Just In
Don't Miss
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Movies
Katheyondu Shuruvagide: ಮಾತಂಗಿ ಕೆನ್ನೆಗೆ ಬಿತ್ತು ಏಟು.. ಯುವರಾಜನ ಅವಮಾನ ಸಹಿಸಲ್ಲ ಕೃತಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- News
Budget 2023; ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಸಿದ್ದರಾಮಯ್ಯ
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ನುಮುಂದೆ ಬಿಎಸ್ಎನ್ಎಲ್ ನ ಈ ಎರಡು ಡಾಟಾ ಪ್ಲಾನ್ ಗಳು ಲಭ್ಯವಿಲ್ಲ!
ರಾಜ್ಯ ಮಾಲೀಕತ್ವದ ಬಿಎಸ್ಎನ್ಎಲ್ ಎರಡು ಪ್ರಮುಖ ರೀಚಾರ್ಜ್ ಪ್ಲಾನ್ ಗಳನ್ನು ಸ್ಥಗಿತಗೊಳಿಸುತ್ತಿದೆ. ರೂಪಾಯಿ 333 ಮತ್ತು ರುಪಾಯಿ 444 ರ ಪ್ಲಾನ್ ಗಳನ್ನು ಹಲವು ಟೆಲಿಕಾಂ ಸರ್ಕಲ್ ನಲ್ಲಿ ನಿಲ್ಲಿಸಲಾಗುತ್ತಿದೆ. 2017 ರಲ್ಲಿ ಈ ಎರಡು ಪ್ಲಾನ್ ಗಳನ್ನು ಬಿಡುಗಡೆಗೊಳಿಸಲಾಗುತ್ತಿತ್ತು ಮತ್ತು ಇವುಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ.

ರುಪಾಯಿ 339, ರುಪಾಯಿ 379, ರುಪಾಯಿ 392 ಪ್ಲಾನ್ ಗಳನ್ನು ಕೂಡ ಬಿಎಸ್ಎನ್ಎಲ್ ಸ್ಥಗಿತಗೊಳಿಸುತ್ತಿದೆ. ಈ ಹಿಂದೆ ಬಿಎಸ್ಎನ್ಎಲ್ ಮೂರು ಪ್ಲಾನ್ ಗಳನ್ನು ಬಿಡುಗಡೆಗೊಳಿಸಿತ್ತು. ರುಪಾಯಿ 349, ರುಪಾಯಿ 333 ಮತ್ತು ರುಪಾಯಿ 395 ಜೊತೆಗೆ “ಟ್ರಿಪಲ್ ಏಸ್” ಪ್ಲಾನ್ ಇತ್ತು.
ರುಪಾಯಿ 333 ನಲ್ಲಿ 3ಜಿಬಿ ಡಾಟಾ ಪ್ರತಿದಿನ 90 ದಿನಗಳ ಅವಧಿಗೆ ಲಭ್ಯವಾಗುತ್ತಿತ್ತು. 444 ರುಪಾಯಿ ಪ್ಲಾನ್ ನಲ್ಲಿ 4ಜಿಬಿ ಡಾಟಾ ಪ್ರತಿದಿನ 3ಜಿ ಸ್ಪೀಡ್ ನಲ್ಲಿ 90 ದಿನಗಳ ಅವಧಿಗೆ ಸಿಗುತ್ತಿತ್ತು. ಈ ಪ್ಲಾನಿನ ಅಡಿಯಲ್ಲಿ ಒಂದು ಗಿಗಾಬೈಟ್ ನ 3ಜಿ ಮೊಬೈಲ್ ಡಾಟಾ ಕೇವಲ ಒಂದು ರುಪಾಯಿಗೂ ಕಡಿಮೆ ಬೆಲೆಗೆ ಸಿಗುತ್ತದೆ.

ಬಿಎಸ್ಎನ್ಎಲ್ ಪ್ರಿಪೇಯ್ಡ್ ಪ್ಲಾನ್
ಬಿಎಸ್ಎನ್ಎಲ್ ಎಂಟ್ರಿ ಲೆವೆಲ್ ನ ಪ್ರಿಪೇಯ್ಡ್ ಪ್ಲಾನ್ ಗಳಾಗಿರುವ ರುಪಾಯಿ 10 ಮತ್ತು ರುಪಾಯಿ 20 ರ ಆನ್ ಲೈನ್ ಪ್ಲಾನ್ ಗಳನ್ನು ಕೂಡ ಸ್ಥಗಿತಗೊಳಿಸಿದೆ. ಅಂದರೆ ಇನ್ನು ಮುಂದೆ ಆನ್ ಲೈನ್ ನಲ್ಲಿ ಬಿಎಸ್ಎನ್ಎಲ್ ಗ್ರಾಹಕರು 10 ರುಪಾಯಿ ಮತ್ತು 20 ರುಪಾಯಿಯ ರೀಚಾರ್ಜ್ ಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶವಿರುವುದಿಲ್ಲ. ಆದರೆ ಫಿಸಿಕಲ್ ವೋಚರ್ ಗಳ ರೂಪದಲ್ಲಿ ಈಗಲೂ ಕೂಡ ಈ ಪ್ಲಾನ್ ಗಳನ್ನು ಕಂಪೆನಿಯು ಮಾರಾಟ ಮಾಡುತ್ತಿದೆ.

ಬೇಸಿಕ್ ರೀಚಾರ್ಜ್ ಪ್ಲಾನ್
ಏರ್ ಟೆಲ್, ವಡಾಫೋನ್ ಗಳು ಕೂಡ ಕೆಲವು ಬೇಸಿಕ್ ರೀಚಾರ್ಜ್ ಪ್ಲಾನ್ ಗಳನ್ನು ಸ್ಥಗಿತಗೊಳಿಸಿದೆ. ರುಪಾಯಿ 10, ರುಪಾಯಿ 20, ರುಪಾಯಿ 30, ರುಪಾಯಿ 50, ರುಪಾಯಿ 100 ಮತ್ತು ರುಪಾಯಿ 500 ರ ಪ್ಲಾನ್ ಗಳು ಲಭ್ಯವಿರುವುದಿಲ್ಲ. ಆದರೆ ನಂತರ ಎರಡೂ ಆಪರೇಟರ್ ಗಳು 50 ರುಪಾಯಿ ಮತ್ತು 500 ರುಪಾಯಿ ರೀಚಾರ್ಜ್ ಪ್ಲಾನ್ ಗಳನ್ನು ಪ್ರಸಿದ್ಧತೆಯ ಆಧಾರದಲ್ಲಿ ಪುನಃ ಮಾರುಕಟ್ಟೆಯಲ್ಲಿ ಲಭ್ಯಗೊಳಿಸಿದೆ. ಇದೀಗ ಬಿಎಸ್ಎನ್ಎಲ್ ಕೇವಲ ರುಪಾಯಿ 10 ಮತ್ತು ರುಪಾಯಿ 20 ಪ್ಲಾನ್ ಗಳನ್ನು ಮಾತ್ರವೇ ನಿಲ್ಲಿಸಿದೆ ಮತ್ತು ಇತರೆ ಬೇಸಿಕ್ ರೀಚಾರ್ಜ್ ಪ್ಲಾನ್ ಗಳಾಗಿರುವ ರುಪಾಯಿ 50, ರುಪಾಯಿ 100 ಮತ್ತು ರುಪಾಯಿ 110 ರ ಪ್ಲಾನ್ ಗಳು ಲಭ್ಯವಿರುತ್ತದೆ.

ಕ್ಯಾಷ್ ಬ್ಯಾಕ್ ಆಫರ್
ವಾರ್ಷಿಕ ಬ್ರಾಡ್ ಬ್ಯಾಂಡ್ ಪ್ಲಾನ್ ನ 25% ಕ್ಯಾಷ್ ಬ್ಯಾಕ್ ಆಫರ್ ನ್ನು ಗಡುವನ್ನು ಬಿಎಸ್ಎನ್ಎಲ್ ಮೇ 31,2019 ರ ವರೆಗೆ ವಿಸ್ತರಿಸಿದೆ. ಈ ಕ್ಯಾಷ್ ಬ್ಯಾಕ್ ಆಫರ್ ಹೊಸ ಮತ್ತು ಈಗಾಗಲೇ ಇರುವ ಬಿಎಸ್ಎನ್ಎಲ್ ನ ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ಮತ್ತು ಭಾರತೀಫೈಬರ್ ಕಸ್ಟಮರ್ ಗಳಿಗೆ ಲಭ್ಯವಿರುತ್ತದೆ. ಈ ಕ್ಯಾಷ್ ಬ್ಯಾಕ್ ಆಫರ್ ನ್ನು ಮೊದಲ ಬಾರಿಗೆ ಡಿಸೆಂಬರ್ 2018 ರಲ್ಲಿ ಪ್ರಕಟಿಸಲಾಯಿತು. ಭಾರತದಲ್ಲಿರುವ ವಾರ್ಷಿಕ ಮತ್ತು ಅರ್ಧವಾರ್ಷಿಕ ಬ್ರಾಡ್ ಬ್ಯಾಂಡ್ ಪ್ಲಾನ್ ಗಳು, ಬ್ರಾಡ್ ಬ್ಯಾಂಡ್ ನ ವೈ-ಫೈ ಚಂದಾದಾರರು, ಲ್ಯಾಂಡ್ ಲೈನ್ ಮತ್ತು ಬ್ರಾಡ್ ಬ್ಯಾಂಡ್ನ ಹೊಸ ಮತ್ತು ಈಗಾಗಲೇ ಲಭ್ಯವಿರುವ ಬಿಎಸ್ಎನ್ಎಲ್ ಗ್ರಾಹಕರಿಗೆ ಇದು ಅನ್ವಯಿಸುತ್ತಿತ್ತು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470