Home
ಸುದ್ದಿಜಾಲ

ದೀಪಾವಳಿ ಪ್ರಯುಕ್ತ BSNL ನಿಂದ ಹೆಚ್ಚುವರಿ ಡೇಟಾ ಆಫರ್‌! ಏನೆಲ್ಲಾ ಲಾಭ!

ಸರ್ಕಾರಿ ಸ್ವಾಮ್ಯದ BSNL ಟೆಲಿಕಾಂ ಖಾಸಗಿ ಟೆಲಿಕಾಂಗಳ ನಡುವೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಏರ್‌ಟೆಲ್‌, ಜಿಯೋ ಟೆಲಿಕಾಂಗಳ ರೀಚಾರ್ಜ್‌ ಪ್ಲಾನ್‌ಗಳಿಗೆ ಸೆಡ್ಡು ಹೊಡೆಯಲು ಹಲವು ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ BSNL ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡೇಟಾ ಆಫರ್‌ ಅನ್ನು ಪರಿಚಯಿಸುವ ಮೂಲಕ ಗುಡ್‌ನ್ಯೂಸ್‌ ನೀಡಿದೆ.

ಹೌದು, BSNL ಟೆಲಿಕಾಂ ತನ್ನ ಬಳಕೆದಾರರಿಗೆ ವಿಶೇಷ ಡೇಟಾ ಆಫರ್ ಅನ್ನು ಪರಿಚಯಿಸುವ ಮೂಲಕ ದೀಪಾವಳಿ ಹಬ್ಬದ ಸಂಭ್ರಮ ರಂಗೇರುವಂತೆ ಮಾಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ 251ರೂ ರೀಚಾರ್ಜ್‌ ವೋಚರ್‌ ಮೇಲೆ ಹೆಚ್ಚುವರಿ ಡೇಟಾವನ್ನು ಘೋಷಿಸಿದೆ. ಇದರೊಂದಿಗೆ ಇತರ ರೀಚಾರ್ಜ್ ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾವನ್ನು ಸಹ ಒದಗಿಸುತ್ತಿದೆ. ಹಾಗಾದ್ರೆ BSNL ಯಾವೆಲ್ಲಾ ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾ ಆಫರ್‌ ನೀಡುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದೀಪಾವಳಿ ಪ್ರಯುಕ್ತ BSNL ನಿಂದ ಹೆಚ್ಚುವರಿ ಡೇಟಾ ಆಫರ್‌! ಏನೆಲ್ಲಾ ಲಾಭ!

ದೀಪಾವಳಿ ಹಬ್ಬ ಶುರುವಾಗುವ ಮುನ್ನವೇ ಟೆಲಿಕಾಂ ಕಂಪೆನಿಗಳು ಆಫರ್‌ಗಳ ಮಳೆಯನ್ನು ಸುರಿಸುತ್ತಿವೆ. ಇದಕ್ಕೆ ಬಿಎಸ್‌ಎನ್‌ಎಲ್‌ ಕೂಡ ಹೊರತಾಗಿಲ್ಲ. BSNL ತನ್ನ ಬಳಕೆದಾರರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕದಲ್ಲಿರಲು ಹೊಸ ಹೊಸ ಆಫರ್‌ಗಳನ್ನು ನೀಡುತ್ತಿದೆ. ಇದೀಗ ದೀಪಾವಳಿ ಪ್ರಯುಕ್ತ 251ರೂ, 299ರೂ ಮತ್ತು 398ರೂ ಗಳ ಪ್ಲಾನ್‌ನಲ್ಲಿ ಹೆಚ್ಚುವರಿ ಡೇಟಾ ಆಫರ್‌ ಅನ್ನು ಘೋಷಣೆ ಮಾಡಿದೆ.

BSNL ಟೆಲಿಕಾಂ 251ರೂ ಪ್ಲಾನ್‌
BSNL ಟೆಲಿಕಾಂ 251ರೂ ರೀಚಾರ್ಜ್‌ ಪ್ಲಾನ್‌ನಲ್ಲಿ ಹೆಚ್ಚುವರಿ 3GB ಡೇಟಾವನ್ನು ನೀಡುತ್ತಿದೆ. ಇದು ಪ್ಲಾನ್‌ನಲ್ಲಿ ಬರುವ 70GB ಡೇಟಾಕ್ಕಿಂತ ಹೆಚ್ಚಿಗೆ ಬರುತ್ತದೆ. ಇನ್ನು ಈ ಪ್ಲಾನ್‌ 28 ದಿನಗಳವರೆಗೆ ಮಾನ್ಯವಾಗಿದೆ. ಅದರಂತೆ ಹೆಚ್ಚುವರಿ ಡೇಟಾ ಕೂಡ ಪ್ಲಾನ್‌ ಮಾನ್ಯತೆ ಮುಗಿದ ನಂತರ ಮುಕ್ತಾಯವಾಗಲಿದೆ. ಇನ್ನು ಈ ಹೆಚ್ಚುವರಿ ಡೇಟಾ ಪ್ರಯೋಜನ ಪಡೆದುಕೊಳ್ಳಬೇಕಾದರೆ ನೀವು BSNLನ ಸೆಲ್ಫ್-ಕೇರ್ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ನಂಬರ್‌ಗೆ ರೀಚಾರ್ಜ್ ಮಾಡಿದರೆ ಮಾತ್ರ ಲಭ್ಯವಾಗಲಿದೆ.

ದೀಪಾವಳಿ ಪ್ರಯುಕ್ತ BSNL ನಿಂದ ಹೆಚ್ಚುವರಿ ಡೇಟಾ ಆಫರ್‌! ಏನೆಲ್ಲಾ ಲಾಭ!

BSNL ಟೆಲಿಕಾಂ 299ರೂ ಪ್ಲಾನ್‌
BSNL ಟೆಲಿಕಾಂ 299ರೂ ರೀಚಾರ್ಜ್‌ ಪ್ಲಾನ್‌ನಲ್ಲಿಯು ಸಹ ಹೆಚ್ಚುವರಿ 3GB ಡೇಟಾವನ್ನು ಘೋಷಿಸಿದೆ. ಈ ಪ್ಲಾನ್‌ನಲ್ಲಿಯು ಸಹ ಹೆಚ್ಚುವರಿ ಡೇಟಾ ಬೋನಸ್ ಅನ್ನು BSNL ಸೆಲ್ಫ್-ಕೇರ್ ಅಪ್ಲಿಕೇಶನ್ ಬಳಸಿ ಮಾತ್ರ ಅನ್‌ಲಾಕ್ ಮಾಡಬಹುದು. ಇನ್ನು ಈ ಪ್ಲಾನ್‌ನಲ್ಲಿ ದೈನಂದಿನ 100 SMS ಪ್ರಯೋಜನ ಹಾಗೂ ಅನ್‌ಲಿಮಿಟೆಡ್‌ ಕರೆ ಪ್ರಯೋಜನಗಳೊಂದಿಗೆ ಒಟ್ಟಾರೆ 30 ದಿನಗಳ ಮಾನ್ಯತೆ ಪಡೆದಿದೆ.

BSNL ಟೆಲಿಕಾಂ 398ರೂ ಪ್ಲಾನ್‌
BSNL ಟೆಲಿಕಾಂ 398ರೂ ಪ್ಲಾನ್‌ನಲ್ಲಿಯು ಸಹ ದೀಪಾವಳಿ ಬೊನಾಂಜಾ ಆಫರ್‌ ನೀಡಲಾಗ್ತಿದೆ. ಇನ್ನು ಪ್ಲಾನ್‌ನಲ್ಲಿ 3GBಯ ಹೆಚ್ಚುವರಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ಲಾನ್‌ 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ STD ಮತ್ತು ಸ್ಥಳೀಯ ಧ್ವನಿ ಕರೆಗಳ ಪ್ರಯೋಜನವನ್ನು ನೀಡಲಿದೆ. ಜೊತೆಗೆ ದೈನಂದಿನ 100 SMS ಪ್ರಯೋಜನವನ್ನು ನೀಡಲಿದೆ.

ದೀಪಾವಳಿ ಪ್ರಯುಕ್ತ BSNL ನಿಂದ ಹೆಚ್ಚುವರಿ ಡೇಟಾ ಆಫರ್‌! ಏನೆಲ್ಲಾ ಲಾಭ!

ಇದಲ್ಲದೆ ಇತ್ತೀಚಿಗೆ ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಬಿಎಸ್‌ಎನ್‌ಎಲ್‌ ಕಂಪೆನಿ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. BSNL ಕಸ್ಟಮರ್ ಕೇರ್‌ ಹೆಸರಿನಲ್ಲಿ ಕರೆ ಮಾಡಿ ಗ್ರಾಹಕರಿಂದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತಿಲ್ಲ ಎಂದು BSNL ಮಾಹಿತಿ ನೀಡಿದೆ. BSNLನ ಕಸ್ಟಮರ್ ಕೇರ್ ಏಜೆಂಟ್‌ಗಳಂತೆ ನಟಿಸುವ ಮೋಸಗಾರರು, ತಮ್ಮ ಸಿಮ್ ಸ್ವಿಚ್ ಆಫ್ ಆಗಲಿದೆ ಎಂದು ಗ್ರಾಹಕರಿಗೆ ಹೇಳುತ್ತಿದ್ದಾರೆ. ಇದರಲ್ಲಿ ಆಧಾರ್ ಕಾರ್ಡ್‌ನಿಂದ ಪ್ಯಾನ್ ಕಾರ್ಡ್‌ವರೆಗಿನ ಎಲ್ಲಾ ವಿವರ ನೀಡಿ ಎಂದು ಹೇಳುತ್ತಿದ್ದು, ಈ ವೇಳೆ ನೀವೇನಾದರೂ ಈ ಮಾಹಿತಿಯನ್ನು ಅವರಿಗೆ ನೀಡಿದ್ರೆ ಮೋಸ ಹೋಗೋದು ಗ್ಯಾರಂಟಿಯಾಗಿದೆ.

Best Mobiles in India

English summary
BSNL Diwali Bonanza Offer: additional data offer on recharge of Rs 251, Rs 299 and Rs 398 Recharge Plans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+