣೆ ಯೋಜನೆ
ಜಿಎಸ್‌ಎಮ್ ವಿಸ್ತರಣೆ ಯೋಜನೆ ಅಡಿಯಲ್ಲಿ, ಬಿಎಸ್‌ಎನ್‌ಎಲ್ 20,000 ಬಿಟಿಎಸ್ (ಬೆಸ್ಟ್ ಟ್ರಾನ್ಸೀವರ್ ಸ್ಟೇಶನ್) ಅನ್ನು ಇನ್‌ಸ್ಟಾಲ್ ಮಾಡುವ ಉದ್ದೇಶವನ್ನು ಹೊಂದಿದೆ. ಇದರಿಂದ ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸುವ ಇರಾದೆ ಕಂಪೆನಿಯದ್ದಾಗಿದೆ.

ದೇಶದಲ್ಲಿ ಹೆಚ್ಚುವರಿ ವೈಫೈ ಹಾಟ್‌ಸ್ಪಾಟ್ಸ್
ದೇಶದಲ್ಲಿ ಈಗಾಗಲೇ ಬಿಎಸ್‌ಎನ್‌ಎಲ್ 2,700 ಹಾಟ್‌ಸ್ಪಾಟ್‌ಗಳನ್ನು ಹೊಂದಿದೆ ಮತ್ತು ಈ ಸಂಖ್ಯೆಯನ್ನು ಹೆಚ್ಚಿಸುವ ಇರಾದೆಯನ್ನು ಕಂಪೆನಿ ಹೊಂದಿದ್ದು ಮಾರ್ಚ್ 2018 ರ ಹೊತ್ತಿಗೆ ಈ ಸಂಖ್ಯೆಯನ್ನು 40,000 ಏರಿಸುವ ಇರಾದೆಯನ್ನು ಹೊಂದಿದೆ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಪೆಕ್ಸ್ ಮತ್ತು ಕ್ಯಾಪೆಕ್ಸ್ ಮಾಡೆಲ್
ಒಪೆಕ್ಸ್ ಮಾಡೆಲ್ ಹಾಟ್‌ಸ್ಪಾಟ್‌ಗಳನ್ನು ಫ್ರಾಂಚೈಸಿಗಳು ಸಿದ್ಧಪಡಿಸಲಿದ್ದು, ಇದು ಸ್ಥಾಪನೆ, ನಿರ್ವಹಣೆ ಮತ್ತು ಐದು ವರ್ಷಗಳ ಕಾಲ ಸೈಟ್‌ಗಳನ್ನು ರನ್ ಮಾಡಲಿದೆ. ಕ್ಯಾಪೆಕ್ಸ್ ಮಾಡೆಲ್ ಹಾಟ್‌ಸ್ಪಾಟ್‌ಗಳನ್ನು ಬಿಎಸ್‌ಎನ್‌ಎಲ್ ಮಾಲೀಕತ್ವ ನಡೆಸಲಿದೆ.

ರಿಲಾಯನ್ಸ್ ಮೇಲೆ ಇದು ಹೇಗೆ ಪ್ರಭಾವ ಬೀರಲಿದೆ
ದೇಶದಲ್ಲಿ ವೈಫೈ ಹಾಟ್‌ಸ್ಪಾಟ್‌ಗಳನ್ನು ಅಳವಡಿಸುವ ಮೂಲಕ ಕಂಪೆನಿ ತನ್ನ ಬಲವನ್ನು ಹೆಚ್ಚಿಸಲಿದೆ. ಜಿಯೋದ ಸ್ಪರ್ಧೆಯನ್ನು ಬಿಎಸ್‌ಎನ್‌ಎಲ್ ಬಲವಾಗಿ ಪರಿಗಣಿಸಿದ್ದು ತನ್ನ ದಾಳವನ್ನು ಉದುರಿಸಲಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








