Home
ಸುದ್ದಿಜಾಲ

BSNL ದೀಪಾವಳಿ ಬೋನಾಂಜಾ(2025): ಏನೆಲ್ಲಾ ಆಫರ್‌ಗಳು ಇವೆ ಗೊತ್ತಾ?

ದೀಪಾವಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಸರ್ಕಾರಿ ನಿಯಮಿತ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗಾಗಿ ವಿಶೇಷ ಹಬ್ಬದ ಆಫರ್‌ಗಳನ್ನು ಪ್ರಕಟಿಸಿದೆ. ಈ ದೀಪಾವಳಿ ಬೋನಾಂಜಾ ಅಡಿಯಲ್ಲಿ ಕಂಪನಿಯು ಹೊಸ ಗ್ರಾಹಕರಿಗೆ ಹೆಚ್ಚುವರಿ ಸೌಲಭ್ಯಗಳು, ಉಚಿತ ಡೇಟಾ ಹಾಗೂ ರಿಯಾಯಿತಿಗಳನ್ನು ನೀಡುತ್ತಿದೆ. ಜೊತೆಗೆ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ರೂಪಿಸಿದ 'ಬಿಎಸ್‌ಎನ್‌ಎಲ್ ಸಮ್ಮಾನ್ ಪ್ಲಾನ್' ಕೂಡ ಲಭ್ಯವಿದೆ. ಇಂದಿನ ಲೇಖನದಲ್ಲಿ ಪ್ರಸ್ತುತ ಬಿಎಸ್‌ಎನ್‌ಎಲ್ ಒದಗಿಸುತ್ತರುವ ಎಲ್ಲಾ ಕೊಡುಗೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಹಿರಿಯ ನಾಗರಿಕರಿಗೆ 'ಬಿಎಸ್‌ಎನ್‌ಎಲ್ ಸಮ್ಮಾನ್' ಪ್ಲಾನ್
60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸು ಹೊಂದಿರುವ ಹೊಸ ಗ್ರಾಹಕರಿಗಾಗಿ ಬಿಎಸ್‌ಎನ್‌ಎಲ್ ಈ ವಿಶೇಷ ಪ್ಲಾನ್ ಅನ್ನು ಪರಿಚಯಿಸಿದೆ. ₹1,812 ದರದ ಈ ಪ್ಲಾನ್‌ಗೆ 365 ದಿನಗಳ ಮಾನ್ಯತೆ ಇದ್ದು, ಗ್ರಾಹಕರು ದಿನಕ್ಕೆ 2GB ಡೇಟಾ, 100 SMSಗಳು, ಮತ್ತು ಅನಿಯಮಿತ ಕರೆಗಳ ಸೌಲಭ್ಯ ಪಡೆಯುತ್ತಾರೆ. ಜೊತೆಗೆ ಉಚಿತ ಸಿಮ್ ಕಾರ್ಡ್ ಮತ್ತು 6 ತಿಂಗಳ BiTV ಸಬ್‌ಸ್ಕ್ರಿಪ್ಶನ್ ಸಹ ಲಭ್ಯ. ಗಮನಿಸುವುದಾದರೆ, ಈ ಪ್ಲಾನ್ ನವೆಂಬರ್ 18ರವರೆಗೆ ಮಾತ್ರ ಲಭ್ಯವಿರುತ್ತದೆ.

ಹೊಸ ಗ್ರಾಹಕರಿಗೆ 1 ರೂ. ಪ್ಲಾನ್
ಇನ್ನು ಹೊಸ ಗ್ರಾಹಕರಿಗಾಗಿ ಬಿಎಸ್‌ಎನ್‌ಎಲ್ ಕೇವಲ ರೆ.1 ಗೆ ದೊರೆಯುವ 4G ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು ಒಂದು ತಿಂಗಳ ಉಚಿತ ಸೇವೆ, ಪ್ರತಿ ದಿನ 2GB ಡೇಟಾ, 100 SMSಗಳು, ಮತ್ತು ಉಚಿತ ಸಿಮ್ ಆಕ್ಟಿವೇಶನ್ ಪಡೆಯುತ್ತಾರೆ. ಈ ಆಫರ್ ನವೆಂಬರ್ 15ರವರೆಗೆ ಮಾನ್ಯವಾಗಿರುತ್ತದೆ. ನೀವು ಹೊಸದಾಗಿ ಸಿಮ್ ಖರೀದಿಸಿದಾಗ ಈ ಕೊಡುಗೆಯು ಲಭ್ಯವಾಗುತ್ತದೆ. ಈ ಯೋಜನೆಯ ಸಹಾಯದಿಂದ ನೀವು ಬಿಎಸ್‌ಎನ್‌ಎಲ್ ಸೇವೆಯನ್ನು ಪರೀಕ್ಷಿಸಬಹುದು ಮತ್ತು ಆನಂದಿಸಬಹುದು.

ದೀಪಾವಳಿ ಬೋನಾಂಜಾ ರಿಯಾಯಿತಿಗಳು
ಇಷ್ಟೇ ಅಲ್ಲೆ, ಬಿಎಸ್‌ಎನ್‌ಎಲ್ ತನ್ನ ₹485 ಮತ್ತು ₹1,999 ಪ್ರಿಪೇಯ್ಡ್ ಪ್ಲಾನ್‌ಗಳ ಮೇಲೆ 5% ಹಬ್ಬದ ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಈ ರಿಯಾಯಿತಿಯನ್ನು Self-care ಆಪ್ ಅಥವಾ BSNL ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯಬಹುದು. ಇದರಲ್ಲಿ 2.5% ತಕ್ಷಣದ ಡಿಸ್ಕೌಂಟ್ ಗ್ರಾಹಕರಿಗೆ ದೊರೆಯುತ್ತದೆ, ಉಳಿದ 2.5% ಮೊತ್ತವನ್ನು ಬಿಎಸ್‌ಎನ್‌ಎಲ್ ಸಾಮಾಜಿಕ ಸೇವೆಗಳಿಗೆ ದೇಣಿಗೆಯಾಗಿ ನೀಡಲಿದೆ.

BSNL ದೀಪಾವಳಿ ಬೋನಾಂಜಾ(2025): ಏನೆಲ್ಲಾ ಆಫರ್‌ಗಳು ಇವೆ ಗೊತ್ತಾ?

ಇವುಗಳಲ್ಲಿ, ಬಿಎಸ್‌ಎನ್‌ಎಲ್ ₹485 ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಧ್ವನಿ ಕರೆಗಳು, ದಿನಕ್ಕೆ 2GB ಹೈ-ಸ್ಪೀಡ್ ಡೇಟಾ ಮತ್ತು ದಿನಕ್ಕೆ 100 SMS ಗಳನ್ನು 72 ದಿನಗಳ ಮಾನ್ಯತೆಗೆ ನೀಡುತ್ತದೆ. ದೈನಂದಿನ ಡೇಟಾ ಖಾಲಿಯಾದ ನಂತರ, ವೇಗವನ್ನು 40 Kbps ಗೆ ಇಳಿಸಲಾಗುತ್ತದೆ.

ಇನ್ನು BSNL ₹1,999 ಪ್ರಿಪೇಯ್ಡ್ ಯೋಜನೆಯು 365 ದಿನಗಳ ಸೇವೆಯನ್ನು ನೀಡುತ್ತದೆ ಮತ್ತು ಅದರ ದೊಡ್ಡ 600GB ಡೇಟಾ ಪ್ರಯೋಜನಕ್ಕೆ ಹೆಸರುವಾಸಿಯಾಗಿದೆ. ಇದು ದೈನಂದಿನ ಮಿತಿಯಿಲ್ಲದೆ ಡೇಟಾವನ್ನು ಒದಗಿಸುವ ವಾರ್ಷಿಕ ಯೋಜನೆಯಾಗಿದ್ದು, ದೈನಂದಿನ ಮಿತಿಯಿಂದ ನಿರ್ಬಂಧಿಸಲ್ಪಡಲು ಬಯಸದ ಭಾರೀ ಡೇಟಾ ಬಳಕೆದಾರರಿಗೆ ಇದು ಸೂಕ್ತವಾಗಿದೆ.

ಗಿಫ್ಟ್ ರಿಚಾರ್ಜ್‌ಗಳಿಗೆ ಹೆಚ್ಚುವರಿ ಲಾಭ
ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಸ್ನೇಹಿತರಿಗೆ ಅಥವಾ ಕುಟುಂಬ ಸದಸ್ಯರಿಗೆ ರಿಚಾರ್ಜ್ ಗಿಫ್ಟ್ ಮಾಡಿದರೆ, ಅವರಿಗೆ 2.5% ಹೆಚ್ಚುವರಿ ರಿಯಾಯಿತಿ ದೊರೆಯುತ್ತದೆ. ಈ ಆಫರ್ ಕೂಡ ನವೆಂಬರ್ 18ರವರೆಗೆ ಲಭ್ಯ.

ಈ ದೀಪಾವಳಿ ಹಬ್ಬದ ಸಮಯದಲ್ಲಿ ಬಿಎಸ್‌ಎನ್‌ಎಲ್ ನೀಡುತ್ತಿರುವ ಈ ಎಲ್ಲಾ ವಿಶೇಷ ಆಫರ್‌ಗಳು ಹೊಸ ಮತ್ತು ಹಿರಿಯ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿವೆ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅನಿಸಿಕೇ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
BSNL Diwali Bonanza for 2025, featuring a 'Samman' plan for senior citizens with 365-day validity priced at ₹1,812. New customers can avail a ₹1 4G plan, receive a free SIM, and enjoy festive discounts. These offers are valid until November 18.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+